ಅಗರ್ತಲಾ,ಜ.8: ತ್ರಿಪುರಾದ ಧಲೈ ಜಿಲ್ಲೆಯಲ್ಲಿ ಎನ್‍ಎಲ್‍ಎಫೆಟಿ ಉಗ್ರನೊಬ್ಬ ಬಿಎಸ್‍ಎಪ್ ಮುಂದೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶರಣಾದ ಉಗ್ರರನ್ನು ಸುಮಾರು 37 ವರ್ಷದ ಉದಯ್ ಮಾಣಿಕ್ ಜಮಾತಿಯಾ ಎಂದು ಗುರುತಿಸಲಾಗಿದ್ದು ಅಗರ್ತಲಾ ಜಿಲ್ಲೆಯ ಚವ್ಮಾನು ಪ್ರದೇಶದಲ್ಲಿ ಬಿಎಸ್‍ಎಪ್ ಮುಂದೆ ಶರಣಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಈತ ಗೋಮತಿ ಜಿಲ್ಲೆಯ ತುಳಸಿರಾಮ್ ಗ್ರಾಮದ ನಿವಾಸಿಯಾಗಿದ್ದಾರೆ. ಸಾಮಾನ್ಯ ಜೀವನ ನಡೆಸಲು ನಿರ್ದರಿಸಿ ಶರಣಾಗಿದ್ದಾನೆ ಎಂದು ಬಿಎ-ï ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ನಿಷೇಧಿತ ಎನ್‍ಎಲ್‍ಎಫೆಟಿ (ಬಿಎಂ) ಸಂಘಟನೆಯನ್ನು ಸೇರಿಕೊಂಡಿದ್ದ ,ಕೇಂದ್ರ ಏಜೆನ್ಸಿಗಳು ಮತ್ತು ರಾಜ್ಯ ಅಧಿಕಾರಿಗಳ ಪ್ರಯತ್ನದಿಂದಾಗಿ, ಹಲವಾರು ಎನ್‍ಎಲ್‍ಎಫೆಟಿ ಕಾರ್ಯಕರ್ತರು ಹಿಂಸಾಚಾರದ ಹಾದಿಯನ್ನು ತೊರೆದಿದ್ದಾರೆ ಎಂದು ಅವರು ಹೇಳಿದರು.
ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ : ವಿಜಯೇಂದ್ರ
ಶರಣಾದ ಉಗ್ರರನ್ನು ವಿಚಾರಣೆ ಮತ್ತು ಇತರ ಕಾನೂನು ಪ್ರಕ್ರಿಯೆಗಾಗಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಸಂಘಟನೆಯ ಪ್ರಮುಖ ನಾಯಕರಾದ ಸಚಿನ್ ದೆಬ್ಬರ್ಮಾ ಮತ್ತು ಉತ್ಪಲ್ ದೆಬ್ಬರ್ಮಾನನ್ನು ಈಗಾಗಲೆ ಡಿಸೆಂಬರ್ 14 ರಂದು ಪಶ್ಚಿಮ ತ್ರಿಪುರಾದ ಸಿಮ್ನಾ ಪ್ರದೇಶದಿಂದ ಬಂಧಿಸಲಾಗಿದೆ.