Friday, September 20, 2024
Homeರಾಷ್ಟ್ರೀಯ | Nationalಯಾವ ಮುಸ್ಲಿಂ ರಾಷ್ಟ್ರವೂ ಸೇಫ್ ಅಲ್ಲ : ಭಾರಿ ಚರ್ಚೆ ಆಗುತ್ತಿದೆ ಕಂಗನಾ ಹೇಳಿಕೆ

ಯಾವ ಮುಸ್ಲಿಂ ರಾಷ್ಟ್ರವೂ ಸೇಫ್ ಅಲ್ಲ : ಭಾರಿ ಚರ್ಚೆ ಆಗುತ್ತಿದೆ ಕಂಗನಾ ಹೇಳಿಕೆ

ನವದೆಹಲಿ,ಆ.6- ಯಾವ ಮುಸ್ಲಿಂ ರಾಷ್ಟ್ರವೂ ಸುರಕ್ಷಿತವಲ್ಲ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್‌ ಹೇಳಿರುವುದು ಭಾರೀ ವಿವಾದ ಸೃಷ್ಟಿಸಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಕಂಗನಾ ಮತ್ತೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ. ಭಾರತವು ಸುತ್ತಲಿನ ಎಲ್ಲಾ ಇಸ್ಲಾಮಿಕ್‌ ಪ್ರಜಾಪ್ರಭುತ್ವ ದೇಶಗಳ ಮೂಲ ತಾಯ್ನಾಡು.

ಬಾಂಗ್ಲಾದೇಶದ ಪ್ರಧಾನಿ ಭಾರತದಲ್ಲಿ ಸುರಕ್ಷಿತ ಎಂದು ಭಾವಿಸಿ ಇಲ್ಲಿಗೆ ಆಗಮಿಸಿದ್ದಾರೆ. ಆದರೆ ಭಾರತದಲ್ಲೇ ವಾಸಿಸುವವರು ಹಿಂದೂ ರಾಷ್ಟ್ರ ಯಾಕೆ? ಏಕೆ ರಾಮರಾಜ್ಯ? ಎಂದು ಕೇಳುತ್ತಲೇ ಇರುತ್ತಾರೆ. ಈ ಪ್ರಶ್ನೆಗೆ ಈಗ ಸೂಕ್ತ ಉತ್ತರ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

ಮುಸ್ಲಿಂ ದೇಶಗಳಲ್ಲಿ ಯಾರೂ ಸುರಕ್ಷಿತರಲ್ಲ, ಸ್ವತಃ ಮುಸ್ಲಿಮರು ಕೂಡ. ಅ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬ್ರಿಟನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ದುರದೃಷ್ಟಕರ. ರಾಮರಾಜ್ಯದಲ್ಲಿ ಬದುಕುತ್ತಿರುವುದು ನಮ ಅದೃಷ್ಟ. ಜೈ ಶ್ರೀ ರಾಮ್‌‍ ಎಂದು ಕಂಗನಾ ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಈ ಹೇಳಿಕೆಗೆ ವಿರುದ್ಧ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

RELATED ARTICLES

Latest News