ಬೆಂಗಳೂರು, ಫೆ.17-ಹೆದ್ದಾರಿಯಲ್ಲಿ ಟೋಲ್ ಸಂಗ್ರಹವನ್ನು ಹೆಚ್ಚು ಪಾರದರ್ಶಕ ಮತ್ತು ಸುಗಮವಾಗಿಸುವುದು ಇಂದಿನಿಂದ ಹೊಸ ನಿಯಮ ಜಾರಿಗೆ ಬಂದಿದೆ. ಟೋಲ್ ಪ್ಲಾಜಾದಲ್ಲಿ ವಾಹನಗಳ ದಟ್ಟಣೆ ತಗ್ಗಿಸಲು ಕೆಲ ಬದಲಾವಣೆ ತರಲಾಗಿದೆ. ಪ್ರಸ್ಕೃತ ಎಲ್ಲಾ ವಾಹನ ಮಾಲೀಕರು ತಮ್ಮ ಫಾಸ್ಟ್ ಟ್ಯಾಗ್ ಅನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ, ಇಲ್ಲದಿದ್ದರೆ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗಬಹುದು.
ಕಡಿಮೆ ಬ್ಯಾಲೆನ್ಸ್ ಪಾವತಿ ವಿಳಂಬ ಅಥವಾ ಫಾಸ್ಟ್ ಟ್ಯಾಗ್ ಅನ್ನು ಕಪ್ಪುಪಟ್ಟಿ ಅಥವಾ ಬ್ಯಾಕ್ ಲಿಸ್ಟ್‌ಗೆ ಸೇರಿಸಿದರೆ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ. ಫಾಸ್ಟ್‌ಟ್ಯಾಗ್‌ನಲ್ಲಿನ ಸಮಸ್ಯೆಗಳಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಹೊಸ ನಿಯಮ ಏನು?:ನಿಮ್ಮ ವಾಹನದ ಫಾಸ್ಟ್ ಟ್ಯಾಗ್‌ನಲ್ಲಿ ಹಣ ಇರಬೇಕು, ಇಲ್ಲದಿದ್ದರೆ ಟೋಲ್ ಪ್ರವೇಶಕ್ಕೆ ಒಂದು ಗಂಟೆ ಮೊದಲು ಹಣ ಜಮೆ ಮಾಡಿರಬೇಕು. ಟೋಲ್ ಹತ್ತಿರ ಬಂದ ಮೇಲೆ ರಿಚಾರ್ಜ್ ಮಾಡಿದರೆ ಸಮಸ್ಯೆ ಆಗಲಿದೆ.
ಟೋಲ್ ದಾಟುವ 60 ನಿಮಿಷ ಮೊದಲು ಹಾಗೂ ದಾಟಿದ 10 ನಿಮಿಷಗಳ ಕಾಲ ಫಾಸ್ಟ್ ಟ್ಯಾಗ್ ಆಕ್ಟಿವ್ ಇರಬೇಕು. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ದರೆ, ಟೋಲ್ ಸಿಸ್ಟಮ್ ನಲ್ಲಿ ಎರರ್ ಕೋಡ್ 176 ಎಂದು ತೋರಿಸಲಾಗುತ್ತದೆ. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ಹಣ ಪಾವತಿ ಮಾಡಬೇಕಾಗುತ್ತದೆ ಕೆವೈಸಿ ಮಾಡಿಲ್ಲ ಎಂದಾದರೆ ನಿಮ್ಮ ಫಾಸ್ಟ್ ಟ್ಯಾಗ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಅಂತಹ ಟ್ಯಾಗ್‌ನೊಂದಿಗೆ ಬರುವ ವಾಹನಕ್ಕೆ ದುಪ್ಪಟ್ಟು ಸಂಕು ವಿಧಿಸಲಾಗುತ್ತದೆ.
ಒಂದು ವೇಳೆ ವಾಹನ ಟೋಲ್ ಗೇಟ್ ದಾಟಿದ 15 ನಿಮಿಷಗಳ ನಂತರ ಫಾಸ್ಟ್ ಟ್ಯಾಗ್ ಖಾತೆಯಿಂದ ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರು ಹೆಚ್ಚಿನ ಶುಲ್ಕವನ್ನು ವಿಧಿಸಬೇಕಾಗುತ್ತದೆ.ಇನ್ನು ಟೋಲ್‌ಗೇಟ್‌ನಲ್ಲಿ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಅನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ತಪ್ಪು ಶುಲ್ಕ ಮತ್ತು ಹೆಚ್ಚುವರಿ ಹಣ ಕಡಿತಕ್ಕೆ ಸಂಬಂಧಿಸಿ ವಾಹನ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದು.
ಮುನ್ನೆಚ್ಚರಿಕೆ ಮುಖ್ಯ:
*ದೀರ್ಘ ಪ್ರಯಾಣವನ್ನು ಕೈಗೊಳ್ಳುವ ಮೊದಲು ನಿಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳಿ.
*ಕಪ್ಪುಪಟ್ಟಿಗೆ ಸೇರುವುದನ್ನು ತಪ್ಪಿಸಲು ಕಾಲಕಾಲಕ್ಕೆ ವಿವರಗಳನ್ನು ನವೀಕರಿಸಿ.
*ಟೋಲ್ ಪ್ಲಾಜಾ ತಲುಪುವ ಮೊದಲು ನಿಮ್ಮ ಫಾಸ್ಟ್‌ಟ್ಯಾಗ್‌ನ ಸ್ಥಿತಿಯನ್ನು ಪರಿಶೀಲಿಸಿ.
*ಬಳಕೆದಾರರು ತಮ್ಮ ಮಾಹಿತಿಯನ್ನು ನವೀಕರಿಸುತ್ತಿದ್ದರೆ ಮತ್ತು ತಮ್ಮ ಪಾಸ್ಟ್ ಟ್ಯಾಗ್ ಅನ್ನು ಸಕ್ರಿಯವಾಗಿ ನಿರ್ವಹಿಸಿದರೆ, ಅವರು ಬದಲಾದ ನಿಯಮಗಳನ್ನು ಸುಲಭವಾಗಿ ಪಾಲಿಸಬಹುದು ಮತ್ತು ಯಾವುದೇ *ವಿಳಂಬ ಅಥವಾ ಅನಗತ್ಯ ದಂಡಗಳನ್ನು ತಪ್ಪಿಸಬಹುದು.
*ಇದು ವಾಹನ ಮಾಲೀಕರಲ್ಲಿ ಆತಂಕ ಶುರುವಾಗಿದೆ ಕೆಲವೊಮ್ಮೆ ಗಂಟೆಗಟ್ಟಲೆ ಟೋಲ್ ಬಳಿ ಕಾಯಬೇಕಾಗುತ್ತದೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.ಇದಲ್ಲದೆ ದುಬಾರಿ ಶುಲ್ಕ ಕಡಿತ ಮಾಡಬೇಕೆಂದು *ಮತ್ತು 10 ಕಿ.ಮೀ ಒಳಗೆ ಬರುವ ಟೋಲ್ ಶುಲ್ಕ ಪಾವತಿ ಮುಕ್ತ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.