Sunday, July 21, 2024
Homeಅಂತಾರಾಷ್ಟ್ರೀಯಗಾಜಾದಲ್ಲಿ ಆಹಾರ, ನೀರು ಇಲ್ಲದೆ 2.3 ಮಿಲಿಯನ್ ಜನರ ನರಳಾಟ

ಗಾಜಾದಲ್ಲಿ ಆಹಾರ, ನೀರು ಇಲ್ಲದೆ 2.3 ಮಿಲಿಯನ್ ಜನರ ನರಳಾಟ

ಡೀರ್-ಇಎಲ್-ಬಾಲಾಹ್ (ಗಾಜಾ ಪಟ್ಟಿ), ಅ.15- ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿಯನ್ನು ಪ್ರಾರಂಭಿಸಿದ ಒಂದು ವಾರದ ನಂತರ ಗಾಜಾದ 2.3 ಮಿಲಿಯನ್ ನಾಗರಿಕರು ಆಹಾರ, ನೀರು ಮತ್ತು ಸುರಕ್ಷತೆಗಾಗಿ ಪರದಾಡುವಂತಾಗಿದೆ. ಸಾವಿರಾರು ಜನ ನಿರಾಶ್ರಿತರನ್ನು ಉತ್ತರದಿಂದ ಸ್ಥಳಾಂತರಿಸಲು ಇಸ್ರೇಲ್ ಆದೇಶಿಸಿದೆ, ಇನ್ನೂ ಕೆಲವರು ಆಸ್ಪತ್ರೆಗಳಲ್ಲಿ ಬಂಧಿಯಾಗಿದ್ದಾರೆ.

ಈ ಪ್ರದೇಶದಲ್ಲಿ ಇಸ್ರೇಲ್ ಪಡೆಗಳೊಂದಿಗೆ ಅಮೆರಿಕಾದ ಯುದ್ಧನೌಕೆಗಳ ನಿಯೋಜನೆ ಹೆಚ್ಚಾಗುತ್ತಿದೆ. ಗಾಜಾದ ಗಡಿಯುದ್ದಕ್ಕೂ ಉಗ್ರರು ತಮ್ಮನ್ನು ತಾವು ರಕ್ಷಿಸಲು ಅಡುಗುತಾಣಗಳನ್ನು ಮಾಡಿಕೊಂಡಿದ್ದಾರೆ. ಅದೇ ರೀತಿ ಇಸ್ರೆಲಿಗಳು ಅಡುತಾಣಗಳನ್ನು ರಚಿಸಿಕೊಳ್ಳುತ್ತಿದ್ದಾರೆ. ಹಮಾಸ್ ಉಗ್ರರ ರಾಕೇಟ್ ದಾಳಿಯಿಂದ ಗಾಯಗೊಂಡಿರುವ ಇಸ್ರೆಲ್ ತಕ್ಕ ಪ್ರತ್ಯುತ್ತರಕ್ಕಾಗಿ ತಯಾರು ಮಾಡಿಕೊಳ್ಳುತ್ತಿದೆ. ಉಗ್ರರ ಆಕ್ರಮಣದ ಬಳಿಕ ಇಸ್ರೆಲ್ ಪ್ರತಿದಾಳಿ ನಡೆಸಿದ್ದರಿಂದ ಈವರೆಗೂ 2,329 ಪ್ಯಾಲೆಸ್ಟೀನಿಯಾದವರು ಕೊಲ್ಲಲ್ಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. ಇದು ಐದು ಯುದ್ಧಗಳಿಗಿಂತಲೂ ಹೆಚ್ಚು ಜನರನ್ನು ಬಲಿ ಪಡೆದ ಆಕ್ರಮಣವಾಗಿದೆ..

ಕನ್ನಡದ ಶಾಂತಿ ಮಂತ್ರ ವಿಶ್ವಕ್ಕೆ ಪಸರಿಸಿ : ದಸರಾ ಮಹೋತ್ಸವಕ್ಕೆ ಹಂಸಲೇಖ ಚಾಲನೆ

ಅಮೆರಿಕಾದ ಅಂಕಿಅಂಶಗಳ ಪ್ರಕಾರ 2014 ರ ಬೇಸಿಗೆಯಲ್ಲಿ ನಡೆದ ಯುದ್ಧದಲ್ಲಿ 1,462 ನಾಗರಿಕರು ಸೇರಿದಂತೆ 2,251 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದರು. ಆರು ವಾರಗಳ ಕಾಲ ನಡೆದ ಯುದ್ಧದಲ್ಲಿ ಆರು ನಾಗರಿಕರು ಸೇರಿದಂತೆ 74 ಇಸ್ರೆಲಿಗಳು ಕೊಲ್ಲಲ್ಪಟ್ಟರು.

ಹಮಾಸ್ ಉಗ್ರರು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ1,300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1973ರಲ್ಲಿ ಈಜಿಪ್ಟ್ ಮತ್ತು ಸಿರಿಯಾದೊಂದಿಗಿನ ಸಂಘರ್ಷದ ನಂತರ ಇಸ್ರೇಲ್‍ಗೆ ಇದು ಅತ್ಯಂತ ಮಾರಕ ಯುದ್ಧವಾಗಿದೆ.

ಗಾಜಾ ಪ್ರದೇಶದ ಉತ್ತರದಲ್ಲಿರುವ ಪ್ಯಾಲೆಸ್ಟೀಯನಿಯರಿಗೆ ಕರಪತ್ರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿರುವ ಇಸ್ರೆಲ್ ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಳ್ಳುವಂತೆ ಸಲಹೆ ನೀಡಿದೆ. ಗಾಜಾ ನಗರದ ಉತ್ತರದಲ್ಲಿ ಉಗ್ರರ ಭೂಗತ ಅಡಗುತಾಣಗಳನ್ನು ಗುರುತಿಸಿ ತೀವ್ರ ಸ್ವರೂಪದ ಕಾರ್ಯಾಚರಣೆ ನಡೆಸಲು ಸಿದ್ಧತೆಗಳಾಗಿವೆ. ನಾಗರಿಕರನ್ನು ಗುರಾಣಿಯಂತೆ ಬಳಕೆ ಮಾಡಲು ಮುಂದಾಗಿರುವ ಹಮಾಸ್ ಯಾರು ಸ್ಥಳಾಂತರಗೊಳ್ಳಬಾರದು. ಮನೆ ಬಿಟ್ಟು ಹೊರ ಬರಬಾರದು ಎಂದು ಎಚ್ಚರಿಕೆ ನೀಡುತ್ತಿದೆ. ಅತ್ತ ಇಸ್ರೆಲ್ ದಾಳಿಯ ಆತಂಕ ಇತ್ತ ಹಮಾಸ್ ಉಗ್ರರ ಬೆದರಿಕೆ ಸಾಮಾನ್ಯ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 40 ಕಿಲೋಮೀಟರ್ ಉದ್ದದ (25 ಮೈಲಿ ಉದ್ದದ) ಕರಾವಳಿ ಪ್ರದೇಶವನ್ನು ಇಸ್ರೆಲ್‍ನ ಸಂಪೂರ್ಣ ಮುತ್ತಿಗೆ ಹಾಕಲು ನಿರ್ಧರಿಸಿದೆ.

ದಾಳಿಗೂ ಮುನ್ನಾ ಸ್ಥಳಾಂತರಕ್ಕೂ ಹಲವು ಆತಂಕಗಳು ಎದರಾಗಿವೆ. ಉತ್ತರ ಆಸ್ಪತ್ರೆಯ ಇನ್ಕ್ಯುಬೇಟರ್‍ಗಳಲ್ಲಿನ ನವಜಾತ ಶಿಶುಗಳು ಮತ್ತು ತೀವ್ರ ನಿಗಾದಲ್ಲಿರುವ ಒಟ್ಟು 2ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಸ್ಥಳಾಂತರಿಸುವುದು ಮರಣದಂಡನೆಗೆ ಸಮ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವಸಂಸ್ಥೆ ಪ್ರಕಾರ ಗಾಜಾದ ಆಸ್ಪತ್ರೆಗಳ ತೀವ್ರ ನಿಗಾಘಟಕಗಳಿಗೆ ಅಗತ್ಯ ಶಕ್ತಿ ಪೂರೈಸುವ ಜನರೇಟರ್‍ಗಳಿಗೆ ಎರಡು ದಿನಗಳಲ್ಲಿ ಇಂಧನ ಖಾಲಿಯಾಗುವ ನಿರೀಕ್ಷೆಯಿದೆ. ಅದರಿಂದಲೂ ಸಾವಿರಾರು ರೋಗಿಗಳ ಜೀವ ಹಾನಿಯಾಗುವ ಆತಂಕವಿದೆ.

ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿಯಾಗಿ 12 ಮಂದಿ ಸಾವು

ಆಕ್ರಮಣದ ಬಳಿಕ ಇಸ್ರೇಲ್ ಗಾಜಾವನ್ನು ಸುತ್ತುವರೆದಿದ್ದು, ನೀರು ಮತ್ತು ವೈದ್ಯಕೀಯ ಸರಬರಾಜುಗಳ ಕೊರತೆಯಿಂದಾಗಿ ಮಾನವೀಯ ಬಿಕ್ಕಟ್ಟು ಉದ್ಭವಿಸಿದೆ. ಇಂಧನವಿಲ್ಲದೆ ವಿದ್ಯುತ್ ಸ್ಥಾವರಗಳನ್ನು ಮುಚ್ಚುವ ಅನಿವಾರ್ಯತೆ ಎದುರಾಗಿದೆ. ಬೇಕರಿಗಳು ಮುಚ್ಚಿರುವುದರಿಂದ ನಿವಾಸಿಗಳು ತಮ್ಮ ಮಕ್ಕಳಿಗೆ ಬ್ರೆಡ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ನಾವು ಯಾರನ್ನು ಕೊಂದಿಲ್ಲ ನಮಗೇಕೆ ಈ ಶಿಕ್ಷೆ ಎಂದು ಗಾಜಾ ನಗರದ ಹೈಫಾ ಖಾಮಿಸ್ ಅಲ್-ಶುರಾಫಾ ಅಳಲು ತೊಡಿಕೊಂಡಿದ್ದಾರೆ. ತಮ್ಮ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಕಾರಿನಲ್ಲಿ ದಕ್ಷಿಣದತ್ತ ಅವರು ವಲಸೆ ಹೋಗಿದ್ದಾರೆ.

ದಕ್ಷಿಣಕ್ಕೆ ತೆರಳಲು ಗಾಜಾದ ಎರಡು ಸುರಕ್ಷಿತ ಮುಖ್ಯಮಾರ್ಗಗಳಲ್ಲಿ ಪ್ರಯಾಣಿಸಲು ಶನಿವಾರ ಮಧ್ಯಾಹ್ನದ ವರೆಗೂ ಅವಕಾಶ ಕಲ್ಪಿಸಲಾಗಿತ್ತು. ಸ್ಥಳಾಂತರಕ್ಕೆ ಅಂತಿಮ ಗಡುವು ಕುರಿತು ಸ್ಪಷ್ಟತೆ ಇಲ್ಲ.

RELATED ARTICLES

Latest News