ಕೋಲ್ಕತ್ತಾ,ಏ.6- (ಪಿಟಿಐ) ಬಾಂಬ್ ಸ್ಪೋಟ ಪ್ರಕರಣದ ತನಿಖೆಗೆ ತೆರಳಿದ್ದ ಎನ್ಐಎ ಅಧಿಕಾರಿಗಳಿದ್ದ ವಾಹನದ ಮೇಲೆ ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರ ಗ್ರಾಮಸ್ಥರು ದಾಳಿ ನಡೆಸಿದ್ದಾರೆ.
ಎನ್ಐಎ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಗ್ರಾಮಸ್ಥರು ಇಂದು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಎನ್ಐಎ ಅಧಿಕಾರಿಗಳ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ಕೋಲ್ಕತ್ತಾಗೆ ಹಿಂದಿರುಗುತ್ತಿದ್ದಾಗ ವಾಹನದ ಮೇಲೆ ದಾಳಿ ನಡೆಸಲಾಯಿತು ಎಂದು ಅವರು ಹೇಳಿದರು.
ಸ್ಥಳೀಯರು ವಾಹನವನ್ನು ಘೇರಾವ್ ಮಾಡಿದರು ಮತ್ತು ಅದರ ಮೇಲೆ ಕಲ್ಲು ತೂರಿದರು. ಘಟನೆಯಲ್ಲಿ ಎನ್ಐಎ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೂಡ ಪೊಲೀಸ್ ದೂರು ದಾಖಲಿಸಿದೆ. ಘಟನೆಯ ಕುರಿತು ಪ್ರತಿಕ್ರಿಯೆಗಳಿಗೆ ಫೆಡರಲ್ ತನಿಖಾ ಸಂಸ್ಥೆಯ ಅಧಿಕಾರಿಗಳು ಲಭ್ಯವಿಲ್ಲ.
ಕೇಂದ್ರ ಪೊಲೀಸ್ ಪಡೆಯ ಬೃಹತ್ ತುಕಡಿ ಭೂಪತಿನಗರ ತಲುಪಿದ್ದು, ಇಬ್ಬರು ಬಂಧಿತ ವ್ಯಕ್ತಿಗಳೊಂದಿಗೆ ಎನ್ಐಎ ತಂಡವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 3, 2022 ರಂದು ಭೂಪತಿನಗರದ ಕಚ್ಚಾ ಮನೆಯೊಂದರಲ್ಲಿ ಸ್ಪೋಟ ಸಂಭವಿಸಿ ಮೂವರು ಸಾವನ್ನಪ್ಪಿದರು. ನಂತರ ತನಿಖೆಯನ್ನು ಎನ್ಐಎ ಗೆ ಹಸ್ತಾಂತರಿಸಲಾಗಿತ್ತು. ಶನಿವಾರದ ಘಟನೆಯು ಜನವರಿ 5 ರಂದು ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ದಾಳಿಯ ಸಂದರ್ಭದಲ್ಲಿ ಉತ್ತರ 24 ಪರಗಣಗಳ ಸಂದೇಶಖಾಲಿ ಪ್ರದೇಶದಲ್ಲಿ ಇಡಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದವು.