ನವದೆಹಲಿ,ಸೆ.4- ಇತ್ತೀಚಿನ ಪ್ರವಾಹದಲ್ಲಿ ಸಾವಿರಕ್ಕೂ ಹೆಚ್ಚು ಜನರ ಸಾವನ್ನು ತಡೆಯಲು ವಿಲವಾದ ಕಾರಣಕ್ಕಾಗಿ ಸುಮಾರು 30 ಸರ್ಕಾರಿ ಅಧಿಕಾರಿಗಳನ್ನು ಗಲ್ಲಿಗೇರಿಸಲು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಆದೇಶಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.
ಚಗಾಂಗ್ ಪ್ರಾಂತ್ಯದಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಭೂಕುಸಿತಗಳು ಹಲವಾರು ಸಾವುಗಳು, ಗಾಯಗಳು ಮತ್ತು ಅನೇಕ ನಿರಾಶ್ರಿತರಿಗೆ ಕಾರಣವಾಗಿತ್ತು. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.
ಉತ್ತರ ಕೊರಿಯಾದ ಅಧಿಕಾರಿಗಳು ಸಂತ್ರಸ್ಥರನ್ನು ತಡೆಯಲು ವಿಲರಾದ ಹಿನ್ನಲೆಯಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು.ಜೀವಹಾನಿಗೆ ಕಾರಣರಾದವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ಅಧಿಕಾರಿಯನ್ನು ಉಲ್ಲೇಖಿಸಿ ಸ್ಥಳಿಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಕಳೆದ ತಿಂಗಳ ಕೊನೆಯಲ್ಲಿ ಪ್ರವಾಹ ಪೀಡಿತ ಪ್ರದೇಶದ 20 ರಿಂದ 30 ಅಧಿಕಾರಿಗಳನ್ನು ಏಕಕಾಲದಲ್ಲಿ ಗಲ್ಲಿಗೇರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಕೊರಿಯಾವು ಅತ್ಯಂತ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಕಾರಣ, ವಿವರಗಳನ್ನು ಖಚಿತಪಡಿಸಲು ಕಷ್ಟ. ಆದರೆ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ) ವರದಿ ಪ್ರಕಾರ, ಚೀನಾದ ಗಡಿಯ ಸಮೀಪವಿರುವ ಚಗಾಂಗ್ ಪ್ರಾಂತ್ಯವನ್ನು ಅಪ್ಪಳಿಸಿದ ವಿನಾಶಕಾರಿ ಪ್ರವಾಹದ ನಂತರ ಅಧಿಕಾರಿಗಳನ್ನು ಕಟ್ಟುನಿಟ್ಟಾಗಿ ಶಿಕ್ಷಿಸಲು ಕಿಮ್ ಜೊಂಗ್ ಉನ್ ಅಧಿಕಾರಿಗಳಿಗೆ ಆದೇಶಿಸಿದ್ದರು.
ಸಿನುಯಿಜುನಲ್ಲಿ ನಡೆದ ತುರ್ತು ಪೊಲಿಟಿಬ್ಯೂರೋ ಸಭೆಯಲ್ಲಿ, ನಾಯಕ ಕಿಮ್ ಜಾಂಗ್ ಉನ್ ಅವರು ವಿಪತ್ತು ತಡೆಗಟ್ಟುವಿಕೆಗಾಗಿ ತಮ ಜವಾಬ್ದಾರಿಗಳನ್ನು ನಿರ್ಲಕ್ಷಿಸಿದ್ದಾರೆ ಮತ್ತು ಅನುಮತಿ ನೀಡಲಾಗದ ಸಾವು-ನೋವುಗಳಿಗೆ ಕಾರಣವಾದವರನ್ನು ಕಟ್ಟುನಿಟ್ಟಾಗಿ ಶಿಕ್ಷಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ವಜಾಗೊಳಿಸಲಾದ ಚಗಾಂಗ್ ಪ್ರಾಂತೀಯ ಪಕ್ಷದ ಕಾರ್ಯದರ್ಶಿ ಕಾಂಗ್ ಬಾಂಗ್-ಹೂನ್ ಅವರ ಕ್ರಮಗಳ ಕುರಿತು ತನಿಖೆಗಳು ನಡೆಯುತ್ತಿವೆ. ಯುದ್ಧ ಸಾಮಗ್ರಿ ಉದ್ಯಮ ಇಲಾಖೆಯ ಮಾಜಿ ಉಪನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಕಾಂಗ್, ಸ್ಥಳ ಪರಿಶೀಲನೆಯ ಸಮಯದಲ್ಲಿ ಕಿಮ್ ಜಾಂಗ್-ಉನ್ ಜೊತೆಗಿದ್ದರು ಎಂದು ವರದಿ ಹೇಳಿದೆ. ವಾಯುವ್ಯ ಪ್ರಾಂತ್ಯವು ಜುಲೈನಲ್ಲಿ ತೀವ್ರ ಪ್ರವಾಹಕ್ಕೆ ತುತ್ತಾಗಿತ್ತು, ಸಾವಿರಾರು ನಿವಾಸಿಗಳು ನಿರಾಶ್ರಿತರಾಗಿದ್ದರು ಮತ್ತು ಹಲವಾರು ಸಾವುಗಳು ಮತ್ತು ಗಾಯಗಳಿಗೆ ಕಾರಣವಾಗಿತ್ತು.
ಪ್ರವಾಹದಿಂದ ಸತ್ತವರ ಸಂಖ್ಯೆ 1,000 ಮೀರಬಹುದು ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ಉತ್ತರ ಕೊರಿಯಾದಲ್ಲಿ ಭಾರೀ ಮಳೆಯಿಂದ 4,100 ಮನೆಗಳು, 7,410 ಎಕರೆ ಕೃಷಿ ಭೂಮಿ ಮತ್ತು ವಾಯುವ್ಯ ನಗರವಾದ ಸಿನುಯಿಜು ಮತ್ತು ನೆರೆಯ ಪಟ್ಟಣವಾದ ಉಯಿಜುನಲ್ಲಿ ಅನೇಕ ಸಾರ್ವಜನಿಕ ಕಟ್ಟಡಗಳು, ರಚನೆಗಳು, ರಸ್ತೆಗಳು ಮತ್ತು ರೈಲ್ವೆಗಳು ಜಲಾವೃತಗೊಂಡಿವೆ ಎಂದು ವರದಿಗಳು ಹೇಳಿವೆ.