ನವದೆಹಲಿ,ಡಿ.18- ಜನವರಿ 26ರ ಗಣರಾಜ್ಯೋತ್ಸವದಂದು ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದ ನಿಷೇಧಿತ ಪಿಎಫ್‍ಐನ 7 ಮಂದಿ ಕಾರ್ಯ ಕರ್ತರನ್ನು ವಶಕ್ಕೆ ಪಡೆದಿರುವ ಎನ್‍ಐಎ ದೇಶದ ವಿವಿಧೆಡೆ ದಾಳಿ ನಡೆಸಿ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದಿದೆ. ನಿಷೇಧಿತ ಪಿಎಫ್‍ಐ ಸಂಘಟನೆಯಲ್ಲಿ ಈ ಹಿಂದೆ ಗುರುತಿಸಿಕೊಂಡಿದ್ದ ಆರೋಪದ ಮೇಲೆ ಬಳ್ಳಾರಿಯ ಶಮೀವುಲ್ಲಾ, ಅಜಾಜ್ ಅಹಮ್ಮದ್ ಸುಲೇಮಾನ್, ತಬ್ರೇಜ್, ನಿಖಿಲ್ ಅಲಿಯಾಸ್ ಸೋಫಿಯಾನ್, ಮುಜಾಮಿಲ್ ಎಂಬುವರನ್ನು ಎನ್‍ಐಎ ವಶಕ್ಕೆ ಪಡೆದಿದೆ.
ಇದರಿಂದಾಗಿ ಭವಿಷ್ಯದಲ್ಲಿ ಸಂಭವಿಸಬಹುದಾದ ಭಾರೀ ಅನಾಹುತವೊಂದನ್ನು ಎನ್‍ಐಎ ತಪ್ಪಿಸಿದ್ದು, ವಶಪಡಿಸಿಕೊಂಡಿರುವ ಪಿಎಫ್‍ಐನ 7 ಕಾರ್ಯಕರ್ತರು ಗಣರಾಜ್ಯೋತ್ಸವಂದು ದೇಶದ ಹಲವು ಕಡೆ ಆತ್ಮಾಹುತಿ ದಾಳಿ ನಡೆಸಿ ಅಫ್ಘಾನಿಸ್ತಾನಕ್ಕೆ ಪರಾರಿಯಾಗಲು ಹೊಂಚು ಹಾಕಿದ್ದರು.
ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ, ಜಾರ್ಖಂಡ್ ದೇಶದ ಒಟ್ಟು 41 ಕಡೆ ದಾಳಿ ನಡೆಸಿರುವ ಎನ್‍ಐಎ, ಭಯೋತ್ಪಾದನೆ ಕೃತ್ಯ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಸಿದೆ ಎಂದು ಗೊತ್ತಾಗಿದೆ. ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರಿನ 7 ಹಾಗೂ ಬಳ್ಳಾರಿಯ 12 ಕಡೆ ಸೇರಿದಂತೆ ಒಟ್ಟು ರಾಜ್ಯದ 19 ಕಡೆ ದಾಳಿಯಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕೃತಿ ಲೇಔಟ್‍ನಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿಕೊಳ್ಳುವ ತವಕದಲ್ಲಿದ್ದ ಮುನಿರುದ್ದೀನ್ ಎಂಬುವರ ಮನೆ ಮೇಲೆ ದಾಳಿ ನಡೆಸಲಾಗಿದೆ.
ಏಕಕಾಲಕ್ಕೆ 4 ಗುರಿಗಳನ್ನು ನಾಶಪಡಿಸುವ ಆಕಾಶ್ ಕ್ಷಿಪಣಿ ಪ್ರಯೋಗ ಯಶಸ್ವಿ
ದಾಳಿ ಸಂದರ್ಭದಲ್ಲಿ ಏಳು ಕೆಜಿ ಸೋಡಿಯಂ ನೇಟ್ರೇಟ್ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ರಾಸಾಯನಿಕ ವಸ್ತುಗಳನ್ನು ಬಾಂಬ್ ತಯಾರಿಕೆಗೆ ಸಂಗ್ರಹಿಸಡಲಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಮೂಲತಃ ಎಲ್‍ಎಲ್‍ಬಿ ವ್ಯಾಸಂಗ ಮಾಡುತ್ತಿದ್ದ ಮುನಿರುದ್ದೀನ್ ಐಸಿಸ್ ಕಡೆ ಆಕರ್ಷಿತನಾಗಿದ್ದ ಎಂದು ತಿಳಿದುಬಂದಿದೆ. ಇನ್ನು ಬೆಂಗಳೂರಿನ ಶಿವಾಜಿನಗರ, ಪುಲಕೇಶಿನಗರ, ಸುಲ್ತಾನ್ ಪಾಳ್ಯ , ಆರ್.ಟಿ.ನಗರ, ಜೆ.ಪಿ.ನಗರ, ಚಿನ್ನಪ್ಪ ಗಾರ್ಡನ್ ಸೇರಿದಂತೆ ಹಲವಾರು ಕಡೆ ದಾಳಿ ನಡೆಸಿ ಪ್ರಕರಣ ಸಂಬಂಧ ಕೆಲವು ಮಾಹಿತಿಯನ್ನು ಕಲೆಹಾಕಿದೆ.
ಸಂಪತ್ ಎಂಬುವರಿಗೆ ಸೇರಿದ ಈ ಮನೆಯಲ್ಲಿ ಮುನಿರುದ್ದೀನ್ ಕಳೆದ ಹಲವು ತಿಂಗಳಿಂದ ಬಾಡಿಗೆ ಪಡೆದುಕೊಂಡು ವಾಸವಿದ್ದ ಎಂದು ತಿಳಿದುಬಂದಿದೆ. ಇದೇ ರೀತಿ ಬಳ್ಳಾರಿ ನಗರದದ 9 ಸ್ಥಳಗಳಲ್ಲಿ ಎನ್‍ಐಎ ತಂಡ ದಾಳಿ ನಡೆಸಿದ್ದು, ನಿಷೇತ ಸಂಘಟನೆ ಮತ್ತು ಭಯೋತ್ಪಾದಕರೊಂದಿಗೆ ಗುರುಸಿಕೊಂಡ ಹಿನ್ನಲೆಯಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದೆ.
ಬಳ್ಳಾರಿ ಪೊಲೀಸರ ಸಹಕಾರದೊಂದಿಗೆ ಭದ್ರತೆ ಪಡೆದು, ಬಳ್ಳಾರಿ ನಗರದ ಕೌಲ್ ಬಜಾರ್, ಜಾಗೃತಿ ನಗರ ಸೇರಿ ಇನ್ನಿತರ ಎನ್‍ಐಎ ಅಕಾರಿಗಳು ದಾಳಿ ಮಾಡಿದೆ. ಡಿಸೆಂಬರ್ 2ರಂದು ನಕಲು ನೋಟು ಮುದ್ರಣ ಮತ್ತು ಚಲಾವಣೆಗೆ ಸಂಬಂಸಿದಂತೆ ದಾಳಿ ಮಾಡಿ 19 ವರ್ಷದ ಯುವಕನನ್ನು ಎನ್‍ಐಎ ತಂಡ ಬಂಸಿತ್ತು. ಆ ಬಳಿಕ ಇದು ಮತ್ತೊಂದು ಬೃಹತ್ ದಾಳಿಯಾಗಿದೆ.
ಕಳೆದ ವಾರವಷ್ಟೇ ಎನ್‍ಐಎ ದೇಶದ ವಿವಿಧೆಡೆ ಮಿಂಚಿನ ದಾಳಿ ನಡೆಸಿ ಐಸಿಎಸ್ ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ ಹೊಂದಿ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದ ಆರೋಪದ ಹಿನ್ನೆಲೆಯಲ್ಲಿ ಕೆಲವರನ್ನು ಬಂಧಿಸಿತ್ತು. ಅಲ್ಲದೆ, ಪೂನಾ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟ ಕೆಲವರನ್ನು ವಶಕ್ಕೆ ಪಡೆದಿತ್ತು. ಜಾರ್ಖಂಡ್ ರಾಜಧಾನಿ ರಾಂಚಿ, ದೆಹಲಿಯ ಅತೀ ಸೂಕ್ಷ್ಮ ಪ್ರದೇಶಗಳು, ಮಹಾರಾಷ್ಟ್ರದ ಕೆಲವೆಡೆಯೂ ದಾಳಿ ನಡೆದಿದೆ.
ಮೂಲಗಳ ಪ್ರಕಾರ, ವಿದ್ಯಾವಂತ ಯುವಕರನ್ನು ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಲು ಬ್ರೈನ್‍ವಾಶ್ ಮಾಡಲಾಗುತ್ತಿತ್ತೆಂಬ ಮಾಹಿತಿ ಆಧಾರದ ಮೇಲೆ ಈ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.ಕಳೆದ ಡಿ.9ರಂದು ಬೆಂಗಳೂರು ಮತ್ತು ಪೂನಾದ 44 ಕಡೆಗಳಲ್ಲಿ ದಾಳಿ ಮಾಡಲಾಗಿತ್ತು. ಬೆಂಗಳೂರಿನ ಪುಲಕೇಶಿ ನಗರದಲ್ಲಿರುವ ಮೋರ್ ರಸ್ತೆಯ ಆಲಿ ಅಬ್ಬಾಸ್ ಫ್ಲಾಟ್ ಮೇಲೆ ದಾಳಿ ನಡೆಸಿದ್ದ ಎನ್‍ಐಎ 16 ಲಕ್ಷಕ್ಕೂ ಹೆಚ್ಚು ನಗದು, ಲ್ಯಾಪ್‍ಟಾಪ್ ಸೇರಿದಂತೆ ಕೆಲವು ಮಹತ್ವದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ಮೂಲತಃ ಮುಂಬೈ ಮೂಲದವನಾದ ಅಬ್ಬಾಸ್ ಪುಲಕೇಶಿ ನಗರದಲ್ಲಿ ಧರ್ಮಬೋಧನೆ ಮಾಡುತ್ತಿದ್ದ ಎನ್ನಲಾಗಿದೆ. ಮೊದಲು ಈತನನ್ನು ವಿಚಾರಣೆ ನಡೆಸಿದ್ದ ಎನ್‍ಐಎ ಅಕಾರಿಗಳು ನಂತರ ಸೂಕ್ತ ಮಾಹಿತಿ ಕಲೆ ಹಾಕಿ ಬಂಧಿಸಿದ್ದರು. ಕಳೆದ 3 ತಿಂಗಳ ಅವಧಿಯಲ್ಲೇ ಎನ್‍ಐಎ ಅಧಿಕಾರಿಗಳು 15ಕ್ಕೂ ಹೆಚ್ಚು ಶಂಕಿತ ಉಗ್ರರನ್ನು ಬಂಧಿಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು ಉಗ್ರರ ಸ್ಲೀಪರ್‌ಸೆಲ್ ಆಗಿದೆ : ಯತ್ನಾಳ್
ಮುಂಬೈ ಮೂಲದ ಆಲಿ ಅಬ್ಬಾಸ್ ಪೇಟಿವಾಲ ಸಾಫ್ಟ್‍ವೇರ್ ಉದ್ಯೋಗಿಯಾಗಿದ್ದು, ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿದ್ದ. ಟ್ಯಾನರಿ ರಸ್ತೆಯಲ್ಲಿ ಉರ್ದು ಶಾಲೆ ನಡೆಸುವ ಈತ ವಿದ್ಯಾವಂತ ಮುಸ್ಲಿಂ ಯುವಕರನ್ನು ಐಸಿಸ್ ಕಡೆ ಸೆಳೆಯುವಲ್ಲಿ ನಿರತನಾಗಿದ್ದ ಎಂಬ ಖಚಿತ ಮಾಹಿತಿ ಆಧಾರದ ಮೇರೆಗೆ ಬಂಧಿದ್ದರು. ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಐಸಿಸ್ ಸಂಘಟನೆ ಸಕ್ರಿಯವಾಗಿದ್ದು, ಕೆಲ ಮೂಲಭೂತವಾದಿಗಳನ್ನು ಈ ಕೆಲಸಕ್ಕೆ ಬಳಸಿಕೊಳ್ಳುತ್ತದೆ ಎಂಬ ಆರೋಪವಿದೆ. ಹೀಗಾಗಿಯೇ ತಿಂಗಳಲ್ಲಿ 2 ರಿಂದ 3 ಬಾರಿ ದೇಶಾದ್ಯಂತ ಎನ್‍ಐಎ ದಾಳಿ ನಡೆಸುವ ಮೂಲಕ ಭಯೋತ್ಪಾದನೆಯಲ್ಲಿ ತೊಡಗುವ ಮತಾಂತರರನ್ನು ಎಡೆಮುರಿ ಕಟ್ಟುತ್ತಿದೆ.