Thursday, December 12, 2024
Homeರಾಷ್ಟ್ರೀಯ | NationalBIG NEWS : ಬೆಂಗಳೂರು ಸೇರಿ ದೇಶದ ಹಲವೆಡೆ ಎನ್‍ಐಎ ದಾಳಿ

BIG NEWS : ಬೆಂಗಳೂರು ಸೇರಿ ದೇಶದ ಹಲವೆಡೆ ಎನ್‍ಐಎ ದಾಳಿ

ನವದೆಹಲಿ,ಡಿ.18- ಜಾಗತಿಕ ಭಯೋತ್ಪಾದಕ ಐಸಿಸ್ ಸಂಘಟನೆ ಜೊತೆ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ದಾಳಿ ನಡೆಸಿದೆ.ಕರ್ನಾಟಕದ ರಾಜಧಾನಿ ಬೆಂಗಳೂರು, ನವದೆಹಲಿ, ಜಾರ್ಖಂಡ್, ಮಹಾರಾಷ್ಟ್ರ ಸೇರಿದಂತೆ ಒಟ್ಟು 4 ರಾಜ್ಯಗಳ 19 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.

ಬೆಂಗಳೂರಿನ ಶಿವಾಜಿನಗರ, ಪುಲಕೇಶಿ ನಗರ, ಸುಲ್ತಾನ್ ಪಾಳ್ಯ , ಆರ್.ಟಿ.ನಗರ, ಜೆ.ಪಿ.ನಗರ, ಚಿನ್ನಪ್ಪ ಗಾರ್ಡನ್ ಸೇರಿದಂತೆ ಹಲವಾರು ಕಡೆ ದಾಳಿ ನಡೆಸಿ ಪ್ರಕರಣ ಸಂಬಂಧ ಕೆಲವು ಮಾಹಿತಿಯನ್ನು ಕಲೆಹಾಕಿದೆ.ಕಳೆದ ವಾರವಷ್ಟೆ ಎನ್‍ಐಎ ದೇಶದ ವಿವಿಧೆಡೆ ಮಿಂಚಿನ ದಾಳಿ ನಡೆಸಿ ಐಸಿಎಸ್ ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ ಹೊಂದಿ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದ ಆರೋಪದ ಹಿನ್ನೆಲೆಯಲ್ಲಿ ಕೆಲವರನ್ನು ಬಂಧಿಸಿತ್ತು. ಅಲ್ಲದೆ, ಪೂನಾ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆದಿತ್ತು.ಇದೀಗ ಪುನಃ ಇಂದು ನವದೆಹಲಿ, ಜಾರ್ಖಂಡ್, ಮಹಾರಾಷ್ಟ್ರದಲ್ಲೂ ಎನ್‍ಐಎ ತಂಡ ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಜಾರ್ಖಂಡ್ ರಾಜಧಾನಿ ರಾಂಚಿ, ದೆಹಲಿಯ ಅತೀ ಸೂಕ್ಷ್ಮ ಪ್ರದೇಶಗಳು, ಮಹಾರಾಷ್ಟ್ರದ ಕೆಲವೆಡೆ ದಾಳಿ ಮಾಡಲಾಗಿದೆ. ಮೂಲಗಳ ಪ್ರಕಾರ, ವಿದ್ಯಾವಂತ ಯುವಕರನ್ನು ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಲು ಬ್ರೈನ್‍ವಾಶ್ ಮಾಡಲಾಗುತ್ತಿತ್ತೆಂಬ ಮಾಹಿತಿ ಆಧಾರದ ಮೇಲೆ ದಾಳಿ ಮಾಡಲಾಗಿದೆ. ಕಳೆದ ಡಿ.9 ರಂದು ಬೆಂಗಳೂರು ಮತ್ತು ಪೂನಾದ 44 ಕಡೆಗಳಲ್ಲಿ ದಾಳಿ ಮಾಡಲಾಗಿತ್ತು.

ಬೆಂಗಳೂರಿನ ಪುಲಕೇಶಿ ನಗರದಲ್ಲಿರುವ ಮೋರ್ ರಸ್ತೆಯ ಆಲಿ ಅಬ್ಬಾಸ್ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಎನ್‍ಐಎ 16 ಲಕ್ಷಕ್ಕೂ ಹೆಚ್ಚು ನಗದು, ಲ್ಯಾಪ್‍ಟಾಪ್ ಸೇರಿದಂತೆ ಕೆಲವು ಮಹತ್ವದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಮೂಲತಃ ಮುಂಬೈ ಮೂಲದವನಾದ ಅಬ್ಬಾಸ್ ಪುಲಕೇಶಿ ನಗರದಲ್ಲಿ ಧರ್ಮಬೋಧನೆ ಮಾಡುತ್ತಿದ್ದ ಎನ್ನಲಾಗಿದೆ. ಮೊದಲು ಈತನನ್ನು ವಿಚಾರಣೆ ನಡೆಸಿದ್ದ ಎನ್‍ಐಎ ಅಧಿಕಾರಿಗಳು ನಂತರ ಸೂಕ್ತ ಮಾಹಿತಿ ಕಲೆ ಹಾಕಿ ಬಂಧಿಸಿದ್ದರು.

ದ.ಕೊರಿಯಾ ಸಮುದ್ರಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಿದ ಉ.ಕೊರಿಯಾ

ಕಳೆದ 3 ತಿಂಗಳ ಅವಧಿಯಲ್ಲೇ ಎನ್‍ಐಎ ಅಧಿಕಾರಿಗಳು 15 ಕ್ಕೂ ಹೆಚ್ಚು ಶಂಕಿತ ಉಗ್ರರನ್ನು ಬಂಧಿಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂಬೈ ಮೂಲದ ಆಲಿ ಅಬ್ಬಾಸ್ ಪೇಟಿವಾಲ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದು, ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿದ್ದ. ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುವ ಈತ ವಿದ್ಯಾವಂತ ಮುಸ್ಲಿಂ ಯುವಕರನ್ನು ಐಸಿಸ್ ಕಡೆ ಸೆಳೆಯುವಲ್ಲಿ ನಿರತನಾಗಿದ್ದ ಎಂಬ ಖಚಿತ ಮಾಹಿತಿ ಆಧಾರದ ಮೇರೆಗೆ ಬಂಧಿಸಿದ್ದರು.

ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಐಸಿಸ್ ಸಂಘಟನೆ ಸಕ್ರಿಯವಾಗಿದ್ದು, ಕೆಲ ಮೂಲಭೂತವಾದಿಗಳನ್ನು ಈ ಕೆಲಸಕ್ಕೆ ಬಳಸಿಕೊಳ್ಳುತ್ತದೆ ಎಂಬ ಆರೋಪವಿದೆ. ಹೀಗಾಗಿಯೇ ತಿಂಗಳಲ್ಲಿ 2 ರಿಂದ 3 ಬಾರಿ ದೇಶಾದ್ಯಂತ ಎನ್‍ಐಎ ದಾಳಿ ನಡೆಸುವ ಮೂಲಕ ಭಯೋತ್ಪಾದನೆಯಲ್ಲಿ ತೊಡಗುವ ಮತಾಂತರರನ್ನು ಎಡೆಮುರಿ ಕಟ್ಟುತ್ತಿದೆ.

RELATED ARTICLES

Latest News