Saturday, July 27, 2024
Homeರಾಜ್ಯಹಿಂದುಳಿದ ವರ್ಗಗಳ ಸಮೀಕ್ಷೆಯನ್ನು ಆಕ್ಷೇಪಿಸುತ್ತಿರುವುದು ಅರ್ಥಹೀನ : ಸಚಿವ ರಾಜಣ್ಣ

ಹಿಂದುಳಿದ ವರ್ಗಗಳ ಸಮೀಕ್ಷೆಯನ್ನು ಆಕ್ಷೇಪಿಸುತ್ತಿರುವುದು ಅರ್ಥಹೀನ : ಸಚಿವ ರಾಜಣ್ಣ

ಬೆಂಗಳೂರು,ಡಿ.18- ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಏಕಾಏಕಿ ಅಥವಾ ಒಂದೇ ದಿನದ ಸಮೀಕ್ಷೆ ನಡೆಸಿದ್ದಲ್ಲ. ವರ್ಷಗಟ್ಟಲೆ ಮಾಹಿತಿ ಕಲೆ ಹಾಕಲಾಗಿದೆ. ಆಗೆಲ್ಲಾ ಮೌನವಾಗಿದ್ದವರು ಈಗ ವೈಜ್ಞಾನಿಕವಾಗಿಲ್ಲ ಎಂದು ಆಕ್ಷೇಪಿಸುತ್ತಿರುವುದು ಅರ್ಥಹೀನ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಜಾತಿಗೊಂದು ಅರ್ಜಿ ಬರೆದುಕೊಂಡು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಅಚ್ಚರಿಯಾಗುತ್ತಿದೆ. ಸಮೀಕ್ಷೆ ವೈಜ್ಞಾನಿಕವಾಗಿಲ್ಲ ಎಂದು ಪ್ರಮುಖವಾಗಿ ಆಕ್ಷೇಪಿಸಲಾಗುತ್ತಿದೆ. ಏಕಾಏಕಿ ಸಮೀಕ್ಷೆ ಮಾಡಿದ 200 ಕೋಟಿ ರೂ.ಗಳನ್ನು ಬಳಕೆ ಮಾಡಲಾಗಿದೆ. ವರ್ಷಗಟ್ಟಲೆ ಮಾಹಿತಿ ಸಂಗ್ರಹಣೆಯಾಗಿದೆ. ಆಗೆಲ್ಲಾ ಏಕೆ ಸುಮ್ಮನಿದ್ದಿರಿ ಎಂದು ಪ್ರಶ್ನಿಸಿದರು.

ಕಾಂತರಾಜು ವರದಿ ಜಾರಿಯಾಗಲೇಬೇಕು ಎಂಬ ಬದ್ಧತೆ ಏನಿಲ್ಲ. ಅದನ್ನು ಮೊದಲು ಬಹಿರಂಗಪಡಿಸಬೇಕಿದೆ. ಅದರ ಬಳಿಕ ಜನ ಮತ್ತು ಸರ್ಕಾರ ಚರ್ಚಿಸಬೇಕು. ಜನಪರ ಅಂಶಗಳಿದ್ದರೆ ಜಾರಿಯಾಗುತ್ತದೆ. ಜನರಿಗೆ ಇಷ್ಟವಾಗದೇ ಇರುವ ಅಂಶಗಳಿದ್ದರೆ ತಿರಸ್ಕಾರಗೊಳ್ಳುತ್ತದೆ. ವರದಿಯಲ್ಲಿ ಏನಿದೆ ಎಂಬುದು ಈವರೆಗೂ ಯಾರಿಗೂ ಗೊತ್ತಿಲ್ಲ. ಕೇವಲ ಊಹೆಯ ಆಧಾರದಲ್ಲಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಮೊದಲು ವರದಿ ಮಂಡನೆಯಾಗಲಿ ಎಂದು ಹೇಳಿದರು.

ಪಾತಕಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ, ಆಸ್ಪತ್ರೆಗೆ ದಾಖಲು

ಕೆಲವರು ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಮಾಡಿದ್ದಾರೆ ಎಂದು ಆತಂಕ ತೋರುತ್ತಿದ್ದಾರೆ. ವರದಿ ಜಾರಿಯಾದ ನಂತರವಷ್ಟೇ ಅದರ ವಾಸ್ತವಾಂಶ ದೊರೆಯುವುದು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಯಾರಿಗೂ ಸರಿಸಾಟಿಯೇ ಇಲ್ಲದಂತಹ ಅಹಿಂದ ನಾಯಕರಾಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಅವರಿಗೆ ಸರಿಸಮಾನವಾದ ಮತ್ತೊಬ್ಬ ನಾಯಕರಿಲ್ಲ ಎಂದು ಬಿ.ಕೆ.ಹರಿಪ್ರಸಾದ್‍ರವರ ವಿಷಯಕ್ಕೆ ಪರೋಕ್ಷವಾದ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಈಗಾಗಲೇ ಪ್ರಭಾವಿಯಾಗಿದ್ದಾರೆ. ಸಮಾವೇಶಗಳು ಅವರನ್ನು ಪ್ರಭಾವಿಗೊಳಿಸುವ ಅಗತ್ಯವಿಲ್ಲ. ಎಲ್ಲಾ ಸಮುದಾಯಗಳು ಬಡವರ ಸಮಾವೇಶ ನಡೆಸಬೇಕೆಂಬ ಚರ್ಚೆಯಿದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ರೀತಿಯ ಸಭೆಗಳು ಸಹಜ. ಕಾಂಗ್ರೆಸ್‍ನಲ್ಲಿ ಎಂ.ಆರ್.ಸೀತಾರಂ ಅವರು ಅಹಿಂದ ಸಮಾವೇಶದ ಬಗ್ಗೆ ಕೆಲವು ತಿಂಗಳ ಹಿಂದೆ ತಮ್ಮೊಂದಿಗೆ ಸಮಾಲೋಚನೆ ನಡೆಸಿದ್ದರು. ಪಕ್ಷಕ್ಕೆ ಅನುಕೂಲವಾಗುವಂತೆ ಕಾರ್ಯಕ್ರಮ ಮಾಡುವುದಾದರೆ ತಮ್ಮ ಬೆಂಬಲ ಇದೆ ಎಂದು ಹೇಳಿದ್ದೆ.

ಎಲ್ಲಾ ಜಾತಿಯಲ್ಲೂ ಬಡವರು, ಶ್ರೀಮಂತರು ಇರುತ್ತಾರೆ. ಚುನಾವಣೆ ಕಾಲದಲ್ಲಿ ಎರಡು ಟ್ರಂಪ್‍ಕಾರ್ಡ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಜಾತಿ ಎಂಬುದು ಜಾಗತಿಕ ಸಮಸ್ಯೆ. ಸಹಜವಾಗಿಯೇ ಇದು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಅಭಿವೃದ್ಧಿಗೆ ಮಾರಕವಾಗಿದೆ ಎಂದರು.

BIG NEWS : ಬೆಂಗಳೂರು ಸೇರಿ ದೇಶದ ಹಲವೆಡೆ ಎನ್‍ಐಎ ದಾಳಿ

ಒಳ್ಳೊಳ್ಳೆ ರಸ್ತೆಗಳು, ವಿದೇಶಿ ಕಾರುಗಳು ಓಡಾಡಿದಾಕ್ಷಣ ಅಭಿವೃದ್ಧಿ ಎಂದು ಹೇಳಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ಜನರ ಜೀವನ ಸುಧಾರಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಸಿದ್ದರಾಮಯ್ಯ ಅವರ ಶಕ್ತಿಯನ್ನು ಕಾಂಗ್ರೆಸ್ ಬಳಸಿಕೊಳ್ಳಬೇಕಿದೆ ಎಂದು ತಿಳಿಸಿದರು.

RELATED ARTICLES

Latest News