Tuesday, December 3, 2024
Homeರಾಜ್ಯಕರ್ತವ್ಯನಿರತ ಸಿಬ್ಬಂದಿಗೆ ನಾಳೆಯವರೆಗೆ ಅಂಚೆ ಮತದಾನ ಮಾಡಲು ಅವಕಾಶ

ಕರ್ತವ್ಯನಿರತ ಸಿಬ್ಬಂದಿಗೆ ನಾಳೆಯವರೆಗೆ ಅಂಚೆ ಮತದಾನ ಮಾಡಲು ಅವಕಾಶ

ಬೆಂಗಳೂರು,ಏ.21- ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿಗಳಿಗೆ ಅಂಚೆ ಮತದಾನ ಮಾಡಲು ಅನುಕೂಲವಾಗುವಂತೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ ವ್ಯಾಪ್ತಿಯ ಸಿ.ವಿ.ರಾಮನ್‍ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಸಿ.ವಿ.ರಾಮನಗರ ಕ್ಷೇತ್ರದ ಕಾಕ್ಸ್ ಟೌನ್‍ನಲ್ಲಿರುವ ಸೇಂಟ್ ಅಲಾಸುಯ್ಸ್ ಹೈಸ್ಕೂಲ್‍ನಲ್ಲಿ ಎರಡು ಅಂಚೆ ಮತದನ ಕೇಂದ್ರಗಳನ್ನು ತೆರೆಯಲಾಗಿದೆ. ಮತಗಟ್ಟೆ ನಂ.1ರಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ಹಾಸನ ಚಾಮರಾಜನಗರ ಕ್ಷೇತ್ರಗಳ ಮತದಾರರಾಗಿರುವ ಕರ್ತವ್ಯನಿರತ ಸಿಬ್ಬಂದಿ ಮತದಾನ ಮಾಡಬಹುದು.

ಬೂತ್ ನಂ.2ರಲ್ಲಿ ಬೆಂಗಳೂರು ಉತ್ತರ, ಉಡುಪಿ, ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳ ಮತದಾರರಾಗಿರುವ ಕರ್ತವ್ಯನಿರತ ಸಿಬ್ಬಂದಿ ಮತದಾನ ಮಾಡಬಹುದು.

ಈ ಮೇಲಿನ ಸೌಲಭ್ಯ ಕೇಂದ್ರಗಳು ಇಂದಿನಿಂದ ನಾಳೆ ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ಕಾರ್ಯ ನಿರ್ವಹಿಸಲಿವೆ ಎಂದು ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News