Friday, January 3, 2025
Homeರಾಷ್ಟ್ರೀಯ | Nationalಪ್ರಧಾನ ಮಂತ್ರಿ ಕಾರ್ಯದರ್ಶಿಯ ಮಗಳು, ಅಳಿಯ ಎಂದು ವಂಚಿಸುತ್ತಿದ್ದ ಕಿಲಾಡಿ ಜೋಡಿ ಅರೆಸ್ಟ್

ಪ್ರಧಾನ ಮಂತ್ರಿ ಕಾರ್ಯದರ್ಶಿಯ ಮಗಳು, ಅಳಿಯ ಎಂದು ವಂಚಿಸುತ್ತಿದ್ದ ಕಿಲಾಡಿ ಜೋಡಿ ಅರೆಸ್ಟ್

Odisha Couple Posing As PMO Relatives Arrested For Multimillion Fraud

ಭುವನೇಶ್ವರ್‌, ಡಿ.31– ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯದರ್ಶಿ ಪಿ ಕೆ ಮಿಶ್ರಾ ಅವರ ಮಗಳು, ಅಳಿಯ ಎಂದು ಜನರನ್ನು ವಂಚಿಸುತ್ತಿದ್ದ ದಂಪತಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಭುವನೇಶ್ವರದಲ್ಲಿ ಹಲವು ಬಿಲ್ಡರ್‌ಗಳು, ಗಣಿ ಮಾಲೀಕರು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಮಗಳು ಮತ್ತು ಅಳಿಯನಂತೆ ನಟಿಸಿದ್ದ ದಂಪತಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಹನ್ಸಿತಾ ಅಭಿಲಿಪ್ಸಾ ಮತ್ತು ಅನಿಲ್‌ ಮೊಹಾಂತಿ, ಒಡಿಶಾದ ಪ್ರಮುಖ ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವುದಾಗಿ ಹೇಳಿಕೊಂಡು ಜನರನ್ನು ವಂಚಿಸಿದ್ದಾರೆ ಎಂದು ವರದಿಯಾಗಿದೆ.

ಭುವನೇಶ್ವರದ ಇನ್ಫೋಸಿಟಿ-ನಂದಂಕನನ್‌ ರಸ್ತೆಯಲ್ಲಿರುವ ಐಷಾರಾಮಿ ಕಚೇರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ತಮ ಪ್ರಭಾವಿ ಸಂಪರ್ಕಗಳನ್ನು ಬಳಸಿಕೊಂಡು ಟೆಂಡರ್‌ ಮತ್ತು ಒಪ್ಪಂದಗಳನ್ನು ಅಂತಿಮಗೊಳಿಸುವ ಹುಸಿ ಭರವಸೆ ನೀಡಿ ಹಣ ವಂಚಿಸುತ್ತಿದ್ದರು.

ಗಣಿ ಮಾಲೀಕನ ದೂರನ್ನು ಆಧರಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಾಜಿ ಕಂಟ್ರೋಲರ್‌ ಮತ್ತು ಆಡಿಟರ್‌ ಜನರಲ್‌ (ಸಿಎಜಿ) ಮತ್ತು ಒಡಿಶಾ ಮುಖ್ಯ ಕಾರ್ಯದರ್ಶಿ ಮನೋಜ್‌ ಅಹುಜಾ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ನಿಕಟ ಒಡನಾಟವನ್ನು ಹೊಂದಿರುವಂತೆ ಬಿಂಬಿಸಿದ್ದರು.

ದಂಪತಿಯನ್ನು ಪಾಟಿಯಾ ಪ್ರದೇಶದಲ್ಲಿ ಬಂಧಿಸಲಾಗಿದೆ ಮತ್ತು ವಂಚನೆಯಲ್ಲಿ ಭಾಗಿಯಾಗಿರುವ ಇತರ ಸಂಭಾವ್ಯ ಸಹಚರರು ಮತ್ತು ಬಲಿಪಶುಗಳನ್ನು ಗುರುತಿಸಲು ಹೆಚ್ಚಿನ ತನಿಖೆಗಳು ನಡೆಯುತ್ತಿವೆ. ಹನ್ಸಿತಾ ಅಭಿಲಿಪ್ಸಾ ಮತ್ತು ಅನಿಲ್‌ ಮೊಹಂತಿ ಅವರು ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಸಂಬಂಧಿಕರು ಎಂದು ಹೇಳುವ ಮೂಲಕ ಜನರನ್ನು ವಂಚಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಎಂದು ಹೆಚ್ಚುವರಿ ಡಿಸಿಪಿ ಸ್ವರಾಜ್‌ ಡಿಬಾಟಾ ತಿಳಿಸಿದ್ದಾರೆ.

RELATED ARTICLES

Latest News