Thursday, December 5, 2024
Homeರಾಷ್ಟ್ರೀಯ | Nationalಏಕಕಾಲಕ್ಕೆ 4 ಗುರಿಗಳನ್ನು ನಾಶಪಡಿಸುವ ಆಕಾಶ್ ಕ್ಷಿಪಣಿ ಪ್ರಯೋಗ ಯಶಸ್ವಿ

ಏಕಕಾಲಕ್ಕೆ 4 ಗುರಿಗಳನ್ನು ನಾಶಪಡಿಸುವ ಆಕಾಶ್ ಕ್ಷಿಪಣಿ ಪ್ರಯೋಗ ಯಶಸ್ವಿ

ನವದೆಹಲಿ,ಡಿ.18- ಸುಮಾರು 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ನಾಲ್ಕು ಗುರಿಗಳನ್ನು ನಾಶಗೊಳಿಸಬಲ್ಲ ಅತ್ಯಾಧುನಿಕ ಆಕಾಶ್ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ಉಡಾವಣೆಯಲ್ಲಿ 4 ದಿಕ್ಕಿಗೆ ಹಾರುವ ಇಂತಹ ಕ್ಷಿಪಣಿ ಸಾಮಥ್ರ್ಯವನ್ನು ಹೊಂದಿರುವ ಮೊದಲ ದೇಶ ಭಾರತವಾಗಿದೆ ಎಂದು ಅದು ಹೇಳಿದಾರೆ ಒಂದೇ ಫೈರಿಂಗ್ ಘಟಕವನ್ನು ಬಳಸಿಕೊಂಡು 25 ಕಿಮೀ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ 4 ಗುರಿಗಳ ತಲುಪುವ ಸಾಮಥ್ರ್ಯವನ್ನು ಪ್ರದರ್ಶಿಸಿದ ಮೊದಲ ದೇಶ ಭಾರತವಾಗಿದೆ. ಈ ಪರೀಕ್ಷೆಯನ್ನು ಭಾರತೀಯ ವಾಯುಪಡೆ ಮತ್ತು ಆಕಾಶ್ ವೆಪನ್ ಸಿಸ್ಟಮ್‍ ಬಳಸಲಾಯಿತು ಎಂದು ಎಕ್ಸ್‍ನಲ್ಲಿ ಮಾಹಿತಿ ಹಂಚಿಕೊಳ್ಲಲಾಗಿದೆ.

ಕೇರಳ ರಾಜ್ಯಪಾಲರ ವಿರುದ್ಧ ಶುರುವಾಯ್ತು ಬ್ಯಾನರ್ ಚಳವಳಿ

ಡಿ.12ರಂದು ನಡೆದ ಅಸಶಕ್ತಿ ಸೇನಾ ಸಮರಾಭ್ಯಾಸದಲ್ಲಿ ಸ್ವದೇಶಿ ಕ್ಷಿಪಣಿ ವ್ಯವಸ್ಥೆಯ ಸಾಮಥ್ರ್ಯವನ್ನು ಪ್ರದರ್ಶಿಸಲಾಯಿತು ಈ ಸಮರಾಭ್ಯಾಸವನ್ನು ಭಾರತೀಯ ವಾಯುಪಡೆ ನಡೆಸಿತು. ಇದಲ್ಲದೆ ಭಾರತ ನಿರ್ಮಿತ ಹೈ-ಸ್ಪೀಡ್ ಡ್ರೋನ್ ಹಾರಾಟವನ್ನು ಯಶಸ್ವಿಯಾಗಿ ಕರ್ನಾಟಕದಲ್ಲಿ ಪರೀಕ್ಷಿಸಲಾಗಿದೆ

RELATED ARTICLES

Latest News