Thursday, September 19, 2024
Homeರಾಜ್ಯಹೆಚ್‌ಎಂಟಿ ಕೈಗಡಿಯಾರ ಕಟ್ಟಲು ಯವಜನರಿಗೆ ನಿಖಿಲ್‌ ಕುಮಾರಸ್ವಾಮಿ ಕರೆ

ಹೆಚ್‌ಎಂಟಿ ಕೈಗಡಿಯಾರ ಕಟ್ಟಲು ಯವಜನರಿಗೆ ನಿಖಿಲ್‌ ಕುಮಾರಸ್ವಾಮಿ ಕರೆ

Nikhil Kumaraswamy calls to young people to use HMT watches

ಬೆಂಗಳೂರು, ಸೆ.6- ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ ಹೆಚ್‌ಎಂಟಿ ಕೈಗಡಿಯಾರಗಳನ್ನೇ ಯುವಜನರು ಕಟ್ಟಬೇಕು ಎಂದು ಜೆಡಿಎಸ್‌‍ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವಿನಂತಿಸಿದ್ದಾರೆ.

ನಾನು ಹೆಚ್‌ಎಂಟಿ ಕೈಗಡಿಯಾರ ಕಟ್ಟಿದ್ದೇನೆ. ನೀವು ಕಟ್ಟಿ ಎಂದು ಅವರು ಎಕ್‌್ಸನಲ್ಲಿ ಪೊಸ್ಟ್‌ ಮಾಡಿದ್ದಾರೆ. ಹೆಚ್‌ಎಂಟಿ ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯ ನಾಡಿಯಾಗಿತ್ತು ಎಂದಿದ್ದಾರೆ.

ನಮ ತಲೆಮಾರಿನ ಯುವಜನರಿಗೆ ಎಚ್‌ಎಂಟಿ ವಾಚ್‌ ಎಂದರೆ ಅದೊಂದು ದಂತಕಥೆ. ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ನನ್ನ ತಂದೆಯವರು ಗೌರಿಹಬ್ಬದ ದಿನವಾದ ಇಂದು ಹೆಚ್‌ಎಂಟಿ ಕೈಗಡಿಯಾರವನ್ನು ಖರೀದಿಸಿ ನನ್ನ ಕೈಗೆ ಕಟ್ಟಿದರು ಎಂದು ಹೇಳಿದ್ದಾರೆ.

ಎಚ್‌ಎಂಟಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಕೋಹ್ಲಿ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News