Tuesday, August 26, 2025
Homeಬೆಂಗಳೂರುಬೆಂಗಳೂರಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವಂತಿಲ್ಲ

ಬೆಂಗಳೂರಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವಂತಿಲ್ಲ

No more feeding stray dogs anywhere in Bengaluru

ಬೆಂಗಳೂರು, ಆ.26- ಇನ್ನು ಮುಂದೆ ನಗರದಲ್ಲಿ ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಅಲ್ಲಿ ಊಟ ಹಾಕುವುದಕ್ಕೆ ನಿಷೇಧ ಹೇರಲಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪು ಆಧರಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶೇಷ ಆಯುಕ್ತ ವಿಕಾಸ್‌‍ ಕಿಶೋರ್‌ ಸುರಲ್ಕರ್‌ ತಿಳಿಸಿದ್ದಾರೆ.

ನಗರದಲ್ಲಿ ಎಲ್ಲೆಂದರಲ್ಲಿ ಊಟ ಹಾಕುವ ಬದಲು ಬೀದಿ ನಾಯಿಗಳಿಗೆ ಊಟ ಹಾಕಲೆಂದೇ ಬಿಬಿಎಂಪಿ ನಿಗದಿಪಡಿಸಿರುವ ಜಾಗಗಳಲ್ಲೇ ಊಟ ಹಾಕಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ನಗರದ ಸುಮಾರು 50 ಸಾವಿರಕ್ಕೂ ಹೆಚ್ಚು ರಸ್ತೆಗಳ ಕೊನೆಯಲ್ಲಿ ಬೀದಿ ನಾಯಿಗಳಿಗೆ ಊಟದ ನೀಡೋದಕ್ಕೆ ಸ್ಥಳದ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಪಾಲಿಕೆ ನಿಗದಿಪಡಿಸಿರುವ ಸ್ಥಳಗಳಲ್ಲೇ ಊಟ ಹಾಕಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ನಿಮ ಮನೆ ಮುಂದೆ ಬರುವ ಬೀದಿ ನಾಯಿಗಳಿಗೆ ಊಟ ಹಾಕಬಾರದು ನೀವು ಬೀದಿ ನಾಯಿಗಳಿಗೆ ಹಾಕುವ ಊಟದಿಂದ ಅಕ್ಕಪಕ್ಕದವರಿಗೆ ಕಿರಿ ಕಿರಿಯಾಗುವ ಸಾಧ್ಯತೆ ಇರುವುದರಿಂದ ರಸ್ತೆ ಕೊನೆಯಲ್ಲಿ ನಿಗದಿಪಡಿಸಿರುವ ಜಾಗದಲ್ಲೇ ಶ್ವಾನಗಳಿಗೆ ಊಟ ಹಾಕಬೇಕು ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಎಲ್ಲೆಂದರಲ್ಲಿ ಊಟ ಹಾಕಿ ಅದರಿಂದ ಯಾವುದೇ ರೀತಿಯ ಅನಾಹುತ ಆದರೆ ಅದಕ್ಕೆ ನಿಮನ್ನೇ ಹೊಣೆ ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.

RELATED ARTICLES

Latest News