ನೆಲಮಂಗಲ,ಮೇ.1-ಅನಿಲ ಸೋರಿಕೆಯಿಂದ ಮನೆಗೆ ಬೆಂಕಿ ಬಿದ್ದು ಇಬ್ಬರು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಡಕಮಾರನಹಳ್ಳಿಯ ಓವರ್ ಟ್ಯಾಂಕ್ ಬಳಿ ನಡೆದಿದೆ.ನಾಗರಾಜ್ (50), ಶ್ರೀನಿವಾಸ್ (50) ಮೃತ ದುರ್ದೈವಿಗಳು.
ಅಡಕಮಾರನಹಳ್ಳಿಯಲ್ಲಿ ನೆಲಮಂಗಲ ಮೂಲದ ಗಂಗಯ್ಯ ಅವರಿಗೆ ದೇರಿದ ಎರಡು ಮನೆಯನ್ನು ಬಾಡಿಗೆಗೆ ನೀಡಲಾಗಿದೆ ಒಂದು ಮನೆಯಲ್ಲಿ ಬಳ್ಳಾರಿ ಮೂಲದ ನಾಗರಾಜ್ ಪತ್ನಿ ಲಕ್ಷ್ಮಿ ದೇವಿ (35), ಮಕ್ಕಳಾದ ಬಸನಗೌಡ (19), ಅಭಿಷೇಕ್ ಗೌಡ (18) ಎರಡು ವರ್ಷದಿಂದ ವಾಸಿಸುತ್ತಿದ್ದರು.
ನಾಗರಾಜ್ ದೇವರಿಗೆ ದೀಪ ಹಚ್ಚಿ ಕೆಲಸಕ್ಕೆ ಹೋಗುತ್ತಿದ್ದರು ಈ ವೇಳೆ ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಎರಡನೇ ಮಗ ಅಭಿಷೇಕ್ ಮುಂದಾಗಿದ್ದ . ಈ ವೇಳೆ ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಆಗಿದ್ದು ಯಾರಿಗೂ ಗೊತ್ತಾಗಿಲ್ಲ ಸ್ವಪ್ಪ ಸಮಯದಲ್ಲೇ ಬೆಂಕಿ ತಗುಲಿದೆ ಮನೆ ಹೊತ್ತಿ ಉರಿದಿದೆ.ನಾಗರಾಜ್, ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್‌ಗೂ ಬೆಂಕಿ ಆವರಿಸಿ ಗಾಯಗೊಂಡಿದ್ದಾರೆ.ಪಕ್ಕದ ಮನೆಗೂ ಬೆಂಕಿ ಆವರಿಸಿ ಶ್ರೀನಿವಾಸ್‌ಹಾಗು ಶಿವಶಂಕರ್‌ಗೂ ಸುಟ್ಟ ಗಾಯವಾಗಿದೆ.
ಕೂಡಲೇ ಸ್ಥಳೀಯರು ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು.ಚಿಕಿತ್ಸೆ ಫಲಿಸದೆ ನಾಗರಾಜ್, ಶ್ರೀನಿವಾಸ್ ಕೊನೆಯುಸಿರೆಳೆದಿದ್ದಾರೆ. ಅಭಿಷೇಕ್ , ಶಿವಶಂಕರ್, ಲಕ್ಷ್ಮೀದೇವಿ ಹಾಗೂ ಬಸವ ಎಂಬುವವರಿ ಚಿಕಿತ್ಸೆಪಡೆಯುತ್ತಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.