ಬೆಂಗಳೂರು,ಡಿ.1- ಶಾಲೆಗಳಿಗೆ ಇಮೇಲ್ ಮೂಲಕ ಕಳುಹಿಸಿರುವ ಟೈಪ್ ಮಾಡಿದ್ದ ರೀತಿ ನೋಡಿದರೆ ಇದೊಂದು ಹೈಲೆವಲ್ ಟೆರರಿಸ್ಟ್ ತರಹ ಕಾಣುತ್ತದೆ. ಅಲ್ಲಾಹುಗೆ ತೊಂದರೆ ಮಾಡುತ್ತಿದ್ದೀರಿ ಎಂದು ಬರೆಯಲಾಗಿದೆ. ಇಂತಹ ಸಮಾಜಘಾತುಕರ ವಿರುದ್ಧ ಯಾವುದೇ ಮುಲಾ ಜಿಲ್ಲದೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿ ಗಲಾಟೆ ಮಾಡಿದ್ದೀರಿ, ಮುಸ್ಲಿಮರಿಗೆ ಅಪಮಾನ ಮಾಡಲಾಗುತ್ತದೆ. ನೀವು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು ಹೀಗೆ ಗಂಭೀರ ವಿಷಯಗಳನ್ನು ಇಮೇಲ್‍ನಲ್ಲಿ ಬರೆಯಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದರಲ್ಲದೆ, ಒಂದೇ ಹಂತದಲ್ಲಿ ಇಷ್ಟು ಶಾಲೆಗಳಿಗೆ ಒಬ್ಬರೇ ಇಮೇಲ್ ಮಾಡಿ ಬಾಂಬ್ ಬೆದರಿಕೆ ಹಾಕಿರುವುದರ ಹಿಂದೆ ದೊಡ್ಡ ಷಡ್ಯಂತರ ಅಡಗಿದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದರು.
ಗುರುಪತ್‍ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚು : ಭಾರತೀಯ ಅಧಿಕಾರಿ ಕೈವಾಡ ಕುರಿತ ತನಿಖೆಗೆ ಸಮ್ಮತಿ
ಇಮೇಲ್ ಎಲ್ಲಿಂದ ಬಂದಿದೆ? ಯಾರಿಂದ ಬಂದಿದೆ? ಇವರ ಉದ್ದೇಶವೇನು? ಎಂಬುದನ್ನು ಪತ್ತೆ ಹಚ್ಚಬೇಕು. ಈಗಿನ ತಂತ್ರಜ್ಞಾನದಲ್ಲಿ ಇದನ್ನು ಪತ್ತೆ ಮಾಡುವುದು ಅಷ್ಟೇನೂ ಕಷ್ಟಕರವಲ್ಲ. ಪೊಲೀಸರು ಸೈಬರ್ ತಂತ್ರಜ್ಞರ ಸಹಾಯದಿಂದ ಮೇಲ್ ಎಲ್ಲಿಂದ ಬಂದಿದೆ ಎಂಬುದನ್ನು ಮೊದಲು ಪತ್ತೆ ಹಚ್ಚಲಿ ಎಂದು ಒತ್ತಾಯಿಸಿದರು. ಮುಂಬೈ ತಾಜ್‍ಹೋಟೆಲ್ ಮೇಲಿನ ದಾಳಿ ಮಾದರಿಯಲ್ಲೇ ನಗರದ ಶಾಲೆಗಳ ಮೇಲೆ ದಾಳಿ ನಡೆಸಲು ಬೆದರಿಕೆ ಸಂದೇಶಗಳು ಬಂದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ.
ಭಾರತೀಯರು ಮುಸ್ಲಿಮರನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಈ ರೀತಿ ಸಂದೇಶ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಇಂತಹ ಸಮಾಜಘಾತುಕರನ್ನು ಎಡೆಮುರಿ ಕಟ್ಟಿದಾಗ ಮಾತ್ರ ಮುಂದೆ ಇಂತಹ ಪ್ರಕರಣಗಳು ಮರುಕಳುಹಿಸುವುದಿಲ್ಲ ಎಂದು ಅಶೋಕ್ ತಿಳಿಸಿದರು.
ಇದು ಭಾರತೀಯರಿಗೆ ಬೆದರಿಕೆಯೊಡ್ಡುವ ಸಂದೇಶವಾಗಿದೆ. ಯಾರು ಈ ರೀತಿ ಸಂದೇಶ ಕಳುಹಿಸಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಸಂದೇಶದಿಂದ ಪೊಷಕರು ಆತಂಕಕ್ಕೊಳಗಾಗಿದ್ದಾರೆ. ಮೊದಲು ಮಕ್ಕಳ ಸುರಕ್ಷತೆಗೆ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.