Friday, May 24, 2024
Homeಇದೀಗ ಬಂದ ಸುದ್ದಿರಾಮೇಶ್ವರಂನ ಸಮುದ್ರದ ಮೇಲೆ ಅತ್ಯಾಧುನಿಕ ರೈಲ್ವೆ ಮೇಲ್ಸೇತುವೆ ಶೀಘ್ರ ಕಾರ್ಯಾರಂಭ

ರಾಮೇಶ್ವರಂನ ಸಮುದ್ರದ ಮೇಲೆ ಅತ್ಯಾಧುನಿಕ ರೈಲ್ವೆ ಮೇಲ್ಸೇತುವೆ ಶೀಘ್ರ ಕಾರ್ಯಾರಂಭ

ನವದೆಹಲಿ, ಫೆ 23- ದೇಶದ ಮುಖ್ಯ ಭೂ ಭಾಗವಾದ ರಾಮೇಶ್ವರಂ ದ್ವೀಪದೊಂದಿಗೆ ಸಂಪರ್ಕಿಸುವ ಭಾರತದ ಮೊದಲ (ಲಂಬ-ಲಿಫ್ಟ್) ಪಂಬನ್ ರೈಲ್ವೆ ಸೇತುವೆ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಜಯವರ್ಮ ಸಿನ್ಹಾ ಹೇಳಿದ್ದಾರೆ. ಕಾಮಗಾರಿಯ ಪ್ರಗತಿ ಪರಿಶೀಲನೆಗಾಗಿ ಇತ್ತೀಚೆಗೆ ರಾಮೇಶ್ವರಂಗೆ ಭೇಟಿ ನೀಡಿದ್ದ ವರ್ಮಾ ಅವರು ಸುದ್ದಿಗಾರೊಂದಿಗೆ ಮಾತನಾಡಿ, ಮರು ನಿರ್ಮಾಣ ಕಾರ್ಯವು ಉತ್ತಮವಾಗಿ ನಡೆಯುತ್ತಿದೆ ಮತ್ತು ನಾವು ಶೀಘ್ರದಲ್ಲೇ ಸೇವೆಗಳನ್ನು ಮರುಸ್ಥಾಪಿಸುತ್ತೇವೆ ಎಂದು ತಿಳಿಸಿದರು.

ಸೇತುವೆ ಮರುನಿರ್ಮಾಣ ಎದುರಿಸುತ್ತಿರುವ ಬಹು ಸವಾಲುಗಳನ್ನು ಎದುರಿಸಿ ನಮ್ಮ ತಂಡ ಶ್ಲಾಘನೀಯ ಕೆಲಸ ಮಾಡಿದೆ. ಸಮುದ್ರದ ಮೇಲೆ ದೇಶದಲ್ಲೇ ಮೊದಲನೆಯದಾದ ಲಂಬ-ಲಿಫ್ಟ್ ಸೇತುವೆಯನ್ನು ನಿರ್ಮಿಸುವುದು ಹೆಮ್ಮೆ ತಂದಿದೆ ಎಂದರು. ಕಳೆದ 1913 ರಲ್ಲಿ ನಿರ್ಮಿಸಲಾಗಿದ್ದ ರೈಲು ಸೇತುವೆಯನ್ನು ಸುರಕ್ಷತೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುವುದಿಲ್ಲ ಎಂದು ಘೋಷಿಸಿದ ನಂತರ ಮುಖ್ಯ ಭೂಭಾಗದ ಮಂಡಪಂ ಮತ್ತು ರಾಮೇಶ್ವರಂ ದ್ವೀಪದ ನಡುವಿನ ರೈಲು ಸೇವೆಗಳನ್ನು ಕಳೆದ ಡಿಸೆಂಬರ್ 23, 2022ರಂದು ಸ್ಥಗಿತಗೊಳಿಸಲಾಗಿತ್ತು.

ಇದ್ದಕೂ ಮುನ್ನ ಹೊಸ ಸೇತುವೆಯನ್ನು ನಿರ್ಮಿಸುವ ಅವಶ್ಯಕತೆಯಿದೆ ಎಂದು ದಕ್ಷಿಣ ರೈಲ್ವೆ ನಿರ್ಧಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 2019ರಲ್ಲಿ ಹಳೆಯ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆಯ ಶಂಕುಸ್ಥಾಪನೆ ಮಾಡಿದರು ಮತ್ತು ಫೆಬ್ರವರಿ 2020 ರಲ್ಲಿ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಮೂಲಕ ಕಾಮಗಾರಿಯನ್ನು ಪ್ರಾರಂಭಿಸಲಾಯಿತು.

2027 ರ ವೇಳೆಗೆ ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ

ಇದು ಡಿಸೆಂಬರ್ 2021 ರೊಳಗೆ ಪೂರ್ಣಗೊಳ್ಳಬೇಕಿತ್ತು, ಆದಾಗ್ಯೂ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಗಡುವನ್ನು ವಿಸ್ತರಿಸಲಾಯಿತು. ರೈಲ್ವೆ ಮೂಲದ ಪ್ರಕಾರ, 2.05-ಕಿಮೀ ಉದ್ದದ ಸೇತುವೆಯು ಭಾರತೀಯ ರೈಲ್ವೆಗಳಿಗೆ ಹೆಚ್ಚಿನ ವೇಗದಲ್ಲಿ ರೈಲುಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ಇದು ಭಾರತದ ಮುಖ್ಯ ಭೂ ಭಾಗ ಮತ್ತು ರಾಮೇಶ್ವರಂ ದ್ವೀಪದ ನಡುವೆ ಸಂಚಾರವನ್ನು ಹೆಚ್ಚಿಸುತ್ತದೆ.

ಹಳೆಯ ಸೇತುವೆಯ ಕುರಿತು ಮಾತನಾಡಿದ ಜಯವರ್ಮ ಎತ್ತರದ ಉಬ್ಬರ ವಿಳಿತದ ಮಟ್ಟ ಮತ್ತು ಗರ್ಡರ್‍ನ ಕೆಳಭಾಗದ ನಡುವೆ ಅದರ ಲಂಬವಾದ ತೆರವು ಕೇವಲ 1.5 ಮೀಟರ್‍ನಷ್ಟಿದ್ದು, ಇದರ ಪರಿಣಾಮವಾಗಿ ಸಮುದ್ರದ ನೀರು ಗರ್ಡರ್‍ಗಳ ಮೇಲೆ ಚಿಮ್ಮುತ್ತಿದೆ ಎಂದು ಹೇಳಿದರು. ಸೇತುವೆಯ ಕಡಿಮೆ ಉಳಿದಿರುವ ಜೀವಿತಾವದಿಯಲ್ಲಿ, ಅಸ್ತಿತ್ವದಲ್ಲಿರುವ ಸೇತುವೆಗೆ ಸಮಾನಾಂತರವಾಗಿ ನ್ಯಾವಿಗೇಷನಲ್ ಲಿಫ್ಟ್ ಸ್ಪ್ಯಾನ್ ಸೇರಿದಂತೆ ಡಬಲ್ ಲೈನ್‍ಗಳಿಗೆ ಸೂಕ್ತವಾದ ಸೇತುವೆಯನ್ನು ಪುನರ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಎಸ್‍ಆರ್ ವಕ್ತಾರರು ತಿಳಿಸಿದ್ದಾರೆ.

ಹೊಸ ಸೇತುವೆಯು 18.3 ಮೀಟರ್‍ನ 100 ಸ್ಪ್ಯಾನ್‍ಗಳನ್ನು ಮತ್ತು 63 ಮೀಟರ್‍ನ ಒಂದು ನ್ಯಾವಿಗೇಷನಲ್ ಸ್ಪ್ಯಾನ್‍ಗಳನ್ನು ಹೊಂದಿರುತ್ತದೆ. ಸಮುದ್ರ ಮಟ್ಟದಿಂದ 22.0 ಮೀ ಎತ್ತರದ ನ್ಯಾವಿಗೇಷನಲ್ ಏರ್ ಕ್ಲಿಯರೆನ್ಸ್ ಹೊಂದಿರುವ ಅಸ್ತಿತ್ವದಲ್ಲಿರುವ ಸೇತುವೆಗಿಂತ ಇದು 3.0 ಮೀ ಎತ್ತರವಾಗಿರುತ್ತದೆ. ಎಸ್‍ಆರ್ ಪ್ರಕಾರ, ಸೇತುವೆಯ ಸಬ್‍ಸ್ಟ್ರಕ್ಚರ್ ಅನ್ನು ಡಬಲ್ ಲೈನ್‍ಗಳಿಗಾಗಿ ನಿರ್ಮಿಸಲಾಗಿದೆ ಮತ್ತು ನ್ಯಾವಿಗೇಷನಲ್ ಸ್ಪ್ಯಾನ್‍ನಲ್ಲಿ ಡಬಲ್ ಲೈನ್‍ಗಳಿಗೂ ಅವಕಾಶವಿದೆ.

ಆರ್ಥಿಕ ಸಬಲರಿಂದಲೇ ಕಾರ್ಮಿಕರಾಗಿ ನೋಂದಣಿ: ಸಂತೋಷ್ ಲಾಡ್

ನ್ಯಾವಿಗೇಷನಲ್ ಸ್ಪ್ಯಾನ್ ಸೇರಿದಂತೆ ಸಂಪೂರ್ಣ ಸೇತುವೆಯನ್ನು ರೈಲ್ವೆಯ ವಿದ್ಯುದ್ದೀಕರಣದ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅಸ್ತಿತ್ವದಲ್ಲಿರುವ ಹಸ್ತಚಾಲಿತ ಕಾರ್ಯಾಚರಣೆ ಮತ್ತು ನಿಯಂತ್ರಣಕ್ಕೆ ಹೋಲಿಸಿದರೆ, ಹೊಸ ಸೇತುವೆಯು ಎಲೆಕ್ಟ್ರೋ-ಮೆಕ್ಯಾನಿಕಲ್ ನಿಯಂತ್ರಿತ ವ್ಯವಸ್ಥೆಗಳನ್ನು ಹೊಂದಿರುತ್ತದೆ, ಇದು ರೈಲು ನಿಯಂತ್ರಣ ವ್ಯವಸ್ಥೆಗಳೊಂದಿಗೆ ಇಂಟರ್ಲಾಕ್ ಆಗಿರುತ್ತದೆ ಎಂದು ವಕ್ತಾರರು ಹೇಳಿದರು. ಹೊಸ ಸೇತುವೆಯ ನಿರ್ಮಾಣದಲ್ಲಿ ರೈಲ್ವೆಯು ಸ್ಟೇನ್‍ಲೆಸ್ ಸ್ಟೀಲ್ ಬಲವರ್ಧನೆ, ಸಂಯೋಜಿತ ಸ್ಲೀಪರ್‍ಗಳು ಮತ್ತು ದೀರ್ಘಾವದಿಯ ಪೇಂಟಿಂಗ್ ಸಿಸ್ಟಮ್‍ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲಾಗಿದೆ.

RELATED ARTICLES

Latest News