Homeರಾಷ್ಟ್ರೀಯಕೇಂದ್ರ ಗೃಹ ಸಚಿವ ಅಮಿತ್‌ಶಾ ಹುಟ್ಟುಹಬ್ಬ : ಶುಭಾಷಯಕೋರಿದ ಪ್ರಧಾನಿ ಮೋದಿ

ಕೇಂದ್ರ ಗೃಹ ಸಚಿವ ಅಮಿತ್‌ಶಾ ಹುಟ್ಟುಹಬ್ಬ : ಶುಭಾಷಯಕೋರಿದ ಪ್ರಧಾನಿ ಮೋದಿ

ನವದೆಹಲಿ, ಅ. 22 (ಪಿಟಿಐ)- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.ಶಾ ಅವರ ಆಡಳಿತಾತ್ಮಕ ತಿಳುವಳಿಕೆಯು ಭಾರತದ ಆಂತರಿಕ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚು ಪರಿಣಾಮ ಕಾರಿಯಾಗಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

2019 ರಿಂದ ದೇಶದ ಗೃಹ ಸಚಿವರಾಗಿರುವ ಅಮಿತ್‌ ಶಾ ಅವರಿಗೆ ಗುರುವಾರ 62 ವರ್ಷ ತುಂಬಿದೆ. ಗೃಹ ಸಚಿವ ಅಮಿತ್‌ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಅವರ ಆಡಳಿತಾತ್ಮಕ ತಿಳುವಳಿಕೆಯು ಭಾರತದ ಆಂತರಿಕ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ, ಎಂದು ಪ್ರಧಾನಿ ಮೋದಿ ಎಕ್‌್ಸ ಮಾಡಿದ್ದಾರೆ.

ಮಾವೋವಾದದ ಪಿಡುಗನ್ನು ನಿರ್ಮೂಲನೆ ಮಾಡುವುದು ಮತ್ತು ಮಾದಕವಸ್ತು ಮುಕ್ತ ಸಮಾಜವನ್ನು ನಿರ್ಮಿಸುವ ಸರ್ಕಾರದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅಮಿತ್‌ ಶಾ ಸಾಧಿಸಿರುವ ಯಶಸ್ಸು ವಿಶೇಷವಾಗಿ ಗಮನಾರ್ಹವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಅವರು ಜನರ ಸೇವೆಯಲ್ಲಿ ದೀರ್ಘಕಾಲ, ಆರೋಗ್ಯಕರ ಜೀವನ ನಡೆಸಲಿ ಎಂದು ನಾನು ಪ್ರಾರ್ಥಿಸುತ್ತೇನೆ, ಎಂದು ಅವರು ಹೇಳಿದ್ದಾರೆ.

RELATED ARTICLES
spot_img

Latest News