Thursday, November 6, 2025
Home Blog Page 105

ದೆಹಲಿ ಬಳಿಕ ಈಗ ಬೆಂಗಳೂರಲ್ಲೂ ರೆಡಿಯಾಗುತ್ತಿದೆ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಪ್ಲಾನ್‌

ಬೆಂಗಳೂರು, ಸೆ.16- ರಾಷ್ಟ್ರ ರಾಜಧಾನಿ ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಹೆಚ್ಚು ಹೊಗೆ ಹೊರಸೂಸುವ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಪ್ಲಾನ್‌ ರೆಡಿಯಾಗುತ್ತಿದೆ. ಪರಿಸರಕ್ಕೆ ಮಾರಕವಾಗುವಂತಹ 15 ವರ್ಷಗಳು ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವ ನಿರ್ಧಾರವನ್ನು ಈಗಾಗಲೇ ಕೇಂದ್ರ ಸರ್ಕಾರ ಕೈಗೊಂಡಿದೆ.

ದೇಶದಲ್ಲೇ ಅತಿ ಹೆಚ್ಚು ಪರಿಸರ ಮಾಲಿನ್ಯವಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಸ್ಕ್ರ್ಯಾಪ್‌ ಪಾಲಿಸಿಯನ್ನು ಜಾರಿಗೊಳಿಸಲಾಗಿದೆ. ಇದೀಗ ದೆಹಲಿ ಮಾದರಿಯಲ್ಲೇ ರಾಜ್ಯದಲ್ಲ್ಲೂ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್‌ ಮಾಡುವ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದಲ್ಲೂ ಸ್ಕ್ರ್ಯಾಪ್‌ ಪಾಲಿಸಿಯನ್ನು ಸಾರಿಗೆ ಇಲಾಖೆ ಜಾರಿಗೊಳಿಸಿದೆ. 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವಂತೆ ಈಗಾಗಲೇ ನೋಟೀಸ್‌‍ ನೀಡಲಾಗಿದೆ.

ಟೂ ಸ್ಟ್ರೋಕ್‌ ಆಟೋಗಳ ಜತೆಗೆ 15 ವರ್ಷ ತುಂಬಿರೋ ಲಾರಿಗಳನ್ನೂ ಸ್ಕ್ರ್ಯಾಪ್‌ ಮಾಡುವಂತೆ ಸೂಚಿಸಲಾಗಿದೆ. ಸ್ಕ್ರ್ಯಾಪ್‌ ಪಾಲಿಸಿಗೆ ವಾಹನದ ಮಾದರಿ ಆಧರಿಸಿ ಸಾರಿಗೆ ಇಲಾಖೆ ಪರಿಹಾರ ನೀಡುತ್ತಿದೆ.

ಮೊದಲ ಹಂತದಲ್ಲಿ ಸರ್ಕಾರಿ ವಾಹನಗಳ ಸ್ಕ್ರ್ಯಾಪ್‌ ಮಾಡಲು ತೀರ್ಮಾನ ಮಾಡಿರುವ ಸರ್ಕಾರ ನಂತರ ಅಧೀನ ಸಂಸ್ಥೆಗಳಿಗೆ ಸೇರಿದ ವಾಹನಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದೆ. ನಂತರ ಹಂತ ಹಂತವಾಗಿ 15 ವರ್ಷ ಮೀರಿದ ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.

15 ವರ್ಷ ಮೇಲ್ಟಟ್ಟ ಭಾರಿ ವಾಹನಗಳು ಹೊರಸೂಸುವ ಮಾಲಿನ್ಯದಿಂದ ಭವಿಷ್ಯದಲ್ಲಿ ಜನ ಉಸಿರಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಪರಿಸರ ತಜ್ಞರ ಎಚ್ಚರಿಕೆ ಮೇರೆಗೆ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತಿದೆಯಂತೆ.

ಮೈಸೂರಿನಲ್ಲಿ ದಸರಾ ಸಂಭ್ರಮ : ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ಆರಂಭ

ಮೈಸೂರು,ಸೆ.16 : ದಸರಾ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಇಂದು ಸಿಂಹಾಸನ ಜೋಡಣೆ ಕಾರ್ಯ ಆರಂಭ. ಈ ಹಿನ್ನೆಲೆ ಮಂಗಳವಾರ ಮಧ್ಯಾಹ್ನದವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ರಾಜವಂಶ್ಥರು ನಡೆಸುವ ಧಾರ್ಮಿಕ ಕಾರ್ಯ, ಖಾಸಗಿ ದರ್ಬಾರ್‌ಗಾಗಿ ಈ ಸಿಂಹಾಸನ ಜೋಡಣೆ ನಡೆಯುತ್ತಿದೆ. ಸ್ಟ್ರಾಂಗ್ ರೂಂನಿಂದ ಬಿಗಿ ಭದ್ರತೆಯೊಂದಿಗೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ನಡೆಯಲಿದೆ.

ಬೆ. 8:30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಚಿನ್ನದ ಸಿಂಹಾಸನದ ಬಿಡಿಭಾಗ ಹಾಗೂ ಬೆಳ್ಳಿಯ ಭದ್ರಾಸನದ ಬಿಡಿ ಭಾಗಗಳನ್ನ ದರ್ಬಾರ್ ಹಾಲ್‌ಗೆ ತಂದು ಜೋಡಣೆ ಮಾಡಲಾಗುವುದು.ಬೆಳ್ಳಿ ಭದ್ರಾಸನವನ್ನ ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗುವುದು.

ಸಿಂಹಾಸನ ಜೋಡಣೆ ಕಾರ್ಯ ನಡೆಯುವ ವೇಳೆ ದರ್ಬಾಲ್ ಹಾಲ್ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮೆರಾಗೆ ಪರದೆ ಹಾಕಲಾಗುವುದು.ಸಿಂಹಾಸನ ಜೋಡಣೆ ಕಾರ್ಯದ ನಿಮಿತ್ತ ಬೆಳಗ್ಗೆಯೇ ದರ್ಬಾರ್ ಹಾಲ್‌ನಲ್ಲಿ ಗಣಪತಿ, ಚಾಮುಂಡಿ ಪೂಜೆ ಸೇರಿಂದತೆ ಕೆಲ ಹೋಮ ಹವನ ನಡೆಯಲಿದೆ. ಪೂಜೆ ಮುಗಿದ ಬಳಿಕ ಸಿಂಹಾಸನ ಬಿಡಿಭಾಗವನ್ನ ದರ್ಬಾರ್ ಹಾಲ್‌ಗೆ ತಂದು ಸಿಂಹಾಸನ ಜೋಡಣೆ ಮಾಡಲಾಗುವುದು.

ಜಾತಿ ಗಣತಿಗೂ ಮುನ್ನ ಒಗ್ಗೂಡಲು ಮುಂದಾದ ಪ್ರಬಲ ಸಮುದಾಯಗಳು

ಬೆಂಗಳೂರು, ಸೆ.16-ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22ರಿಂದ ನಡೆಸಲಾಗುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಿದ್ಧತೆ ಒಂದೆಡೆ ಸಾಗಿದ್ದರೆ, ಮತ್ತೊಂದೆಡೆ ಪ್ರಬಲ ಸಮುದಾಯಗಳಲ್ಲಿ ತಳಮಳವನ್ನುಂಟು ಮಾಡಿದೆ. ಇದರಿಂದ ಜಾತಿ, ಉಪ ಜಾತಿಗಳನ್ನು ಒಗ್ಗೂಡಿಸಿ ಪ್ರಮುಖ ಜಾತಿಯಡಿ ಗುರುತಿಸಿಕೊಳ್ಳುವ ಪ್ರಯತ್ನ ಬಿರುಸಾಗಿದೆ.

ಪ್ರಮುಖ ಜಾತಿಗಳು ಉಪ ಜಾತಿಗಳನ್ನು ಒಗ್ಗೂಡಿಸಿ ಒಂದೇ ಜಾತಿಯಡಿ ತರಲು ಹರ ಸಾಹಸ ಪಡಲಾಗುತ್ತಿದೆೆ. ಪ್ರಬಲ ಜಾತಿಗಳಲ್ಲಿನ ಹಲವು ಉಪ ಜಾತಿ ಹಾಗೂ ಪಂಗಡಗಳು ಆಯೋಗ ಬಿಡುಗಡೆ ಮಾಡಿರುವ ಜಾತಿವಾರು ಪಟ್ಟಿಯಲ್ಲಿ ಸೇರಿವೆ. ಒಂದು ವೇಳೆ ಅವು ಸ್ವತಂತ್ರ ಜಾತಿಗಳನ್ನಾಗಿ ಸಮೀಕ್ಷೆ ವೇಳೆ ದಾಖಲಿಸಿದರೆ, ಒಗ್ಗೂಡ ಬೇಕಾದ ಸಮುದಾಯಗಳು ಹರಿದು ಹಂಚಿ ಹೋಗಲಿವೆ. ಇದರಿಂದ ಸಂಖ್ಯಾಬಲದಲ್ಲಿ ಹೆಚ್ಚಿರಬೇಕಾದ ಜಾತಿಗಳು ಸಣ್ಣ, ಸಣ್ಣ ಜಾತಿಗಳಾಗಿ ಗುರುತಿಸಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಎದುರಾಗಿದೆ.

ಅಲ್ಲದೆ, ಸರ್ಕಾರದ ಮೀಸಲಾತಿ, ಯೋಜನೆ, ಕಲ್ಯಾಣ ಕಾರ್ಯಕ್ರಗಳಲ್ಲಿ ನಿರೀಕ್ಷಿತ ಪ್ರಯೋಜನ ದೊರೆಯದಿರಬಹದು ಎಂಬ ಲೆಕ್ಕಾಚಾರವನ್ನು ಆಯಾ ಜಾತಿಯ ಪ್ರಮುಖರು ಮಾಡತೊಡಗಿದ್ದಾರೆ. ತಮ ತಮ ಜಾತಿಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಎಚ್ಚರ ವಹಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಜಾತಿ ಗಣತಿಗೂ ಮುನ್ನ ಎಚ್ಚೆತ್ತಿರುವ ಪ್ರಮುಖ ಸಮುದಾಯಗಳು ಸಮೀಕ್ಷೆ ಸಂದರ್ಭದಲ್ಲಿ ಎಚ್ಚರ ವಹಿಸುವಂತೆ ನಿರಂತರವಾಗಿ ತಿಳುವಳಿಕೆ ನೀಡುತ್ತಿವೆ. ಇದು ಆಯೋಗ ನಡೆಸುವ ಸಮೀಕ್ಷೆಗೂ ಸಹಕಾರಿಯಾಗಲಿದೆ.

ಒಂದು ವೇಳೆ ಸಮೀಕ್ಷೆಯ ನಂತರ ಸಂಖ್ಯಾಬಲದಲ್ಲಿ ಇಳಿಕೆಯಾದರೆ, ರಾಜಕೀಯದ ಮೇಲೂ ಪರಿಣಾಮ ಬೀರಬಹುದೆಂಬ ಆತಂಕ ಕಾಡತೊಡಗಿದ್ದು, ಆಯಾ ಸಮುದಾಯಗಳ ಪ್ರಮುಖರು, ಸಂಘಗಳು, ಮಠಾಧೀಶರು ತಮ ತಮ ಸಮುದಾಯಗಳ ಹಿತ ಕಾಪಾಡಲು ಮುಂದಾಗಿದ್ದಾರೆ. ಪ್ರಮುಖವಾದ ಒಂದೇ ಜಾತಿಯಡಿ ಎಲ್ಲರನ್ನೂ ಒಗ್ಗೂಡಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

ಜಿಲ್ಲೆ, ತಾಲ್ಲೂಕು, ಹೋಬಳಿ, ಪಟ್ಟಣ ಮಟ್ಟದಲ್ಲಿ ಸಭೆ, ಸಮಾರಂಭಗಳನ್ನು ನಡೆಸುವ ಮೂಲಕ ತಮ ಜನಾಂಗದವರಿಗೆ ಜಾತಿ ಗಣತಿ ಕುರಿತು ಸೂಕ್ತ ಮಾಹಿತಿ ನೀಡಿ ಅರಿವು ಮೂಡಿಸಲಾಗುತ್ತಿದೆ. ಸಮೀಕ್ಷೆ ಸಂದರ್ಭದಲ್ಲಿ ವಾಸ್ತವ ಮಾಹಿತಿಯನ್ನು ಮಾತ್ರ ನೀಡಬೇಕು ಎಂದು ಮನವಿ ಮಾಡಲಾಗುತ್ತಿದೆ. ಸಮೀಕ್ಷೆ ಆರಂಭಕ್ಕೂ ಮುನ್ನ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಕುರಿತು ವಿವಿಧ ಮಾಧ್ಯಮಗಳ ಮೂಲಕ ಅದರಲ್ಲೂ ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ.

ಕೆಲವೊಂದು ಒಳಪಂಗಡಗಳು ಮುಖ್ಯ ಜಾತಿಯಡಿ ಸೇರಲು ಇಚ್ಛಿಸಿವೆ, ಮತ್ತೆ ಕೆಲವೊಂದು ಜಾತಿಗಳು ಸ್ವತಂತ್ರವಾಗಿ ಗುರುತಿಸಿಕೊಳ್ಳುವ ಉದ್ದೇಶ ಹೊಂದಿವೆ. ಇದು ಆಯಾ ಜನಾಂಗದ ನಾಯಕರು, ಮುಖಂಡರಿಗೆ ತಲೆ ನೋವಾಗಿದ್ದು, ಮನವೊಲಿಕೆ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿವೆ.

ಅದರಲ್ಲೂ ಪ್ರಬಲ ಸಮುದಾಯವಾಗಿರುವ ಒಕ್ಕಲಿಗ ಮತ್ತು ಲಿಂಗಾಯತ-ವೀರಶೈವ, ಸಮುದಾಯಗಳು ಮುಂಚೂಣಿಯಲ್ಲಿದ್ದು, ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂಬ ಗುರಿಯೊಂದಿಗೆ ಎಲ್ಲೆಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ.

ಲಿಂಗಾಯತ ಸಮುದಾಯದಲ್ಲಿ ನೋಳಂಬ, ಸಾದರ, ರೆಡ್ಡಿ, ಗಾಣಿಗ, ಪಂಚಮಸಾಲಿ, ಗೌಡಲಿಂಗಾಯಿತ ಸೇರಿದಂತೆ ಹತ್ತಾರು ಜಾತಿ-ಉಪಜಾತಿಗಳಿವೆ. ಅದೇ ರೀತಿ ಒಕ್ಕಲಿಗ ಸಮುದಾಯದಲ್ಲಿ ಕುಂಚಿಟಿಗ, ರೆಡ್ಡಿ, ದಾಸ, ಮರಸು, ಗಂಗಟಕಾರ್‌, ಹಳ್ಳಿಕಾರ್‌ ಸೇರಿದಂತೆ ಹಲವು ಜಾತಿ-ಉಪ ಜಾತಿಗಳಿವೆ. ಇದು ವಿಶ್ವಕರ್ಮ, ವಿಶ್ವ ಬ್ರಾಹಣ, ಆಚಾರಿ, ಬಡಿಗಾರ್‌, ಪತ್ತಾರ್‌, ಪಾಂಚಾಳ, ಅಕ್ಕಸಾಲಿಗ, ಕಮಾರ ಸೇರಿದಂತೆ ಹಲವು ಜಾತಿ-ಉಪಜಾತಿಗಳಿವೆ.

ಹೀಗೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರುವ ನೂರಾರು ಜಾತಿಗಳು ತಮ ತಮ ಜಾತಿಯ ಹಿತರಕ್ಷಣೆಗೆ ಮುಂದಾಗಿ ನಿರಂತರವಾಗಿ ಅರಿವು ಮೂಡಿಸಿ ಸಮೀಕ್ಷೆ ಸಂದರ್ಭದಲ್ಲಿ ಏನನ್ನು ದಾಖಲಿಸಬೇಕು, ಏನನ್ನು ದಾಖಲಿಸಬಾರದು ಎಂಬ ಜಾಗೃತಿ ಮೂಡಿಸತೊಡಗಿವೆ.
ಇತರೆ ಸಮುದಾಯಗಳು ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ತಮ ಸಮುದಾಯದ ಒಳಪಂಗಡದವರನ್ನು, ಉಪ ಜಾತಿಗಳನ್ನು ಸಂಘಟಿಸಲು ಸಕಾಲವೆಂದೇ ಭಾವಿಸಿ ಕಾರ್ಯೋನುಖವಾಗಿವೆ. ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ನಿರ್ಧಾರವಾಗುವ ಸಾಧ್ಯತೆಗಳಿರುವುದರಿಂದ ಸಮೀಕ್ಷೆಗೂ ಮುನ್ನವೇ ತಮ ತಮ ಜನಾಂಗದವರನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತೊಡಗಿವೆ.

ಕೊಪ್ಪಳ ನಗರಸಭೆ ಕಚೇರಿ ಸೇರಿ ಜಿಲ್ಲೆಯ 5 ಕಡೆ ಲೋಕಾಯುಕ್ತ ದಾಳಿ

ಕೊಪ್ಪಳ,ಸೆ.16-ಇಲ್ಲಿನ ನಗರಸಭೆ ಕಚೇರಿ ಸೇರಿ ಐದು ಕಡೆ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪ ಹಾಗೂ ವಿವಿಧ ದೂರಿನ ಹಿನ್ನೆಲೆ ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಕೊಪ್ಪಳದ ನಗರಸಭೆ ಕಚೇರಿ, ನಗರಸಭೆ ಜೆಇ ಸೋಮಲಿಂಗಪ್ಪ, ಕಂದಾಯ ನಿರೀಕ್ಷಕ ಉಜ್ವಲ್‌‍, ಗುತ್ತಿಗೆದಾರರಾದ ಶಕೀಲ್‌ ಪಟೇಲ್‌‍, ಪ್ರವೀಣ ಕಂದಾರಿ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ್‌,ಇನ್ಸ್ ಪೆಕ್ಟರ್‌ ವಿಜಯಕುಮಾರ್‌, ಚಂದ್ರಪ್ಪ, ನಾಗರತ್ನ, ಶೈಲಾ, ಅಮರೇಶ ಹುಬ್ಬಳ್ಳಿ ಸೇರಿಸಿಬ್ಬಂದಿ ಐದು ತಂಡಗಳು ಏಕ ಕಾಲದಲ್ಲಿ ದಾಳಿ ನಡೆಸಿದೆ. ನಗದುಹಣ ,ಚಿನ್ನಾಭರಣ ಸೇರಿ ಹಲವು ಆಸ್ತಿ ದಾಖಲೆ ಪತ್ತೆಯಾಗಿದ್ದು,ಕೆಲವು ಕಚೇರಿಯ ಕಡತ ಮತ್ತು ಹಣಕಾಸಿನ ವ್ಯವಹಾರದ ಡೈರಿ ವಶಕ್ಕೆ ಪಡೆಯಲಾಗಿದೆ.

ಚಿಕ್ಕಮಗಳೂರು : ಗಣೇಶನ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಪತ್ತೆ

ಚಿಕ್ಕಮಗಳೂರು,ಸೆ.16- ಇಲ್ಲಿನ ಶ್ರೀ ಗಣಪತಿ ಸೇವಾ ಸಮಿತಿ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ದೊಡ್ಡ ಗಣಪತಿಗೆ ಭಕ್ತರು ವಿದೇಶಿ ಕರೆನ್ಸಿಗಳನ್ನು ಅರ್ಪಿಸಿದ್ದಾರೆ.
ಭಕ್ತರು ಹಣ, ಚಿನ್ನ, ಬೆಳ್ಳಿ ನಾಣ್ಯಗಳನ್ನು ಅರ್ಪಣೆ ಮಾಡುವುದು ಸರ್ವೇ ಸಾಧಾರಣವಾದರೂ ಈ ಬಾರಿ ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳನ್ನು ಹಾಕಿರುವುದು ವಿಶೇಷ.

ಭಕ್ತರೊಬ್ಬರು ಯುನೈಟೆಡ್‌ ಎಮಿರೇಟ್‌್ಸನ 50 ದೀನರ್‌ ಹುಂಡಿಗೆ ಹಾಕಿದ್ದಾರೆ ಭಾರತದಲ್ಲಿ ಇದರ ಬೆಲೆ 1200 ರೂಪಾಯಿಗಳು. ಹಾಗೆಯೇ ಶ್ರೀಲಂಕಾ ದೇಶದ ರೂಪಿ ಕೂಡ ಹಾಕಲಾಗಿದ್ದು 20 ರೂಪಿ ಎರಡು ನೋಟುಗಳು ಹಾಗೂ 50 ರೂಪಿ ಎರಡು ನೋಟುಗಳು ಹುಂಡಿಯಲ್ಲಿ ಸಿಕ್ಕಿದೆ. ಶ್ರೀಲಂಕಾದ ರೂಪಿಗೆ ಭಾರತದಲ್ಲಿ ಕಡಿಮೆ ಬೆಲೆ. ವಿದೇಶಿ ನೋಟುಗಳನ್ನು ಬ್ಯಾಂಕಿಗೆ ನೀಡಿ ಭಾರತದ ನೋಟುಗಳಾಗಿ ಪರಿವರ್ತಿಸಿಕೊಳ್ಳಲಾಗುವುದು ಎಂದು ಸೇವಾ ಸಮಿತಿಯ ಅಧ್ಯಕ್ಷ ಸಿ.ಎಸ್‌‍ ಕುಬೇರ ತಿಳಿಸಿದ್ದಾರೆ.

ಈಗಾಗಲೇ ಎರಡು ಬಾರಿ ಹುಂಡಿ ಎಣಿಕೆ ಮಾಡಿದ್ದು ಯಾವುದೇ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳು ಬಂದಿಲ್ಲ. ಕೇವಲ ಹಣವನ್ನು ಮಾತ್ರ ಹುಂಡಿಗೆ ಹಾಕಿದ್ದಾರೆ. ಸೆ.7ರಂದು ಹುಂಡಿ ಎಣಿಕೆಯಲ್ಲಿ 68,224 ರೂ.ಸಂಗ್ರಹವಾದರೆ ನಿನ್ನೆಯ ಹುಂಡಿ ಎಣಿಕೆಯಲ್ಲಿ 86,424 ರೂ. ಸಂಗ್ರಹವಾಗಿದೆ ಎಂದು ಹೇಳಿದ್ದಾರೆ.

ಚಲಾವಣೆಯಲ್ಲಿ ಇಲ್ಲದ 25 ಪೈಸೆ 50 ಪೈಸೆ ಕಾಯಿನ್‌ಗಳು ಕೂಡ ಹುಂಡಿಯಲ್ಲಿ ಸಂಗ್ರಹವಾಗಿದೆ. ಸಂಗ್ರಹವಾದ ಹಣವನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಲಾಗುವುದು ಎಂದು ತಿಳಿಸಿದ್ದಾರೆ.

ಅ.17 ರಂದು ಕಾವೇರಿ ತೀರ್ಥೋದ್ಭವ

ಮಡಿಕೇರಿ,ಸೆ.16- ಜೀವನಾಡಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ಅ.17 ರಂದು ಮಧ್ಯಾಹ್ನ 1.44ಕ್ಕೆ ಕಾವೇರಿ ಮಾತೆಯ ತೀರ್ಥೋದ್ಭವವಾಗಲಿದೆ.ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ 1.17 ರಂದು ಮಧ್ಯಾಹ್ನ 1.44ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿ ಮಾತೆ ತೀರ್ಥ ಸ್ವರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ.

ಸೆ.26ರ ಬೆಳಿಗ್ಗೆ 9.31 ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ.4 ರಂದು ಬೆಳಿಗ್ಗೆ 8.33ಕ್ಕೆ ತುಲಾ ಲಗ್ನದಲ್ಲಿ ಆಜ್ಞಾ ಮಹೂರ್ತ, ಅ.14 ರಂದು ಬೆಳಿಗ್ಗೆ 11.45 ಕ್ಕೆ ಧನುರ್‌ ಲಗ್ನದಲ್ಲಿ ಅಕ್ಷಯಪಾತ್ರೆ ಇರಿಸುವುದು ಹಾಗೂ ಅಂದು ಸಂಜೆ 4.45ಕ್ಕೆ ಮೀನಲಗ್ನದಲ್ಲಿ ಕಾಣಿಕೆ ಡಬ್ಬಿ ಇಡುವುದು, ಅ.17 ರ ಮಧ್ಯಾಹ್ನ 1.44ರ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ನಡೆಯಲಿದೆ ಎಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಮಾಹಿತಿ ನೀಡಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-09-2025)

ನಿತ್ಯ ನೀತಿ : ಗಿಣಿಶಾಸ್ತ್ರ ಕೇಳಿ ಮರ ಏರಿದರೆ ಕೈಜಾರಿ ಕೆಳಗೆ ಬಿದ್ದರೂ ಬೀಳಬಹುದು. ಆದರೆ… ಆತವಿಶ್ವಾಸದಿಂದ ಮರ ಏರಿದರೆ ತುತ್ತತುದಿಯ ಹಣ್ಣು ನಿನ್ನ ಪಾಲಾಗಬಹುದು.

ಪಂಚಾಂಗ : ಮಂಗಳವಾರ, 16-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಭಾದ್ರಪದ / ಪಕ್ಷ:ಕೃಷ್ಣ / ತಿಥಿ: ದಶಮಿ / ನಕ್ಷತ್ರ: ಅರ್ದ್ರಾ / ಯೋಗ: ವರೀಯಾ / ಕರಣ: ವಣಿಜ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.20
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ: ಮಾಡಬೇಕೆಂದುಕೊಂಡಿರುವ ಒಳ್ಳೆಯ ಕೆಲಸ ವನ್ನು ಇಂದಿನಿಂದಲೇ ಆರಂಭಿಸಿ.
ವೃಷಭ: ಹೊಸ ಪ್ರದೇಶಕ್ಕೆ ಭೇಟಿ ನೀಡಿ ಒಳ್ಳೆಯ ಅನುಭವ ಪಡೆದುಕೊಳ್ಳಲು ಅವಕಾಶ ಸಿಗಲಿದೆ.
ಮಿಥುನ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾ ಸುವಿರಿ.

ಕಟಕ: ಸ್ನೇಹಿತರಿಂದಲೇ ಕೆಟ್ಟ ಮಾತು ಕೇಳಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ.
ಸಿಂಹ: ಗುರು-ಹಿರಿಯ ರೊಂದಿಗೆ ಸಮಾಲೋಚನೆ ನಡೆಸುವಿರಿ. ಬಂಧುಗಳಿಂದ ಸಮಸ್ಯೆ ಬಗೆಹರಿಯಲಿದೆ.
ಕನ್ಯಾ: ಷೇರು ವ್ಯವಹಾರ ದಲ್ಲಿ ತೊಡಗಿಕೊಂಡವರಿಗೆ ಸ್ವಲ್ಪ ಮಟ್ಟಿನ ಲಾಭ ಸಿಗಲಿದೆ.

ತುಲಾ: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.
ವೃಶ್ಚಿಕ: ಯಾವುದೋ ವಿಚಾರ ಮನಸ್ಸಿನಲ್ಲಿಟ್ಟು ಕೊಂಡು ಕೊರಗುವುದು ಸರಿಯಲ್ಲ.
ಧನುಸ್ಸು: ಲೇವಾದೇವಿ ವ್ಯವಹಾರದಲ್ಲಿ ಧನಲಾಭವಿದೆ. ಸಮಾಧಾನದಿಂದ ವ್ಯವಹರಿಸಿ.

ಮಕರ: ನೌಕರರಿಗೆ ಸ್ಥಾನ ಬದಲಾವಣೆ ಅಥವಾ ವರ್ಗಾವಣೆಯಾಗುವ ಸಾಧ್ಯತೆಗಳಿವೆ.
ಕುಂಭ: ಆಸ್ತಿ ಸಂಬಂ ತ ತಗಾದೆಗಳಿಗೆ ನ್ಯಾಯವಾದಿಗಳ ಸಲಹೆ ಪಡೆಯಿರಿ.
ಮೀನ: ಸರ್ಕಾರಿ ಕೆಲಸ-ಕಾರ್ಯಗಳಿಂದ ಅನುಕೂಲವಾಗಲಿದೆ. ಆತ್ಮಗೌರವ ಹೆಚ್ಚಾಗಲಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ : ಬಳ್ಳಾರಿ ಕಾರ್ಪೋರೇಟರ್‌ ಮನೆ ಮೇಲೆ ಸಿಬಿಐ ದಾಳಿ

ಬೆಂಗಳೂರು,ಸೆ.15– ಮಾಜಿ ಸಚಿವ ಬಿ.ನಾಗೇಂದ್ರ ತಲೆದಂಡಕ್ಕೆ ಕಾರಣೀಭೂತವಾಗಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಳ್ಳಾರಿಯ ಮಹಾನಗರ ಪಾಲಿಕೆ ಸದಸ್ಯನ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ.

ಬಳ್ಳಾರಿಯ ಗಾಂಧಿನಗರದಲ್ಲಿರುವ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಗೋವಿಂದ್‌ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಏಕಾಏಕಿ ದಾಳಿ ನಡೆಸಿ ಖಾತೆಗಳು, ಬ್ಯಾಂಕ್‌ ದಾಖಲೆಗಳು ಸೇರಿದಂತೆ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಮೊಟ್ಟೆ ವ್ಯಾಪಾರಿಯಾಗಿದ್ದ ಗೋವಿಂದ್‌ ಹಗರಣದ ಮತ್ತೋರ್ವ ಆರೋಪಿ ನೆಕ್ಕುಂಟೆ ನಾಗರಾಜ್‌ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆಂಬ ಆರೋಪವಿದೆ. ಈ ಹಣವನ್ನು ವ್ಯಾಪಾರ ಸೇರಿದಂತೆ ಬೇರೆ ಬೇರೆ ಕಡೆ ಹೂಡಿಕೆ ಮಾಡಿರುವುದನ್ನು ಸಿಬಿಐ ಪತ್ತೆಹಚ್ಚಿದೆ.

ಹಗರಣದಲ್ಲಿ ಹೆಸರು ಕೇಳಿಬಂದಿರುವ ಕುಮಾರಸ್ವಾಮಿ ಜೊತೆ ಗೋವಿಂದ್‌ ಆತ್ಮೀಯತೆ ಇಟ್ಟುಕೊಂಡಿದ್ದರು. ನಿಗಮದಿಂದ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡು ಚುನಾವಣೆಯಲ್ಲಿ ಬಳಕೆ ಮಾಡಿದ್ದರ ಆರೋಪವಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ನೆಕ್ಕುಂಟೆ ನಾಗರಾಜ್‌ ಮತ್ತು ಗೋವಿಂದ್‌ ಅವರ ಖಾತೆಗಳನ್ನು ಪರಿಶೀಲಿಸಿದಾಗ ಹಣ ವರ್ಗಾವಣೆಯಾಗಿರುವುದು ದೃಢಪಟ್ಟಿತ್ತು. ಮೂಲಗಳ ಪ್ರಕಾರ ಇದೇ ಹಣವನ್ನು ನಾಗೇಂದ್ರ ತೆಲಂಗಾಣ ವಿಧಾನಸಭೆ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ದುರುಪಯೋಗಪಡಿಸಿಕೊಂಡಿದ್ದಾರೆಂಬ ಆರೋಪವಿದೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಬಿ.ನಾಗೇಂದ್ರ ಅಧಿಕಾರ ದುರುಪಯೋಗಪಡಿಸಿಕೊಂಡು 88 ಕೋಟಿ ಹಣವನ್ನು ಕಾನೂನು ಬಾಹಿರವಾಗಿ ಉಲ್ಲಂಘನೆ ಮಾಡಿದ್ದಾರೆಂದು ಜಾರಿನಿರ್ದೇಶನಾಲಯ(ಇಡಿ) ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು.

ಹೀಗಾಗಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಉದ್ಭವವಾಗಿತ್ತು. ಇನ್ನೂ ಈ ಹಗರಣದಲ್ಲಿ ಮಾಜಿ ಸಚಿವೆ ಬಿ. ನಾಗೇಂದ್ರ ಅವರು ಮಾಸ್ಟರ್‌ ಮೈಂಡ್‌ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಹೈಕೋರ್ಟ್‌ 2025ರ ಜುಲೈನಲ್ಲಿ ಸಿಬಿಐ ತನಿಖೆಗೆ ಆದೇಶ ನೀಡಿದೆ. ಇ.ಡಿಯು 2024ರ ಜುಲೈನಲ್ಲಿ ನಾಗೇಂದ್ರ ಅವರ ಮನೆಯ ಮೇಲೆ ದಾಳಿ ನಡೆಸಿ, 2025ರ ಜೂನ್ನಲ್ಲಿ ಬಳ್ಳಾರಿ ಸಂಸದ ಇ. ತುಕಾರಾಂ ಹಾಗೂ ಶಾಸಕರ ಮನೆಗಳ ಮೇಲೆ ದಾಳಿ ನಡೆಸಿತ್ತು. ಬಿಜೆಪಿ ನಾಯಕರು ಈ ದಾಳಿಯನ್ನು ರಾಜಕೀಯ ಪ್ರತೀಕಾರ ಎಂದು ಕರೆದು, ಸರ್ಕಾರದ ವಿರುದ್ಧ ಟೀಕಿಸಿದ್ದು, ಕಾಂಗ್ರೆಸ್‌ ನಾಯಕರು ತನಿಖೆಯಲ್ಲಿ ಸಹಾಯ ಮಾಡಿ ಎಂದು ಹೇಳಿದ್ದಾರೆ.

ಹಗರಣದ ಹಿನ್ನೆಲೆಯಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ 20.19 ಕೋಟಿ ರೂ.ಗಳನ್ನು ಹಣವಾಗಿ ವಿತರಿಸಲಾಗಿದೆ ಎಂದು ಇಡಿ ಆರೋಪಿಸಿದೆ.ನಾಗೇಂದ್ರ ಅವರ ಸಹಾಯಕ ವಿಜಯ್‌ಕುಮಾರ್‌ ಗೌಡಾ ಅವರ ಮೊಬೈಲ್‌ನಲ್ಲಿ ಚುನಾವಣೆ ವೆಚ್ಚದ ನೋಟ್‌ ಸಿಕ್ಕಿದ್ದು, ಇದು ಹಗರಣದೊಂದಿಗೆ ಸಂಬಂಧ ಹೊಂದಿದೆ. ಯೂನಿಯನ್‌ ಬ್ಯಾಂಕ್‌ ಇಂಡಿಯಾ ಆಧಾರದಲ್ಲಿ ತನಿಖೆ ನಡೆಸುತ್ತಿದ್ದು, ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶನೀಡಿದೆ.

ದೇಶದಲ್ಲಿ ಅಸಹನೆ, ಧರ್ಮಾಂಧತೆ ಹೆಚ್ಚಾಗಿದೆ : ಸಚಿವ ಎಚ್‌.ಸಿ.ಮಹದೇವಪ್ಪ ಬೇಸರ

ಬೆಂಗಳೂರು, ಸೆ.15- ಶಾಂತಿ ಸಹಬಾಳ್ವೆಯ ಬುದ್ಧನ ದೇಶದಲ್ಲಿ ಇಂದು ಅಸಹನೆ, ಧರ್ಮಾಂಧತೆ, ವ್ಯಕ್ತಿಪೂಜೆ, ಸರ್ವಾಧಿಕಾರಿ ಧೋರಣೆ ಆ ಮೂಲಕ ಪ್ರಜಾಪ್ರಭುತ್ವದ ಅಳಿವು ಎಂಬಂತಹ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ತನ್ನ ಭಾವ ವ್ಯಕ್ತಪಡಿದ್ದಾರೆ.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದಲೂ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. 2007ರಲ್ಲಿ ವಿಶ್ವಸಂಸ್ಥೆ ಧರ್ಮಾಂಧತೆ, ಸರ್ವಾಧಿಕಾರಿ ಆಡಳಿತ, ಸಮಾಜಕ್ಕೆ ಮಾರಕ. ಪ್ರಜಾಪ್ರಭುತ್ವ ಸೂಕ್ತ ಎಂಬ ನಿಲುವಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಘೋಷಣೆ ಮಾಡಿದೆ ಎಂದು ಹೇಳಿದರು.

ಬ್ರಿಟನ್‌, ಫ್ರಾನ್‌್ಸ, ಆಮೆರಿಕಾದಂತಹ ರಾಷ್ಟ್ರಗಳು ಕ್ರಾಂತಿಯ ಮೂಲಕ ಪ್ರಜಾಪ್ರಭುತ್ವ ದೇಶಗಳಾಗಿ ಬದಲಾಗಿವೆ. ಪ್ರಜಾಪ್ರಭುತ್ವ ಸಮಸ್ತ ಜನರ ಧ್ವನಿಯನ್ನು ಜಾರಿ ಮಾಡಲು ಇರುವ ಬಲವಾದ ವ್ಯವಸ್ಥೆ ಎಂದು ಹೇಳಿದರು.ಪ್ರಸ್ತುತ ಪ್ರಜಾ ಪ್ರಭುತ್ವ ಕ್ಕಿರುವ ಸವಾಲನ್ನು ಮೆಟ್ಟಿನಿಲ್ಲಲು ಜನ ಜಾಗೃತರಾಗಬೇಕು. ಯಥಾಃರಾಜ, ತಥಾಃಪ್ರಜಾ ಎಂದು ಸಹಿಸಿಕೊಳ್ಳಬಾರದು. ಅಸಹನೆ, ಧರ್ಮಾಂಧತೆ, ಸರ್ವಾಧಿಕಾರ, ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಅಶಾಂತಿ, ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಎಚ್ಚರಿಸಿದರು.

ಕಷ್ಟಪಟ್ಟು ಬೆಳೆಸಿದ ಪ್ರಜಾಪ್ರಭುತ್ವವನ್ನು ಕಳೆದುಕೊಂಡರೆ ಮತ್ತೆ ನಾವು ಪ್ರಜಾಪ್ರಭುತ್ವಗಳಿಸುವುದು ಕಷ್ಟಸಾಧ್ಯತೆ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ದೇಶದ ಪ್ರತಿಯೊಬ್ಬರೂ ದೇಶದ ಪ್ರಜಾಪ್ರಭುತ್ವ ರಕ್ಷಣೆಗೆ ಬದ್ಧವಾಗಿರಬೇಕು ಎಂದರು.ರಾಜಕೀಯ ಸ್ವಾತಂತ್ರ್ಯದಿಂದ ಸಾರ್ಥಕತೆ ಸಿಗುವುದಿಲ್ಲ. ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಅಗತ್ಯವಿದೆ. ಕಾಂಗ್ರೆಸ್‌‍ ಪಕ್ಷ ಪ್ರಜಾಪ್ರಭುತ್ವವನ್ನು ಬಲವಾಗಿ ಪ್ರತಿಪಾಧಿಸುತ್ತದೆ. ಪ್ರತಿಯೊಬ್ಬರಿಗೂ ತಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಐಚ್ಛಿಕ ಅಧಿಕಾರವನ್ನು ಸಂವಿಧಾನ ನೀಡಿದೆ. ಅದನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಸಮಾನತೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಕಟ್ಟಕಡೆಯ ಪ್ರಜೆಗೂ ಪ್ರಜಾಪ್ರಭುತ್ವದ ಆಶಯಗಳನ್ನು ಕಲ್ಪಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರಕಲೆ, ಛಾಯಾಚಿತ್ರ ಹಾಗೂ ಚರ್ಚಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌, ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌‍, ಶಾಸಕ ಎಸ್‌‍.ಎ. ನಾರಾಯಣಸ್ವಾಮಿ, ವಿವಿಧ ನಿಗಮಗಳ ಅಧ್ಯಕ್ಷರಾದ ಸಂಪತ್‌ರಾಜ್‌, ಮಂಜುನಾಥ್‌, ಪಲ್ಲವಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭವಿಷ್ಯವಾಣಿಗಳನ್ನು ಮೀರಿಸಿ ಭಾರತ ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ : ಭಾಗವತ್‌

ಇಂದೋರ್‌, ಸೆ.15- ಭಾರತವು ಎಲ್ಲರ ಭವಿಷ್ಯವಾಣಿಗಳನ್ನು ತಪ್ಪಾಗಿ ಸಾಬೀತುಪಡಿಸುವ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ, ಏಕೆಂದರೆ ಇದು ಜ್ಞಾನ, ಕ್ರಿಯೆ ಮತ್ತು ಭಕ್ತಿಯ ಸಾಂಪ್ರದಾಯಿಕ ತತ್ವಶಾಸ್ತ್ರದಲ್ಲಿ ನಂಬಿಕೆಯಿಂದ ನಡೆಸಲ್ಪಡುತ್ತದೆ ಎಂದಿದ್ದಾರೆ.

ಭಾರತದ ಆರ್ಥಿಕತೆಯು ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್‌‍-ಜೂನ್‌ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಉತ್ತಮವಾದ ಶೇ. 7.80 ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ, ಇದು ಅಮೆರಿಕ ಸುಂಕಗಳನ್ನು ವಿಧಿಸುವ ಮೊದಲು ಕಳೆದ ಐದು ತ್ರೈಮಾಸಿಕಗಳಲ್ಲಿ ಅತ್ಯಧಿಕವಾಗಿದೆ. ಮಧ್ಯಪ್ರದೇಶದ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಅವರ ಪರಿಕ್ರಮ ಕೃಪಾ ಸಾರ್‌ ಪುಸ್ತಕವನ್ನು ಇಂದೋರ್‌ನಲ್ಲಿ ಬಿಡುಗಡೆ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್‌‍, ಭಾರತವು 3,000 ವರ್ಷಗಳ ಕಾಲ ವಿಶ್ವ ನಾಯಕನಾಗಿದ್ದಾಗ ಯಾವುದೇ ಜಾಗತಿಕ ಕಲಹ ಇರಲಿಲ್ಲ ಎಂದು ಹೇಳಿದರು.

ಆ ಸಮಯದಲ್ಲಿ, ಪರಿಸರ ಎಂದಿಗೂ ಹದಗೆಟ್ಟಿರಲಿಲ್ಲ, ತಾಂತ್ರಿಕ ಪ್ರಗತಿ ಉನ್ನತ ಮಟ್ಟದಲ್ಲಿತ್ತು ಮತ್ತು ಮಾನವ ಜೀವನವು ಸಂತೋಷ ಮತ್ತು ಸುಸಂಸ್ಕೃತವಾಗಿತ್ತು ಎಂದು ಅವರು ಹೇಳಿದರು.ಆ ಯುಗದಲ್ಲಿ, ನಾವು ಜಗತ್ತನ್ನು ಮುನ್ನಡೆಸಿದೆವು, ಆದರೆ ಯಾವುದೇ ದೇಶವನ್ನು (ದಾಳಿ ಮಾಡುವ ಮೂಲಕ) ವಶಪಡಿಸಿಕೊಳ್ಳಲಿಲ್ಲ ಮತ್ತು ಯಾವುದೇ ದೇಶದ ವ್ಯಾಪಾರವನ್ನು ನಿಗ್ರಹಿಸಲಿಲ್ಲ.

ನಾವು ಯಾರ ಧರ್ಮವನ್ನೂ ಪರಿವರ್ತಿಸಲಿಲ್ಲ. ನಾವು ಎಲ್ಲಿಗೆ ಹೋದರೂ, ನಾವು ನಮ್ಮ ನಾಗರಿಕತೆಯನ್ನು ಹರಡಿದೆವು ಮತ್ತು ಜ್ಞಾನ ಮತ್ತು ಧರ್ಮಗ್ರಂಥಗಳನ್ನು ನೀಡುವ ಮೂಲಕ ಜನರ ಜೀವನವನ್ನು ಸುಧಾರಿಸಿದೆವು. ನಂತರ ಎಲ್ಲಾ ದೇಶಗಳು ತಮ್ಮದೇ ಆದ ಗುರುತನ್ನು ಹೊಂದಿದ್ದವು, ಆದರೆ ಅವುಗಳ ನಡುವೆ ಉತ್ತಮ ಸಂಭಾಷಣೆ ಇತ್ತು. ಈ (ಸಂವಾದ) ಇಂದು ಇಲ್ಲ, ಅವರು ಹೇಳಿದರು.

ವೈಯಕ್ತಿಕ ಹಿತಾಸಕ್ತಿಗಳು ಜಗತ್ತಿನಲ್ಲಿ ಘರ್ಷಣೆಗಳಿಗೆ ಕಾರಣವಾಗಿವೆ, ಅದು ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಸಿದೆ.ಭಾರತೀಯ ಜನರ ಪೂರ್ವಜರು ವಿವಿಧ ಪಂಥಗಳು ಮತ್ತು ಸಂಪ್ರದಾಯಗಳ ಮೂಲಕ ಹಲವಾರು ಮಾರ್ಗಗಳನ್ನು ತೋರಿಸಿದ್ದಾರೆ, ಜೀವನದಲ್ಲಿ ಜ್ಞಾನ, ಕ್ರಿಯೆ ಮತ್ತು ಭಕ್ತಿಯ ಸಮತೋಲಿತ ಹರಿವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಕಲಿಸಿದ್ದಾರೆ ಎಂದು ಭಾಗವತ್‌ ಹೇಳಿದರು.

ಜ್ಞಾನ, ಕ್ರಿಯೆ ಮತ್ತು ಭಕ್ತಿಯ ಸಮತೋಲಿತ ತ್ರಿಮೂರ್ತಿಗಳ ಸಾಂಪ್ರದಾಯಿಕ ತತ್ವಶಾಸ್ತ್ರದಲ್ಲಿ ನಂಬಿಕೆ ಇರುವುದರಿಂದ, ಭಾರತವು ಎಲ್ಲರ ಭವಿಷ್ಯವಾಣಿಗಳನ್ನು ತಪ್ಪೆಂದು ಸಾಬೀತುಪಡಿಸುವ ಮೂಲಕ ಅಭಿವೃದ್ಧಿಯ ಹಾದಿಯಲ್ಲಿ ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.ಮಾಜಿ ಬ್ರಿಟಿಷ್‌ ಪ್ರಧಾನಿ ವಿನ್ಸಿಟಿನ್‌ ಚರ್ಚಿಲ್‌ ಅವರನ್ನು ಉಲ್ಲೇಖಿಸಿ, ಬ್ರಿಟಿಷ್‌ ಆಳ್ವಿಕೆ ಕೊನೆಗೊಂಡ ನಂತರವೂ ಒಗ್ಗಟ್ಟಿನಿಂದ ಉಳಿಯುವ ಮೂಲಕ ಭಾರತವು ತನ್ನನ್ನು ತಪ್ಪು ಎಂದು ಸಾಬೀತುಪಡಿಸಿದೆ ಎಂದು ಭಾಗವತ್‌ ಸೂಚಿಸಿದರು.

(ಬ್ರಿಟಿಷ್‌ ಆಳ್ವಿಕೆಯಿಂದ) ಸ್ವಾತಂತ್ರ್ಯದ ನಂತರ, ನೀವು (ಭಾರತ) ಬದುಕಲು ಸಾಧ್ಯವಾಗುವುದಿಲ್ಲ ಮತ್ತು ವಿಭಜನೆಯಾಗುತ್ತೀರಿ ಎಂದು ವಿನ್ಸ್ಟನ್‌ ಚರ್ಚಿಲ್‌ ಒಮ್ಮೆ ಹೇಳಿದ್ದರು, ಆದರೆ ಇದು ಸಂಭವಿಸಲಿಲ್ಲ.ಈಗ ಇಂಗ್ಲೆಂಡ್‌ ಸ್ವತಃ ವಿಭಜನೆಯ ಹಂತಕ್ಕೆ ಬರುತ್ತಿದೆ, ಆದರೆ ನಾವು ವಿಭಜನೆಯಾಗುವುದಿಲ್ಲ. ನಾವು ಮುಂದುವರಿಯುತ್ತೇವೆ.

ನಾವು ಒಮ್ಮೆ ವಿಭಜನೆಯಾಗಿದ್ದೆವು, ಆದರೆ ನಾವು ಅದನ್ನು ಮತ್ತೆ ಒಂದುಗೂಡಿಸುತ್ತೇವೆ ಎಂದು ಅವರು ಹೇಳಿದರು.ಜಗತ್ತು ನಂಬಿಕೆ ಮತ್ತು ನಂಬಿಕೆಯ ಮೇಲೆ ನಡೆಯುತ್ತಿದ್ದರೆ, ಭಾರತವು ಕ್ರಿಯಾಶೀಲ ಮತ್ತು ತರ್ಕಬದ್ಧ ಪುರುಷರೊಂದಿಗೆ ನಂಬಿಕೆಯ ಭೂಮಿಯಾಗಿದೆ ಎಂದು ಅವರು ಹೇಳಿದರು.ಇಂದು, ಮನುಷ್ಯನು ತುಂಬಾ ಜ್ಞಾನವನ್ನು ಗಳಿಸಿದ್ದಾನೆ, ಅವನು ಅನೇಕ ಕೆಲಸಗಳನ್ನು ನೇರವಾಗಿ ಮಾಡಲು ಪ್ರಾರಂಭಿಸಿದ್ದಾನೆ, ಆದರೆ ಮೊದಲು ನಾವು ಅಂತಹ ಕೆಲಸಗಳನ್ನು ನೇರವಾಗಿ ಮಾಡಲು ಸಾಧ್ಯವಾಗಲಿಲ್ಲ.

ಜ್ಞಾನ ಮತ್ತು ವಿಜ್ಞಾನದೊಂದಿಗೆ, ವಿನಾಶವೂ ಹೆಚ್ಚಾಗಿದೆ.ಅಭಿವೃದ್ಧಿ ಎಂದು ಕರೆಯಲ್ಪಡುವ ವಿಷಯ ನಡೆದಿದೆ, ಆದರೆ ಪರಿಸರವೂ ಹದಗೆಟ್ಟಿದೆ ಮತ್ತು ಕುಟುಂಬಗಳು ಒಡೆಯಲು ಪ್ರಾರಂಭಿಸಿವೆ. ಜನರು ತಮ್ಮ ಹೆತ್ತವರನ್ನು ರಸ್ತೆಯಲ್ಲೇ ತ್ಯಜಿಸುತ್ತಾರೆ (ನಿರ್ಲಕ್ಷಿತ ಸ್ಥಿತಿಯಲ್ಲಿ), ಎಂದು ಆರ್‌ಎಸ್‌‍ಎಸ್‌‍ ಮುಖ್ಯಸ್ಥ ವಿಷಾದಿಸಿದರು.

ಸಂಸ್ಕಾರ (ಮೌಲ್ಯಗಳು) ಇಲ್ಲದ ಕಾರಣ, ಹೊಸ ಪೀಳಿಗೆಯಲ್ಲಿ ಅಂತಹ ವಿಕೃತಿ ಬಂದಿದೆ, ಒಬ್ಬ ಹುಡುಗನಾಗಿ ಜನಿಸಿದ ವ್ಯಕ್ತಿಯು ತನ್ನನ್ನು ತಾನು ಹುಡುಗಿ ಎಂದು ಪರಿಗಣಿಸಿದರೆ, ಅವನ ಹೇಳಿಕೆಯನ್ನು ತಕ್ಷಣವೇ ಒಪ್ಪಿಕೊಳ್ಳಬೇಕು ಮತ್ತು ಅವನ ಧ್ವನಿಯನ್ನು ನಿಗ್ರಹಿಸಬಾರದು ಎಂಬ ಬೇಡಿಕೆ ಇದೆ ಎಂದು ಅವರು ಹೇಳಿದರು.ಭಾರತವು ಹಸುಗಳು, ನದಿಗಳು ಮತ್ತು ಮರಗಳ ಮೇಲಿನ ಗೌರವದ ಮೂಲಕ ಪ್ರಕೃತಿಯನ್ನು ಪೂಜಿಸುತ್ತದೆ ಎಂದು ಒತ್ತಿ ಹೇಳಿದ ಭಾಗವತ್‌‍, ಪ್ರಕೃತಿಯೊಂದಿಗಿನ ಈ ಸಂಬಂಧವು ಜೀವಂತ ಮತ್ತು ಪ್ರಜ್ಞಾಪೂರ್ವಕ ಅನುಭವವನ್ನು ಆಧರಿಸಿದೆ ಎಂದು ಹೇಳಿದರು.