Monday, May 6, 2024
Homeಬೆಂಗಳೂರು1.45 ಕೋಟಿ ಮೌಲ್ಯದ ನಿಷೇಧಿತ ನಿಕೋಟಿಕ್ ಜಪ್ತಿ : 9 ಮಂದಿ ಬಂಧನ

1.45 ಕೋಟಿ ಮೌಲ್ಯದ ನಿಷೇಧಿತ ನಿಕೋಟಿಕ್ ಜಪ್ತಿ : 9 ಮಂದಿ ಬಂಧನ

ಬೆಂಗಳೂರು, ಫೆ.13- ಸುಮಾರು ಒಂದು ಕೋಟಿ 45 ಲಕ್ಷ ಮೌಲ್ಯದ ನಿಷೇಧಿತ ತಂಬಾಕು/ನಿಕೋಟಿನ್ ಉತ್ಪನ್ನಗಳನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದವರು ಜಪ್ತಿ ಮಾಡಿ ಒಂಭತ್ತು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ನಗರದ ಚಾಮರಾಜಪೇಟೆ, ರಾಮಮೂರ್ತಿನಗರ ಹಾಗೂ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರ್ಕಾರದಿಂದ ನಿಷೇದಿಸಲ್ಪಟ್ಟ ತಂಬಾಕು/ನಿಕೋಟಿನ್ ಉತ್ಪನ್ನಗಳನ್ನು ಯಾವುದೇ ಪರವಾನಗಿ ಹೊಂದದೇ ಸಂಗ್ರಹಿಸಿ ಆರೋಪಿಗಳು ಇಟ್ಟುಕೊಂಡಿದ್ದರು.

ಇದರಲ್ಲಿ ತಂಬಾಕು ಹಾಗೂ ನಿಕೋಟಿನ್ ಅಂಶವಿರುವ ವಿವಿಧ ಉತ್ಪನ್ನಗಳಾದ ಅಪ್ಜಲ್ ಎಂಬ ಹೆಸರಿನ ಮೊಲಾಸಿಸ್ (ಹುಕ್ಕಾ ಬಾರ್‍ಗೆ ಬಳಸುವ ಉತ್ಪನ್ನ) ಮತ್ತು ತಂಬಾಕು ಉತ್ಪನ್ನ ಇರುವಂತಹ ದಿಲ್‍ಬಾಗ್, ಜೆಡ್ ಎಲ್-1, ಆ್ಯಕ್ಷನ್-7, ಬಾದ್‍ಷಾ, ಮಹಾ ರಾಯಲ್-717 ಹಾಗೂ ಇನ್ನಿತರೆ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ತರಿಗೆ ಮಾರಾಟ ಮಾಡಿ ಹೆಚ್ಚಿನ ಹಣ ಪಡೆಯುತ್ತಿದ್ದರು.

ಎನ್‍ಸಿಪಿ ಹೆಸರು, ಚಿಹ್ನೆಗಾಗಿ ಸುಪ್ರೀಂ ಮೊರೆ ಹೋದ ಶರದ್‍ಪವಾರ್

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಮೂರು ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಂಡು ಒಂಭತ್ತು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ 1.45 ಕೋಟಿ ಮೌಲ್ಯದ ತಂಬಾಕು ಉತ್ಪನ್ನಗಳು, 11 ಮೊಬೈಲ್, 1.10 ಲಕ್ಷ ನಗದು, ಟಾಟಾ ಏಸ್ ಗೂಡ್ಸ್ ವಾಹನ ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರಾದ (ಅಪರಾಧ) ಡಾ. ಚಂದ್ರಗುಪ್ತ ಅವರ ಮಾರ್ಗದರ್ಶನದಲ್ಲಿ ಉಪಪೊಲೀಸ್ ಆಯುಕ್ತರಾದ ಅಬ್ದುಲ್ ಅಹದ್, ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News