Monday, February 26, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-01-2024)

ನಿತ್ಯ ನೀತಿ : ನಿನ್ನ ಒಳ್ಳೆಯತನ ದುರುಪಯೋಗ ಮಾಡಿಕೊಳ್ಳುವವರಿಗೆ ನೀನು ಕೆಟ್ಟವನಾಗಿಯೇ ಇದ್ದುಬಿಡು. ಏಕೆಂದರೆ ಇದು ಸ್ವಾರ್ಥಿಗಳ ಪ್ರಪಂಚ.

ಪಂಚಾಂಗ ಸೋಮವಾರ 15-01-2024
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಶತಭಿಷಾ / ಯೋಗ: ವರೀಯಾನ್ / ಕರಣ: ಭವ

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.12
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ನಿಮ್ಮ ಇಚ್ಛೆಗಳು ಬಹುಪಾಲು ಫಲಿಸುವ ದಿನವಾಗಿದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ.
ವೃಷಭ: ಅನೇಕ ನಕಾರಾತ್ಮಕ ಆಲೋಚನೆಗಳು ಬರ ಬಹುದು. ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ಮಿಥುನ: ವಿದ್ಯಾರ್ಥಿಗಳಿಗೆ ಮಾನಸಿಕ ಅಸ್ಥಿರತೆ ಕಾಡಲಿದೆ. ದೂರ ಪ್ರಯಾಣ ಮಾಡುವುದು ಬೇಡ.

ಕಟಕ: ಶಾಂತ ಮನಸ್ಸಿನಿಂದ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿ.
ಸಿಂಹ: ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರುತ್ತವೆ. ವೈವಾಹಿಕ ಜೀವನದ ಬಗ್ಗೆ ಗಮನ ಕೊಡಿ
ಕನ್ಯಾ: ಕೆಲಸದ ಹೊರೆ ಹೆಚ್ಚಿ ದ್ದರೆ, ಭಯಪಡುವ ಬದಲು ಕಷ್ಟಪಟ್ಟು ಕೆಲಸ ಮಾಡಿ. ಮುಂಜಾಗ್ರತೆ ವಹಿಸಿ.

ತುಲಾ: ಹಣದ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ವಾಗ್ವಾದ ನಡೆಯಬಹುದು.
ವೃಶ್ಚಿಕ: ಸರ್ಕಾರಿ ಕೆಲಸ ಮಾಡುವವರು ಕೆಲವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗಬಹುದು.
ಧನುಸ್ಸು: ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನೂತನ ರೀತಿಯಲ್ಲಿ ಪ್ರಯತ್ನ ಮಾಡುವಿರಿ.

ಮಕರ: ಖರ್ಚುಗಳು ಸ್ವಲ್ಪ ಹೆಚ್ಚಾಗಬಹುದು, ಆದರೆ ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ.
ಕುಂಭ: ಸಣ್ಣ ವ್ಯಾಪಾರಸ್ಥರಿಗೆ ಅನುಕೂಲಕರ ದಿನ. ಲಾಭ ಗಳಿಸಲು ಹಲವು ಅವಕಾಶಗಳು ಒದಗಲಿವೆ.
ಮೀನ: ಸರ್ಕಾರಿ ಉದ್ಯೋಗಿಗಳಿಗೆ ನೆಮ್ಮದಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ.

RELATED ARTICLES

Latest News