Friday, November 22, 2024
Homeಬೆಂಗಳೂರುನನ್ನ ಯಶಸ್ಸಿಗೆ ಅಭಿಮಾನಿಗಳೇ ಕಾರಣ : ಎನ್.ಆರ್.ರಮೇಶ್

ನನ್ನ ಯಶಸ್ಸಿಗೆ ಅಭಿಮಾನಿಗಳೇ ಕಾರಣ : ಎನ್.ಆರ್.ರಮೇಶ್

ಬೆಂಗಳೂರು,ಜ.14- ನನ್ನ ರಾಜಕೀಯ ಜೀವನ ಮತ್ತು ಸಮಾಜ ಸೇವೆಯ ಯಶಸ್ಸಿಗೆ ಕಾರಣ ನನ್ನ ಅಭಿಮಾನಿಗಳು ಮತ್ತು ಕಾರ್ಯಕರ್ತರು ಎಂದು ಬೆಂಗಳೂರು ದಕ್ಷಿಣ ಜಿಲ್ಲಾಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ನಂತರ ಮಾತನಾಡಿದ ಅವರು, ನನ್ನ ಹೋರಾಟದ ಬೆನ್ನೆಲುಬೇ ನನ್ನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಎಂದಿದ್ದಾರೆ. ಒಂದು ಬಾರಿ ನನ್ನನ್ನು ಮತ್ತು ಇನ್ನೊಂದು ಬಾರಿ ನನ್ನ ಪತ್ನಿ ಪೂರ್ಣಿಮ ರಮೇಶ್ ರವರನ್ನು ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಲು ಜನ ಆಶೀರ್ವಾದ ಮಾಡಿದ್ದಾರೆ. ಅವರ ಋಣ ತೀರಿಸುವವರೆಗೆ ನನ್ನ ಹೋರಾಟ ಮುಂದುವರೆಸುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಯಡಿಯೂರು ಕೆರೆ ಸರ್ವತೋಮುಖ ಅಭಿವೃದ್ದಿ ಕಂಡು ಪರಿಸರ ಸ್ನೇಹಿ ಮತ್ತು ದೇಶ, ವಿದೇಶ ಪಕ್ಷಿಗಳ ಉತ್ತಮ ತಾಣವಾಗಿದೆ. ಹಸಿಕಸ ದಿಂದ ವಿದ್ಯುತ್ ಉತ್ಪಾದನೆ ಕೇಂದ್ರ ಸ್ಥಾಪನೆ ಮಾಡಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಅದಾಯ ಉಳಿತಾಯ ಮಾಡಿ ವಿದ್ಯುತ್ ಉಳಿತಾಯಕ್ಕೆ ನಾಂದಿ ಹಾಡಲಾಗಿದೆ.

ಕನ್ನಡ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಹಾಗೂ ನಾಡಿನ ನಾಡು,ನುಡಿ ಶ್ರಮಿಸಿದ ಎಲ್ಲ ಮಹನೀಯರುಗಳನ್ನು ಸ್ಮರಣೆ ಮಾಡಿಕೊಂಡು ಪ್ರತಿಮೆ ಮತ್ತು ಪ್ರಮುಖ ರಸ್ತೆಗಳಿಗೆ ನಾಮಕರಣ ಮಾಡಲಾಗಿದೆ. ಮೇರುನಟ ಡಾ.ರಾಜ್ ಕುಮಾರ್, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ಸ್ವಾಮಿ ವಿವೇಕಾನಂದ, ಮೈಸೂರು ಮಹಾರಾಜರು,ಕುವೆಂಪು ಹಲವಾರು ಮಹನೀಯರುಗಳ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಅತಿದೊಡ್ಡ ಗೋಡೆ ಗಡಿಯಾರ ಮತ್ತು ಉದ್ಯಾನವನ ಅಯುರ್ವೇದ ಸಸಿಗಳನ್ನು ನೆಟ್ಟು ಜನರ ಆರೋಗ್ಯಕ್ಕೆ ಸಹಕಾರಿಯಾಗುವಂತೆ ಮಾಡಲಾಗಿದೆ.

ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಿ ನಮ್ಮ ಯುವ ಕ್ರೀಡಾಪಟುಗಳಿಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರಗಳಲ್ಲಿ ತಮ್ಮ ಸಾಮಥ್ರ್ಯ ತೋರಲು ಅವಕಾಶ ಮಾಡಿಕೊಡಲಾಗಿದೆ ಎಂದು ರಮೇಶ್ ವಿವರಿಸಿದರು. ದುಂದು ವೆಚ್ಚ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಕಡಿವಾಣ ಹಾಕಿ, ಕಡಿಮೆ ವೆಚ್ಚದಲ್ಲಿ ಮಾದರಿ, ಹೈಟೆಕ್ ರಸ್ತೆಗಳನ್ನು ನಿರ್ಮಿಸಿ, ತೆರಿಗೆದಾರರ ಹಣ ಉಳಿಸುವಲ್ಲಿ ಮಹತ್ವಪೂರ್ಣ ಹೆಜ್ಜೆ ಇಡಲಾಗಿದೆ. ಇದರೊಂದಿಗೆ ಯಡಿಯೂರು ವಾರ್ಡ್ ಏಷ್ಯಾದ ಅತ್ಯಂತ ಅಭಿವೃದ್ದಿ ಹೆಗ್ಗಳಿಕೆ ಮತ್ತು ಸುಂದರ ವಾರ್ಡ್ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ, ವಾಣಿಜ್ಯ ಸಂಬಂಧ ವೃದ್ಧಿಗೆ ಭಾರತ-ನೇಪಾಳ ಸಮ್ಮತಿ

ನನ್ನ ಹೋರಾಟ, ಸಾಧನೆ ಮತ್ತು ಅಭಿವೃದ್ದಿ ಕೆಲಸಗಳಿಗೆ ಸಹಕಾರ, ಬೆಂಬಲ ನೀಡುತ್ತಾ ಬಂದಿರುವ ಜನತಾ ಜನಾರ್ಧನಾ ಮತ್ತು ಕಾರ್ಯಕರ್ತರಿಗೆ ಹೃತ್ವೂರ್ವಕ ಧನ್ಯವಾದಗಳು ಹೇಳುವ ದಿನವಾಗಿದೆ ಎಂದು ಅವರು ಹೇಳಿದರು. ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳು, ರಾಜಕೀಯ ಮುಖಂಡರುಗಳು ಮತ್ತು ಕನ್ನಡ ಸಂಘ ಸಂಸ್ಥೆಗಳ ನೂರಾರು ಪದಾಕಾರಿಗಳು ಆಗಮಿಸಿ ರಮೇಶ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದರು.
ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಎಳ್ಳು-ಬೆಲ್ಲ, ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

RELATED ARTICLES

Latest News