Homeರಾಷ್ಟ್ರೀಯಸೋನಮ್‌ ವಾಂಗ್‌ಚುಕ್‌ ಭೇಟಿಯಾದ ಕೇಂದ್ರ ಸಚಿವರಾದ ನಡ್ಡಾ, ಜಿತೇಂದ್ರಸಿಂಗ್‌

ಸೋನಮ್‌ ವಾಂಗ್‌ಚುಕ್‌ ಭೇಟಿಯಾದ ಕೇಂದ್ರ ಸಚಿವರಾದ ನಡ್ಡಾ, ಜಿತೇಂದ್ರಸಿಂಗ್‌

Union Ministers Nadda, Jitendra Singh meet Sonam Wangchuk

ನವದೆಹಲಿ, ಜು.22- (ಪಿಟಿಐ) ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್‌ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ಅವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಾಂಗ್‌ಚುಕ್‌ ಅವರನ್ನು ಸಂಜೆ ಮೊದಲು ಸಫ್ದರ್ಜಂಗ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ದೆಹಲಿ ಹೈಕೋರ್ಟ್‌ ಆದೇಶದ ಅನುಸಾರ ಹೆಚ್ಚಿನ ಚಿಕಿತ್ಸೆಗಾಗಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್‌ ಅವರು ಆಸ್ಪತ್ರೆಯಲ್ಲಿ ಸೋನಮ್‌ ವಾಂಗ್‌ಚುಕ್‌ ಅವರನ್ನು ಭೇಟಿ ಮಾಡಿದ್ದಾರೆ ಎಂದು ಪಿಟಿಐಗೆ ಮೂಲವೊಂದು ತಿಳಿಸಿದೆ. ವಾಂಗ್‌ಚುಕ್‌‍ ಅವರನ್ನು ಸಂಜೆ 7.30 ರ ಸುಮಾರಿಗೆ ಬಿಗಿ ಭದ್ರತೆಯಲ್ಲಿ ಆಂಬ್ಯುಲೆನ್ಸ್ ನಲ್ಲಿ ಮೇದಾಂತ ಆಸ್ಪತ್ರೆಗೆ ಕರೆತರಲಾಯಿತು.

ಅವರನ್ನು ಆಂತರಿಕ ಔಷಧ ತಜ್ಞೆ ಡಾ. ಸುಶೀಲಾ ಕಟಾರಿಯಾ ಅವರ ಮೇಲ್ವಿಚಾರಣೆಯಲ್ಲಿ ಐಸಿಯು 8 ರಲ್ಲಿ ದಾಖಲಿಸಲಾಗಿದೆ ಎಂದು ಮೇದಾಂತ ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News