Thursday, November 6, 2025
Home Blog Page 18

RSS ಪಥಸಂಚನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತಿಗೆ ಕೆಎಟಿ ತಡೆ, ಸರ್ಕಾರಕ್ಕೆ ಮತ್ತೊಂದು ಹಿನ್ನಡೆ

ಬೆಂಗಳೂರು,ಅ.30-ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ ಎಸ್‌‍ಎಸ್‌‍) ಪಥಸಂಚನದಲ್ಲಿ ಭಾಗಿಯಾಗಿದ್ದರು ಎಂಬ ಒಂದೇ ಕಾರಣಕ್ಕಾಗಿ ಸೇವೆಯಿಂದ ಅಮಾನತುಗೊಂಡಿದ್ದ ರಾಯಚೂರು ಜಿಲ್ಲೆ ಪಿಡಿಒ ಅಮಾನತು ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಾಧೀಕರಣ (ಕೆಎಟಿ) ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಸರ್ಕಾರಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ತಮನ್ನು ಸೇವೆಯಿಂದ ಅಮಾನತು ಮಾಡಿರುವುದನ್ನು ಪ್ರಶ್ನಿಸಿ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಪಿಡಿಒ ಪ್ರವೀಣ್‌ ಕುಮಾರ್‌ ಅವರು, ಕೆಎಟಿ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೆಇಟಿ ಸರಕಾರದ ಆದೇಶಕ್ಕೆ ಮಧ್ಯಂತರ ನೀಡಿದೆ.ಕಳೆದ ಅಕ್ಟೋಬರ್‌ 17 ರಂದು ಆರ್‌ಎಸ್‌‍ಎಸ್‌‍ ಪಥಸಂಚಲನದಲ್ಲಿ ಭಾಗವಹಿಸಿದ್ದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್‌ ಕುಮಾರ್‌ ಕೆ.ಪಿ. ಅವರನ್ನು ಅಮಾನತುಗೊಳಿಸಿ ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು.

2025ರ ಅಕ್ಟೋಬರ್‌ 12 ಂದು ಲಿಂಗಸುಗೂರು ಪಟ್ಟಣದಲ್ಲಿ ಏರ್ಪಡಿಸಿದ್ದ ಆರ್‌ಎಸ್‌‍ಎಸ್‌‍ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಮವಸ ಧರಿಸಿ, ಕೈಯಲ್ಲಿ ದೊಣ್ಣೆ ಹಿಡಿದು ಗಣವೇಷಧಾರಿಗಳ ಪಥಸಂಚಲನದಲ್ಲಿ ಭಾಗವಹಿಸಿರುವ ಬಗ್ಗೆ ವರದಿಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಈ ಬಗ್ಗೆ ರಾಯಚೂರು ಜಿಲ್ಲೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್‌ ಕುಮಾರ್‌ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಸಮವಸ ಧರಿಸಿ ಕೈಯಲ್ಲಿ ದೊಣ್ಣೆ ಹಿಡಿದು ಆರ್‌ಎಸ್‌‍ಎಸ್‌‍ ಪಥ ಸಂಚಲನದಲ್ಲಿ ಭಾಗವಹಿಸಿರುವುದು ಖಚಿತಪಡಿಸಿದ್ದು, ಕರ್ನಾಟಕ ಸಿವಿಲ್‌ ಸೇವಾ (ನಡತೆ) ನಿಯಮಗಳು 2021ರ ನಿಯಮ 3ರಲ್ಲಿ ಪ್ರತಿಯೊಬ್ಬ ಸರ್ಕಾರಿ ನೌಕರನು ಎಲ್ಲಾ ಕಾಲದಲ್ಲಿಯೂ ಸಂಪೂರ್ಣ ನೀತಿ ನಿಷ್ಠೆ ಹೊಂದಿರಬೇಕು. ಮತ್ತು ಕರ್ತವ್ಯ ಶ್ರದ್ಧೆಯನ್ನು ಹೊಂದಿರಬೇಕು ಹಾಗೂ ಸರ್ಕಾರಿ ನೌಕರನಿಗೆ ತಕ್ಕದ್ದಲ್ಲದ ಯಾವುದನ್ನೂ ಮಾಡಬಾರದೆಂಬ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಪ್ರತಿಯೊಬ್ಬ ಸರ್ಕಾರಿ ನೌಕರನೂ ಉನ್ನತ ನೈತಿಕ ಆದರ್ಶಗಳನ್ನು ಹೊಂದಿರಬೇಕು, ರಾಜಕೀಯವಾಗಿ ತಟಸ್ಥನಾಗಿರಬೇಕು ಹಾಗೂ ತನ್ನ ಕರ್ತವ್ಯ ನಿರ್ವಹಣೆಯ ಮೇಲೆ ಪ್ರಭಾವ ಬೀರಬಹುದಾದ ಯಾರೇ ವ್ಯಕ್ತಿ ಅಥವಾ ಸಂಸ್ಥೆಯ ಯಾವುದೇ ಹಣಕಾಸು ಅಥವಾ ಇತರೆ ಆಮಿಷಗಳಿಗೆ ಒಳಗಾಗಬಾರದೆಂಬ ನಿಯಮಗಳನ್ನು ನೌಕರರು ಉಲ್ಲಂಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರವೀಣ್‌ ಕುಮಾರ್‌ ವಿರುದ್ಧ ಶಿಸ್ತು ಕ್ರಮ ವಹಿಸಲು ಶಿಾರಸು ಮಾಡಲಾಗಿತ್ತು. ಅದರ ಅನ್ವಯ ಪ್ರವೀಣ್‌ ಕುಮಾರ್‌ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರು ತಿಳಿಸಿದ್ದರು.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ಚಟುವಟಿಕೆ ನಡೆಸಬೇಕಾದರೆ ಸರಕಾರದ ಪೂರ್ವಾನುಮತಿ ಕಡ್ಡಾಯ ಎಂಬ ನೂತನ ನಿಯಮವನ್ನು ರಾಜ್ಯ ಸರ್ಕಾರ ಜಾರಿ ಮಾಡಿತ್ತು.ಸರಕಾರದ ಈ ಆದೇಶವನ್ನು ಪ್ರಶ್ನೆಸಿ ಕೆಲವು ಸಂಘ ಸಂಸ್ಥೆಗಳು ಹೈ ಕೋರ್ಟ್‌ ಮೊರೆ ಹೋಗಿದ್ದರು.

ವಾದ- ಪ್ರತಿವಾದ ಆಲಿಸಿದ್ದ ಧಾರವಾಡ ಹೈಕೋರ್ಟ್‌ ನ ಏಕಪೀಠದ ನ್ಯಾಯಮೂರ್ತಿ ನಾಗ ಪ್ರಸನ್ನ ಅವರು, ಸರಕಾರದ ತೀರ್ಮಾನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಮುಂದಿನ ಅರ್ಜಿ ವಿಚಾರಣೆಯನ್ನು ನ. 17 ಕ್ಕೆ ಮುಂದೂಡಿದ್ದಾರೆ.

ಬೆಂಗಳೂರಲ್ಲಿ ಮತ್ತೊಂದು ರೋಡ್‌ ರೇಜ್‌ ಕೇಸ್ : ಬೈಕ್‌ ತಾಗಿದ್ದಕ್ಕೆ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು,ಅ.30-ಮೂರುದಿನಗಳ ಹಿಂದೆಯಷ್ಟೇ ರೋಡ್‌ ರೇಜ್‌ಗೆ ಬೈಕ್‌ ಸವಾರನ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ನಿನ್ನೆ ಬೈಕ್‌ ತಾಗಿತೆಂಬ ಕಾರಣಕ್ಕೆ ಇಬ್ಬರು ಅಪರಿಚಿತರು ಸಾಫ್ಟ್ ವೇರ್‌ ಎಂಜಿನಿಯರ್‌ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಾಫ್‌್ಟವೇರ್‌ ಎಂಜಿನಿಯರ್‌ ಹುಳಿಮಾವು ನೀವಾಸಿ ಪ್ರತೀಕ್‌ ಎಂಬುವವರು ಬೈಕ್‌ನಲ್ಲಿ ಕಚೇರಿಗೆ ತೆರಳುತ್ತಿದ್ದರು. ಜೆಪಿನಗರ 6ನೇ ಹಂತದ ಬಳಿ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಇಬ್ಬರಿಗೆ ದಾರಿ ಬಿಡುವಂತೆ ಹಾರ್ನ್‌ ಮಾಡಿದ್ದಾರೆ.ಅವರು ದಾರಿ ಬಿಡದೆ ಹೋಗುತ್ತಿರುವುದನ್ನು ಗಮನಿಸಿ ಪ್ರತೀಕ್‌ ಅವರು ಬೈಕ್‌ನ್ನು ನಿಧಾನವಾಗಿ ಅವರ ಪಕ್ಕ ಚಾಲನೆ ಮಾಡಿಕೊಂಡು ಹೋಗುವಾಗ ಬೈಕ್‌ ಅವರಿಗೆ ತಗುಲಿದೆ.

ಇದೇ ಕಾರಣಕ್ಕೆ ಆ ಇಬ್ಬರು ಪ್ರತೀಕ್‌ ಅವರ ಬೈಕ್‌ ಕೀ ಕಿತ್ತುಕೊಂಡು ತಲೆಗೆ ಮನ ಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗೊಂಡಿದ್ದಾರೆ. ನಂತರ ಪ್ರತೀಕ್‌ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಈ ಸಂಬಂಧ ಪ್ರತೀಕ್‌ ಅವರು ಪುಟ್ಟೇನಹಳ್ಳಿ ಪೊಲೀಸ್‌‍ ಠಾಣೆಗೆ ಇಬ್ಬರು ಅಪರಿಚಿತ ಯುವಕರ ವಿರುದ್ಧ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ರೋಡ್‌ ರೇಜ್‌ ಪ್ರಕರಣದಿಂದಾಗಿ ಹಲವರು ಗಾಯಗೊಂಡರೆ ಮತ್ತೆ ಕೆಲವರ ಪ್ರಾಣವೇ ಹೋಗುತ್ತಿದೆ. ಇದರಿಂದ ವಾಹನ ಸವಾರರು ಒಂದು ರೀತಿ ಆತಂಕದಲ್ಲೇ ವಾಹನ ಚಲಾಯಿಸುವಂತಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-10-2025)

ನಿತ್ಯ ನೀತಿ : ಗಳಿಸಿದ ಹಣ ಚಿರವಲ್ಲ , ಏರಿದ ಅಧಿಕಾರ ಸ್ಥಿರವಲ್ಲ , ಪಡೆದ ಆಸ್ತಿ, ಅಂತಸ್ತು, ಐಶ್ವರ್ಯ ಶಾಶ್ವತವಲ್ಲ , ಮಾಡಿದ ಪಾಪ ಪುಣ್ಯಗಳೇ ಶಾಶ್ವತ.

ಪಂಚಾಂಗ : ಗುರುವಾರ, 30-10-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಅಷ್ಟಮಿ / ನಕ್ಷತ್ರ: ಶ್ರವಣ / ಯೋಗ: ಶೂಲ / ಕರಣ: ಬಾಲವ
ಸೂರ್ಯೋದಯ – ಬೆ.06.13
ಸೂರ್ಯಾಸ್ತ – 5.54
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30

ರಾಶಿಭವಿಷ್ಯ :
ಮೇಷ: ಉತ್ತಮ ಹೆಸರು, ಕೀರ್ತಿ, ಮಾನ- ಸನ್ಮಾನಗಳು ಲಭಿಸಲಿವೆ. ಉತ್ತಮ ದಿನ.
ವೃಷಭ: ಕಟ್ಟಡ ವ್ಯವಹಾರಕ್ಕೆ ಸಂಬಂ ಸಿದ ಜನರಿಗೆ ಬಹಳ ಅನುಕೂಲಕರವಾದ ದಿನವಾಗಿದೆ.
ಮಿಥುನ: ಶತ್ರುಗಳ ಕಾಟ ಅ ಕವಿರುತ್ತದೆ. ಆದರೆ ಅವರು ನಿಮ್ಮನ್ನು ಏನೂ ಮಾಡಲು ಆಗುವುದಿಲ್ಲ.

ಕಟಕ: ಆರ್ಥಿಕವಾಗಿ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ನಷ್ಟ ಉಂಟಾಗಬಹುದು.
ಸಿಂಹ: ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಅತ್ಯುತ್ತಮವಾದ ದಿನ.
ಕನ್ಯಾ: ವೃತ್ತಿಪರರು ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯಲು ಗಮನ ಹರಿಸಬೇಕು.

ತುಲಾ: ಕಚೇರಿಯಲ್ಲಿ ಉನ್ನತ ಅ ಕಾರಿಯೊಂದಿಗೆ ವಾದ- ವಿವಾದ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಶ್ಚಿಕ: ವ್ಯಾಪಾರಿಗಳು ಅಥವಾ ವೃತ್ತಿಯಲ್ಲಿರುವ ವರು ಅ ಕೃತ ಪ್ರಯಾಣ ಕೈಗೊಳ್ಳಬೇಕಾಗುತ್ತದೆ.
ಧನುಸ್ಸು: ಮಕ್ಕಳಿಂದ ಬೇಸರ ಉಂಟಾಗಲಿದೆ. ಅನಾರೋಗ್ಯ ಸಮಸ್ಯೆ ಕಾಡಬಹುದು.

ಮಕರ: ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದು ಕೊಳ್ಳದಿರಿ.ಪ್ರೇಮ ಸಂಬಂಧದಲ್ಲಿ ಸೂಕ್ಷ್ಮತೆ ಇರಲಿದೆ.
ಕುಂಭ: ಹಿಡಿದ ಕೆಲಸ ಗಳನ್ನು ಒಂದೇ ಬಾರಿಗೆ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಲಿದೆ.
ಮೀನ: ಪ್ರಯಾಣದಲ್ಲಿ ಸಕಾರಾತ್ಮಕ ವಾತಾ ವರಣವಿರಲಿದೆ. ಮಾನಸಿಕ ನೆಮ್ಮದಿ ಸಿಗುವುದು.

ಕಳ್ಳತನ ಮಾಡಿ ರೈಲು, ಬಸ್‌‍ಗಳಲ್ಲಿ ಪರಾರಿಯಾಗುತ್ತಿದ್ದ ಖತರ್ನಾಕ್‌ ಮನೆಗಳ್ಳರ ಸೆರೆ

ಬೆಂಗಳೂರು,ಅ.29– ನಗರದಲ್ಲಿ ಮನೆಗಳ್ಳತನ ಮಾಡಿಕೊಂಡು ಸುಳಿವು ಸಿಗಬಾರದೆಂದು ರೈಲು, ಬಸ್‌‍ ಮತ್ತು ಆಟೋರಿಕ್ಷಾದಲ್ಲಿ ಕೆಜಿಎಫ್‌ಗೆ ಪರಾರಿಯಾಗಿದ್ದ ಇಬ್ಬರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿ 72 ಲಕ್ಷ ರೂ. ಮೌಲ್ಯದ 614 ಗ್ರಾಂ ಚಿನ್ನಾಭರಣ ಹಾಗೂ 470 ಗ್ರಾಂ ಬೆಳ್ಳಿಯ ವಸ್ತುಗಳ ವಶಪಡಿಸಿಕೊಂಡಿದ್ದಾರೆ.

ಕೆಜಿಎಫ್‌ ನಿವಾಸಿಗಳಾದ ಶಾಂತ ಕುಮಾರ್‌ ಮತ್ತು ಜ್ಞಾನ ಪ್ರಕಾಶ್‌ ಬಂಧಿತ ಆರೋಪಿಗಳು. ಇವರ ಮೇಲೆ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ.ಇವರಿಬ್ಬರು ಆರೋಪಿಗಳು ನಗರದಲ್ಲಿ ಮನೆಗಳ್ಳತನ ಮಾಡಿ ಯಾರಿಗೂ ಸುಳಿವು ಸಿಗಬಾರದೆಂದು ಸ್ವಲ್ಪ ದೂರ ರೈಲಿನಲ್ಲಿ ಪ್ರಯಾಣಿಸಿ ನಂತರ ಬಸ್‌‍ನಲ್ಲಿ ಹೋಗಿ ತದ ನಂತರ ಆಟೋದಲ್ಲಿ ಮನೆ ಸೇರುತ್ತಿದ್ದರು ಎಂಬುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.

ಇವರಿಬ್ಬರು ಯಾವುದೇ ಮೊಬೈಲ್‌ ಬಳಸುತ್ತಿರಲಿಲ್ಲ ಹಾಗಾಗಿ ಅವರ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ಆದರೂ ಸಹ ಪೊಲೀಸರು ತಾಂತ್ರಕ ಆಧಾರದಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವಪ್ರಿಯ ಲೇಔಟ್‌ ನಿವಾಸಿಯೊಬ್ಬರು ಉಡುಪಿಗೆ ಹೋಗಿದ್ದರು. ಅವರು ವಾಪಸ್ಸು ಮನೆಗೆ ಬಂದು ನೋಡಿದಾಗ ಮುಂಬಾಗಿಲ ಬೀಗವನ್ನು ಒಡೆದಿರುವುದು ಕಂಡು ಬಂದಿದೆ. ಗಾಬರಿಯಾಗಿ ಅವರು ಮನೆಯ ಒಳಗೆ ಹೋಗಿ ನೋಡಿದಾಗ ಕೊಠಡಿಯ ಬೀರುವಿನಲ್ಲಿಟ್ಟಿದ್ದ 330 ಗ್ರಾಂ ಚಿನ್ನಾಭರಣಗಳು ಮತ್ತು 1 ಕೆ.ಜಿ 200 ಗ್ರಾಂ ಬೆಳ್ಳಿಯ ವಸ್ತುಗಳು ಕಳವು ಆಗಿರುವುದು ಕಂಡು ಬಂದಿದೆ.

ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ, ಬೇಗೂರು ಕೆರೆ ಕೋಡಿ ಹತ್ತಿರ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತೊಬ್ಬ ಸಹಚರನೊಂದಿಗೆ ಸೇರಿ ಮನೆ ಕನ್ನ ಕಳವು ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಕಳವು ಮಾಡಿರುವ ಚಿನ್ನಾಭರಣಗಳನ್ನು ಕೆಜಿಎ್‌‍ನಲ್ಲಿರುವ 3 ಗಿರವಿ ಅಂಗಡಿಗಳಲ್ಲಿ ಅಡಮಾನ ಇಟ್ಟಿರುವುದಾಗಿ ತಿಳಿಸಿದ್ದು ತನಿಖೆಯನ್ನು ಮುಂದುವರೆಸಿ, ಗಿರವಿ ಅಂಗಡಿಗಳಿಂದ 233 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ತನಿಖೆ ಮುಂದುವರೆಸಿದ ಪೊಲೀಸರು ಮತ್ತೊಬ್ಬ ಸಹಚರನನ್ನು ಮುನೇಶ್ವರ ಲೇಔಟ್‌ ಬಳಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಚಿಂತಾಮಣಿ ತಾಲ್ಲೂಕಿನಲ್ಲಿರುವ 3 ಜ್ಯೂವೆಲರಿ ಅಂಗಡಿಗಳು ಹಾಗೂ ಕೆಜಿಎಫ್ ನಲ್ಲಿರುವ 3 ಜ್ಯೂವೆಲರಿ ಅಂಗಡಿಗಳಿಂದ ಒಟ್ಟು 381 ಗ್ರಾಂ ಚಿನ್ನದ ವಡವೆಗಳನ್ನು ಹಾಗೂ 470 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ಬೇಗೂರು ಠಾಣೆಯ 3 ಮನೆ ಕಳವು ಪ್ರಕರಣ,ಹೊಸಕೋಟೆ ಹಾಗೂ ಚಿಕ್ಕಬಳ್ಳಾಪುರ ಪೊಲೀಸ್‌‍ ಠಾಣೆಯ 1 ಮನೆ ಕಳವು ಪ್ರಕರಣ ಸೇರಿದಂತೆ ಒಟ್ಟು 5 ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್‌ ಕೃಷ್ಣಕುಮಾರ್‌ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಕೈಗೊಂಡಿತ್ತು.

ಮೈಸೂರು : ರೈತನನ್ನು ಬಲಿ ಪಡೆದಿದ್ದ ನರ ಭಕ್ಷಕ ಹುಲಿ ಸೆರೆ

ಮೈಸೂರು, ಅ.29– ರೈತನನ್ನು ಬಲಿ ಪಡೆದಿದ್ದ ಹುಲಿಯನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಸರಗೂರು ತಾಲ್ಲೂಕಿನ ಬೆಣ್ಣೆಗೆರೆಯಲ್ಲಿ ರಾಜಶೇಖರ್‌ ಎಂಬುವವರು ಹುಲಿ ದಾಳಿಗೆ ಬಲಿಯಾಗಿದ್ದರು.

ಜಮೀನಿನಲ್ಲಿ ದನ ಮೇಯಿಸುತ್ತಿದ್ದಾಗ ದಾಳಿ ಮಾಡಿ ಸಾಯಿಸಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಕೂಡ ನಡೆಸಿದ್ದರು. ಮೈಸೂರಿನ ಕೆಆರ್‌ ಆಸ್ಪತ್ರೆ ಶವಾಗಾರದ ಬಳಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ವೇಳೆ ಸಚಿವ ಈಶ್ವರ್‌ ಖಂಡ್ರೆ ಆಗಮಿಸಿದಾಗ ಸಚಿವರಿಗೆ ಘೇರಾವ್‌ ಹಾಕಿ ಅರಣ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದರು.

ಅಲ್ಲದೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಮಾನವ ಹಕ್ಕು ವನ್ಯಜೀವಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದರು. ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆ ಹುಲಿ ಸೆರೆಗಾಗಿ ಕಾರ್ಯಾಚರಣೆ ಕೈಗೊಂಡು ಸಾಕಾನೆಗಳ ಸಹಾಯದಿಂದ ಯಡಿಯಾಲ ಅರಣ್ಯ ವಲಯದ ಮಳ್ಳೂರು ಬಳಿ ಅರವಳಿಕೆ ಮದ್ದು ನೀಡಿ ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಹುಲಿ ಸೆರೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಪಿಡಿಒ ಕಿರುಕುಳ ಆರೋಪ, ಲೈಬ್ರರಿಯನ್‌ ಆತ್ಮಹತ್ಯೆ

ನೆಲಮಂಗಲ, ಅ.29– ತಾಲ್ಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಒ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಗೋವೇನಹಳ್ಳಿ ಗ್ರಾಮದ ಗ್ರಂಥಾಲಯದ ಅರೆಕಾಲಿಕ ನೌಕರ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಗೋವೇನಹಳ್ಳಿಯ ಗ್ರಂಥಾಲಯದ ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರಯ್ಯ ಆತಹತ್ಯೆಗೆ ಶರಣಾದ ವ್ಯಕ್ತಿ.ಕಳೆದ 25 ವರ್ಷಗಳಿಂದ ಅರೆಕಾಲಿಕ ಗ್ರಂಥಾಲಯ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕಳಲುಘಟ್ಟ ಪಿಡಿಒ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಕಳೆದ ಮೂರು ತಿಂಗಳಿನಿಂದ ಸಂಬಳ ಕೂಡ ನೀಡದೆ ಬಯೋಮೆಟ್ರಿಕ್‌ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಳ್ಳದೆ ಇಲ್ಲಸಲ್ಲದ ಕಾರಣ ಹೇಳಿ ತೊಂದರೆ ನೀಡುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದವು.

ಇದರಿಂದ ಖಿನ್ನತೆಗೆ ಒಳಗಾಗಿದ್ದ ಗ್ರಂಥಾಲಯ ನೌಕರ ಗ್ರಾಮದ ರಾಮಚಂದ್ರಯ್ಯ ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದರು. ದಾರಿಹೋಕರು ಗಮನಿಸಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳರು ಕದ್ದಿದ್ದ 1949ಕ್ಕೂ ಹೆಚ್ಚು ಮೊಬೈಲ್‌ಗಳ ವಶ, 42 ಆರೋಪಿಗಳ ಬಂಧನ

ಬೆಂಗಳೂರು,ಅ.29- ನಗರಾಧ್ಯಂತ ಮೊಬೈಲ್‌ ಕಳ್ಳತನ, ಸುಲಿಗೆ ಮಾಡುತ್ತಿದ್ದ 42 ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿ 3.2ಕೋಟಿ ರೂ. ಮೌಲ್ಯದ 1949 ಮೊಬೈಲ್‌ ೇನ್‌ಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ: ನಗರದ ಜನಸಂದಣಿ ಪ್ರದೇಶಗಳಲ್ಲಿ, ಬಸ್‌‍ , ರೈಲ್ವೇ ನಿಲ್ದಾಣ, ದೇವಸ್ಥಾನಗಳ ಬಳಿ ಸಾರ್ವ ಜನಿಕರ ಮೊಬೈಲ್‌ ಫೋನ್‌ಗಳನ್ನು ಸರಣಿ ಯಾಗಿ ಸುಲಿಗೆ ಮತ್ತು ಕಳ್ಳತನ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ, 60 ಲಕ್ಷ ಮೌಲ್ಯದ 422 ಸಾರ್ಟ್‌ ಮೊಬೈಲ್‌ ಫೋನ್‌ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಆಟೋರಿಕ್ಷಾ ಮತ್ತು ಒಂದು ಹೋಂಡಾ ಡಿಯೋ ದ್ವಿಚಕ್ರ ವಾಹನವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸಿಟಿ ಮಾರ್ಕೆಟ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಾಂಡ್‌ ಕಂಟ್ರೋಲ್‌ ಸೆಂಟರ್‌:
ಕೆ.ಎಸ್‌‍.ಪಿ. ಅಪ್ಲಿಕೇಷನ್‌ ಹಾಗೂ ನಗರದ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ಸಾರ್ವಜನಿಕರು ಕಳ್ಳತನವಾದ ಮೊಬೈಲ್‌ ೇನ್‌ಗಳ ಬಗ್ಗೆ ದೂರು ನೀಡಿದ್ದು, ಮೊಬೈಲ್‌ ೇನ್‌ಗಳ ಐಎಂಇಐ ನಂಬರ್‌ನ ಆಧಾರದ ಮೇಲೆ, ತಾಂತ್ರಿಕ ಮಾಹಿತಿಯನ್ನು ಕಲೆಹಾಕಿ ಒಟ್ಟು 894 ಸಾರ್ಟ್‌ ಮೊಬೈಲ್‌ ೇನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಬೆಲೆ ಸುಮಾರು 1 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ಅಮೃತಹಳ್ಳಿ :
ಹೆಬ್ಬಾಳ ಫ್ಲೈಓವರ್‌ ಕೆಳಗಿರುವ ಬಸ್‌‍ ನಿಲ್ದಾಣದ ಬಳಿ ಕಿಯಾ ಕಂಪನಿಯ ಕಾರೊಂದು ಅನುಮಾನಾಸ್ಪದವಾಗಿ ನಿಂತಿರುವುದು ಗಮನಿಸಿ ಅದನ್ನು ಪರಿಶೀಲಿಸಲು ಕರ್ತವ್ಯದಲ್ಲಿದ್ದ ಸಿಬ್ಬಂದಿಯು ಕಾರಿನ ಬಳಿ ತೆರಳಿದಾಗ ಕಾರಿನಲ್ಲಿದ್ದವರು ಓಡಿ ಹೋಗಿದ್ದು ಸಿಬ್ಬಂದಿಯು ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ 28 ವಿವಿಧ ಕಂಪನಿಯ ಮೊಬೈಲ್‌ ೇನ್‌ಗಳು ಪತ್ತೆಯಾಗಿರುತ್ತದೆ.

ಮುಂದಿನ ಕಾನೂನು ಕ್ರಮಕ್ಕಾಗಿ ಕಾರನ್ನು ಹಾಗೂ ಮೊಬೈಲ್‌ ೇನ್‌ಗಳನ್ನು ಅಮೃತಹಳ್ಳಿ ಪೊಲೀಸ್‌‍ ಠಾಣೆಗೆ ನೀಡಿದ್ದು ತನಿಖೆ ಪ್ರಗತಿಯಲ್ಲಿದೆ.ಸಿಇಐಆರ್‌ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಮೊಬೈಲ್‌ ಕಳವು ಪ್ರಕರಣದಲ್ಲಿ 12 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದು, ಇವುಗಳ ಮೌಲ್ಯ ರೂ. 5 ಲಕ್ಷ ಗಳಾಗಿರುತ್ತದೆ ಎಂದು ಅಂದಾಜಿಸಲಾಗಿರುತ್ತದೆ.

ಒಟ್ಟಾರೆ ಅಮೃತಹಳ್ಳಿ ಪೊಲೀಸ್‌‍ ಠಾಣೆಯಿಂದ ಒಟ್ಟು 40 ಮೊಬೈಲ್‌ ೇನ್‌ ಮತ್ತು ಒಂದು ಕಾರ್‌ ಅನ್ನು ಪತ್ತೆ ಮಾಡಲಾಗಿದೆ.

ಪಶ್ಚಿಮ ವಿಭಾಗ:
ಉಪ್ಪಾರಪೇಟೆ ಹಾಗು ವಿಜಯನಗರ ಪೊಲೀಸರು ಐದು ಮಂದಿಯನ್ನು ಬಂಧಿಸಿ 49.95ಲಕ್ಷ ರೂ. ಮೌಲ್ಯದ 121 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದೇಶಿ ಸಿಗರೇಟ್‌ ಜಪ್ತಿ:
ಎಸ್‌‍.ಸಿ. ರಸ್ತೆಯ ಗಣೇಶ ದೇವಾಲಯದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು ಅವರಿಂದ ರೂ. 35 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್‌ ಸಿಗರೇಟ್ಸ್ , ವಿದೇಶಿ ಸಿಗರೇಟ್‌ ಬಾಕ್‌್ಸ, ಪರ್ಮ್ಸೌಗಳು, 13 ಲ್ಯಾಪ್‌ ಟಾಪ್‌ ಮತ್ತು 11 ಐೇನ್‌ 17 ಪ್ರೋ ಮ್ಯಾಕ್‌್ಸ ಮೊಬೈಲ್‌ ೇನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಆತ ನೀಡಿದ ಮಾಹಿತಿ ಮೇರೆಗೆ ಒಟ್ಟು 20 ಮೊಬೈಲ್‌ಫೋನ್‌ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ವರ್ತೂರು :
ಗುಂಜೂರು ರಸ್ತೆಯಲ್ಲಿರುವ ಮೊಬೈಲ್‌ ಔಟ್‌ಲೆಟ್‌ ಅಂಗಡಿಯ ಬಾಗಿಲನ್ನು ಮುರಿದು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ 40.50 ಲಕ್ಷ ರೂ. ಮೌಲ್ಯದ 39 ಮೊಬೈಲ್‌ ಫೋನ್‌ಗಳು, ಡಿಜಿಟಲ್‌ ಕ್ಯಾಮರಾ, ಡಿಜಿಟಲ್‌ ವಾಚ್‌ ಮತ್ತು 8 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನೈಋತ್ಯ ವಿಭಾಗ:
ನೈಋತ್ಯ ವಿಭಾಗದ ವಿವಿಧ 7 ಪೊಲೀಸ್‌‍ ಠಾಣೆಗಳ ಸಿ.ಇ.ಐ.ಆರ್‌. ಪೋರ್ಟಲ್‌ನಲ್ಲಿ ವರದಿಯಾಗಿದ್ದ ಮೊಬೈಲ್‌ ಫೋನ್‌ಗಳು ಮತ್ತು ಇತರೆ ಪ್ರಕರಣಗಳಲ್ಲಿ ಸಂಬಂ ಸಿದಂತೆ ಒಟ್ಟು 224 ಮೊಬೈಲ್‌ ೇನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು,ಇವುಗಳ ಒಟ್ಟು ಮೌಲ್ಯ 26 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಪೂರ್ವ ವಿಭಾಗ:
ಪೂರ್ವ ವಿಭಾಗದ ರಾಮಮೂರ್ತಿನಗರ ಬಾಣಸವಾಡಿ ಹಾಗೂ ಹೆಣ್ಣೂರು ಠಾಣೆ ಪೊಲೀಸರು 28 ಆರೋಪಿಗಳನ್ನು ಬಂಧಿಸಿ 9.75 ಲಕ್ಷ ರೂ. ಮೌಲ್ಯದ 209 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆಗ್ನೇಯ ವಿಭಾಗ: ಬೊಮನಹಳ್ಳಿ ಪೊಲೀಸ್‌‍ ಠಾಣೆಯ ಸಿಇಐಆರ್‌ ಪೋರ್ಟಲ್‌ನಲ್ಲಿ ವರದಿಯಾಗಿದ್ದ 20 ಮೊಬೈಲ್‌ ಫೋನ್‌ಗಳನ್ನು ಪತ್ತೆ ಮಾಡಿದ್ದು, ಇವುಗಳ ಮೌಲ್ಯ ಒಟ್ಟು 2ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.

ಆನೇಕಲ್‌ ಬಳಿ ಅಚ್ಚರಿ ಮೂಡಿಸಿದ ದೇಶದ್ರೋಹಿಗಳ ‘ಪಾಕಿಸ್ತಾನ್‌ ಜಿಂದಾಬಾದ್‌’ ವೈಫೈ ಐಡಿ

ಬೆಂಗಳೂರು, ಅ.29- ಆನೇಕಲ್‌ ತಾಲ್ಲೂಕಿನ ಜಿಗಣಿಯ ಸಮೀಪದ ಗ್ರಾಮವೊಂದರಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂಬ ವೈಫೈ ಯೂಸರ್‌ ಐಡಿ (ಎಸ್‌‍ಎಸ್‌‍ಐಡಿ) ಪತ್ತೆಯಾಗುವ ಮೂಲಕ ಆಘಾತ ಮೂಡಿಸಿದೆ.

ಜಿಗಣಿಯ ಬಳಿ ಕಲ್ಲುಬಾಳು ಗ್ರಾಮದಲ್ಲಿ ವೈಫೈ ಸಂಪರ್ಕಗಳನ್ನು ಹುಡುಕಿದಾಗ ಯಾಂತ್ರಿಕವಾಗಿ ಕಂಡು ಬರುವ ಹೆಸರುಗಳಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂಬ ಹೆಸರಿನ ಸಂಪರ್ಕವೂ ಪತ್ತೆಯಾಗಿದೆ.

ಈ ಯೂಸರ್‌ ಐಡಿ ಪಾಸ್‌‍ವರ್ಡ್‌ ಸಂರಕ್ಷಿತವಾಗಿದ್ದು, ಸಕ್ರಿಯವಾಗಿತ್ತು. ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ವೈಫೈ ಸಂಪರ್ಕ ಪಡೆದವರು ಸಹಜವಾಗಿ ತಮಗೆ ಇಷ್ಟವಾಗುವ ಹೆಸರಿನಲ್ಲಿ ಬಳಕೆದಾರರ ಶೀರ್ಷಿಕೆ (ಎಸ್‌‍ಎಸ್‌‍ಐಡಿ) ಇಟ್ಟುಕೊಳ್ಳುತ್ತಾರೆ. ಆದರೆ ಕಲ್ಲುಬಾಳು ಗ್ರಾಮದಲ್ಲಿ ಇಂಟರ್‌ನೆಟ್‌ ಸಂಪರ್ಕ ಪಡೆದ ವ್ಯಕ್ತಿಯೊಬ್ಬರು ತಮ ವೈಫೆೈಗೆ ಪಾಕಿಸ್ತಾನ್‌ ಜಿಂದಾಬಾದ್‌ ಎಂಬ ಸವೀಸ್‌‍ ಸೆಟ್‌ ಐಡೆಂಟಿಫೈಯರ್‌ಶೀರ್ಷಿಕೆ ಇಟ್ಟುಕೊಂಡಿರುವುದು ಅಚ್ಚರಿ ಮೂಡಿಸಿದೆ.

ಸಾಮಾನ್ಯವಾಗಿ ಬಳಕೆದಾರರ ಶೀರ್ಷಿಕೆಯನ್ನು ತಮಗೆ ಇಷ್ಟವಾದಂಥ ಹೆಸರಿನಲ್ಲಿ ನಮೂದಿಸಿಕೊಳ್ಳುವುದು ಸಾಮಾನ್ಯ. ಆದರೆ ಕಲ್ಲುಬಾಳು ಗ್ರಾಮದ ಸರ್ಕಾರಿ ಶಾಲೆಯ ಬಳಿಯ ಸಂಪರ್ಕದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ನಮೂದಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

6-7 ತಿಂಗಳ ಹಿಂದೆ ಜಿಗಣಿ ಪೊಲೀಸ್‌‍ ಠಾಣೆಯಲ್ಲಿ ಬಾಂಗ್ಲದೇಶ, ಪಾಕಿಸ್ತಾನದ ಪ್ರಜೆಗಳನ್ನು ಪತ್ತೆ ಹಚ್ಚಿ ಪೊಲೀಸರು ಕ್ರಮ ಕೈಗೊಂಡಿದ್ದರು. ಈಗ ದೇಶವಿರೋಧಿ ನಡವಳಿಕೆ ಎಂಬಂತೆ ವೈಫೈಗೆ ನೆರೆ ರಾಷ್ಟ್ರದ ಪರ ಘೋಷಣೆ ಕೂಗುವ ಶೀರ್ಷಿಕೆಯನ್ನಿಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟಿಸಿದೆ. ಇಲ್ಲಿ ಭಯೋತ್ಪಾದಕರು ನೆಲೆಸಿ ತಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.

ಸ್ಥಳೀಯರ ಮಾಹಿತಿ ಆಧರಿಸಿ ಭಜರಂಗ ದಳದ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ನಿಖರವಾದ ಸಂಪರ್ಕದ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಬರಿಗೈಯಲ್ಲೇ ತೆರಳಿದ್ದು, ಸಂಜೆಯ ವೇಳೆಗೆ ಭಜರಂಗ ದಳದ ಕಾರ್ಯಕರ್ತ ಗೋವರ್ಧನ್‌ ಅವರಿಂದ ದೂರು ಪಡೆದು ಎನ್‌ಸಿಆರ್‌ ದಾಖಲಿಸಿದ್ದಾರೆ.

ಪಾಕಿಸ್ತಾನ್‌ ಜಿಂದಾಬಾದ್‌ ಎಸ್‌‍ಎಸ್‌‍ಐಡಿ ಹೊಂದಿರುವ ಸಂಪರ್ಕವನ್ನು ಪತ್ತೆ ಹಚ್ಚಲು ತಜ್ಞರ ತಂಡ ನೆರವು ಪಡೆಯುತ್ತಿದ್ದಾರೆ. ಜೊತೆಗೆ ಆ ಭಾಗದಲ್ಲಿ ಇಂಟರ್‌ನೆಟ್‌ ಸೇವೆ ಒದಗಿಸುತ್ತಿರುವ ಕಂಪನಿಗಳನ್ನು ಸಂಪರ್ಕಿಸಿದ್ದಾರೆ. ಸಾಮಾನ್ಯವಾಗಿ ಎಸ್‌‍ಸ್‌‍ಐಡಿಯನ್ನು ರೂಪಿಸಿಕೊಂಡಿರುವ ಬಳಕೆದಾರರು ಪದೇ ಪದೇ ಅದನ್ನು ಬದಲಾಯಿಸುವ ಸಾಧ್ಯತೆಯಿದೆ.

ಪಾಕಿಸ್ತಾನ್‌ ಜಿಂದಾಬಾದ್‌ ಎಂಬ ಎಸ್‌‍ಎಸ್‌‍ಐಡಿಯನ್ನು ಯಾವ ಕಾರಣಕ್ಕೆ ಬಳಕೆ ಮಾಡುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಿ ನಂತರ ಮುಂದಿನ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಬಸ್‌‍ಗಳಲ್ಲಿ ಬಲ್ಕ್ ಮೊಬೈಲ್‌ ಸಾಗಾಟಕ್ಕೆ ಬ್ರೇಕ್‌

ಬೆಂಗಳೂರು, ಅ.29- ಇನ್ನು ಮುಂದೆ ಖಾಸಗಿ ಬಸ್‌‍ಗಳಲ್ಲಿ ಬಲ್ಕ್ ಮೊಬೈಲ್‌ ಸಾಗಾಟಕ್ಕೆ ನಿಷೇಧ ಹೇರಲಾಗಿದೆ.ಕರ್ನೂಲ್‌ ಬಳಿ ಸಂಭವಿಸಿದ ಖಾಸಗಿ ಬಸ್‌‍ ಅಪಘಾತದಲ್ಲಿ 20 ಮಂದಿ ಪ್ರಯಾಣಿಕರು ಜೀವಂತ ದಹನವಾದ ಘಟನೆ ನಡೆದ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಇಂತಹ ಮಹತ್ವದ ತೀರ್ಮಾನ ಕೈಗೊಂಡಿದೆ.

ಕರ್ನೂಲ್‌ ಪ್ರಕರಣದ ನಂತರ ಖಾಸಗಿ ಬಸ್‌‍ಗಳಲ್ಲಿ ಬಲ್‌್ಕ ಮೊಬೈಲ್‌ಫೋನ್‌ಗಳ ಸಾಗಾಟಕ್ಕೆ ನಿಷೇಧ ಹೇರಲಾಗಿದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತೆ ಓಂಕಾರೇಶ್ವರಿ ತಿಳಿಸಿದ್ದಾರೆ. ಕರ್ನೂಲ್‌ ಬಳಿ ಸಂಭವಿಸಿದ ಅವಘಡದಲ್ಲಿ 20 ಅಮಾಯಕರು ಸಜೀವ ದಹನವಾಗಲು ಆ ಬಸ್‌‍ನಲ್ಲಿ ಸಾಗಿಸಲಾಗುತ್ತಿದ್ದ 100 ಕ್ಕೂ ಹೆಚ್ಚು ಮೊಬೈಲ್‌ಗಳ ಸ್ಫೋಟವೇ ಕಾರಣ ಎನ್ನುವುದು ತನಿಖೆಯಿಂದ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಬಸ್‌‍ ಗೆ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲೇ ರಾಶಿ ರಾಶಿ ಮೊಬೈಲ್‌ಗಳು ಸ್ಫೋಟಗೊಂಡಿದ್ದವು. ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗಬಾರದು ಎಂಬ ಉದ್ದೇಶದಿಂದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಇದರ ಜೊತೆಗೆ ಪ್ರತಿ ಕ್ಯಾಬಿನ್‌ಗೆ ಫೈರ್‌ ಅಲರ್ಟ್‌ ಅಳವಡಿಸುವುದು, ಬೆಂಕಿ ಹತ್ತಿಕೊಳ್ಳದ ಕರ್ಟನ್‌ ಬಳಕೆ ಮಾಡುವಂತೆಯೂ ಖಾಸಗಿ ಬಸ್‌‍ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯನವರು ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುತ್ತಾರೆ : ಸಚಿವ ಬೈರತಿ ಸುರೇಶ್‌

ಬೆಂಗಳೂರು,ಅ.29- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ.ಕೆಆರ್‌ ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಬಿಎ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್‌‍ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿಷಯ ಸ್ಪಷ್ಟಪಡಿಸಿದರು.

ಕಳೆದ ಮೂರ್ನಾಲ್ಕು ದಿನಗಳಲ್ಲಿ ಬಹಳಷ್ಟು ರಾಜಕೀಯ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ನಾವೆಲ್ಲಾ ಕಾಂಗ್ರೆಸ್‌‍ ಪಕ್ಷದ ಕಟ್ಟಾಳುಗಳು. ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ಸುಳ್ಳು. 2028 ರ ಚುನಾವಣೆಯಲ್ಲಿಯೂ ಅವರು ಸ್ಪರ್ಧೆ ನಡೆಸಬೇಕೆಂಬುದು ನಮೆಲ್ಲರ ಹಕ್ಕೊತ್ತಾಯವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌‍ ಪಕ್ಷಕ್ಕೆ ಒಳ್ಳೆಯದಾಗಬೇಕಾದರೆ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧೆ ಮಾಡಲೇಬೇಕು ಎಂದು ಹೇಳಿದ ಅವರು, ಸಚಿವ ಸಂಪುಟ ಪುನಾರಚನೆ, ಪ್ರದೇಶ ಕಾಂಗ್ರೆಸ್‌‍ ಪಕ್ಷದ ಅಧ್ಯಕ್ಷರ ನೇಮಕಾತಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಹೈಕಮಾಂಡ್‌ ಸಮರ್ಥವಾಗಿದೆ ಎಂದರು.

ಪ್ರಸ್ತುತ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಅವರಿದ್ದಾರೆ. ಮುಂದೆ ಏನಾಗಬೇಕು? ಏನು ನಿರ್ಧಾರ ತೆಗೆದುಕೊಳ್ಳಬೇಕೆಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ ಎಂದು ಅವರು ಹೇಳಿದರು.

ಜಿಬಿಎ ಚುನಾವಣೆಗೆ ಸಿದ್ಧರಾಗಿ:
ಜಿಬಿಎ ಚುನಾವಣೆಗೆ ಕಾಂಗ್ರೆಸ್‌‍ ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕು. ಯಾವುದೇ ವೈಮನಸ್ಸು ಇದ್ದರೂ ಅದನ್ನು ಬಗೆಹರಿಸಿಕೊಂಡು ಚುನಾವಣೆಯನ್ನು ಎದುರಿಸಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಬೇಕೆಂದು ಸಚಿವ ಬೈರತಿ ಸುರೇಶ್‌ ಅವರು ಕರೆ ನೀಡಿದರು.