Thursday, December 5, 2024
Homeಕ್ರೀಡಾ ಸುದ್ದಿ | Sportsರೋಚಕ ಪಂದ್ಯದಲ್ಲಿ ಕೇವಲ 1ರನ್‌ನಿಂದ ನೇಪಾಳವನ್ನು ಸೋಲಿಸಿದ ದಕ್ಷಿಣ ಆಫ್ರಿಕಾ

ರೋಚಕ ಪಂದ್ಯದಲ್ಲಿ ಕೇವಲ 1ರನ್‌ನಿಂದ ನೇಪಾಳವನ್ನು ಸೋಲಿಸಿದ ದಕ್ಷಿಣ ಆಫ್ರಿಕಾ

ಸೇಂಟ್‌ ವಿನ್ಸೆಂಟ್‌‍ , ಜೂ.15- ವಿಶ್ವಕಪ್‌ ಕ್ರಿಕೆಟ್‌ನ ರೋಚಕ ಪಂದ್ಯದಲ್ಲಿ ಕೇವಲ 1ರನ್‌ನಿಂದ ನೇಪಾಳ ತಂಡವನ್ನು ಮಣಿಸಿ ಬಲಿಷ್ಠ ದಕ್ಷಿಣ ಆಫ್ರಿಕಾ ಗೆಲವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾದ 7 ವಿಕೆಟ್‌ ನಷೃಕ್ಕೆ ಸಾಧಾರಣ ಮೊತ್ತ 115 ಕಲೆಹಾಕಿತು.ನೇಪಾಲ ತಂಡ ಉತ್ತಮ ಆರಂಭ ಕಂಡು ಗೆಲುವಿನ ಗೆರೆವರೆಗೂ ಬಂದು ಮುಗ್ಗರಿಸಿದೆ.

ನೇಪಾಳ ತಂಡದ ಗೆಲ್ಲುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಕೊನೆಯ ಮೂರು ಓವರ್‌ ಪಂದ್ಯದ ದಿಕ್ಕನ್ನೇ ಬದಲಿಸಿತು 18ನೇ ಓವರ್‌ ಮಾಡಿದ ಸ್ಪಿನ್ನರ್‌ ತಬ್ರೈಜ್‌ ಶಮ್ಸಿ 3 ವಿಕೆಟ್‌ ಉರುಳಿಸಿ ಕೇವಲ ಒಂದು ರನ್‌ ನೀಡಿದರು.

ಆದರೂ ನೇಪಾಳ ತಂಡ ತನ್ನ ಐತಿಹಾಸಿಕ ಗೆಲುವಿನ ಸನಿಹ ಬಂದಿತ್ತು 6ಎಸೆತಗಳಲ್ಲಿ 8 ರನ್‌ ಬೇಕಿತ್ತು ಆದರೆ ದಕ್ಷಿಣ ಆಪ್ರಿಕಾದ ಒಟ್ನೀಲ್‌ ಬಾರ್ಟ್‌ಮನ್‌ ಬೌಲ್‌ ಮಾಡಿದ ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಬ್ಯಟಿಂಗ್‌ ಕ್ರೀಸ್‌‍ನಲ್ಲಿದ್ದ ಗುಲ್ಶನ್‌ ರನ್‌ ಗಳಿಸಲು ಸಾಧ್ಯವಾಗಲಿಲ್ಲ. ನಂತರ 3ನೇ ಎಸಸತದಲ್ಲಿ ಆಫ್‌ ಸೈಡ್‌ನಲ್ಲಿ ಬೌಂಡರಿ ಬಾರಿಸಿದರು ನೇಪಾಳಕ್ಕೆ ಮೂರು ಎಸೆತಗಳಲ್ಲಿ ನಾಲ್ಕು ರನ್‌ ಬೇಕಿತ್ತು.

4ನೇ ಎಸೆತದಲ್ಲಿ ಗುಲ್ಶನ್‌ ಮತ್ತೆ ಎರಡು ರನ್‌ ಗಳಿಸಿದರು ಮತ್ತು ನೇಪಾಳಕ್ಕೆ ಎರಡು ಎಸೆತಗಳಲ್ಲಿ 2 ರನ್‌ ಬೇಕಾಗಿತು ಐದನೇ ಎಸೆತವು ಡಾಟ್‌ ಬಾಲ್‌ ಆಗಿತ್ತು ,ಯಾವುದೇ ರನ್‌ ಗಳಿಸಲಿಲ್ಲ ಪಂದ್ಯದ ಕೊನೆಯ ಕೊನೆಯ ಎಸೆತದಲ್ಲಿ ಗುಲ್ಶನ್‌ ರನ್‌ ಗಳಿಸುವ ಬರದಲ್ಲಿ ರನ್‌ಔಟ್‌ ಆದರು ಇಲ್ಲಿ ಪ್ರಬಲವಾದ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ರನ್‌ನಿಂದ ಸೋತಿತು.


ನೇಪಾಳದ ಗೆಲುವಿಗೆ ಪಂದ್ಯದ ಕೊನೆಯ ಎಸೆತದಲ್ಲಿ ಎರಡು ರನ್‌ಗಳು ಬೇಕಾಗಿದ್ದವು, ದಕ್ಷಿಣ ಆಫ್ರಿಕಾದ ಸಾಧಾರಣ ಮೊತ್ತವಾದ 115 ರನ್‌ ಗಳಿಸಿದ್ದರೆ ಸೂಪರ್‌ ಓವರ್‌ಸಾಧ್ಯವಿತ್ತು.ಆದರೆ ಹದಿಹರೆಯದ ಘುಲ್ಸನ್‌ ಝಾ ಅಂತಿಮ ಎಸೆತದಲ್ಲಿ ಸಿಂಗಲ್‌ ಮಾಡುವ ಪ್ರಯತ್ನದಲ್ಲಿ ನಾನ್‌‍-ಸ್ಟ್ರೈಕರ್‌ನ ಕೊನೆಯಲ್ಲಿ ರನ್‌ ಔಟ್‌ ಆದರು ಮತ್ತು ದಕ್ಷಿಣ ಆಫ್ರಿಕಾ ರೋಚಕ ಪಂದ್ಯವನ್ನು ಗೆಲ್ಲಲು ಸಾಧಿಸಿತು ನೇಪಾಳ ಆಟಗಾರರು ನಿರಾಸೆಗೊಂಡರು.

ನಾವು ಹೋರಾಡಿದ ರೀತಿ ತುಂಬಾ ಚೆನ್ನಾಗಿತ್ತು ಎಂದು ನಾನು ಭಾವಿಸುತ್ತೇನೆ. ನಾವು ಹೆಚ್ಚು ಆಡಿಲ್ಲ ಆದರೂ ಉತ್ತಮ ತಂಡಗಳನ್ನು ಎದುರಿಸಬಹುದು ಮುಂದಿನ ಬಾರಿ ನಾವು ಗೆಲ್ಲುವ ಸಾಧಿಸುತ್ತೇವೆ ಎಬ ನಂಬಿಕೆ ಇದೆ ನೇಪಾಳ ತಂಡದ ನಾಯಕ ಹೇಳಿದರು

RELATED ARTICLES

Latest News