ನವದೆಹಲಿ, ಮೇ 25 (ಪಿಟಿಐ) : ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಇಂದು ನವದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದರು.ಮುರ್ಮು ಅವರು ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಧ್ಯಕ್ಷರ ಎಸ್ಟೇಟ್‌ನಲ್ಲಿರುವ ಡಾ ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯದಲ್ಲಿರುವ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಮತದಾನದ ನಂತರ, ಮುರ್ಮು ಅವರು ಪಿಂಕ್ ಮತ್ತು ಬಿಳಿ ಬಣ್ಣಗಳಲ್ಲಿ ಅಲಂಕರಿಸಲ್ಪಟ್ಟ ಮತಗಟ್ಟೆಯ ಹೊರಗೆ ಮಾಧ್ಯಮದವರಿಗೆ ಬೆರಳಿನ ಶಾಯಿಯ ಗುರುತು ಪ್ರದರ್ಶಿಸಿದರು.ಒಡಿಶಾ ಮೂಲದ ಮುರ್ಮು ಅವರು ಜುಲೈ 25, 2022 ರಂದು ಭಾರತದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಳೆದ ವರ್ಷ ನವೆಂಬರ್ 28 ರಂದು ನವೀಕರಿಸಿದ ವಿಳಾಸದೊಂದಿಗೆ ಅವರು ತಮ ಹೊಸ ಮತದಾರರ ಗುರುತಿನ ಚೀಟಿಯನ್ನು ಪಡೆದರು. ಆಕೆಯ ಹಳೆಯ ವೋಟರ್ ಐಡಿ ಆಕೆಯ ಒಡಿಶಾ ವಿಳಾಸವನ್ನು ಹೊಂದಿತ್ತು.
ದೆಹಲಿ ಉತ್ತರ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಉಪ ರಾಷ್ಟ್ರಪತಿ ಧನಕರ್ ತಮ ಹಕ್ಕು ಚಲಾಯಿಸಿದರು. ಅದೇ ರೀತಿ ದೆಹಲಿಯಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ವಾದ್ರಾ, ಕೇಜ್ರಿವಾಲ್, ವಿದೇಶಾಂಗ ಸಚಿವ ಜೈಶಂಕರ್ ಮತ್ತಿತರ ಗಣ್ಯರು ಇಂದು ತಮ ಹಕ್ಕು ಚಲಾಯಿಸಿದರು.