ನವದೆಹಲಿ,ಡಿ.10– ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು ಖಚಿತ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಂಜೀತ್ ರಂಜನ್ ತಿಳಿಸಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡಿಸಲು 50 ಸಹಿಗಳ ಅಗತ್ಯವಿದೆ. ಆದರೆ, ನಾವು ಈಗಾಗಲೇ 70 ಸಹಿ ಸಂಗ್ರಹಿಸಿರುವುದರಿಂದ ಧನಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದು ಖಚಿತ ಎಂದಿದ್ದಾರೆ.
ನಮ ಈ ನಿರ್ಣಯಕ್ಕೆ ಟಿಎಂಸಿ, ಎಎಪಿ ಮತ್ತಿತರ ಇಂಡಿಯಾ ಒಕ್ಕೂಟದ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.ಮೇಲನೆಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಅಮೆರಿಕನ್-ಹಂಗೇರಿಯನ್ ಉದ್ಯಮಿ ಜಾರ್ಜ್ ಸೊರೊಸ್ ಫೌಂಡೇಷನ್ನಿಂದ ಧನ ಸಹಾಯ ಪಡೆದ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ನಡೆದ ಮಾತಿನ ಚಕಮಕಿ ನಂತರ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ತೀರ್ಮಾನ ಕೈಗೊಂಡಿವೆ.
ಈಗಾಗಲೇ ಧನಕರ್ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸಹಿ ಪಡೆಯುವ ಕಾರ್ಯದಲ್ಲಿ ಪ್ರತಿಪಕ್ಷಗಳು ನಿರತವಾಗಿವೆ. ಈಗಾಗಲೇ 70 ಸಹಿ ಸಂಗ್ರಹವಾಗಿರುವುದರಿಂದ ನಾಳೆ ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.