Thursday, May 2, 2024
Homeಅಂತಾರಾಷ್ಟ್ರೀಯಮೋದಿ ಬೆಂಬಲಿಸಿ ಅಮೆರಿಕದಲ್ಲಿ ಕಾರ್ ರ‍್ಯಾಲಿ

ಮೋದಿ ಬೆಂಬಲಿಸಿ ಅಮೆರಿಕದಲ್ಲಿ ಕಾರ್ ರ‍್ಯಾಲಿ

ವಾಷಿಂಗ್ಟನ್, ಏ.1 (ಪಿಟಿಐ) ಪ್ರಧಾನಿ ನರೇಂದ್ರ ಮೋದಿಯವರಿಗೆ ಮೂರನೇ ಅವಧಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಮತ್ತು 400ರ ನಿರ್ಣಾಯಕ ಜನಾದೇಶವನ್ನು ನೀಡುವಂತೆ ಭಾರತದ ಜನರನ್ನು ಒತ್ತಾಯಿಸಲು ಅಮೆರಿಕದಲ್ಲಿರುವ ಬಿಜೆಪಿಯ ಸಾಗರೋತ್ತರ ಸ್ನೇಹಿತರು ಅಲ್ಲಿನ 20 ವಿವಿಧ ನಗರಗಳಲ್ಲಿ ಕಾರ್ ರ‍್ಯಾಲಿಗಳನ್ನು ಆಯೋಜಿಸಿದ್ದರು.

ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್ಡಿಎ ಒಕ್ಕೂಟ 400 ಸ್ಥಾನಗಳನ್ನು ದಾಟುವುದನ್ನು ನೋಡಲು ಭಾರತೀಯ ಅಮೆರಿಕನ್ ಸಮುದಾಯವು ಅತ್ಯಂತ ಉತ್ಸಾಹದಿಂದ ಕಾಯುತ್ತಿದೆ ಎಂದು OFBJP-USA ಸಂಘಟನೆಯ ಅಧ್ಯಕ್ಷ ಅಡಪ ಪ್ರಸಾದ್ ಹೇಳಿದ್ದಾರೆ.

ಭಾರತೀಯ ಅಮೆರಿಕನ್ನರು ಲೋಕಸಭೆ ಚುನಾವಣೆಯಲ್ಲಿ NDA ಅಬ್ ಕಿ ಬಾರ್ 400 ರ್ಪಾ ಸಾಧಿಸಬೇಕೆಂದು ಬಯಸುತ್ತಾರೆ ಎಂದಿದ್ದಾರೆ. ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಗೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಸುಮಾರು 20 ನಗರಗಳಲ್ಲಿ ಸಂಘಟಿತ ರೀತಿಯಲ್ಲಿ ಓಎಫ್ ಬಿಜೆಪಿ ಆಯೋಜಿಸಿದ ಕಾರ್ ರ್ಯಾಲಿಗಳಲ್ಲಿ ಸಮುದಾಯವು ಉತ್ಸಾಹದಿಂದ ಭಾಗವಹಿಸಿದೆ ಎಂದು OFBJP-USA ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಾಸುದೇವ್ ಪಟೇಲ್ ತಿಳಿಸಿದರು.

ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ, ವರ್ಜೀನಿಯಾ ಮತ್ತು ಮೇರಿಲ್ಯಾಂಡ್ನಲ್ಲಿ ರ್ಯಾಲಿಗಳನ್ನು ನಡೆಸಲಾಯಿತು. ನ್ಯೂಜೆರ್ಸಿಯಲ್ಲಿ ಸುಮಾರು 200 ಕಾರುಗಳು ಕಾರ್ನೀವಲ್ ವಾತಾವರಣದಲ್ಲಿ ಭಾಗವಹಿಸಿದ್ದವು.

ಸಿಲಿಕಾನ್ ವ್ಯಾಲಿಯಲ್ಲಿ, -ಫ್ರಾಮಾಂಟ್ ವಾರ್ಮ್ ಸ್ಪ್ರಿಂಗ್ಸ್, ಸೌತ್ ಫ್ರೀಮಾಂಟ್ ಬಾರ್ಟ್ ಸ್ಟೇಷನ್ನಿಂದ ಮಿಲ್ಪಿಟಾಸ್ನಲ್ಲಿರುವ ಇಂಡಿಯನ್ ಕಮ್ಯುನಿಟಿ ಸೆಂಟರ್ ವರೆಗೆ ಒಗ್ಗಟ್ಟಿನ ಕಾರವಾನ್ ಪ್ರಾರಂಭವಾಯಿತು, ಇದು ಸ್ಯಾನ್ -ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಹೃದಯಭಾಗದಲ್ಲಿ ಯಶಸ್ವಿಯಾಗಿ ನೆರವೇರಿತು.

ರ್ಯಾಲಿಯಲ್ಲಿ ಸುಮಾರು 200 ಕಾರುಗಳು ಮತ್ತು ಬೇ ಏರಿಯಾದ ವಿವಿಧ ಭಾಗಗಳಿಂದ 300 ಮಂದಿ ಭಾಗವಹಿಸಿದ್ದರು, ಇದು ಮೋದಿ ಸರ್ಕಾರಕ್ಕೆ ಮತ್ತು 2024 ರಲ್ಲಿ ಮರುಚುನಾವಣೆಯ ಪ್ರಯತ್ನಕ್ಕೆ ಬಲವಾದ ಬೆಂಬಲದ ಅಲೆಯನ್ನು ಸೂಚಿಸುತ್ತದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಆಸ್ಟಿನ್, ಡಫ್ಲಸ್, ಚಿಕಾಗೋ, ರೇಲಿ ಮತ್ತು ಡೆಟ್ರಾಯಿಟ್ನಂತಹ ನಗರಗಳಲ್ಲಿ ಇದೇ ರೀತಿಯ ಕಾರ್ ರ್ಯಾಲಿಗಳನ್ನು ನಡೆಸಲಾಯಿತು. ಈ ರ್ಯಾಲಿಗಳಲ್ಲಿ ಕಾರುಗಳು ಬಿಜೆಪಿ ಧ್ವಜಗಳು ಮತ್ತು ಅಮೇರಿಕನ್ ಧ್ವಜಗಳಿಂದ ಅಲಂಕರಿಸಲ್ಪಟ್ಟವು ಮತ್ತು ಮೋದಿ ಕಾ ಗ್ಯಾರಂಟಿ, ಭಾರತವು 3 ನೇ ಅತಿದೊಡ್ಡ ಆರ್ಥಿಕತೆ ಎಂಬ -ಫಲಕಗಳನ್ನು ಪ್ರದರ್ಶಿಸಿತು; ಅಬ್ ಕಿ ಬಾರ್ 400 ಪಾರ್ ಮತ್ತು ಮೋದಿ 3.0. ಎಂಬ ಘೋಷವಾಕ್ಯಗಳು ಮೊಳಗಿದವು.

RELATED ARTICLES

Latest News