Friday, November 22, 2024
Homeರಾಜ್ಯಹೊಸ ಮದ್ಯದಂಗಡಿಗಳಿಗೆ ಪರವಾನಗಿ ಇಲ್ಲ : ಸಚಿವ ಆರ್.ಬಿ.ತಿಮ್ಮಾಪುರ

ಹೊಸ ಮದ್ಯದಂಗಡಿಗಳಿಗೆ ಪರವಾನಗಿ ಇಲ್ಲ : ಸಚಿವ ಆರ್.ಬಿ.ತಿಮ್ಮಾಪುರ

ಬೆಳಗಾವಿ, ಡಿ.7- ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಅವಶ್ಯಕವಿರುವ ಲೈಸನ್ಸ್ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ವಿಧಾನ ಪರಿಷತ್ತನಲ್ಲಿ ಇಂದು ಸ್ಪಷ್ಟಪಡಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ವೈ.ಎ.ನಾರಾಯಾಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸರ್ಕಾರ ಹೊಸದಾಗಿ ಬಾರ್ ಅಂಗಡಿ ತೆರೆಯುವುದಾಗಲಿ, ಇಲ್ಲವೆ ಲೈಸನ್ಸ್ ನೀಡುವ ಪ್ರಸ್ತಾವನೆ ಇಟ್ಟುಕೊಂಡಿಲ್ಲ. ಈ ಸಂಬಂಧದ ಕೆಲವು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಪ್ರಸ್ತುತ 3981 ಸಿಎಲ್ -2 ಸನ್ನದ್ದುದಾರರಿದ್ದು, ಅದೇ ರೀತಿ 3631 ಸಿಎಲ್-9 ಸನ್ನದ್ದುದಾರರಿದ್ದಾರೆ. 2465 ಸಿಎಲ್-7 ಸನ್ನದ್ದುದಾರರಿದ್ದಾರೆ. ಸಿಎಲ್-2 ಸನ್ನದ್ದುದಾರರಿಂದ 208.91 ಕೋಟಿ ರೂ., ಸಿಎಲ್-9 ಸನ್ನದ್ದುದಾರರಿಂದ 232.46 ಕೋಟಿ ರೂ. ಸಿಎಲ್-7 ಸನ್ನದ್ದುದಾರರಿಂದ 152.81ಕೋಟಿ ರೂ. ವಾರ್ಷಿಕ ಶುಲ್ಕ ಪಡೆದುಕೊಳ್ಳಲಾಗಿದೆ.

ಅಧಿಕಾರ ದುರುಪಯೋಗಪಡಿಸಿಕೊಂಡ ಅಧಿಕಾರಿಗಳನ್ನು ವಜಾ ಮಾಡಿದ ಯೋಗಿ

ಗ್ರಾಮೀಣ ಭಾಗಗಳಲ್ಲಿ ಅಂಗಡಿ ಮತ್ತಿತರ ಕಡೆಗಳಲ್ಲಿ ಮದ್ಯದ ಅಂಗಡಿಗಳನ್ನು, ಮದ್ಯವನ್ನು ಮಾರಾಟ ಮಾಡುತ್ತಾರೆ. ಇದನ್ನು ತಪ್ಪಿಸಲು ಸಿಎಲ್-7ನಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆಯೇ ಹೊರತು ಸರ್ಕಾರ ಮದ್ಯಪಾನಕ್ಕೆ ಎಲ್ಲಿಯೂ ಸರ್ಕಾರ ಉತ್ತೇಜನ ನೀಡಿಲ್ಲ ಎಂದು ತಿಮ್ಮಾಪುರ ತಿಳಿಸಿದರು.

RELATED ARTICLES

Latest News