Monday, November 3, 2025
Homeರಾಷ್ಟ್ರೀಯ | Nationalಸಂಶೋಧನೆ, ಕಲಿಕೆಗೆ ಹೆಚ್ಚು ಒತ್ತು : ಪ್ರಧಾನಿ ಮೋದಿ

ಸಂಶೋಧನೆ, ಕಲಿಕೆಗೆ ಹೆಚ್ಚು ಒತ್ತು : ಪ್ರಧಾನಿ ಮೋದಿ

ನವದೆಹಲಿ, ಏ. 23 (ಪಿಟಿಐ) : ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿನ ಕಾರ್ಯಕ್ಷಮತೆ ಸುಧಾರಣೆಯನ್ನು ಕ್ಯೂಎಸ್ ಅಧ್ಯಕ್ಷ ನುಂಜಿಯೊ ಕ್ವಾಕ್ವಾರೆಲ್ಲಿ ಶ್ಲಾಸಿದ ಒಂದು ದಿನದ ನಂತರ, ತಮ್ಮ ಸರ್ಕಾರವು ಸಂಶೋಧನೆ, ಕಲಿಕೆ ಮತ್ತು ನಾವೀನ್ಯತೆಗಳ ಮೇಲೆ ದೊಡ್ಡ ರೀತಿಯಲ್ಲಿ ಗಮನಹರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತೀಯ ವಿಶ್ವವಿದ್ಯಾನಿಲಯಗಳು ಈ ವರ್ಷ ಎಲ್ಲಾ ಜಿ20 ರಾಷ್ಟ್ರಗಳಲ್ಲಿ ಅತ್ಯಧಿಕ ಕಾರ್ಯಕ್ಷಮತೆಯ ಸುಧಾರಣೆಯನ್ನು ಪ್ರದರ್ಶಿಸಿವೆ, ಅವುಗಳ ಸರಾಸರಿ ಶ್ರೇಯಾಂಕದಲ್ಲಿ ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ಶೇ.14ರಷ್ಟು ಸುಧಾರಣೆಯಾಗಿದೆ ಎಂದು ಕ್ವಾಕ್ವಾರೆಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

- Advertisement -

ಅವರ ಪೋಸ್ಟ್ ಅನ್ನು ಟ್ಯಾಗ್ ಮಾಡಿದ ಮೋದಿ, ಇದು ನೋಡಲು ಉತ್ತೇಜನಕಾರಿಯಾಗಿದೆ! ನಮ್ಮ ಸರ್ಕಾರವು ಸಂಶೋಧನೆ, ಕಲಿಕೆ ಮತ್ತು ನಾವೀನ್ಯತೆಗಳ ಮೇಲೆ ದೊಡ್ಡ ರೀತಿಯಲ್ಲಿ ಗಮನಹರಿಸುತ್ತಿದೆ. ಮುಂಬರುವ ದಿನಗಳಲ್ಲಿ, ಈ ಒತ್ತು ಇನ್ನಷ್ಟು ಆಳವಾಗಿ ನಮ್ಮ ಯುವ ಶಕ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯವು (ಜೆಎನ್‍ಯು) ಲಂಡನ್ ಮೂಲದ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆಯಾದ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಈ ತಿಂಗಳ ಆರಂಭದಲ್ಲಿ ಘೋಷಿಸಿದ ಅಸ್ಕರ್ ಶ್ರೇಯಾಂಕಗಳಲ್ಲಿ ಭಾರತದಲ್ಲಿ ಅತ್ಯುನ್ನತ ಶ್ರೇಣಿಯ ವಿಶ್ವವಿದ್ಯಾಲಯವಾಗಿದೆ.

ವಿಶ್ವವಿದ್ಯಾನಿಲಯವು ಅಭಿವೃದ್ಧಿ ಅಧ್ಯಯನಕ್ಕಾಗಿ ಜಾಗತಿಕವಾಗಿ 20 ನೇ ಸ್ಥಾನದಲ್ಲಿದೆ. ಐಐಎಂ-ಅಹಮದಾಬಾದ್ ಜಾಗತಿಕವಾಗಿ ವ್ಯಾಪಾರ ಮತ್ತು ನಿರ್ವಹಣಾ ಅಧ್ಯಯನಕ್ಕಾಗಿ ಟಾಪ್ 25 ಸಂಸ್ಥೆಗಳಲ್ಲಿ ಸ್ಥಾನ ಪಡೆದಿದ್ದರೆ, ಐಐಎಂ-ಬೆಂಗಳೂರು ಮತ್ತು ಐಐಎಂ-ಕಲ್ಕತ್ತಾ ಟಾಪ್ 50 ರಲ್ಲಿರುವುದು ವಿಶೇಷವಾಗಿದೆ.

- Advertisement -
RELATED ARTICLES

Latest News