Thursday, November 6, 2025
Home Blog Page 17

ಟ್ರಂಪ್‌ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಮಾಡಿದವರ ವಿರುದ್ಧ ಎಫ್‌ಐಆರ್‌

ಮುಂಬೈ, ಅ. 30 (ಪಿಟಿಐ) ಎನ್‌ಸಿಪಿ ಶಾಸಕ ರೋಹಿತ್‌ ಪವಾರ್‌ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ ತಯಾರಿಸುವುದನ್ನು ಮತ್ತು ನಕಲಿ ಮತದಾರರನ್ನು ನೋಂದಾಯಿ ಸಲು ಅದರ ಬಳಕೆಯನ್ನು ತೋರಿಸಿದ್ದು ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಅ. 16 ರಂದು ಪತ್ರಿಕಾಗೋಷ್ಠಿಯಲ್ಲಿ ಪವಾರ್‌ ಅವರು, ವೆಬ್‌ಸೈಟ್‌ನಲ್ಲಿ ನಕಲಿ ಆಧಾರ್‌ ಕಾರ್ಡ್‌ಗಳನ್ನು ಹೇಗೆ ತಯಾರಿಸಲಾ ಗುತ್ತಿದೆ ಮತ್ತು ನಕಲಿ ಮತದಾರರನ್ನು
ನೋಂದಾಯಿಸಲು ಬಳಸಲಾಗುತ್ತಿದೆ ಎಂಬುದನ್ನು ಪ್ರದರ್ಶಿಸಿದ್ದರು.

ಬಿಜೆಪಿಯ ಸಾಮಾಜಿಕ ಮಾಧ್ಯಮ ಕೋಶದ ಸಹ-ಸಂಚಾಲಕ ಧನಂಜಯ್‌ ವಾಗಸ್ಕರ್‌ ಅವರು ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ವಿಷಯವನ್ನು ವೀಕ್ಷಿಸಿದ್ದರು, ಅದರಲ್ಲಿ ಅವರ ಪಕ್ಷದ ಪದಾಧಿಕಾರಿಯ ವಿರುದ್ಧವೂ ಆರೋಪಗಳನ್ನು ಮಾಡಲಾಗಿದೆ.ಇದನ್ನು ಗಂಭೀರವಾಗಿ ಪರಿಗಣಿಸಿದ ವಾಗಸ್ಕರ್‌ ವೆಬ್‌ಸೈಟ್‌ನ ಗುರುತಿಸಲಾಗದ ಸೃಷ್ಟಿಕರ್ತ, ಮಾಲೀಕರು ಮತ್ತು ಬಳಕೆದಾರರು ಮತ್ತು ಇತರರ ವಿರುದ್ಧ ಪೊಲೀಸ್‌‍ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಫ್‌ಐಆರ್‌ ಪ್ರಕಾರ, ಭಾರತದಲ್ಲಿನ ಸ್ವಾಯತ್ತ ಸಂಸ್ಥೆ ಮತ್ತು ಅವರ ಪಕ್ಷದ (ಬಿಜೆಪಿ) ವಿರುದ್ಧ ಸಾರ್ವಜನಿಕರಲ್ಲಿ ಕೋಪ ಮತ್ತು ದ್ವೇಷವನ್ನು ಪ್ರಚೋದಿಸುವ ಮೂಲಕ ಸಾಮಾಜಿಕ ಭದ್ರತೆಗೆ ಅಪಾಯವನ್ನುಂಟುಮಾಡುವ ರಾಜಕೀಯ ನಾಯಕನಿಂದ ವಂಚನೆಯ ಕೃತ್ಯ ಎಸಗಲಾಗಿದೆ ಎಂದು ದೂರುದಾರರು ಹೇಳಿದ್ದಾರೆ.

ನಕಲಿ ವೆಬ್‌ಸೈಟ್‌‍ ಮೂಲಕ ನಕಲಿ ಆಧಾರ್‌ ಕಾರ್ಡ್‌ಗಳನ್ನು ಸೃಷ್ಟಿಸುವ ಮೂಲಕ, ಸಮಾಜದಲ್ಲಿ ಎರಡು ಗುಂಪುಗಳ ನಡುವೆ ದಾರಿತಪ್ಪಿಸುವ ಮತ್ತು ವೈಷಮ್ಯ ಮತ್ತು ದ್ವೇಷವನ್ನು ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.ದೂರಿನ ಆಧಾರದ ಮೇಲೆ, ಇಲ್ಲಿನ ಸೈಬರ್‌ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ವಿಭಾಗಗಳ ಅಡಿಯಲ್ಲಿ ನಕಲಿ, ಗುರುತಿನ ಕಳ್ಳತನ, ಸುಳ್ಳು ಮಾಹಿತಿ ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿಯ ಪ್ರತಿಕೂಲ ಫಲಿತಾಂಶಗಳ ನಂತರ, ನಕಲಿ ಮತದಾರರ ನೋಂದಣಿ, ನಿಜವಾದ ಮತದಾರರ ಸಾಮೂಹಿಕ ಅಳಿಸುವಿಕೆ ಮತ್ತು ಮತದಾರರ ಡಬಲ್‌ ನೋಂದಣಿಯಂತಹ ದುಷ್ಕೃತ್ಯಗಳು ನಡೆದಿವೆ ಎಂದು ರೋಹಿತ್‌ ಪವಾರ್‌ ಅಕ್ಟೋಬರ್‌ 16 ರಂದು ಆರೋಪಿಸಿದ್ದರು.

ಅನುಕೂಲಕರ ಮತದಾರರನ್ನು ಸತ್ತವರು ಎಂದು ತೋರಿಸಲಾಗಿದೆ ಮತ್ತು ಸತ್ತ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಮತದಾನ ನಡೆದಿದೆ ಎಂದು ಪವಾರ್‌ ಹೇಳಿದ್ದಾರೆ.2019 ಮತ್ತು 2024 ರ ಲೋಕಸಭಾ ಚುನಾವಣೆಯ ನಡುವೆ, 32 ಲಕ್ಷ ಮತದಾರರನ್ನು ಸೇರಿಸಲಾಯಿತು, ಇದು ವರ್ಷಕ್ಕೆ 6.5 ಲಕ್ಷ ಮತದಾರರು ಅಥವಾ ತಿಂಗಳಿಗೆ 54,000 ಮತದಾರರ ಸೇರ್ಪಡೆಗೆ ಸಮನಾಗಿತ್ತು. ಆದರೆ 2024 ರ ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಡುವೆ, ಕೇವಲ ಆರು ತಿಂಗಳಲ್ಲಿ 48 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಎನ್‌ಸಿಪಿ (ಎಸ್‌‍ಪಿ) ನಾಯಕ ಹೇಳಿದ್ದರು.

ಮಹಾರಾಷ್ಟ್ರದ ತಮ್ಮ ಸ್ವಂತ ಕರ್ಜತ್‌ ಜಮ್‌ಖೇಡ್‌‍ ವಿಧಾನಸಭಾ ಕ್ಷೇತ್ರದಲ್ಲಿ, ಲೋಕಸಭಾ ಚುನಾವಣೆಯ ನಂತರ 14,292 ಮತದಾರರು ಸೇರ್ಪಡೆಗೊಂಡರು, 5,360 ಹೆಸರುಗಳನ್ನು ಅಳಿಸಲಾಗಿದೆ ಮತ್ತು 14,162 ನಕಲಿ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.ಒಂದು ಕ್ಷೇತ್ರದ ಮತದಾರರ ಆಧಾರ್‌ ಕಾರ್ಡ್‌ ಅನ್ನು ಬೇರೆ ಕ್ಷೇತ್ರದಲ್ಲಿ ಮತ್ತೊಂದು ಮತದಾರರ ನೋಂದಣಿಗೆ ಫೋಟೋ ಮತ್ತು ಹೆಸರನ್ನು ಬದಲಾಯಿಸಿದ ನಿದರ್ಶನಗಳಿವೆ ಎಂದು ಎನ್‌ಸಿಪಿ (ಎಸ್‌‍ಪಿ) ಶಾಸಕರು ಆರೋಪಿಸಿದ್ದರು.

ಕನ್ನಡ ರಾಜ್ಯೋತ್ಸವಕ್ಕೆ ಸಂಭ್ರಮಾಚರಣೆಗೆ ಕಂಠೀರವ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ

ಬೆಂಗಳೂರು, ಅ.30- ಕಂಠೀರವ ಕ್ರೀಡಾಂಗಣದಲ್ಲಿ ಈ ಬಾರಿಯ 70ನೇ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಕ್ಕಿಂತ ಚೆನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ವರ್ಷ 1700 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಸರ್ಕಾರಿ ಮಕ್ಕಳು ಭಾಗವಹಿಸಲಿದ್ದಾರೆ ಎಂದರು.

ಮೊದಲಿನಿಂದಲೂ ಶಿಕ್ಷಣ ಇಲಾಖೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಮಕ್ಕಳ ಜೊತೆ ಪೋಷಕರಿಗೂ ಅವಕಾಶ ಕಲ್ಪಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ವರ್ಷ ತುಂಬಾ ಚೆನ್ನಾಗಿ ಆಯೋಜನೆ ಮಾಡಿದ್ದೆವು. ಕರ್ನಾಟಕ ಪಬ್ಲಿಕ್‌ ಶಾಲೆಯ ಮಕ್ಕಳು ಸಹ ಪಾಲ್ಗೊಳ್ಳುತ್ತಾರೆ. ರಾಜ್ಯದಲ್ಲಿ 800 ಕೆಪಿಎಸ್ಸಿಶಾಲೆಗಳು ಇವೆ. ಗ್ರಾಮೀಣ ಭಾಗದ ಮಕ್ಕಳಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗೆ ಎಲ್ಲಾ ತರಹದ ಶಿಕ್ಷಣ ಸಿಗಬೇಕು ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳಿಗೆ ಹೆಚ್ಚು ಒತ್ತು ಕೊಡಬೇಕು. ಸರ್ಕಾರಿ ಶಾಲೆಗಳಿಗೆ ಹೆಚ್ಚು ದಾಖಲಾತಿ ಅಭಿಯಾನ ಆಗಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಫಲಿತಾಂಶ ಬರುವಂತೆ ತಯಾರಿ ಮಾಡಿದ್ದೇವೆ. ಮಕ್ಕಳಿಗೆ ಗುಣಾತಕ ಶಿಕ್ಷಣ ಸಿಗಬೇಕು. ಶಾಲಾ ಮಕ್ಕಳು ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಲವು ಮಹತ್ವದ ಘೋಷಣೆಗಳನ್ನು ನವೆಂಬರ್‌ ಒಂದರಂದ ಮುಖ್ಯಮಂತ್ರಿ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ನವೆಂಬರ್‌ ಒಂದರಂದು ಬೆಳಿಗ್ಗೆ 9.30ಗಂಟೆಗೆ ಧ್ವಜಾರೋಹಣ ಮಾಡಲಾಗುತ್ತದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್‌ ಹೊರಟ್ಟಿ ಅವರು, ತೇರ್ಗಡೆಯ ಅಂಕ ಇಳಿಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಬರೆದಿರುವ ಪತ್ರ ಇನ್ನೂ ನನಗೆ ತಲುಪಿಲ್ಲ. ಮಾಧ್ಯಮದಲ್ಲಿ ಅವರು ಬರೆದ ಪತ್ರ ನೋಡಿದ್ದೇನೆ. ಶಿಕ್ಷಣದಲ್ಲಿ ಕೆಲ ಬದಲಾವಣೆ ತರುವ ವಿಚಾರವಾಗಿ ದುಂಡು ಮೇಜಿನ ಸಭೆ ನಡೆಸಲಾಗಿತ್ತು. ಪೋಷಕರು, ಶಿಕ್ಷಣ ತಜ್ಞರು, ಖಾಸಗಿ ಶಾಲಾ ಒಕ್ಕೂಟದವರ ಜೊತೆ ಚರ್ಚೆ ಮಾಡಿದ್ದೇವೆ. ತೇರ್ಗಡೆಯ ಅಂಕವನ್ನು ಶೇ. 35 ರಿಂದ ಶೇ.33 ಕ್ಕೆ ಇಳಿಕೆ ಮಾಡುವುದರಿಂದ ತುಂಬಾ ಅನುಕೂಲವಾಗಲಿದೆ ಎಂದರು.

ಇದು ಇಲಾಖೆ ಮತ್ತು ನಾವು ಮಾಡಿರುವಂತ ಆದೇಶ ಆಲ್ಲ. ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಆಧಾರದ ಮೇಲೆ ಈ ನಿರ್ಧಾರ ಮಾಡಲಾಗಿದೆ. ಸಭೆಯಲ್ಲಿ ಬಸವರಾಜ್‌ ಹೊರಟ್ಟಿ ಕೂಡ ಭಾಗವಹಿಸಿದ್ದರು. ರಾಜ್ಯದಲ್ಲಿ ನಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 33 ಸಾವಿರ ಖಾಯಂ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಇತ್ತೀಚೆಗೆ ಟಿಇಟಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ 51 ಸಾವಿರ ಶಿಕ್ಷಕರ ಕೊರತೆ ಇದೆ. ಹೀಗಾಗಿ ಅತಿಥಿ ಶಿಕ್ಷಕರನ್ನ ಕೂಡ ನೇಮಕ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ ಎಂದರು.

ಹಾಲಿ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಕಡ್ಡಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಹಾಲಿ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಕಡ್ಡಾಯ ಮಾಡಲಾಗಿದ್ದು, ಐದು ವರ್ಷದೊಳಗೆ ಹಾಲಿ ಶಿಕ್ಷಕರು ಟಿಇಟಿ ಪರೀಕ್ಷೆ ಪಾಸ್‌‍ ಮಾಡಿಕೊಳ್ಳಬೇಕು. ಸುಪ್ರೀಂ ಕೋರ್ಟ್‌ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ. ಇದು ದೇಶಾದ್ಯಂತ ಇರುವ ಶಾಲೆಗಳಿಗೆ ಅನ್ವಯಿಸಲಿದೆ. ನಮ ರಾಜ್ಯದಲ್ಲಿ ಟಿಇಟಿ ವಿರೋಧಿಸಿ ಶಿಕ್ಷಕರ ಸಂಘ ದೆಹಲಿ ಚಲೋ ಹಮಿಕೊಂಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ವಿದೇಶಗಳಿಂದ ಭಾರತಕ್ಕೆ ಮರಳಿ ಬಂತು 64 ಟನ್‌ ಚಿನ್ನ

ಮುಂಬೈ, ಅ.30– ಜಾಗತಿಕ ಹಣಕಾಸು ವಾಸ್ತವಿಕತೆಗಳತ್ತ ಪಲ್ಲಟಗೊಳ್ಳುತ್ತಿರುವುದರ ಕುರುಹಾಗಿ ಕಾರ್ಯತಂತ್ರಾತಕ ಕ್ರಮವೊಂದರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) 2025ರ ಮಾರ್ಚ್‌ನಿಂದ ಸೆಪ್ಟೆಂಬರ್‌ ನಡುವೆ ಸುಮಾರು 64 ಟನ್‌ ಚಿನ್ನವನ್ನು ತನ್ನ ದೇಶೀಯ ಮಾರುಕಟ್ಟೆಗೆ ಹರಿಸಿದೆ.

ತನೂಲಕ ಭಾರತದೊಳಗಡೆ ಇರುವ ಚಿನ್ನದ ಪ್ರಮಾಣವನ್ನು 545.8 ಟನ್‌ಗಳಿಗೆ ಹೆಚ್ಚಿಸಿದೆ.
ವಿದೇಶಗಳಲ್ಲಿ ದಾಸ್ತಾನಿರುವ ಸಾರ್ವಭೌಮ ಆಸ್ತಿಗಳ ಭದ್ರತೆ ಕುರಿತು ಆತಂಕಗಳು ಹೆಚ್ಚುತ್ತಿರುವ ನಡುವೆ ಮತ್ತು ಭೂ ರಾಜಕೀಯ ಒತ್ತಡಗಳ ನಿವಾರಣೆಗೆ ದೇಶಗಳು ಶಸ್ತಾಸ ಹಣಕಾಸು ವ್ಯವಸ್ಥೆಯನ್ನು ಹೆಚ್ಚಿಸುತ್ತಿರುವ ನಡುವೆ ಆರ್‌ಬಿಐ ಈ ಕ್ರಮ ಕೈಗೊಂಡಿದೆ.

2025ರ ಸೆಪ್ಟೆಂಬರ್‌ನ ಕೊನೆಯಲ್ಲಿರುವಂತೆ ಭಾರತದ ಚಿನ್ನದ ದಾಸ್ತಾನು 880.8 ಟನ್‌ಗಳು. ಇವುಗಳ ಪೈಕಿ 240.3 ಟನ್‌ಗಳು ಬ್ಯಾಂಕ್‌ ಆ್‌‍ ಇಂಗ್ಲೆಂಡ್‌ ಮತ್ತು ಬ್ಯಾಂಕ್‌ ಆ್‌‍ ಇಂಟರ್‌ನ್ಯಾಷನಲ್‌ ಸೆಟಲ್‌ಮೆಂಟ್‌(ಬಿಐಎಸ್‌‍) ಸುಪರ್ದಿಯಲ್ಲಿದ್ದರೆ, ಇತರ 14 ಟನ್‌ಗಳು ಜಾಗತಿಕ ಠೇವಣ ಯೋಜನೆಗಳಲ್ಲಿವೆ. ಹೀಗೆ ದೇಶೀಯವಾಗಿ ಚಿನ್ನದ ದಾಸ್ತಾನು ಕಳೆದ 18 ತಿಂಗಳುಗಳಲ್ಲಿ ಗಣನೀಯವಾಗಿ ಹೆಚ್ಚಿದೆ ಎಂದು ಆರ್‌ಬಿ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶ ತಿಳಿಸಿದೆ.

ಈ ಪ್ರಯತ್ನವು 2023ರಲ್ಲಿ ಪ್ರಾರಂಭವಾಗಿದ್ದು 2023ರ ಮಾರ್ಚ್‌ನಿಂದೀಚೆಗೆ ಆರ್‌ಬಿಐ274 ಟನ್‌ ಚಿನ್ನವನ್ನು ಮರಳಿ ಭಾರತಕ್ಕೆ ತಂದಿದೆ. ಸಾಗರದಾಚೆಯ ಮೀಸಲುಗಳ ಸುರಕ್ಷತೆಯನ್ನು ಮರು ಅಂದಾಜಿಸುವ ಉದಯೋನುಖ ಆರ್ಥಿಕತೆಗಳ ವ್ಯಾಪಕ ಪ್ರವೃತ್ತಿಯ ಭಾಗ ಇದಾಗಿದೆ.

ಜಾಗತಿಕವಾಗಿ ಚಿನ್ನದ ಬೆಲೆ ಅಭೂತಪೂರ್ವವಾಗಿ ಏರಿಕೆ ಕಂಡಿರುವ ಕಾರಣ ಭಾರತದಲ್ಲಿ ದಾಸ್ತಾನಿರುವ ಚಿನ್ನದ ಬೆಲೆಯೂ ಹೆಚ್ಚಳವಾಗಿದೆ. 2025ರಲ್ಲಿ ಚಿನ್ನದ ಬೆಲೆಗಳು ಶೇ.50ಕ್ಕಿಂತ ಹೆಚ್ಚಾಗಿದ್ದು, ಔನ್‌್ಸಗೆ 4.381 ಡಾಲರ್‌ಗಳ ಸಾರ್ವಕಾಲೀಕ ಹೆಚ್ಚಳ ದಾಖಲಿಸಿದೆ. ಈ ಹೆಚ್ಚಳವು ಪ್ರಸಕ್ತ ಹಣಕಾಸು ವರ್ಷದ ಪ್ರಾರಂಭದಿಂದ ಭಾರತದ ಚಿನ್ನದ ಮೀಸಲು ಮೌಲ್ಯವನ್ನು 31 ಶತಕೋಟಿ ಡಾಲರ್‌ಗಳಿಗೊಯ್ದಿದೆ. ಮಾರ್ಚ್‌ ಅಂತ್ಯಕ್ಕೆ 77 ಶತಕೋಟಿ ಡಾಲರ್‌ ಇದ್ದ ಈ ಬೆಲೆಯನ್ನು ಅಕ್ಟೋಬರ್‌ ನಡುವಿನಲ್ಲಿ 108 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸಿದೆ.

ಆರ್‌ಬಿಐ ಪಾವತಿ ಶಿಲ್ಕಿನ ಪ್ರಕಾರ ಈಗ ಭಾರತದ ವಿದೇಶೀ ವಿನಿಮಯದಲ್ಲಿ ಚಿನ್ನ ಶೇ.9ರಷ್ಟು ಪಾಲು ಹೊಂದಿದೆ. ಕಳೆದ ವರ್ಷ ಇದು ಶೇ.4ರಷ್ಟಿತ್ತು. ಸುಮಾರು 579 ಶತ ಕೋಟಿ ಡಾಲರ್‌ಗಳಿಷ್ಟಿದ್ದ ಆರ್‌ಬಿಐ ವಿದಶೀ ಕರೆನ್ಸಿ ಆಸ್ತಿಗಳನ್ನು ಪ್ರಾಥಮಿಕವಾಗಿ ಷೇರುಗಳು, ಇತರ ಕೇಂದ್ರ ಬ್ಯಾಂಕ್‌ಗಳು ಮತ್ತು ಬಿಐಎಸ್‌‍ನಲ್ಲಿ ಮತ್ತು ಇತರ ಸಾಗರೋತ್ತರ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದೆ.

ಅಧಿಕೃತ ದತ್ತಾಂಶದ ಪ್ರಕಾರ 489.54 ಶತ ಕೋಟಿ ಡಾಲರ್‌ಗಳಷ್ಟು ವಿದೇಶೀ ಆಸ್ತಿಗಳನ್ನು ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ. 46.11 ಶತಕೋಟಿ ಡಾಲರ್‌ಗಳಷ್ಟು ಆಸ್ತಿಯನ್ನು ಇತರ ಕೇಂದ್ರ ಬ್ಯಾಂಕ್‌ಗಳು ಮತ್ತು ಬಿಐಎಸ್‌‍ನಲ್ಲಿ ಹೂಡಲಾಗಿದೆ. ಇತರ 43.53 ಶತಕೋಟಿ ಡಾಲರ್‌ಗಳನ್ನು ಸಾಗರದಾಚೆಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ.

ಏತನಧ್ಯೆ ಈ ಬೆಳವಣಿಗೆಗಳು ದೇಶೀಯ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ. ಬಹುವಸ್ತು ವಿನಿಮಯ(ಎಂಸಿಆರ್‌) ಕೇಂದ್ರದಲ್ಲಿ ಅಕ್ಟೋಬರ್‌ ಅಂತ್ಯದ ವೇಳೆಗೆ ಚಿನ್ನದ ಬೆಲೆಗಳು 10 ಗ್ರಾಂಗೆ ಸುಮಾರು 1.20 ಲಕ್ಷ ರೂ.ಗಳ ಗಗನ ಚುಂಬಿ ದರ ದಾಖಲಿಸಿದೆ. ಬೆಳ್ಳಿ ಬೆಲೆಗಳು ಸಹ ಅಧಿಕವಾಗಿದ್ದು, ಕೆಜಿಗೆ ರೂ.1.45 ಲಕ್ಷಕ್ಕೇರಿದೆ.

ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗಿಯಾದ 4 ಶಿಕ್ಷಕರಿಗೆ ನೋಟೀಸ್‌‍

ಬೆಂಗಳೂರು,ಅ.30- ಆರ್‌ಎಸ್‌‍ಎಸ್‌‍ ಹಾಗೂ ಸರ್ಕಾರದ ನಡುವಿನ ಜಟಾಪಟಿ ಬೆನ್ನಲ್ಲೇ, ಬೀದರ್‌ ಜಿಲ್ಲೆಯ ಔರಾಧ್‌ ತಾಲ್ಲೂಕಿನಲ್ಲಿ ಅ. 7 ಮತ್ತು 13 ರಂದು ನಡೆದ ಪಥ ಸಂಚಲನದಲ್ಲಿ ಭಾಗವಹಿಸಿದ್ದ ನಾಲ್ವರು ಶಿಕ್ಷಕರಿಗೆ ಕಾರಣ ಕೇಳಿ ಕ್ಷೇತ್ರ ಶಿಕ್ಷಣಾಧಿಕಾರಿ ನೋಟೀಸ್‌‍ ಜಾರಿ ಮಾಡಿದ್ದಾರೆ.

ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರದ ಈ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ. ಅ. 7, 13ರಂದು ಔರಾಧ್‌ನಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನ ನಡೆದಿತ್ತು. ಶಿಕ್ಷಕರಾದ ಮಹದೇವ, ಶಾಲಿವಾನ್‌, ಪ್ರಕಾಶ್‌ ಮತ್ತು ಸತೀಶ್‌ ಭಾಗವಹಿಸಿದ್ದರು. ನಾಲ್ಕು ಜನ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ನೋಟೀಸ್‌‍ ಜಾರಿ ಮಾಡಿದ್ದಾರೆ.

ದಲಿತ ಸೇನೆ ವತಿಯಿಂದ ಔರಾಧ್‌ (ಬಿ) ನ ಆದರ್ಶ ವಿದ್ಯಾಲಯದ ಸಹ ಶಿಕ್ಷಕ ಮಹಾದೇವ್‌ ಚಿಟಗಿರೆ, ಬಿ.ಆರ್‌.ಸಿ ಕಚೇರಿಯ ಸಿಬ್ಬಂದಿ ಶಾಲಿವಾನ್‌ ಉದಗಿರಿ ಹಾಗೂ ಎಕಂಬಾ ಗ್ರಾಮದ ಸಿ ಆರ್‌ ಪಿ ಪ್ರಕಾಶ್‌ ಬರದಾಪೂರೆ ಅವರ ವಿರುದ್ಧ ದೂರು ನೀಡಲಾಗಿತ್ತು.

ಹಾಗೆಯೇ ಬಹುಜನ ಸೇವಾ ಸಮಿತಿ ವತಿಯಿಂದ ಬಳತ್‌ (ಕೆ) ಸಹಿಪ್ರಾ ಶಾಲೆಯ ಸಹ ಶಿಕ್ಷಕ ಸತೀಶ್‌ ಮಾನಕಾರಿ ಅವರ ವಿರುದ್ಧ ದೂರು ನೀಡಲಾಗಿತ್ತು.ಜೊತೆಗೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ಆರೆಸ್ಸೆಸ್‌‍ ಪಥ ಸಂಚಲನದಲ್ಲಿ ತಾವು ಭಾಗಿಯಾಗಿರುವ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿವೆ. ತಾವು ಸರಕಾರಿ ನೌಕರರು ಆಗಿರುವದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ಸೇವಾ ನಿಯಮಗಳನ್ನು ಉಲ್ಲಂಸಿದ ಹಿನ್ನೆಲೆಯಲ್ಲಿ ನೋಟೀಸ್‌‍ ನೀಡಲಾಗಿದೆ ಎಂದು ಔರಾಧ್‌(ಬಿ) ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹೇಳಿದ್ದಾರೆ.

ಬೀದರ ಜಿಲ್ಲೆಯ ಔರಾಧ್‌ ಬಿ ತಾಲೂಕಿನಲ್ಲಿ ಅಕ್ಟೋಬರ್‌ 7 ಮತ್ತು 13 ರಂದು ನಡೆದ ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ತಾವುಗಳು ಭಾಗಿಯಾಗಿರುತ್ತೀರಿ. ಈ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿರುವ ದೃಶ್ಯಗಳು ಕಂಡು ಬಂದಿರುತ್ತವೆ.

ತಾವುಗಳು ಸರಕಾರಿ ನೌಕರರು ಆಗಿರುವುದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ತಾವುಗಳು ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗವಹಿಸಿ ಸರಕಾರದ ಸೇವಾ ನಿಬಂಧನೆಗೆ ವಿರುದ್ದವಾಗಿ ಕರ್ತವ್ಯ ಮಾಡಿರುವಿರಿ.

ಈ ಪ್ರಯುಕ್ತ ತಾವುಗಳು ಈ ನೋಟಿಸ್‌‍ ತಲುಪಿದ ಬಳಿಕ ಕಾರಣ ಕೇಳುವ ನೋಟೀಸ್‌‍ಗೆ ಲಿಖಿತ ಹೇಳಿಕೆಯನ್ನು ನೀಡಿ ಖುದ್ದಾಗಿ ಬಂದು ಈ ಕಚೇರಿಗೆ ಸಲ್ಲಿಸುವುದು. ಇಲ್ಲವಾದಲ್ಲಿ ಏಕಪಕ್ಷೀಯವಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ. ನಿಯಂತ್ರಣ ಮತ್ತು ಮೇಲನವಿ) ನಿಯಮಗಳು-1957ರನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುದೆಂದು ನೋಟಿಸ್‌‍ನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿಗರೇ ಜೋಕೆ, ಕಂಡ ಕಂಡಲ್ಲಿ ಕಸ ಎಸೆದವರ ಮನೆ ಬಾಗಿಲಲ್ಲಿ ಬಿತ್ತು ಕಸದ ರಾಶಿ..!

ಬೆಂಗಳೂರು, ಅ.30- ಕಂಡ ಕಂಡಲ್ಲಿ ಕಸ ಎಸೆಯಬೇಡಿ ಎಂದು ಬೊಬ್ಬೆ ಹೊಡೆದುಕೊಂಡರೂ ಕೇಳಿಸಿಕೊಳ್ಳದ ಸಿಲಿಕಾನ್‌ ಸಿಟಿಯ ಜನಕ್ಕೆ ತಕ್ಕ ಪಾಠ ಕಲಿಸಲು ಜಿಬಿಎ ಮುಂದಾಗಿದೆ. ಯಾರು ರಸ್ತೆಯಲ್ಲಿ ಕಸ ಎಸೆದು ಏನು ತಿಳಿಯದವರಂತೆ ಮನೆಗಳಿಗೆ ಹೋಗಿರುತ್ತಾರೋ ಅಂತವರನ್ನು ಪತ್ತೆ ಹಚ್ಚಿ ಅವರ ಮನೆ ಬಾಗಿಲಿಗೆ ಕಸ ಸುರಿದು ಬಿಸಿ ಮುಟ್ಟಿಸುವ ಅಭಿಯಾನಕ್ಕೆ ಇಂದಿನಿಂದ ಚಾಲನೆ ನೀಡಲಾಗಿದೆ.

ಈ ಹಿಂದಿನ 198 ಬಿಬಿಎಂಪಿ ವಾರ್ಡ್‌ಗಳಲ್ಲೂ ಈ ಅಭಿಯಾನ ನಡೆಸಲಾಗುತ್ತಿದ್ದು, ರಸ್ತೆಗಳಲ್ಲಿ ಕಸ ಎಸೆದವರನ್ನು ಪತ್ತೆ ಹಚ್ಚಿ ಅವರ ಮನೆ ಬಾಗಿಲಿಗೆ ಕಸ ಸುರಿಯುವ ಕಾರ್ಯವನ್ನು ಮಾರ್ಷಲ್‌ಗಳು ಆರಂಭಿಸಿದ್ದಾರೆ.

ರಸ್ತೆ ಬದಿಯಲ್ಲಿ ಕದ್ದು ಕಸ ಎಸೆದು ಹೋಗುವವರ ವಿಡಿಯೋ ಚಿತ್ರಿಕರಿಸಿದ ಮಾರ್ಷಲ್‌ಗಳು ಇಂದು ಅದೇ ವ್ಯಕ್ತಿಗಳ ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸುತ್ತಿದ್ದಾರೆ. ತಾವು ಮಾಡಿದ ತಪ್ಪಿಗೆ ದಂಡ ಪಾವತಿಸುವವರಿಗೆ ಇನ್ನು ಮುಂದೆ ಕಂಡ ಕಂಡಲ್ಲಿ ಕಸ ಎಸೆಯಬೇಡಿ ಎಂದು ಬುದ್ಧಿಮಾತು ಹೇಳಿ ತಾವು ಸುರಿದ ಕಸವನ್ನು ಮತ್ತೆ ವಾಪಸ್‌‍ ತೆಗೆದುಕೊಂಡು ಹೋಗಲಾಗುತ್ತಿದೆ.

ಮನೆ ಮುಂದೆ ಕಸದ ವಾಹನಗಳು ಬಂದರೂ ಕಸ ನೀಡದೆ ರಸ್ತೆ ಬದಿಯಲ್ಲಿ ಕಸ ಎಸೆದು ಪರಾರಿಯಾಗುವವರನ್ನೇ ಟಾರ್ಗೆಟ್‌ ಮಾಡಿಕೊಂಡು ಈ ವಿನೂತನ ಯೋಜನೆಯನ್ನು ಜಿಬಿಎ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ.

ಕಳೆದ ಒಂದು ತಿಂಗಳಿಂದ ಪ್ರತಿ ವಾರ್ಡನಲ್ಲಿ ರಸ್ತೆ ಮೂಲೆಯಲ್ಲಿ ಕಸ ಎಸೆದ ಜನರ ವಿಡಿಯೋ ಮಾಡಲಾಗಿದೆ. ಈಗಾಗಲೇ 198 ವಾರ್ಡಗಳಲ್ಲಿ 198 ಕಸ ಎಸೆಯೋ ಜನರನ್ನು ಗುರುತಿಸಿಸಲಾಗಿತ್ತು. ಹೀಗೆ ರಸ್ತೆ ಬದಿ ಹಾಗೂ ಎಲ್ಲೇಂದರಲ್ಲಿ ಕಸ ಎಸೆದ ಮನೆಗಳ ಮುಂದೆ ಕಸ ಸುರಿದು ಜಾಗೃತಿ ಮೂಡಿಸಲಾಗುತ್ತಿದೆ.

ನ.28ಕ್ಕೆ ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಬೆಂಗಳೂರು,ಅ.30- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ. 28 ರಂದು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಇತಿಹಾಸ ಪ್ರಸಿದ್ಧ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಆಗಮಿಸುವ ಅವರು ದೇವರ ದರ್ಶನ ಪಡೆದು, ಪೂಜ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಈ ಭೇಟಿಯು ಕರ್ನಾಟಕದಲ್ಲಿ ಆಧ್ಯಾತಿಕ ಮತ್ತು ಸಾಂಸ್ಕೃತಿಕ ಪರಂಪರೆ ಆಚರಿಸುವ ಪ್ರಾಚೀನ ಮಠದ ಬಗ್ಗೆ ರಾಷ್ಟ್ರೀಯ ಗಮನ ಸೆಳೆಯುವ ಮಹತ್ವದ ಸಂದರ್ಭವಾಗಿದೆ. ಮೋದಿ ಅವರು, ಲಕ್ಷ ಗೀತ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಒಗ್ಗಟ್ಟಿನಿಂದ ಭಗವದ್ಗೀತೆಯನ್ನು ಪಠಿಸಲಿದ್ದಾರೆ. ಮೋದಿ ಕೃಷ್ಣ ದೇವಸ್ಥಾನಕ್ಕೂ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆಯಲಿದ್ದಾರೆ.

ಪ್ರಧಾನಮಂತ್ರಿ ಕಚೇರಿಯು ಪ್ರಧಾನಿ ಮೋದಿಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ, ಮಠದ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತದಿಂದ ಅಗತ್ಯ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿದೆ. ಭದ್ರತಾ ವ್ಯವಸ್ಥೆಗಳು ಮತ್ತು ಇತರ ಅಗತ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.ಗೀತಾ ಜಯಂತಿ ಅಂಗವಾಗಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ-ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿ ಕಚೇರಿ ಈ ಭೇಟಿಯನ್ನು ಖಚಿತಪಡಿಸಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಲಿದ್ದಾರೆ. ಬಳಿಕ, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಶ್ರೀಕೃಷ್ಣ ಮಠಕ್ಕೆ ಭೇಟಿ ವೇಳೆ ಪ್ರಧಾನಿ ಭಕ್ತರೊಂದಿಗೆ ಸಂವಹನ ನಡೆಸುವ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವ ಮತ್ತು ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ. ನಿರೀಕ್ಷಿತ ಹೆಚ್ಚಿನ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಮಠದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಭೇಟಿಯ ಪ್ರಾಮುಖ್ಯದ ದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸಂಸ್ಥೆಗಳ ನಡುವೆ ಭದ್ರತೆ ಮತ್ತು ವ್ಯವಸ್ಥಾಪನಾ ವ್ಯವಸ್ಥೆಗಳನ್ನು ಸಂಘಟಿಸಲಾಗುತ್ತಿದೆ.

ಸಿಎಂ ಆಗಿದ್ದಾಗ ಮೊದಲ ಭೇಟಿ ನೀಡಿದ್ದ ಮೋದಿ
ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆ ನರೇಂದ್ರ ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. 2008ರಲ್ಲಿ ಸಿಎಂ ಮೋದಿ ಶ್ರೀಕೃಷ್ಣನ ದರ್ಶನ ಪಡೆದಿದ್ದರು. ಇದೀಗ ಪ್ರಧಾನಿಯಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಮೊದಲನೇ ಭೇಟಿಯಾಗಿದ್ದರೆ, ಒಟ್ಟಾರೆ 2ನೇ ಭೇಟಿಯಾಗಿದೆ. ವಿಶೇಷ ಅಂದರೆ ಅಂದೂ ಕೂಡ ಇದೇ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮೋದಿ ಅವರನ್ನು ಸ್ವಾಗತಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದರು.

ಮಠದಲ್ಲಿರುವ ಕೃಷ್ಣ ವಿಗ್ರಹವನ್ನು 13ನೇ ಶತಮಾನದ ಮಧ್ವಾಚಾರ್ಯರು ಪ್ರತಿಷ್ಠಾಪಿಸಿದರು. ಅವರು ಉಡುಪಿಯನ್ನು ಈ ತತ್ತ್ವಶಾಸದ ಜಾಗತಿಕ ಕೇಂದ್ರವಾಗಿ ಸ್ಥಾಪಿಸಿದ ವೇದಾಂತದ ದ್ವೈತ (ದ್ವಂದ್ವ) ಶಾಲೆಯ ಸಂಸ್ಥಾಪಕರು.

ಮಾಜಿ ಸೈನಿಕನ ಮೇಲೆ ಪೊಲೀಸರಿಂದ ಹಲ್ಲೆ, ಕಮಿಷನರ್‌ಗೆ ದೂರು

ಬೆಂಗಳೂರು, ಅ.30- ಮಾಜಿ ಸೈನಿಕರ ಮೇಲೆ ದಬ್ಬಾಳಿಕೆ ನಡೆಸಿರುವ ಆವಲಹಳ್ಳಿ ಪೊಲೀಸರ ವಿರುದ್ಧ ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರಿಗೆ ದೂರು ನೀಡಲಾಗಿದೆ.
ಮಾಜಿ ಸೈನಿಕ ಎಂ.ಆರ್‌ ರತ್ನನೋಜಿ ರಾವ್‌ ಅವರ ಮೇಲೆ ವಿನಾಕಾರಣ ಹಲ್ಲೆ ನಡೆಸಿರುವ ಆವಲಹಳ್ಳಿ ಇನ್ಸ್ ಪೆಕ್ಟರ್‌ ರಾಮಕೃಷ್ಣಾರೆಡ್ಡಿ ಹಾಗೂ ಮತ್ತಿತರ ಪೊಲೀಸರ ವಿರುದ್ಧ ಕೆಪಿಸಿಸಿ ಮಾಜಿ ಸೈನಿಕರ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸ್ವರೂಪರಾಣಿ ಮತ್ತು ಮಾಜಿ ಸೈನಿಕ ಶಿವಾನಂದ ರೆಡ್ಡಿ ಮತ್ತಿತರ ಕೆಲವು ಸಂಘಟನೆಗಳ ಕಾರ್ಯಕರ್ತರ ನೇತೃತ್ವದಲ್ಲಿ ಕಮಿಷನರ್‌ ಅವರಿಗೆ ದೂರು ನೀಡಿದ್ದಾರೆ.

ಏನೀದು ಘಟನೆ; ಕಂಪೌಂಡ್‌ ತೆರವು ವಿಚಾರ ಕುರಿತಂತೆ ಮಂಡೂರಿನಲ್ಲಿ ನೆಲೆಸಿರುವ ಪ್ಯಾರಾಚೂಟ್‌ ಕಮಾಂಡ್‌ ಸ್ಪೆಷಲ್‌ ಫೋರ್ಸ್‌ನಲ್ಲಿ ಹದಿನೆಂಟು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರತ್ನನೋಜಿ ರಾವ್‌ ಅವರನ್ನು ಠಾಣೆಗೆ ಕರೆಸಿಕೊಂಡು ಅವಹೇಳನಕಾರಿಯಾಗಿ ನಡೆಸಿಕೊಂಡಿದ್ದೇ ಅಲ್ಲದೆ ಅವರ ಮೇಲೆ ರಾಮಕೃಷ್ಣಾರೆಡ್ಡಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ರತ್ನನೋಜಿ ರಾವ್‌ ಅವರಿಗೆ ಸೇರಿದ ಜಮೀನಿನಲ್ಲಿ ಗುಲಾಬಿ ಗಿಡಗಳನ್ನು ನಾಶಪಡಿಸಿದ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಪೊಲೀಸರು ಶ್ರೀನಿವಾಸ್‌‍ ರಾವ್‌ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಮಾಜಿ ಸೈನಿಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಹೀಗಾಗಿ ಮಾಜಿ ಸೈನಿಕನ ಮೇಲೆ ದರ್ಪ ತೋರಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೂರುದಾರರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಉತ್ತೀರ್ಣ ಕನಿಷ್ಠ ಅಂಕ ಇಳಿಕೆ ಬೇಡ : ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು,ಅ.30- ಶಾಲಾ ವಿದ್ಯಾರ್ಥಿಗಳಿಗೆ ಕನಿಷ್ಠ ಉತ್ತೀರ್ಣ ಅಂಕಗಳನ್ನು 35ಕ್ಕೆ ತರುವಂತೆ ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರು ಆಗ್ರಹಿಸಿದ್ದಾರೆ.
33 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಉತ್ತೀರ್ಣರೆಂದು ಪರಿಗಣಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಈ ಹಿಂದೆ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಹೊರಟ್ಟಿಯವರು 33 ಅಂಕದ ಬದಲಿಗೆ 35 ಅಂಕಗಳನ್ನೇ ನಿಗದಿಪಡಿಸಬೇಕು. ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಹಿಂದಿದ್ದ ನಿಯಮವೇ ಉತ್ತಮ ಎಂದು ಅವರು ಹೇಳಿದ್ದಾರೆ. ಜೊತೆಗೆ, ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹ್ದುೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಬಂಗಾರಪ್ಪ ಅವರ ನಿರ್ಧಾರ ದುರದೃಷ್ಟಕರ.ಸ್ಪರ್ಧಾತಕ ಜಗತ್ತಿನಲ್ಲಿ ಯಾವುದೇ ವಿದ್ಯಾರ್ಥಿ ಪರೀಕ್ಷೆಗಳನ್ನು ಎದುರಿಸುವುದು ಮುಖ್ಯ. ಅಂಕಗಳನ್ನು ಗಳಿಸುವುದು ಪರೀಕ್ಷೆಗಳ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದ್ದರೂ, ಇದು ವಿದ್ಯಾರ್ಥಿಯು ತನ್ನ ಗಮನ, ಧೈರ್ಯ, ಸರಣಶಕ್ತಿ, ಕಲಿಕಾ ಸಾಮರ್ಥ್ಯ ಮತ್ತು ಇತರ ಸಮಗ್ರ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ವಿದ್ಯಾರ್ಥಿಯ ಪ್ರತಿಭೆಯನ್ನು ಹೊರತರಲು ಸಹಾಯ ಮಾಡುತ್ತದೆ. ಇದು ಅವರ ಭವಿಷ್ಯಕ್ಕೆ ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ, 35 ಅಂಕಗಳನ್ನು ಬಹಳ ಹಿಂದಿನಿಂದಲೂ ನಿಗದಿಪಡಿಸಲಾಗಿದೆ. ಇದು ವೈಜ್ಞಾನಿಕ ಮಾನದಂಡವಾಗಿದೆ. ಅದನ್ನು 33 ಅಂಕಗಳಿಗೆ ಇಳಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇದ್ದ ಕನಿಷ್ಠ ಅಂಕಗಳನ್ನು 33ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಆದರೆ, ಈ ಪ್ರಸ್ತಾವನೆಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದರಿಂದ ನಾನಾ ರೀತಿಯ ವಿಚಾರಗಳನ್ನು ಕಲಿಯುತ್ತಾರೆ. ಅಲ್ಲಿ ಅವರ ಅಧ್ಯಯಶೀಲತೆ, ಕಲಿಕಾ ಕೌಶಲ್ಯ, ಏಕಾಗ್ರತೆ, ಧೈರ್ಯ, ಜ್ಞಾಪಕ ಶಕ್ತಿ, ತಿಳಿದುಕೊಂಡಿರುವ ವಿಷಯಗಳನ್ನು ಸ್ಫೋಟವಾಗಿ – ಪರಿಣಾಮಕಾರಿಯಾಗಿ ಬರೆಯುವುದು – ಇಂಥ ಎಲ್ಲಾ ವಿಷಯಗಳು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಉತ್ತಮ ಕಾಣಿಕೆಯನ್ನು ನೀಡುತ್ತದೆ.

ಹೀಗಿರುವಾಗ ನಾವು ಅಂಕಗಳನ್ನು ಇಳಿಕೆ ಮಾಡಿ ಅವರಿಗೆ ಪರೀಕ್ಷೆಯೆಂದರೆ ಅಸಡ್ಡೆ ಎಂಬಂಥ ಭಾವನೆಯನ್ನು ತರಬಾರದು. ಪಾಸಿಂಗ್‌ ಅಂಕಗಳು ಹೆಚ್ಚಿದ್ದಾಗ ಅವರು ಹೆಚ್ಚೆಚ್ಚು ಏಕಾಗ್ರತೆಯಿಂದ ಕಲಿತು ಶ್ರದ್ಧೆಯಿಂದ ಬರುತ್ತಾರೆ. ಪರೀಕ್ಷೆಗಳ ಬಗ್ಗೆ ಒಂದು ಶಿಸ್ತು ಮೂಡುತ್ತದೆ. ಹಾಗಾಗಿ, ಅಂಕಗಳನ್ನು ಇಳಿಕೆ ಮಾಡಬಾರದು ಎಂದು ಹೊರಟ್ಟಿಯವರು ಪತ್ರದಲ್ಲಿ ಕೋರಿದ್ದಾರೆ.

ಹ್ದುೆ ಭರ್ತಿ ಮಾಡಿ:
ಇದೇ ವೇಳೆ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹ್ದುೆಗಳನ್ನು ಭರ್ತಿ ಮಾಡುವಂತೆ ಪತ್ರದಲ್ಲಿ ಆಗ್ರಹಿಸಿರುವ ಹೊರಟ್ಟಿಯವರು, ಹಿಂದೆ ನಾನು ಶಿಕ್ಷಣ ಸಚಿವನಾಗಿದ್ದಾಗ ಶಿಕ್ಷಕರ ನೇಮಕಾತಿ ಮಾಡ್ದೆಿ. ಈಗ ಸಾವಿರಾರು ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿ ಆಗಬೇಕಿದೆ. ವಿದ್ಯಾರ್ಥಿಗ ಸಂಖ್ಯೆ ಹೆಚ್ಚಿರುವುದರಿಂದ ಅದಕ್ಕೆ ಸೂಕ್ತವಾದ ಸಂಖ್ಯೆಯಲ್ಲಿ ಶಿಕ್ಷಕರು ಬೇಕು. ಹಾಗಾಗಿ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಬೇಗನೇ ಆರಂಭಿಸಬೇಕು ಎಂದು ಮಧು ಬಂಗಾರಪ್ಪನವರನ್ನು ಕೋರಿದ್ದಾರೆ.

ಹೆಚ್‌ಡಿಕೆ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ : ಡಿಕೆಶಿ ವಿರುದ್ಧ ಜೆಡಿಎಸ್‌‍ ಪ್ರತಿಭಟನೆ

ಬೆಂಗಳೂರು, ಅ.30- ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಬಗ್ಗೆ ಉಪ ಮುಖ್ಯಮಂತ್ರಿಡಿ.ಕೆ.ಶಿವಕುಮಾರ್‌ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಜೆಡಿಎಸ್‌‍ ಸ್ವಾತಂತ್ರ್ಯ ಉದ್ಯಾನವನದ ಬಳಿ ಪ್ರತಿಭಟನೆ ನಡೆಸಿತು.

ಬೆಂಗಳೂರು ಮಹಾನಗರ ಜೆಡಿಎಸ್‌‍ ಯುವ ಘಟಕದ ಅಧ್ಯಕ್ಷ ಸ್ಯಾಮುಯಲ್‌ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಯಾಮುಯಲ್‌, ಸರ್ಕಾರದ ವಿರುದ್ಧದ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಲಾಯಿತು. ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲದೆ ಬಿ ಖಾತೆಯಿಂದ ಎ ಖಾತೆ ಮಾಡಿಕೊಡುವುದಾಗಿ ಭರವಸೆ ನೀಡಿದೆ. ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಬಡ ಜನತೆಗೆ ಅಧಿಕ ತೆರಿಗೆ ವಿಧಿಸಿದೆ. ಕಾಂಗ್ರೆಸ್‌‍ ಸರ್ಕಾರವೇ ಖಾಲಿ ಟ್ರಂಕ್‌ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.

ಬೆಂಗಳೂರನ್ನು ಕಸದ ಸಿಟಿ ಮಾಡಿದ್ದಾರೆ. ಬೆಂಗಳೂರಿನ ಬಿಎಂಟಿಸಿ ಮತ್ತು ಕೆಎಸ್‌‍ಆರ್‌ಟಿಸಿ ಬಸ್‌‍ ಸಿಬ್ಬಂದಿಗಳಿಗೆ ಸಂಬಳ ನೀಡದೇ ನಿಮ ಟ್ರಂಕ್‌ ಖಾಲಿ ಮಾಡಿದ್ದೀರಿ. ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಂತಹಂತವಾಗಿ ಗುತ್ತಿಗೆದಾರರ ಬಾಕಿ ಬಿಲ್‌ ಬಿಡುಗಡೆ : ಸಚಿವ ಸತೀಶ್‌ ಜಾರಕಿಹೊಳಿ

ಬೆಂಗಳೂರು, ಅ.30- ಕಳೆದ ಎರಡೂವರೆ ವರ್ಷಗಳಿಂದ ಲೋಕೋಪಯೋಗಿ ಇಲಾಖೆಯಿಂದ ಉತ್ತಮ ಕೆಲಸಗಳಾಗಿವೆ. ಸಾರ್ವಜನಿಕರು ಗುತ್ತಿಗೆದಾರರನ್ನು ಖುಷಿ ಪಡಿಸುವ ಪ್ರಯತ್ನ ಮಾಡಿದ್ದು, ಬಾಕಿ ಬಿಲ್‌ಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಸಚಿವರಾಗಿ ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇವೆ. ಗುತ್ತಿಗೆದಾರರ ಬಾಕಿ ಬಿಲ್‌ 9 ಸಾವಿರ ಕೋಟಿ ರೂ. ಬಿಡುಗಡೆ ಮಾಡಲು ಇನ್ನೂ ಸಮಯಬೇಕು. ಈ ಮೊತ್ತವನ್ನು ಬಜೆಟ್‌ನಲ್ಲಿ ನಿಗದಿ ಮಾಡದೇ ಕಾಮಗಾರಿ ಮಂಜೂರು ಮಾಡಲಾಗಿದೆ. ಹಣ ಹೊಂದಿಸಿ ಬಿಡುಗಡೆ ಮಾಡಲು ವಿಳಂಬವಾಗುತ್ತಿದೆ ಎಂದು ಹೇಳಿದರು.

ಒಟ್ಟು 12 ಸಾವಿರ ಕೋಟಿ ರೂ.ಗಳನ್ನು ಈ ರೀತಿ ಮಂಜೂರು ಮಾಡಲಾಗಿತ್ತು. ಅದರಲ್ಲಿ 3 ಸಾವಿರ ಕೋಟಿ ರೂ.ಗಳನ್ನು ಪಾವತಿಸಿದ್ದೇವೆ. ಬಾಕಿಯಿರುವ 9 ಸಾವಿರ ಕೋಟಿ ರೂ.ಗಳನ್ನು ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಹೇಳಿದರು.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯಲ್ಲ. ಯಾರೂ ಕೂಡ ಅಧ್ಯಕ್ಷ ಸ್ಥಾನವನ್ನು ಕೇಳುತ್ತಿಲ್ಲ. ಡಿಸೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ. ಈ ಬಗ್ಗೆ ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಸ್ವಾಗತಿಸುತ್ತೇವೆ ಎಂದರು.

ನಾಯಕತ್ವ ಬದಲಾವಣೆಯ ಬಗ್ಗೆ ಅನಗತ್ಯ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಪ್ರಶ್ನೆಗಳು ಎದುರಾದಾಗ ಉತ್ತರ ನೀಡದೇ ಸಚಿವರು ಓಡಿ ಹೋಗಲು ಸಾಧ್ಯವಿಲ್ಲ. ಒಂದೆಡೆ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಮತ್ತೊಂದೆಡೆ ಸರ್ಕಾರ ಮತ್ತು ಪಕ್ಷದಲ್ಲಿ ಗೊಂದಲಗಳು ಇವೆ ಎಂಬ ಅಪಪ್ರಚಾರವನ್ನೂ ನಡೆಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಚಿವ ಸಂಪುಟದಲ್ಲಿ ನಾನು ಒಬ್ಬ ಸದಸ್ಯ. ಸಂಪುಟ ಪುನರ್‌ ರಚನೆಯ ಬಗ್ಗೆ ನಾನು ಹೇಳಿಕೆ ನೀಡಲು ಸಾಧ್ಯವಿಲ್ಲ. ಕೆ.ಎನ್‌.ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವುದು ಅಥವಾ ಸೇರಿಸಿಕೊಳ್ಳದೇ ಇರುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.ಸಚಿವರಾದ ಎಚ್‌.ಸಿ.ಮಹದೇವಪ್ಪ, ಕೆ.ವೆಂಕಟೇಶ್‌ ಹಾಗೂ ನಾನು 30 ವರ್ಷಗಳಿಂದಲೂ ಪದೇ ಪದೇ ಸಭೆ ಮಾಡುತ್ತಿರುತ್ತೇವೆ. ಕಾಂಗ್ರೆಸ್‌‍ಗೆ ಬಂದ ಮೇಲೆ ಡಾ.ಜಿ.ಪರಮೇಶ್ವರ್‌ ಸೇರಿಕೊಂಡಿದ್ದಾರೆ.

ತಾವು ಊರಿನಲ್ಲಿ ಇಲ್ಲದೇ ಇದ್ದಾಗ ನನ್ನನ್ನು ಹೊರತು ಪಡಿಸಿ ಸಭೆ ನಡೆಸಿರಬಹುದು. ಈ ಮೊದಲು ಚರ್ಚೆ ಮಾಡಿದ ವಿಷಯಗಳ ಬಗ್ಗೆ ಮತ್ತಷ್ಟು ವಿಶ್ಲೇಷಣೆಗಳು ನಡೆದಿರುತ್ತವೆ ಅಥವಾ ಇನ್ನಷ್ಟು ಹೊಸ ವಿಷಯಗಳನ್ನು ಪ್ರಸ್ತಾಪಿಸಬಹುದು ಎಂದು ಹೇಳಿದರು.

ಧರ್ಮಸ್ಥಳದ ತನಿಖೆಯ ಬಗ್ಗೆ ನಾನು ಹೇಳಿಕೆ ನೀಡಲು ಬಯಸುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಪ್ರತಿಕ್ರಿಯಿಸಬಹುದು. ಸಂಚು ನಡೆಸಿದವರೇ ತನಿಖೆ ರದ್ದು ಪಡಿಸುವಂತೆ ಕೋರ್ಟ್‌ ಮೆಟ್ಟಿಲೇರಿರುವ ಬಗ್ಗೆ ನ್ಯಾಯಾಲಯದ ತೀರ್ಪನ್ನು ಕಾದು ನೋಡಬೇಕಿದೆ ಎಂದರು. ಮತಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಾದಂತ ಸಹಿಸಂಗ್ರಹ ಅಭಿಯಾನ ನಡೆಯುತ್ತಿದೆ.

ಕಾಂಗ್ರೆಸ್‌‍ ಕಚೇರಿ ನಿರ್ಮಾಣಕ್ಕೆ ಎಲ್ಲಾ ತಾಲ್ಲೂಕುಗಳಲ್ಲೂ ಜಾಗ ನೀಡುವುದು ಮತ್ತು ಕಟ್ಟಡ ನಿರ್ಮಿಸುವುದು ಪಕ್ಷದ ದೃಷ್ಟಿಯಿಂದ ಒಳ್ಳೆಯದು. 100 ಕಚೇರಿಗಳನ್ನು ನಿರ್ಮಿಸಲು ಅಧ್ಯಕ್ಷರು ಪ್ರಯತ್ನ ಮಾಡುತ್ತಿದ್ದಾರೆ. ಸಹಕಾರ ನೀಡದೆ ಇರುವ ಸಚಿವರು ಮತ್ತು ಶಾಸಕರ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸುವುದಾಗಿ ಹೇಳಿರುವ ಮಾಹಿತಿ ನನಗಿಲ್ಲ ಎಂದರು.