ನವದೆಹಲಿ,ಸೆ.25-ಖಲಿಸ್ತಾನಿ ಉಗ್ರ ಗುರುಪತ್‍ವಂತ್ ಸಿಂಗ್ ಪನ್ನೂನ್‍ಗೆ ಸೇರಿದ್ದ ಭಾರತದಲ್ಲಿನ ಆಸ್ತಿಪಾಸ್ತಿಗಳನ್ನು ಎನ್‍ಐಎ ವಶಪಡಿಸಿಕೊಂಡ ಬಳಿಕ, ಇನ್ನೂ 19 ಖಲಿಸ್ತಾನಿ ಉಗ್ರರ ಭಾರತದ ಆಸ್ತಿ ವಶಕ್ಕೆ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ.
ಗುರುತ್ತಿಸಲಾಗಿರುವ 19 ಜನರೂ ವಿದೇಶದಲ್ಲಿ ವಾಸವಿದ್ದು, ಭಾರತ ವಿರೋಧಿ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಏಂಬುದು ತನಿಖೆಯಿಂದ ತಿಳಿದುಬಂದಿದ್ದು ಇವರ ಆಸ್ತಿಪಾಸ್ತಿಗಳನ್ನು ಶೀಘ್ರವೇ ವಶಪಡಿಸಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು
ಬ್ರಿಟನ್, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ, ದುಬೈ, ಪಾಕಿಸ್ತಾನದಲ್ಲಿ ಇವರು ಉಳಿದುಕೊಂಡಿದ್ದು ಇವರು ಖಲಿಸ್ತಾನಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇವರ ವಿರುದ್ಧ ಈಗಾಗಲೆ ಎನ್‍ಐಎ ಭಯೋತ್ಪಾದನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಗುರುತು ಪತ್ತೆಗೆ ಬಹುಮಾನ ಹಣ ಕೂಡ ನಿಗದಿಪಡಿಸಿದೆ.