Friday, September 20, 2024
Homeಬೆಂಗಳೂರುಬಿಬಿಎಂಪಿ ಪೌರ ಕಾರ್ಮಿಕರ ಸಮವಸ್ತ್ರ ಬದಲಾವಣೆ

ಬಿಬಿಎಂಪಿ ಪೌರ ಕಾರ್ಮಿಕರ ಸಮವಸ್ತ್ರ ಬದಲಾವಣೆ

ಬೆಂಗಳೂರು, ಆ.7- ಸಮವಸ್ತ್ರ ಬದಲಾವಣೆ ಕುರಿತು ಪೌರ ಕಾರ್ಮಿಕರ ಬೇಡಿಕೆಗೆ ಮಣಿದ ಬಿಬಿಎಂಪಿ ಸಮವಸ್ತ್ರ ಬದಲಾವಣೆ ಮಾಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಪೌರ ಕಾರ್ಮಿಕರು ಹಾಲಿ ಇರುವ ಹಸಿರು ಬಣ್ಣದ ಸಮವಸ್ತ್ರ ಬದಲಾವಣೆ ಮಾಡುವಂತೆ ಹಲವು ಬಾರಿ ಆಯುಕ್ತರಿಗೆ ಮನವಿ ಮಾಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಪೌರ ಕಾರ್ಮಿಕರ ಮನವಿಯನ್ನು ಪುರಸ್ಕರಿಸಿದ ಆಯುಕ್ತರು ಹಸಿರು ಬಣ್ಣದ ಬಟ್ಟೆ ಬದಲಾಗಿ ನೀಲಿ ಬಣ್ಣದ ಸಮವಸ್ತ್ರ ವಿತರಿಸಲು ಮುಂದಾಗಿದೆ.

ಸುಮಾರು 17 ಸಾವಿರ ಪೌರ ಕಾರ್ಮಿಕರಿಗೆ ನೂತನ ಸಮವಸ್ತ್ರ ವಿತರಿಸಲಾಗುವುದು. ಮಹಿಳಾ ಪೌರ ಕಾರ್ಮಿಕರಿಗೆ ಎರಡು ಜತೆ ಸೀರೆ, ಟೋಪಿ, ಸ್ವೆಟರ್‌ ಹಾಗೂ ಒಂದು ಕೋಟು ನೀಡಲಾಗುವುದು. ಇದಕ್ಕೆ 4811ರೂ. ನಿಗದಿ ಮಾಡಲಾಗಿದ್ದು, ಪುರುಷ ಪೌರ ಕಾರ್ಮಿಕರಿಗೆ ಒಂದು ಟ್ರ್ಯಾಕ್‌ ಪ್ಯಾಂಟ್‌, ಟೀ ಶರ್ಟ್‌, ಟೋಪಿ ವಿತರಿಸಲಾಗುವುದು. ಇದಕ್ಕೆ 3578ರೂ. ನಿಗದಿ ಪಡಿಸಲಾಗಿದೆ.

ಸಮವಸ್ತ್ರ ವಿತರಣೆ ಕುರಿತಂತೆ ಈಗಾಗಲೇ ಟೆಂಡರ್‌ ಕರೆದಿದ್ದು, ಇದೇ ತಿಂಗಳ 15ರಂದು ಎಲ್ಲ ಪೌರ ಕಾರ್ಮಿಕರಿಗೂ ನೂತನ ಸಮವಸ್ತ್ರ ನೀಡಲಿದ್ದು, ಅಂದಿನಿಂದಲೇ ಸಮವಸ್ತ್ರ ಧರಿಸಿ ಕೆಲಸ ನಿರ್ವಹಿಸಲಿದ್ದಾರೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

RELATED ARTICLES

Latest News