Sunday, April 28, 2024
Homeರಾಷ್ಟ್ರೀಯBIG NEWS : ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರರು, ರಕ್ತದೋಕುಳಿಗೆ ಪ್ಲಾನ್..!

BIG NEWS : ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರರು, ರಕ್ತದೋಕುಳಿಗೆ ಪ್ಲಾನ್..!

ನವದೆಹಲಿ,ಸೆ.30- ರಕ್ತದೋಕುಳಿ ನಡೆಸಲು ಹೊಂಚು ಹಾಕಿರುವ ಮೂವರು ಐಸಿಸ್ ಶಂಕಿತ ಉಗ್ರರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಇದೀಗ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಹಾಗೂ ದೆಹಲಿ ಪೊಲೀಸರು ನವದೆಹಲಿಯಲ್ಲಿ ಇಂಚಿಂಚು ಜಾಗವನ್ನು ಜಾಲಾಡುತ್ತಿದ್ದು, ಐಸಿಸ್ ಆತ್ಮಾಹುತಿ ದಳದ ಉಗ್ರರ ಎಡೆಮುರಿ ಕಟ್ಟಲು ಕಾರ್ಯಾಚರಣೆಗೆ ಮುಂದಾಗಿದೆ.

ಈ ಮೂವರು ಆತ್ಮಾಹುತಿ ದಳದ ಐಸಿಸ್ ಉಗ್ರರ ಸುಳಿವು ನೀಡಿದವರಿಗೆ ಮೂರು ಲಕ್ಷ ರೂ.ಬಹುಮಾನವನ್ನು ನೀಡಲಾಗುವುದು. ಅಲ್ಲದೆ ಅವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಎನ್‍ಐಎ ಘೋಷಣೆ ಮಾಡಿದೆ.ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ಸ್ಥಾಪನೆ ಮಾಡಬೇಕೆಂಬ ಏಕೈಕ ಗುರಿಯೊಂದಿಗೆ ಮೂವರು ಶಂಕಿತ ಉಗ್ರರು ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ ಎಂದು ಗುಪ್ತಚರ ವಿಭಾಗ ಎನ್‍ಐಎಗೆ ಮಾಹಿತಿ ನೀಡಿದೆ.

ಅಲಾಸ್ಕಾದಲ್ಲಿ ಅಮೆರಿಕ-ಭಾರತ ಸೇನೆಗಳ ಜಂಟಿ ಸಮರಾಭ್ಯಾಸ

ದೆಹಲಿ ಸೇರಿದಂತೆ ಮತ್ತಿತರ ಕಡೆ ಉಗ್ರ ಚಟುವಟಿಕೆಗಳು ಮತ್ತು ರಕ್ತಪಾದ ನಡೆಸುವುದು ಇವರ ಉದ್ದೇಶವಾಗಿದೆ. ಗಣ್ಯ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು, ಪ್ರಮುಖ ಸರ್ಕಾರಿ ಕಟ್ಟಡಗಳು, ಮಂದಿರಗಳು, ದೇವಸ್ಥಾನಗಳು ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸುವ ಹೊಂಚು ಹಾಕಿದ್ದಾರೆ ಎಂದು ಎನ್‍ಐಎ ಹೇಳಿದೆ.

ಪ್ರಸ್ತುತ ದೆಹಲಿ ಪೊಲೀಸರ ವಶದಲ್ಲಿರುವ ಶಂಕಿತ ಐಸಿಸ್ ಉಗ್ರ ಮೊಹಮ್ಮದ್ ಷಹಾನ್‍ವಾಜ್ ನೀಡಿರುವ ಸುಳಿವಿನಂತೆ ಮೂವರು ಉಗ್ರರು ದೆಹಲಿಯಲ್ಲಿ ಬೀಡುಬಿಟ್ಟಿರುವುದು ನಿಜ. ಅವರ ಬಗ್ಗೆ ನಾನು ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ಹೇಳಿದ್ದಾನೆ.ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಈತ ದಕ್ಷಿಣ ದೆಹಲಿಯ ಇಬ್ಬರು ಯುವಕರಾದ ಅಬ್ದುಲ್ಲಾ ಮತ್ತು ರಿಜ್ವಾನ್ ಎಂಬುವರು ಕೂಡ ಈ ಉಗ್ರರಿಗೆ ಕೈ ಜೋಡಿಸರಬಹುದೆಂಬ ಶಂಕೆ ಇದೆ.

ಅಲಾಸ್ಕಾದಲ್ಲಿ ಅಮೆರಿಕ-ಭಾರತ ಸೇನೆಗಳ ಜಂಟಿ ಸಮರಾಭ್ಯಾಸ

ಕೇಂದ್ರ ಗುಪ್ತಚರ ವಿಭಾಗದ ಅಕಾರಿಗಳು ನೀಡಿರುವ ಮಾಹಿತಿಯಂತೆ ಇವರೇ ಶಂಕಿತ ಐಸಿಸ್ ಆತ್ಮಾಹುತಿ ದಳದ ಉಗ್ರರಿರಬಹುದೆಂದು ಶಂಕಿಸಲಾಗಿದೆ. ಮೂಲತಃ ಒಮನ್ ದೇಶದವನಾದ ಅಬ್ದುಲ್ಲಾ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಈತನನ್ನು ಇಲ್ಲಿಂದ ಗಡಿಪಾರು ಮಾಡಬೇಕೆಂದು ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಎನ್‍ಐಎ ಮನವಿ ಮಾಡಿದೆ. ಪುಣೆಯ ಕ್ವಾಂದ್ವ ಎಂಬ ಪ್ರದೇಶದಲ್ಲಿ ಅಂಗಡಿಯೊಂದನ್ನು ತೆರೆದಿದ್ದ ಈತ ಸುಧಾರಿತ ಸ್ಪೋಟಕ ವಸ್ತುಗಳನ್ನು ತಯಾರಿಸುವಲ್ಲಿ ನಿಪುಣನಾಗಿದ್ದ. ಕೆಲ ತಿಂಗಳ ಹಿಂದೆ ದೇಶದ 100 ಭಾಗಗಳಲ್ಲಿ ಎನ್‍ಐಎ ದಾಳಿ ನಡೆಸಿದ ವೇಳೆ ಇದು ಹೊರಬಿದ್ದಿತ್ತು.

ಕಳೆದ ಜುಲೈ 17ರಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಶಹಾನ್‍ವಾಜ್ , ಅಬ್ದುಲ್ಲಾ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಈ ಇಬ್ಬರು ದೇಶದ ನಾನಾ ಕಡೆ ಸ್ಪೋಟಿಸುವುದು ಹಾಗೂ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸೋಟಿಸಿಕೊಳ್ಳಲು ಹೋಂಚು ಹಾಕಿದ್ದರು. ಶಂಕಿತ ಉಗ್ರರು ಯಾರೆಂಬುದನ್ನು ಎನ್‍ಐಎ ದೆಹಲಿ ವಿಶೇಷ ಘಟಕ ಸಿಸಿಬಿ ಪೊಲೀಸರು ಬಹಿರಂಗಪಡಿಸುತ್ತಿಲ್ಲ. ರಕ್ತಪಾತವಾಗುವ ಮೊದಲೇ ಈ ಮೂವರನ್ನು ಎಡೆಮುರಿ ಕಟ್ಟಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

RELATED ARTICLES

Latest News