ತುಮಕೂರು , ಅ. 18- ಜಿಲ್ಲೆಯ ಪಾವಗಡ ತಾಲ್ಲೂಕಿನ ಮಂಗಳವಾಡ ಬೆಸ್ಕಾಂ ಶಾಖಾಧಿಕಾರಿ ಮತ್ತು ಲೈನ್‌ಮ್ಯಾನ್‌ನ ನಿರ್ಲಕ್ಷ್ಯದಿಂದ ಒಂದೂವರೆ ತಿಂಗಳಲ್ಲಿ ನಾಲ್ಕು ಮಂದಿ ಬಲಿಯಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಟಿನ್ ಬೇಟದ ಇಬ್ಬರು ರೈತರು ಆಗಸ್ಟ್ ತಿಂಗಳ ಕೊನೆ ವಾರದಲ್ಲಿ ತಮ್ಮ ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದರು, ಕೊತ್ತುರಿನ ಮಹಿಳೆಯೊಬ್ಬರು ಮನೆಯ ಮೇಲ್ಛಾವಣಿಯಲ್ಲಿ ಶುಚಿ ಮಾಡುವಾಗ ಕಬ್ಬಿಣದ ರಾಡು ಮನೆಯ ಮೇಲೆ ಹಾದು ಹೋಗಿದ ವಿದ್ಯುತ್ ಲೈನ್ ತಗುಲಿ ಮೃತಪಟ್ಟಿದರು.
ಕಳದ ದಸರಾ ಹಬ್ಬದ ಆಯುಧ ಪೂಜೆ ದಿನ ಇಲ್ಲಿನ ಲೈನ್ ಮ್ಯಾನ್ ಮುರುಗೇಶ್ ಸಜ್ಜನ್ ಎಂಬಾತ ತಾನು ವಿದ್ಯುತ್ ಕಂಬ ಹತ್ತಿ ವಿದ್ಯುತ್ ಸಮಸ್ಯೆ ಸರಿಪಡಿಸುವ ಬದಲಿಗೆ ಸಿಕೆ ಪುರ ಬೆಸ್ಕಾಂ ನಲ್ಲಿ ಅರೆಕಾಲಿಕ ಶುಚಿತ್ವ ಮಾಡುವ ಸಿಬ್ಬಂದಿಯನ್ನು ವಿದ್ಯುತ್ ಕಂಬ ಹತ್ತಿಸಿದ್ದಾನೆ. ಬೆಸ್ಕಾಂ ಶಾಖಾಧಿಕಾರಿಯಿಂದ ಎಲ್‌ಸಿ ಪಡೆಯದ ಕಂಬ ಹತ್ತಿಸಿದ ಪರಿಣಾಮ ನಂಜುಂಡಿ ಎಂಬಾತ ಮೃತಪಟ್ಟಿದ್ದಾರೆ.
ಹೀಗೆ ಸಾಲು ಸಾಲು ಸಾವುಗಳು ಸಂಭವಿಸುತ್ತಿರುವುದಕ್ಕೆ ಇಲ್ಲಿನ ಶಾಖಾಧಿಕಾರಿಯ ತಪ್ಪೊ,ಲೈನ್ ಮ್ಯಾನ್ ಗಳ ತಪ್ಪಿನಿಂದ ಸಾವುಗಳು ಸಂಭವಿಸಿತ್ತಿವೆಯೋ ಬೆಸ್ಕಾಂನ ಉನ್ನತ ಮಟ್ಟದ ಅಧಿಕಾರಿಗಳ ತನಿಖೆಯಿಂದ ಬಹಿರಂಗವಾಗಬೇಕಿದೆ.
ಇನ್ನೂ ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಮಧುಗಿರಿ ಉಪ ವಿಭಾಗದ ಇಇ ಜಗದೀಶ್ ಟಿಎನ್ ಬೇಟದ ಇಬ್ಬರು ರೈತರು ಅಕ್ರಮವಾಗಿ ತಮ್ಮ ಜಮೀನಿನ ಸುತ್ತಲೂ ತಂತಿ ಬೇಲಿ ಮಾಡಿಕೊಂಡಿದರು ಇದ್ದಕ್ಕೆ ಇಲಾಖೆಯ ಅನುಮತಿಯು ಪಡೆಯದೆ ಅಕ್ರಮವಾಗಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದರು. ಮಳೆಗಾಲದಲ್ಲಿ ಮತ್ತೆ ಅದೇ ರೈತರನ್ನು ಈ ಅಕ್ರಮ ವಿದ್ಯುತ್ ಸಂಪರ್ಕದ ತಂತಿ ತಾಗಿ ಮೃತಪಟ್ಟಿದ್ದಾರೆ. ಕೊತ್ತೂರಿನ ಮಹಿಳೆ ಮನೆ ಮೇಲೆ ಇದ್ದ ವಿದ್ಯುತ್ ಲೈನ್ ಗಮನಿಸದೆ ಮೃತಪಟ್ಟಿದ್ದಾರೆ.ಇವರು ಸಹ ಮನೆ ನಿರ್ಮಾಣ ಮಾಡುವಾಗ ವಿದ್ಯುತ್ ಲೈನ್ ಹಾದುಹೋಗಿರುವ ಜಾಗದಲ್ಲಿ ಮನೆ ನಿರ್ಮಾಣ ಮಾಡಿರುವುದರಿಂದ ಈ ಅನಾಹುತ ಸಂಭವಿಸಿದೆ. ಮನೆ ನಿರ್ಮಾಣವಾದ ಬಳಿಕ ಲೈನ್ ಶಿಪ್ಟಿಂಗ್ ಬಗ್ಗೆ ಅರ್ಜಿ ನೀಡಿಲ್ಲ.ಮನೆ ಮಾಲೀಕರಿಗೆ ಅರ್ಜಿ ನೀಡಿರುವ ನಕಲು ಇದ್ದರೆ ತನ್ನಿ ಎಂದು ಕೇಳಿದರೂ ಅವರು ಇವರೆಗೂ ತಂದಿಲ್ಲ. ಈ ಮೂರು ಪ್ರಕರಣಗಳಿಗೂ ಇಲಾಖೆಯಿಂದ ಯಾವುದೇ ಪರಿಹಾರ ನೀಡಲು ಬರುವುದಿಲ್ಲ ಎಂದು ಇಇ ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.
ಇನ್ನೂ ದಸರಾ ಹಬ್ಬದ ದಿನ ನಡೆದ ಘಟನೆಗೆ ಸಂಬಂಧಿಸಿದಂತೆ ಇಲಾಖೆಯ ನೌಕರರ ನಿರ್ಲಕ್ಷ್ಯ ತೋರಿದ್ದರ ಪರಿಣಾಮ ಈ ದುರ್ಘಟನೆ ನಡೆದಿದೆ. ಈ ಘಟನೆಗೂ ಸಹ ಇಲಾಖೆಯಿಂದ ಅರೇಕಾಲಿಕ ಶುಚ್ಚಿಗಾರ ನಂಜುಡಿ ಕುಟುಂಬಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. ಘಟನೆಗೆ ಕಾರಣರಾದ ವ್ಯಕ್ತಿಗಳೇ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ಸಹಾಯ ಮಾಡಬೇಕು ಎಂದಿರುವ ಇಇ ಜಗದೀಶ್ ವಿದ್ಯುತ್ ಲೈನ್‌ಗಳು ತುಂಡಾಗಿ ನೆಲಕ್ಕೆ ಬಿದ್ದು ಅದ್ದರಿಂದ ಮೃತಪಟ್ಟವರಿಗೆ ಮಾತ್ರ ಇಲಾಖೆಯು ಐದು ಲಕ್ಷದವರೆಗೆ ಪರಿಹಾರ ನೀಡುತ್ತದೆ.ಉಳಿಕೆ ಪ್ರಕರಣಗಳಲ್ಲಿ ಪರಿಹಾರ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಅಕ್ರಮವಾಗಿ ಜಮೀನುಗಳಿಗೆ ತಂತಿ ಬೇಲಿ ನಿರ್ಮಾಣ ಮಾಡಿಕೊಂಡು, ವಿದ್ಯುತ್ ಸಂಪರ್ಕ ಮಾಡುವ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾದವರು ಯಾರು? ಅಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿರುವ ರೈತರ ಬಗ್ಗೆ ಇಲಾಖೆಗೆ ಮಾಹಿತಿ ಇರಲಿಲ್ಲವೇ? ಇನ್ನೂ ಮುಂದೆ ಮನೆ ಮೇಲೆ ವಿದ್ಯುತ್ ಲೈನ್ ಹೋಗಿರುವ ಪ್ರಕರಣಗಳನ್ನೂ ಗುರುತಿಸಿಯಾದರು ಲೈನ್ ಬದಲಾವಣೆ ಮಾಡುತ್ತಾರ ಬೆಸ್ಕಾಂ ಅಧಿಕಾರಿಗಳು? ಈಗ ನಡೆದಿರುವ ನಾಲ್ಕು ಘಟನೆಗಳು ಮೇಲ್ನೋಟಕ್ಕೆ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ದಿಂದ ಸಂಭವಿಸಿದ್ದು ಇಲಾಖಾ ತನಿಖೆಯಿಂದ ಮಾತ್ರ ಸತ್ಯ ಹೋರಬರಬೇಕಿದೆ.