ಹ್ಯಾಂಗ್‍ಝೌ, ಸೆ.27- ಚೀನಾದ ಆತಿಥ್ಯದಲ್ಲಿ ನಡೆಯುತ್ತಿರುವ 19ನೇ ಏಷ್ಯಾನ್ ಗೇಮ್ಸ್‍ನಲ್ಲಿ ನೇಪಾಳದ ಆಟಗಾರರು ವೇಗದ ಶತಕ, ಅರ್ಧಶತಕ ಹಾಗೂ ದಾಖಲೆಯ ಮೊತ್ತ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ರೋಹಿತ್, ಮಿಲ್ಲರ್ ದಾಖಲೆ ಮುರಿದ ಕುಶಾಲ್ ಮಲ್ಲ:
ಮೊಂಗೊಲಿಯಾ ವಿರುದ್ಧ `ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನೇಪಾಳ 66 ರನ್ ಗಳಿಗೆ ಆರಂಭಿಕ 2 ವಿಕೆಟ್ ಗಳನ್ನು ಕಳೆದುಕೊಂಡಿತು. ಆದರೆ 3ನೇ ಕ್ರಮಾಂಕಕ್ಕೆ ಮೈದಾನಕ್ಕಿಳಿದ 19ರ ಪ್ರಾಯದ ಕುಶಾಲ್ ಮಲ್ಲ ಮಂಗೊಲಿಯಾ ಬೌಲರ್‍ಗಳ ಮೇಲೆ ಸವಾರಿ ಮಾಡಿ 34 ಎಸೆತಗಳಲ್ಲೇ ವೇಗದ ಟಿ 20 ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾದ ಸ್ಪೋಟಕ ಆಟಗಾರ ಡೇವಿಡ್ ಮಿಲ್ಲರ್ ಅವರು 35 ಎಸೆತದಲ್ಲಿ ನಿರ್ಮಿಸಿದ್ದ ಶತಕದ ದಾಖಲೆಯನ್ನು ಮುರಿದರು. ಪಂದ್ಯದಲ್ಲಿ 50 ಎಸೆತಗಳನ್ನು ಎದುರಿಸಿದ ಮಲ್ಲ 8 ಬೌಂಡರಿ, 12 ಸಿಕ್ಸರ್ ನೆರವಿನಿಂದ ಅಜೇಯ 137 ರನ್ ಸಿಡಿಸಿದರು.
ಆತಂಕ ಸೃಷ್ಟಿಸಿದ ಬೆಂಗಳೂರು ವಿಮಾನ ನಿಲ್ದಾಣದ ಬಳಿ ಡ್ರೋಣ್ ಹಾರಾಟ
ಯುವಿ ದಾಖಲೆ ಮುರಿದ ದೀಪಿಂದರ್:
ಪಂದ್ಯದ ಸ್ಲಾಗ್ ಓವರ್‍ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ದೀಪಿಂದರ್ ಸಿಂಗ್‍ಅಯ್‍ರಾ 9 ಎಸೆತಗಳಲ್ಲೇ 8 ಸಿಕ್ಸರ್‍ಗಳ ನೆರವಿನಿಂದ ಅರ್ಧಶತಕ ಸಿಡಿಸಿ 2007ರಲ್ಲಿ ನಡೆದಿದ್ದ ಟಿ 20 ವಿಶ್ವಕಪ್ ಟೂರ್ನಿಯಲ್ಲಿ 12 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ಯುವರಾಜ್‍ಸಿಂಗ್ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.
ದಾಖಲೆಯ ಮೊತ್ತ:
ನಾಯಕ ರೋಹಿತ್ ಪೊಲ್ ಕೂಡ 27 ಎಸೆತಗಳಲ್ಲೇ 2 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದ ಪರಿಣಾಮ ನೇಪಾಳ ನಿಗತ 20 ಓವರ್‍ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 314 ರನ್ ದಾಖಲಿಸುವ ಮೂಲಕ ಟಿ20 ಸ್ವರೂಪದಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ತಂಡ ಎಂಬ ಕೀರ್ತಿಗೆ ಪಾತ್ರವಾಯಿತು. ಈ ಹಿಂದೆ 2019ರಲ್ಲಿ ಐರ್ಲೆಂಡ್ ವಿರುದ್ಧ ಆಫಾಘಾನಿಸ್ತಾನ ದಾಖಲಿಸಿದ್ದ 278/3 ರನ್ ಟಿ20 ಮಾದರಿಯ ಗರಿಷ್ಠ ಮೊತ್ತ ಆಗಿತ್ತು.
41 ರನ್‍ಗಳಿಗೆ ಮಂಗೊಲಿಯಾ ಆಲ್‍ಔಟ್:
ನೇಪಾಳ ನೀಡಿದ 315 ಬೃಹತ್ ಗುರಿ ಬೆನ್ನಟ್ಟಿದ ಮಂಗೊಲಿಯಾ ಎದುರಾಳಿ ತಂಡದ ಬೌಲರ್‍ಗಳ ಸಂಘಟಿತ ಬೌಲಿಂಗ್ ದಾಳಿಗೆ ನಲುಗಿ 13.1 ಓವರ್‍ಗಳಲ್ಲೇ 41 ರನ್‍ಗಳಿಗೆ ಅಲೌಟ್ ಆಗುವ ಮೂಲಕ ದಾಖಲೆಯ ಸೋಲು ಕಂಡಿತು. ದವಸುರೈನ್ (10ರನ್) ಗರಿಷ್ಠ ಸ್ಕೋರರ್ ಆದರೆ ಯಾವ ಆಟಗಾರರು ಎರಡಂಕಿ ದಾಟದಿರುವುದು ಕೂಡ ದಾಖಲೆ ಆಗಿದೆ.