Homeರಾಷ್ಟ್ರೀಯಗರ್ಲ್ ಫ್ರೆಂಡ್ ನೆನಪಿಸಿಕೊಂಡ ರಾಹುಲ್‌ ಗಾಂಧಿ

ಗರ್ಲ್ ಫ್ರೆಂಡ್ ನೆನಪಿಸಿಕೊಂಡ ರಾಹುಲ್‌ ಗಾಂಧಿ

ನವದೆಹಲಿ, ನ.17- ಇದೇ ಮೊದಲ ಬಾರಿಗೆ ರಾಹುಲ್‌ ಗಾಂಧಿ ಅವರು ತಮ ಗೆಳತಿ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಅವರ ತಂದೆ, ತಾಯಿ ಭೇಟಿ ನೀಡಿದ್ದ ಕೇಂಬ್ರಿಡ್‌್ಜ ವಿಶ್ವವಿದ್ಯಾಲಯದ ರೆಸ್ಟೋರೆಂಟ್‌ಗೆ ತಮ್ಮ ಗೆಳತಿ ಜೊತೆ ಹೋಗಿದ್ದ ಕ್ಷಣಗಳನ್ನು ಅವರಯ ನೆನಪಿಸಿಕೊಂಡಿದ್ದಾರೆ.

ಸೋನಿಯಾ ಗಾಂಧಿ ಆತಕಥೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ತಂದೆ-ತಾಯಿ ಮೊದಲ ಬಾರಿಗೆ ಭೇಟಿಯಾದ ಕೇಂಬ್ರಿಡ್‌್ಜ ವಿಶ್ವವಿದ್ಯಾಲಯದ ರೆಸ್ಟೋರೆಂಟ್‌ಗೆ ಹಲವು ವರ್ಷಗಳ ನಂತರ ತಾವು ಗೆಳತಿಯೊಂದಿಗೆ ಹೋದ ಸವಿನೆನಪನ್ನು ಮೆಲುಕು ಹಾಕಿದ್ದಾರೆ.

ರೆಸ್ಟೋರೆಂಟ್‌ ಒಳಗೆ ಹೋದಾಗ, ಅಲ್ಲಿದ್ದ ಸಿಬ್ಬಂದಿಯೊಬ್ಬರು ಮೆನು ತಂದರು. ಅವರ ಬಳಿ, ನನ್ನ ಹೆತ್ತವರು ಈ ರೆಸ್ಟೋರೆಂಟ್‌ನಲ್ಲೇ ಭೇಟಿಯಾಗಿದ್ದರು ಎಂದು ಹೇಳಿದೆ. ಅವರು ನನ್ನತ್ತ ನೋಡಿ, ಓಹ್‌‍, ಅವರು ನನಗೆ ಗೊತ್ತು ಎಂದರು. ಆಗ ನಾನು, ಅವರ ಬಗ್ಗೆ ನಿನಗೆ ಏನು ಗೊತ್ತು? ಎಂದು ಕೇಳಿದೆ. ಅದಕ್ಕೆ, ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಾಯ್ತು ಎಂದು ಹೇಳಿದ್ದ ಆ ನೆನಪುಗಳನ್ನು ತೆರದಿಟ್ಟಿದ್ದಾರೆ.

ಈ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ, ರಾಹುಲ್‌ ಗಾಂಧಿ ಮುಗುಳ್ನಗುತ್ತಾ, ಅಭೀ ಭಿ ಮೇರಿ ದೋಸ್ತ ಹೈ (ಅವಳು ಈಗ ತನ್ನ ಸ್ನೇಹಿತೆ) ಎಂದು ಕುಚ್‌ ಕುಚ್‌ ಹೋತಾ ಹೈ ಚಿತ್ರದ ಶೈಲಿಯಲ್ಲಿ ಹೇಳಿದ್ದಾರೆ. ಈ ವೇಳೆ ಅಲ್ಲಿದ್ದವರು ನಗಾಡಿದ್ದಾರೆ. ಅವರ ತಾಯಿ ಸೋನಿಯಾ ಗಾಂಧಿಯವರೂ ಕೂಡ ಮುಗುಳುನಗೆ ಬೀರಿದ್ದಾರೆ.

RELATED ARTICLES

Latest News