ಚಿಕ್ಕಮಗಳೂರು,ಜ.29- ಕಾಡಿನಲ್ಲಿ ಉಳಿದಿರುವ ಮತ್ತೊಬ್ಬ ನಕ್ಸಲ್ ಹೋರಾಟಗಾರ ರವೀಂದ್ರ ಸದ್ಯದಲ್ಲೇ ಶರಣಾಗುವ ಸಾಧ್ಯತೆಗಳಿವೆ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ರವೀಂದ್ರ ಸಂಪರ್ಕಿಸಿದ್ದು, ಇನ್ನೊಂದು ವಾರದೊಳಗೆ ಶರಣಾಗತಿ ಆಗಲಿದ್ದಾನೆ ಎನ್ನಲಾಗಿದೆ.
ಜ.8 ರಂದು ಆರು ಮಂದಿ ನಕ್ಸಲರು ಶರಣಾಗಿದ್ದು, ಶೃಂಗೇರಿ ತಾಲ್ಲೂಕಿನ ಕಿಗ್ಗ ಸಮೀಪದ ಕೋಟೆಹೊಂಡ ಗ್ರಾಮದ ರವೀಂದ್ರ (32) ಎಂಬ ನಕ್ಸಲ್ ಹೋರಾಟಗಾರ ಕಾಡಿನಲ್ಲೇ ಉಳಿದುಕೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಶರಣಾದ ಆರು ನಕ್ಸಲರು ಆಯುಧಗಳನ್ನು ರವೀಂದ್ರನ ಕೈಗೆ ಕೊಟ್ಟು ಬಂದಿದ್ದಾರೆ ಎನ್ನುವ ವದಂತಿಯೂ ಇದೆ.ರವೀಂದ್ರ ಶರಣಾದರೆ ಜಿಲ್ಲೆಯಲ್ಲಿ ನಕ್ಸಲ್ ಹೋರಾಟ ಬಹುತೇಕ ಅಂತ್ಯ ಕಂಡಂತಾಗುತ್ತದೆ. ಇದಕ್ಕೆ ಪೊಲೀಸ್ ಇಲಾಖೆಯು ಕೂಡ ಭಾರಿ ಕಸರತ್ತು ನಡೆಸಿದೆ.