Home ಇದೀಗ ಬಂದ ಸುದ್ದಿ ಇಸ್ರೆಲ್‍ನಿಂದ ದೆಹಲಿಗೆ ಬಂದಿಳಿದ 471 ಭಾರತೀಯರು

ಇಸ್ರೆಲ್‍ನಿಂದ ದೆಹಲಿಗೆ ಬಂದಿಳಿದ 471 ಭಾರತೀಯರು

0
ಇಸ್ರೆಲ್‍ನಿಂದ ದೆಹಲಿಗೆ ಬಂದಿಳಿದ 471 ಭಾರತೀಯರು

ನವದೆಹಲಿ, ಅ.15- ಇಸ್ರೆಲ್‍ನ ಟೆಲ್ ಅವೀವ್‍ನಿಂದ ಒಟ್ಟು 471 ಭಾರತೀಯರನ್ನು ಹೊತ್ತ ಎರಡು ವಿಮಾನಗಳು ಭಾನುವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿವೆ. ಒಂದು ವಿಮಾನ ಏರ್ ಇಂಡಿಯಾ ಮತ್ತು ಇನ್ನೊಂದು ವಿಮಾನ ಸ್ಪೈಸ್ ಜೆಟ್ ಸಂಸ್ಥೆಗಳಿಗೆ ಸೇರಿದ್ದವು. ಉಗ್ರಗಾಮಿ ಗುಂಪು ಹಮಾಸ್‍ನೊಂದಿಗೆ ತೀವ್ರ ಸಂಘರ್ಷ ನಡೆಯುತ್ತಿರುವ ಇಸ್ರೆಲ್‍ನಿಂದ ಹಿಂತಿರುಗಲು ಬಯಸುವ ಭಾರತೀಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಆಪರೇಷನ್ ಅಜಯ್ ಅಡಿಯಲ್ಲಿ ಒಟ್ಟು ನಾಲ್ಕು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.

197 ಪ್ರಯಾಣಿಕರೊಂದಿಗೆ ಮೂರನೇ ವಿಮಾನವು ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಭಾನುವಾರ ಹೇಳಿದ್ದಾರೆ.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

274 ಪ್ರಯಾಣಿಕರನ್ನು ಹೊಂದಿರುವ ನಾಲ್ಕನೇ ವಿಮಾನವು ರಾಷ್ಟ್ರ ರಾಜಧಾನಿಯನ್ನು ಮುಟ್ಟಿದೆ ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಗಳಲ್ಲಿ ತಿಳಿಸಿದ್ದು, ಪ್ರಯಾಣಿಕರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಏರ್ ಇಂಡಿಯಾದಿಂದ ನಿರ್ವಹಿಸಲ್ಪಡುವ ಟೆಲ್ ಅವಿವ್‍ನಿಂದ ಎರಡು ಚಾರ್ಟರ್ಡ್ ವಿಮಾನಗಳು ಶುಕ್ರವಾರ ಮತ್ತು ಶನಿವಾರದಂದು ಒಟ್ಟು 435 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಬಂದಿವೆ.