Friday, November 22, 2024
Homeರಾಜ್ಯವಿಧಾನಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ವಿಷಯ ಪ್ರಸ್ತಾಪಿಸಲು ಮುಂದಾದ ಪ್ರತಿಪಕ್ಷಗಳು

ವಿಧಾನಸಭೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ವಿಷಯ ಪ್ರಸ್ತಾಪಿಸಲು ಮುಂದಾದ ಪ್ರತಿಪಕ್ಷಗಳು

ಬೆಳಗಾವಿ, ಡಿ.11- ರಾಜ್ಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಹೆಣ್ಣು ಭ್ರೂಣ ಹತ್ಯೆ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಪ್ರತಿಪಕ್ಷಗಳು ಜಂಟಿಯಾಗಿ ನಿಲುವಳಿ ಸೂಚನೆ ನೋಟಿಸ್ ನೀಡಿವೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಿಲುವಳಿ ಸೂಚನೆ ನೋಟಿಸ್ ಅನ್ನು ವಿಧಾನಸಭೆ ಕಾರ್ಯದರ್ಶಿ ಅವರಿಗೆ ನೀಡಿದ್ದಾರೆ. ನೋಟಿಸ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ, ಜೆಡಿಎಸ್ನ ಹಲವು ಸದಸ್ಯರು ಸಹಿ ಹಾಕಿದ್ದಾರೆ.

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 60ನೇ ನಿಯಮದ ಮೇರೆಗೆ ಇಂದು ವಿಧಾನಸಭೆಯ ಅವೇಶನದಲ್ಲಿ ಪ್ರಶ್ನೋತ್ತರ ಮತ್ತು ಶೂನ್ಯವೇಳೆಯ ತರುವಾಯ ಹೆಣ್ಣು ಭ್ರೂಣ ಹತ್ಯೆ ವಿಚಾರವನ್ನು ಪ್ರಸ್ತಾಪಿಸಲು ಅವಕಾಶ ಕೋರಲಾಗಿದೆ.ರಾಜ್ಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣವು ನಾಗರೀಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ. ಕಳೆದ 2 ವರ್ಷಗಳಲ್ಲಿ ಮೊಬೈಲ್ ಸ್ಕ್ಯಾನಿಂಗ್ ಯಂತ್ರ ಬಳಸಿ, 900 ಕ್ಕೂ ಹೆಚ್ಚು ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಿ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿರುವುದು ಈ ಕರಾಳ ದಂಧೆ ವ್ಯಾಪಕವಾಗಿ ಹರಡಿರುವುದರ ಸೂಚನೆಯಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.

ಮಂಡ್ಯ ಜಿಲ್ಲೆಯ ಆಲೆ ಮನೆಯಲ್ಲಿ ಭ್ರೂಣ ಲಿಂಗ ಪರೀಕ್ಷೆಗೆ ಸ್ಕ್ಯಾನಿಂಗ್ ಪ್ರಯೋಗಾಲಯವನ್ನು ಸಿದ್ಧಪಡಿಸಿ ಅಲ್ಲಿ ಲಿಂಗ ಪರೀಕ್ಷೆ ನಡೆಸಿ ನಂತರ ಮೈಸೂರಿನಲ್ಲಿ ನಡೆಯುತ್ತಿದ್ದ ಅನಧಿಕೃತ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಲಾಗುತ್ತಿತ್ತು. ಹಣದಾಸೆಗೆ ಪ್ರಪಂಚಕ್ಕೆ ಕಾಲಿಡುವ ಮೊದಲೇ ಭ್ರೂಣಗಳ ಹತ್ಯೆ ಮಾಡಲಾಗಿದೆ.

50 ಅಧಿಕಾರಿಗಳು, 40 ಎಣಿಕೆ ಯಂತ್ರ, ಎಣಿಸಿದಷ್ಟು ಹೆಚ್ಚುತ್ತಲೆ ಇದೆ ಸಾಹು ಸಂಪತ್ತು

ಈ ಪ್ರಕರಣದ ಆರೋಪಿಗಳೆಲ್ಲರೂ ವೈದ್ಯರೇ ಅಲ್ಲ. ಭ್ರೂಣ ಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಸುವ ಕಾಯ್ದೆಯು ಜಾರಿಗೆ ಬಂದು 29 ವರ್ಷಗಳು ಕಳೆದಿದ್ದರೂ ರಾಜ್ಯದಲ್ಲಿ ಈ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿಲ್ಲ ಎಂದು ಆರೋಪಿಸಲಾಗಿದೆ.ರಾಜ್ಯದಲ್ಲಿ ಅವ್ಯಾಹತವಾಗಿ ಭ್ರೂಣಲಿಂಗ ಪತ್ತೆ ಪರೀಕ್ಷೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ನಡೆಯುತ್ತಲೇ ಇದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲದಿರುವುದು ಈ ಕೃತ್ಯದಲ್ಲಿ ಅವರ ಪಾತ್ರದ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ.

ಹೆಣ್ಣಿನ ಮೇಲೆ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇದೆ. ಇದರಲ್ಲಿ ಅತ್ಯಂತ ಭೀಕರ ಹಾಗೂ ಪ್ರಮುಖವಾದದ್ದು ಈ ಹೆಣ್ಣು ಭ್ರೂಣ ಹತ್ಯೆಯಾಗಿದೆ. ಬೆಳಕಿಗೆ ಬಂದಿರುವ ಈ ಕರಾಳ ದಂಧೆಯ ಕುರಿತು ಚರ್ಚಿಸಲು ಅವಕಾಶ ನೀಡಬೇಕೆಂದು ಕೋರಿದ್ದಾರೆ.

RELATED ARTICLES

Latest News