ಹಿಂದೂ ದೇವಾಲಯ ವಿರೂಪಗೊಳಿಸಿದ ಖಲಿಸ್ತಾನಿ ಉಗ್ರರು

ಟೊರೊಂಟೊ, ಸೆ.15- ಕೆನಡಾದ ಖಲಿಸ್ತಾನಿ ಉಗ್ರಗಾಮಿಗಳು ಪ್ರಮುಖ ಸ್ವಾಮಿ ನಾರಾಯಣ ಹಾಗೂ ಹಿಂದೂ ದೇವಾಲಯದ ಗೊಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚಿ ವಿರೂಪಗೊಳಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವಂತೆ ಕೆನಡಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ಬ್ರಾಂಪ್ಟನ್ ಸೌತ್ ಸಂಸದೆ ಸೋನಿಯಾ ಸಿಧು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಟೊರೊಂಟೊದ ಸ್ವಾಮಿನಾರಾಯಣ ಮಂದಿರದಲ್ಲಿ ನಡೆದ ವಿಧ್ವಂಸಕ ಕೃತ್ಯದಿಂದ ನಾನು ವಿಚಲಿತರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ.ನಾವು ಬಹು ಸಂಸ್ಕøತಿಕ ಮತ್ತು ಬಹು-ನಂಬಿಕೆಯ ಸಮುದಾಯದಲ್ಲಿ […]