ಬೆಂಗಳೂರು, ಸೆ.10- ವೆಸ್ಟ್‌ಇಂಡೀಸ್ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಟ್ರೋಫಿ ಗೆಲ್ಲುವಲ್ಲಿ ಎಡಗೈ ವೇಗಿ ಜಸ್‌ಪ್ರೀತ್ ಬುಮ್ರಾ ಮಹತ್ತರ ಪಾತ್ರ ವಹಿಸಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರೂ, ಬುಮ್ರಾ ವಿಶ್ವ ಕ್ರಿಕೆಟ್‌ನ ನಂಬರ್1 ಬೌಲರ್ ಅಲ್ಲ ಎಂದು ಭಾರತ ತಂಡದ ಮಾಜಿ ಉಪನಾಯಕ ಕೆ.ಎಲ್.ರಾಹುಲ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಮ ವೇಗದ ದಾಳಿ, ನಿಖರತೆ ಹಾಗೂ ಬೌನ್‌್ಸಗಳ ಮೂಲಕ ವಿಶ್ವಶ್ರೇಷ್ಠ ಬ್ಯಾಟರ್‌ಗಳ ನಿದ್ದೆಗೆಡಿಸಿರುವ ಬುಮ್ರಾ ಸದ್ಯ ವಿಶ್ವದ ನಂಬರ 1 ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಕೆ.ಎಲ್.ರಾಹುಲ್ ಅವರು ಬುಮ್ರಾ ಬದಲಿಗೆ ದಕ್ಷಿಣ ಆಫ್ರಿಕಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ವೇಗಿ ಡೇಲ್ ಸ್ಟೇಲ್ ಅವರೇ ವಿಶ್ವದ ಸರ್ವಶ್ರೇಷ್ಠ ನಂಬರ್ 1 ಬೌಲರ್ ಎಂದು ರಾಹುಲ್ ಹೇಳಿದ್ದಾರೆ.
ಇತ್ತೀಚೆಗೆ ನಡೆದಿದ್ದ ಸಂದರ್ಶನದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ಗೆ ವಿಶ್ವ ಶ್ರೇಷ್ಠ 5 ಬೌಲರ್‌ಗಳನ್ನು ಹೆಸರಿಸಿ ಎಂದು ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ಕೆ.ಎಲ್.ರಾಹುಲ್ ಅವರು ಡೇಲ್ ಸ್ಟೇಲ್ ಅವರಿಗೆ ಮೊದಲ ಸ್ಥಾನ ನೀಡಿದ್ದರೆ, ಇಂಗ್ಲೆಂಡ್ ತಂಡದ ಮಾಜಿ ವೇಗಿ ಜೇಮ್ಸೌ ಅಂಡರ್ಸನ್, ಜಸ್‌ಪ್ರೀತ್ ಬುಮ್ರಾ, ಆಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಹಾಗೂ ಪಾಕಿಸ್ತಾನದ ನಶೀಮ್ ಶಾಗೆ ತಮ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿದ್ದಾರೆ.
ವಿರಾಟ್ ಕೊಹ್ಲಿ ನಂ.1:
ಇದೇ ವೇಳೆ ಟ್ವೆಂಟಿ-20 ವಿಶ್ವಕಪ್ ನಾಯಕ ರೋಹಿತ್ ಶರ್ಮಾರವರಿಗೆ ಎರಡನೇ ಸ್ಥಾನ ನೀಡಿದ್ದರೆ, ಆಧುನಿಕ ಕ್ರಿಕೆಟ್‌ನ ದಿಗ್ಗಜ ವಿರಾಟ್‌ಕೊಹ್ಲಿಗೆ ನಂಬರ್ 1 ಸ್ಥಾನ ನೀಡಿದ್ದಾರೆ.ಟ್ವೆಂಟಿ-20 ಸ್ಪೆಷಾಲಿಸ್ಟ್ ಸೂರ್ಯಕುಮಾರ್ ಯಾದವ್‌ಗೆ ಮೂರನೇ, ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಮ್ ಹಾಗೂ ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ಕ್ರಮವಾಗಿ 4 ಮತ್ತು 5ನೇ ಸ್ಥಾನ ಕಲ್ಪಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಭಾರತ ಎ ತಂಡದ ಪರ ಆಡುತ್ತಿರುವ ಕೆ.ಎಲ್.ರಾಹುಲ್,ಬಾಂಗ್ಲಾದೇಶ ವಿರುದ್ಧ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ.