ದೇಶಕ್ಕೆ ಅಪಮಾನ ಮಾಡುವವರ ವಿರುದ್ಧ ಉಪರಾಷ್ಟ್ರಪತಿ ಕಿಡಿ

ನವದೆಹಲಿ,ಮಾ.20-ದೇಶದ ವಿರುದ್ಧ ವಿನಾಶಕಾರಿ ನಿರೂಪಣೆ ಮಾಡುತ್ತಿರುವವರ ಬಗ್ಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಕಿಡಿ ಕಾರಿದ್ದಾರೆ. ಬ್ರಿಟನ್‍ನಲ್ಲಿ ರಾಹುಲ್‍ಗಾಂಧಿ ಮಾಡಿದ ಭಾಷಣ ಕುರಿತಂತೆ ದೇಶದಲ್ಲಿ ರಾಜಕೀಯ ಕೋಲಾಹಲಗಳು ನಡೆಯುತ್ತಿರುವ ಸಂದರ್ಭದಲ್ಲೇ ಉಪರಾಷ್ಟ್ರಪತಿಗಳು ನೀಡಿರುವ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ದೇಶದ ಬೆಳವಣಿಗೆಯ ಪಥವನ್ನು ತಗ್ಗಿಸಲು ಮತ್ತು ಕ್ರಿಯಾತ್ಮಕ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ತಗ್ಗಿಸಲು ಭಾರತ ವಿರೋ ನಿರೂಪಣೆಗಳನ್ನು ಹರಡಲಾಗುತ್ತಿದೆ.ಇಂತಹ ಭಾರತ-ವಿರೋಧಿ ನಿರೂಪಣೆಗಳ ಬಗ್ಗೆ ಬುದ್ಧಿವಂತರು ಮತ್ತು ಜನರು ಅರಿತುಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಖಲಿಸ್ತಾನಿಗಳ […]

14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಅಧಿಕಾರ ಸ್ವೀಕಾರ

ನವದೆಹಲಿ,ಆ.11- ದೇಶದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಉಪರಾಷ್ಟ್ರಪತಿಯವರಿಗೆ ಪ್ರಮಾಣವಚನ ಬೋಧಿಸಿದ್ದಾರೆ. ನಿರ್ಗಮಿತ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಉಪರಾಷ್ಟ್ರಪತಿಯವರು ರಾಜ್ಯಸಭೆಯ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಲಿದ್ದಾರೆ. ಇತ್ತೀಚೆಗೆ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ 725 ಮತಗಳು ಚಲಾವಣೆಯಾಗಿದ್ದವು.ಅ […]

ಉಪರಾಷ್ಟ್ರಪತಿ ಚುನಾವಣೆ : ಗೆಲುವಿನ ಅಂತರದಲ್ಲಿ ದಾಖಲೆ ಬರೆದ ಜಗದೀಪ್ ಧನ್ಕರ್

ನವದೆಹಲಿ,ಆ.7-ಉಪರಾಷ್ಟ್ರಪತಿ ಆಯ್ಕೆಗೆ ನಿನ್ನೆ ನಡೆದ ಚುನಾವಣೆಯಲ್ಲಿ ಎನ್‍ಡಿಎ ಬೆಂಬಲಿತ ಜಗದೀಪ್ ಧನ್ಕರ್ ಅವರು 25 ವರ್ಷಗಳ ಬಳಿಕ ಅತಿಹೆಚ್ಚು ಅಂತರದಿಂದ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ. ನಿನ್ನೆ ಬೆಳಗ್ಗೆ ಸಂಸತ್ ಭವನದಲ್ಲಿ ಬೆಳಗ್ಗೆ 10ರಿಂದ 5 ಗಂಟೆವರೆಗೆ ನಡೆದ ಮತದಾನದಲ್ಲಿ 725 ಮಂದಿ ಮತ ಚಲಾವಣೆ ಮಾಡಿದ್ದರು. ಅದರಲ್ಲಿ 15 ಮತಗಳು ಅನರ್ಹಗೊಂಡಿದ್ದವು. ಬಾಕಿ ಉಳಿದ 710 ಮತಗಳಲ್ಲಿ ಜಗದೀಪ್ ಧನ್ಕರ್ 578(ಶೇ.72.5) ಮತಗಳನ್ನು ಪಡೆದು 246 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಪಕ್ಷಗಳ ಬೆಂಬಲಿತ […]