Saturday, April 27, 2024
Homeರಾಷ್ಟ್ರೀಯದುರ್ಗಾ ಮಾತೆ ಮೆರವಣಿಗೆ ವೇಳೆ ಅಗ್ನಿ ಅವಘಡ : 9 ಮಕ್ಕಳಿಗೆ ಗಾಯ

ದುರ್ಗಾ ಮಾತೆ ಮೆರವಣಿಗೆ ವೇಳೆ ಅಗ್ನಿ ಅವಘಡ : 9 ಮಕ್ಕಳಿಗೆ ಗಾಯ

ಸತಾರಾ, ಅ 25 (ಪಿಟಿಐ) ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ದಸರಾ ಪ್ರಯುಕ್ತ ದುರ್ಗಾ ಮಾತೆಯ ವಿಗ್ರಹವನ್ನು ಮೆರವಣಿಗೆ ಮಾಡುವಾಗ ಜನರೇಟರ್‌ಗೆ ಬೆಂಕಿ ತಗುಲಿ ಒಂಬತ್ತು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಅದೃಷ್ಟವಶಾತ್ ಯಾವುದೇ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿನ ಪ್ರಸಿದ್ಧ ಗಿರಿಧಾಮ ಮಹಾಬಲೇಶ್ವರದ ಕೋಲಿ ಆಲಿ ಪ್ರದೇಶದಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ದುರ್ಗಾ ಮಾತೆಯ ವಿಗ್ರಹವನ್ನು ನಿಮಜ್ಜನಕ್ಕೆ ತೆಗೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ಜನರೇಟರ್ ಅಳವಡಿಸಲಾಗಿತ್ತು.

ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಕಾಂಗ್ರೆಸ್ ಸರ್ಕಾರ

ಸಮೀಪದಲ್ಲಿ ಪೆಟ್ರೋಲ್ ಕ್ಯಾನ್ ಇದ್ದುದರಿಂದ ಜನರೇಟರ್ ಬಿಸಿಯಾಗಿ ಬೆಂಕಿ ಹೊತ್ತಿಕೊಂಡಿತು. ಅಲಂಕೃತ ವಾಹನದ ಮೂಲೆಯಲ್ಲಿ ಕುಳಿತಿದ್ದ ಒಂಬತ್ತು ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ಸತಾರಾ ಮತ್ತು ಪುಣೆಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಮಹಾಬಲೇಶ್ವರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲಾ ಮಕ್ಕಳು ಸ್ಥಿರವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಶೇಖ್ ತಿಳಿಸಿದ್ದಾರೆ.

RELATED ARTICLES

Latest News