Friday, June 21, 2024
Homeರಾಜ್ಯನೇಹಾ ಹಂತಕ ಫಯಾಜ್ ಸಿಐಡಿ ವಶಕ್ಕೆ

ನೇಹಾ ಹಂತಕ ಫಯಾಜ್ ಸಿಐಡಿ ವಶಕ್ಕೆ

ಧಾರವಾಡ,ಏ.24- ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿರುವ ಹಿನ್ನೆಲೆಯಲ್ಲಿ ಧಾರವಾಡದ ಕೇಂದ್ರ ಕಾರಾಗೃಹದಲ್ಲಿರುವ ಹಂತಕ ಫಯಾಜ್ನನ್ನು ಸಿಐಡಿ ಪೊಲೀಸರು ತಮ್ಮ ವಶಕ್ಕೆ ಪಡೆಯಲಿದ್ದಾರೆ.

ಫಯಾಜ್ನನ್ನು ತಮ್ಮ ವಶಕ್ಕೆ ನೀಡುವಂತೆ ಹುಬ್ಬಳ್ಳಿಯ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸಿಐಡಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದು , ಇಂದು ನ್ಯಾಯಾಲಯದ ಆದೇಶ ಪಡೆದು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಬಂದು ಅಧಿಕಾರಿಗಳು ಫಯಾಜ್ನನ್ನು ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಆನಂತರ ಫಯಾಜ್ನನ್ನು ಬಿವಿಬಿ ಕಾಲೇಜಿನಲ್ಲಿ ಹತ್ಯೆ ಮಾಡಿದ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

RELATED ARTICLES

Latest News