Thursday, November 21, 2024
Homeಇದೀಗ ಬಂದ ಸುದ್ದಿಪ್ರತಿಪಕ್ಷಗಳಿಗೆ ನಿರ್ಮಲಾ ತಿರುಗೇಟು

ಪ್ರತಿಪಕ್ಷಗಳಿಗೆ ನಿರ್ಮಲಾ ತಿರುಗೇಟು

ನವದೆಹಲಿ, ಜು.24- ಪ್ರತೀ ರಾಜ್ಯಗಳನ್ನು ಬಜೆಟ್ನಲ್ಲಿ ಹೆಸರಿಸಲು ಸಾಧ್ಯವಿಲ್ಲ. ಆಯಾ ರಾಜ್ಯಗಳಿಗೆ ಸಿಗಬೇಕಾದ ಮನ್ನಣೆ ಸಿಗುತ್ತದೆ. ರಾಜ್ಯಗಳನ್ನು ಹೆಸರಿಸದೇ ಹೋದರೆ ಸರ್ಕಾರದ ಕಾರ್ಯಕ್ರಮಗಳು ಆ ರಾಜ್ಯಕ್ಕೆ ಹೋಗುವುದಿಲ್ಲ ಎಂದು ಅರ್ಥವೇ? ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ಪ್ರಸಕ್ತ ಸಾಲಿನ ಕೇಂದ್ರದ ಬಜೆಟ್ನಲ್ಲಿ ತಮ್ಮ ರಾಜ್ಯಗಳಿಗೆ ಮನ್ನಣೆ ಸಿಕ್ಕಿಲ್ಲ ಎಂದು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಎತ್ತಿರುವ ಆಕ್ಷೇಪಕ್ಕೆ ರಾಜ್ಯಸಭೆಯಲ್ಲಿ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್, ಪ್ರತೀ ಬಜೆಟ್ನಲ್ಲೂ ಆ ದೇಶದ ಪ್ರತಿಯೊಂದು ರಾಜ್ಯವನ್ನು ಹೆಸರಿಸಲು ನಿಮಗೆ ಅವಕಾಶ ಸಿಗುವುದಿಲ್ಲ. ಸಚಿವ ಸಂಪುಟವು ಮಹಾರಾಷ್ಟ್ರದ ವಂದಾವನ್ ಕುರಿತು ಒಂದು ನಿರ್ಧಾರ ತೆಗೆದುಕೊಂಡಿದೆ.

ಆದರೆ ನಿನ್ನೆಯ ಬಜೆಟ್ನಲ್ಲಿ ಮಹಾರಾಷ್ಟ್ರದ ಹೆಸರನ್ನು ಉಲ್ಲೇಖಿಸಲು ಸಾಧ್ಯವಾಗಿಲ್ಲ. ಇದರ ಅರ್ಥ ನಾವು ಮಹಾರಾಷ್ಟ್ರವನ್ನು ನಿರ್ಲಕ್ಷಿಸಿದ್ದೇವೆ ಎಂದು ಅರ್ಥವೇ? ಅಂತೆಯೇ ಬಜೆಟ್ ಭಾಷಣದಲ್ಲಿ ನಿರ್ದಿಷ್ಟ ರಾಜ್ಯವನ್ನು ಹೆಸರಿಸದೇ ಹೋದರೆ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಆ ರಾಜ್ಯಗಳಿಗೆ ಹೋಗುವುದಿಲ್ಲವೇ?

ನಮ್ಮ ರಾಜ್ಯಗಳಿಗೆ ಏನ್ನನ್ನೂ ನೀಡಿಲ್ಲ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವುದು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಒಕ್ಕೂಟದ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ನಿರ್ಮಲಾ ಕಿಡಿಕಾರಿದ್ದಾರೆ.

RELATED ARTICLES

Latest News