ಬೆಂಗಳೂರು, ಮೇ 31- ದೇಶದಲ್ಲಿ ಪ್ರಪ್ರಥಮ ಅತ್ಯಾಧುನಿಕ ತಂತ್ರಜ್ಞಾನದಿಂದ ಧನ್ಯಾಪ್ಲಾಸ್ಟಿಕ್ಸ್ ಆ್ಯಂಡ್ ಫೋಮ್ ಕಂಪೆನಿ ತಯಾರಿಸಿದ ನೀಂದ್ ಬ್ರ್ಯಾಂಡೆಡ್‍ನ ಡ್ರಿಲ್ಡ್ ಏರ್ ಕೂಲ್ ಮ್ಯಾಟ್ರೆಸಸ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ತಂತ್ರಜ್ಞಾನವು ಹಾಸಿಗೆಯಲ್ಲಿ ಗಾಳಿಯ ಹರಿವು ಹೆಚ್ಚಿಸಲಿದೆ. ಹಾಸಿಗೆಯು ದೇಹದ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಅಲ್ಲದೆ, ಇದರ ಬಹುಪದರ ವಿನ್ಯಾಸವು ಮೃದುತ್ವದಿಂದ ಕೂಡಿದ್ದು ನಿದ್ದೆಯನ್ನು ಆರಾಮದಾಕವಾಗಿಸುತ್ತದೆ ಎಂದು ಧನ್ಯಾ ಪ್ಲಾಸ್ಟಿಕ್ಸ್ ಆ್ಯಂಡ್ ಪೋಮ್ ಪ್ರೈವೆಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ಹೆಗಡೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡ್ರಿಲ್ಡ್ ಏರ್ ಕೂಲ್ ಡ್ಯುಯಲ್ ಕಂಫರ್ಟ್ ಮ್ಯಾಟ್ರೆಸಸ್, ಡ್ರಿಲ್ಡ್ ಏರ್ ಕೂಲ್ ಆರ್ಥೋ ಮೆಮೊರಿ ಮ್ಯಾಟ್ರೆಸಸ್, ಡ್ರಿಲ್ಡ್ ಏರ್ ಕೂಲ್ ನ್ಯಾಚುರಲ್ ಲೇಟೆಕ್ಸ್ ಮ್ಯಾಟ್ರೆಸಸ್, ಡ್ರಿಲ್ಡ್ ಏರ್ ಕೂಲ್ ಪಾಕೆಟ್ ಸ್ಪ್ರಿಂಗ್ ಮ್ಯಾಟ್ರಿಸಸ್ ಹಾಗೂ ಡ್ರಿಲ್ಡ್ ಏರ್ ಕೂಲ್ ಟಾಪರ್ ಆ್ಯಂಡ್ ಮ್ಯಾಟ್ರೆಸಸ್ ಎಂಬ ಐದು ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದರು.
ಹಾಸಿಗೆಯು ದೀರ್ಘಕಾಲದವರೆಗೆ ಬಾಳಿಕೆಗೆ ಬರಲು ಹಾಗೂ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಳವಾದ ಪರೀಕ್ಷೆ ನಡೆಸಿ ಈ ಉತ್ಪನ್ನಗಳನ್ನು ತಯಾರಿಸಲಾಗಿದೆ. ಶುದ್ಧವಾದ ಪೋಮ್ ಬಳಸಲಾಗಿದೆ. ಅಲ್ಲದೆ ದಪ್ಪನಾದ ಹತ್ತಿ ಬಟ್ಟೆ ಬಳಸಿ ತಯಾರಿಸಲಾಗಿದೆ ಎಂದು ಹೇಳಿದರು. ಇದು ದೇಶದಲ್ಲೇ ನಮ್ಮ ಹಿರಿಮೆ ಮಾರುಕಟ್ಟೆಯಲ್ಲಿರುವ ವಿವಿಧ ಸಂಸ್ಥೆಗಳಿಗೆ ನಾವು ತಕ್ಕ ಪೈಪೋಟಿ ನೀಡಲು ಮುಂದಾಗಿದ್ದೇವೆ.
ಸದ್ಯ ಕರ್ನಾಟಕದಲ್ಲಿ 250ಕ್ಕೂ ಹೆಚ್ಚು ಡೀಲರ್‍ಗಳು ಇದ್ದು ಮುಂದಿನ ಕೆಲವೇ ದಿನಗಳಲ್ಲಿ ದಕ್ಷಿಣ ಭಾರತಾದ್ಯಂತ ನಮ್ಮ ಮ್ಯಾಟ್ರೆಸಸ್‍ಗಳನ್ನು ಪರಿಚಯಿಸುತ್ತೇವೆ ಎಂದರು. ಸಾಮಾನ್ಯ ಜನರು ಕೂಡ ಕೊಂಡುಕೊಳ್ಳಬಹುದಾದ ನಮ್ಮ ಉತ್ಪನ್ನಕ್ಕೆ 5ರಿಂದ 8 ವರ್ಷದವರೆಗೆ ಬಾಳಿಕೆ ಬರಲಿದೆ.
ಪ್ರಸ್ತುತ ನಾವು ಉದ್ಘಾಟನಾ ಸಂದರ್ಭದಲ್ಲಿ ಶೇ. 10ರಿಂದ 15ರಷ್ಟು ರಿಯಾಯಿತಿಯನ್ನು ಕೂಡ ನೀಡುತ್ತಿದ್ದೇವೆ. ವಿವಿಧ ಆಕಾರಗಳಲ್ಲಿ ಈ ಮ್ಯಾಟ್ರೆಸ್‍ಗಳು ಲಭ್ಯವಿದೆ. 5 ಸಾವಿರದಿಂದ ಶುರುವಾಗಿ 50 ಸಾವಿರದವರೆಗೂ ಬೆಲೆ ಇದೆ. ಆನ್‍ಲೈನ್ ಮೂಲಕವೂ ಗ್ರಾಹಕರು ಖರೀದಿಸಬಹುದು ಎಂದು ಮಂಜುನಾಥ ಹೆಗಡೆ ತಿಳಿಸಿದರು. ಕಂಪನಿಯ ಮಾರಾಟ ವಿಭಾಗದ ಜನರಲ್ ಮ್ಯಾನೇಜರ್ ವಿಶ್ವನಾಥ ಹೆಗಡೆ ಹಾಗೂ ನಿರ್ದೇಶಕರಾದ ಮಮತಾ ಹೆಗಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.