Home Blog Page 1800

ಲೋಕಸಭಾ ಟಿಕೆಟ್‍ಗೆ ಬಿಜೆಪಿ ನಾಯಕರ ಪೈಪೋಟಿ

ಬೆಂಗಳೂರು, ನ.22- ವಿಧಾನಸಭೆ ಚುನಾವಣೆ ಯಲ್ಲಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಕಣ್ಣು ಈಗ ಲೋಕಸಭೆ ಚುನಾವಣೆ ಮೇಲೆ ನೆಟ್ಟಿದೆ. ತೀವ್ರ ಪೈಪೋಟಿಯಿಂದ ಕೂಡಿರುವ ಸಂಸತ್ತಿನ ಚುನಾವಣೆಯ ಟಿಕೆಟ್ ಪಡೆಯಲು ಭಗೀರಥ ಪ್ರಯತ್ನ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮಗೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಲಿದೆ ಎನ್ನುವ ನಿರೀಕ್ಷೆಯಲ್ಲಿ ಹಲವಾರು ಪರಾಜಿತ ಅಭ್ಯರ್ಥಿಗಳು ಸಂಸತ್ತಿನ ಚುನಾವಣೆ ಪ್ರಚಾರವನ್ನೂ ಸಹ ತೆರೆಮರೆಯಲ್ಲಿ ನಡೆಸಿದ್ದಾರೆ.

ಬಿಜೆಪಿಯಲ್ಲಿ ಹತ್ತಕ್ಕೂ ಹೆಚ್ಚು ಜನ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರು, ಮಾಜಿ ಶಾಸಕರು ಲೋಕಸಭೆ ಚುನಾವಣೆ ಟಿಕೆಟ್ ಗಿಟ್ಟಿಸಿಕೊಳ್ಳಲು ಈಗಿನಿಂದಲೇ ಲಾಬಿ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಈ ಬಾರಿಯೂ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ.

ಪ್ರಧಾನಿ ಮೋದಿ ಅವರ ಜನಪ್ರಿಯ ಅಲೆಯಲ್ಲಿ ಲೋಕಸಭೆ ಚುನಾವಣೆ ಗೆಲವು ಕಷ್ಟವಾಗಲಾರದು ಎನ್ನುವ ಅಭಿಪ್ರಾಯದಿಂದ ಹೆಚ್ಚಿನ ಮುಖಂಡರು ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮಗೆ ಟಿಕೆಟ್ ನೀಡಬೇಕೆಂದು ಮಾಜಿ ಸಚಿವರು ಮತ್ತು ಮಾಜಿ ಶಾಸಕರುಗಳು ರಾಜ್ಯ ಬಿಜೆಪಿ ನಾಯಕರು ಮತ್ತು ದೆಹಲಿ ನಾಯಕರುಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ತಮಗೆ ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾಸವನ್ನು ಸಹ ಅವರುಗಳು ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಿ ಸೋತಿರುವ ಮಾಜಿ ಸಚಿವರಾದ ಸಿ ಟಿ ರವಿ, ಬಿ.ಸಿ.ಪಾಟೀಲ , ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ಡಾ.ಡಿ.ಸುಧಾಕರ್, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಮಾಜಿ ಸಾರಿಗೆ ಸಚಿವ ಶ್ರೀರಾಮುಲು, ಕರುಣಾಕರ ರೆಡ್ಡಿ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಹಲವಾರು ಮುಖಂಡರುಗಳು ಲೋಕಸಭೆ ಚುನಾವಣೆ ಸ್ಪರ್ಧೆಗಾಗಿ ಬಿಜೆಪಿಯ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ಎನ್‌ಸಿಇಆರ್‌ಟಿ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರ್ಪಡೆಗೆ ಶಿಫಾರಸು

ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಹಲವಾರು ಲೋಕಸಭೆ ಸದಸ್ಯರುಗಳು ಬರಲಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರಾಸಕ್ತಿ ತೋರಿರುವುದು ಹಾಗೂ ವಯೋಮಾನದ ಕಾರಣದಿಂದ ಹಾಲಿ ಸಂಸದರುಗಳಿಗೆ ಟಿಕೆಟ್ ನೀಡದೆ ಇರುವ ಬಗ್ಗೆ ಪಕ್ಷದ ಹೈಕಮಾಂಡ್ ಯೋಚಿಸುತ್ತಿರುವುದು ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಕಸರತ್ತು ನಡೆಸುವುದಕ್ಕೆ ಪ್ರಬಲವಾದ ಅಸ್ತ್ರ ದೊರೆತಂತಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾಜಿ ಸಚಿವ ಸಿ.ಟಿ.ರವಿ ಉಡುಪಿ – ಚಿಕ್ಕಮಗಳೂರು ಇಲ್ಲವೇ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಆರೋಗ್ಯ ಸಚಿವ ಡಾ.ಡಿ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ. ಈ ಕ್ಷೇತ್ರದಲ್ಲಿ ಸಂಸದರಾಗಿರುವ ಬಿ.ಎನ್.ಬಚ್ಚೇಗೌಡರಿಗೆ ವಯಸ್ಸಿನ ಕಾರಣದಿಂದಾಗಿ ಟಿಕೆಟ್ ದೊರೆಯುವುದು ಅನುಮಾನ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರ ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳೆರಡರಲ್ಲಿ ಸ್ಪರ್ಧೆ ಮಾಡಿ ಸೋತಿರುವ ಮಾಜಿ ಸಚಿವ ವಿ.ಸೋಮಣ್ಣನವರು ಬೆಂಗಳೂರು ದಕ್ಷಿಣ ಅಥವಾ ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೊನ್ನಾಳಿ ಕ್ಷೇತ್ರದಲ್ಲಿ ಸೋತಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ದಾವಣಗೆರೆ ಲೋಕಸಭೆ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ.

ಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹೆಚ್ಚಿನ ಆಸಕ್ತಿ ತೋರದಿರುವ ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರ ಕ್ಷೇತ್ರದಲ್ಲಿ ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪರ್ಧೆ ಮಾಡಲು ಉತ್ಸುಕರಾಗಿದ್ದಾರೆ. ಮಾಜಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿಯವರು ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.

ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ಕರುಣಾಕರ ರೆಡ್ಡಿಯವರು ಬಳ್ಳಾರಿ ಕ್ಷೇತ್ರದಿಂದ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿಜಯಪುರ ಕ್ಷೇತ್ರದಿಂದ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಉತ್ತರ ಕನ್ನಡ ಕ್ಷೇತ್ರದಿಂದ ಸಂಸತ್ ಚುನಾವಣೆಗೆ ಸ್ಪರ್ಧೆ ಮಾಡಲು ಒಲವನ್ನು ವ್ಯಕ್ತ ಪಡಿಸಿದ್ದಾರೆಂದು ಹೇಳಲಾಗಿದೆ.

ಹಾಲಿ ಸಂಸದರಿಗೆ ಕೊಕ್ : ಇದರ ಬೆನ್ನಲ್ಲೇ ಬಿಜೆಪಿಯ ಹಲವಾರು ಹಿರಿಯ ಲೋಕಸಭಾ ಸದಸ್ಯರಿಗೆ ತಳಮಳ ಹೆಚ್ಚಾಗಿದೆ. ಈ ಬಾರಿ ಅಂದಾಜು 10 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ದಾವಣಗೆರೆ ಸಂಸದ ಜಿ.ಸಿದ್ದೇಶ್ವರ ಹಾಗೂ ಹಾವೇರಿ – ಗದಗ ಸಂಸದ ಎಂ.ಪಿ. ಶಿವಕುಮಾರ್ ಉದಾಸಿ ಅವರು ಮುಂದಿನ ಲೋಕಸಭಾ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಅವರೂ ಸೇರಿದಂತೆ ಅಂದಾಜು 9 ಹಾಲಿ ಸಂಸದರಿಗೆ ಟಿಕೆಟ್ ಎಂದು ಮೂಲಗಳು ಹೇಳುತ್ತಿವೆ.

ತುಮಕೂರು ಸಂಸದ ಜಿ.ಎಸ್. ಬಸವರಾಜು (82), ದಾವಣಗೆರೆ ಸಂಸದ ಜಿ. ಸಿದ್ದೇಶ್ವರ (71), ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗ್ಡೆ (55), ಹಾವೇರಿ – ಗದಗ ಸಂಸದ ಶಿವಕುಮಾರ್ ಉದಾಸಿ (56), ಬಳ್ಳಾರಿಯ ಸಂಸದ ವೈ. ದೇವೇಂದ್ರಪ್ಪ (72), ಕೊಪ್ಪಳ ಸಂಸದ ಸಂಗಣ್ಣ ಕರಡಿ (73), ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್ (66), ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ (71), ಬಾಗಲಕೋಟೆ ಸಂಸದ ಪಿ.ಸಿ. ಗಡ್ಡಿಗೌಡರ್ (72), ಬೆಳಗಾವಿ ಸಂಸದ ಮಂಗಳಾ ಅಂಗಡಿ (60) ಅವರಿಗೆ ಟಿಕೆಟ್ ಸಿಕ್ಕುವುದು ಅನುಮಾನ ಎನ್ನಲಾಗಿದೆ.

ಪಾಕ್ ಉಗ್ರ ನಂಟು: ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ

ಇವರಲ್ಲಿ ದಾವಣಗೆರೆ ಸಂಸದರಾದ ಜಿ. ಸಿದ್ದೇಶ್ವರ ಅವರು ತಮ್ಮ ಪುತ್ರ ಜಿ.ಎಸ್. ಅನಿತ್ ಕುಮಾರ್ ಅವರಿಗೆ ಮುಂದಿನ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಬೇಕೆಂದು ಪಕ್ಷದ ಹೈಕಮಾಂಡ್‍ಗೆ ಈಗಗಾಲೇ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಅತ್ತ, ಕರಡಿ ಸಂಗಣ್ಣ ಸಹ ತಮ್ಮ ಪುತ್ರ ಅಮರೇಶ್ ಕರಡಿಯವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಕೆಲವು ಮೂಲಗಳ ಪ್ರಕಾರ, 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ಪಕ್ಷವು ಆಂತರಿಕ ಸರ್ವೆ ಕಾರ್ಯ ಆರಂಭಿಸಿದೆ. ವಯೋಮಾನ ಹಾಗೂ ಸರ್ವೆ ವರದಿಯ ಅನುಸಾರವಾಗಿ ಹೇಳುವುದಾದರೆ ಅಂದಾಜು 8ರಿಂದ 10 ಸಂಸದರಿಗೆ ಈ ಬಾರಿ ಟಿಕೆಟ್ ಇಲ್ಲ. ಪಕ್ಷದಲ್ಲಿ 2ನೇ ದರ್ಜೆಯ ನಾಯಕರನ್ನು ಬೆಳೆಸುವ ಸಲುವಾಗಿಯೂ ಅವರು ಹೀಗೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿ ಆತ್ಮಹತ್ಯೆ: ಪೊಲೀಸ್ ಸಿಬ್ಬಂದಿಗಳ ಅಮಾನತ್ತು

ಮೈಸೂರು, ನ. 22- ಪೊಲೀಸರು ವಿಚಾರಣೆಗೆ ಕರೆತಂದ ಯುವಕ ಠಾಣೆಯಿಂದ ತಪ್ಪಿಸಿಕೊಂಡು ಹೋಗಿ ಬೆಂಕಿಹಚ್ಚಿಕೊಂಡು ಸಾವಿಗೆ ಶರಣಾದ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನ ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ನಂಜನಗೂಡು ತಾಲೂಕು ಬಿಳಿಗೆರೆ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ನಂಜೇಶ್ ಹಾಗೂ ಕಾನ್‍ಸ್ಟೇಬಲ್ ಪ್ರಸನ್ನ ಕುಮಾರ್ ಅಮಾನತಾದ ಸಿಬ್ಬಂದಿಗಳು.

ಗಲಾಟೆ ವಿಚಾರದಲ್ಲಿ ನ. 12 ರಂದು ಬಿಳಿಗೆರೆ ಠಾಣೆಯ ಪಿಎಸ್‍ಐ ರವರು ಇಬ್ಬರು ಆರೋಪಿಗಳನ್ನ ಠಾಣೆಗೆ ಕರೆತಂದಿದ್ದಾರೆ. ಮತ್ತೊಬ್ಬ ಆರೋಪಿಯನ್ನ ವಶಕ್ಕೆ ಪಡೆಯಲು ಪಿಎಸ್‍ಐ ಅವರು ತೆರಳುವ ವೇಳೆ ಇಬ್ಬರು ಆರೋಪಿಗಳ ಜವಾಬ್ದಾರಿ ಕರ್ತವ್ಯದಲ್ಲಿದ್ದ ನಂಜೇಶ್ ಹಾಗೂ ಪ್ರಸನ್ನ ಕುಮಾರ್ ರವರದ್ದಾಗಿರುತ್ತದೆ.

41 ಕಾರ್ಮಿಕರನ್ನು ರಕ್ಷಿಸುವ ಅರ್ಧ ದಾರಿ ಸವೇಸಿರುವ ರಕ್ಷಣಾ ಸಿಬ್ಬಂದಿ

ಇಬ್ಬರು ಆರೋಪಿಗಳ ಪೈಕಿ ನಗರ್ಲೆ ಗ್ರಾಮದ ಕಿರಣ್ ಕುಮಾರ್(22) ಠಾಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಅಲ್ಲದೆ ಪೊಲೀಸರ ವಿಚಾರಣೆಗೆ ಹೆದರಿ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಕುಮಾರ್ ನವೆಂಬರ್ 13 ರಂದು ಸಾವನ್ನಪ್ಪಿದ್ದಾನೆ. ಕರ್ತವ್ಯಲೋಪ ಹಿನ್ನಲೆ ಇಬ್ಬರು ಸಿಬ್ಬಂದಿಗಳನ್ನ ಇಲಾಖಾ ವಿಚಾರಣೆಗೆ ಆದೇಶಿಸಿ ಅಮಾನತ್ತಿನಲ್ಲಿಡಲಾಗಿದೆ.

ಜ.22 ರಂದು ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ, 48 ದಿನ ಮಂಡಲೋತ್ಸವ ಆಚರಣೆ..

ಅಯೋಧ್ಯೆ, ನ.22- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮುಂದಿನ ವರ್ಷ 2024ರ ಜನವರಿ 22ರಿಂದ ಮಾರ್ಚ್ 10ರವರೆಗೆ 48 ದಿನಗಳ ಕಾಲ ನಡೆಯಲಿದೆ. ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ನಂತರ ಜ.22ರಿಂದಲೇ 48 ದಿನಗಳ ಮಂಡಲೋತ್ಸವ ಆರಂಭವಾಗಲಿದ್ದು, ಈ ಸೇವೆಯಲ್ಲಿ ದೇಶದ ಎಲ್ಲಾ ಜನತೆ ಭಾಗಿಯಾಗುವಂತೆ ಉಡುಪಿ ಪೇಜಾವರ ಮಠಾೀಧಿಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ.

ಜ.22ರಂದು ಅಭಿಜಿನ್ ಮುಹೂರ್ತದಲ್ಲಿ ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಭವ್ಯವಾದ ರಾಮ ಮಂದಿರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜ.22ರಂದು
ಲೋಕಾರ್ಪಣೆ ಮಾಡಲಿದ್ದಾರೆ.

ಶ್ರೀರಾಮ ಮಂದಿರ ಲೋಕಾರ್ಪಣೆಯ ಬಗ್ಗೆ ವಿವರ ನೀಡಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೋಟ್ಯಂತರ ಭಕ್ತರ ಆಶಯದಂತೆ ಅಯೋಧ್ಯೆ ರಾಮ ಮಂದಿರ ನಿರ್ಮಾಣಗೊಳ್ಳುತ್ತಿದೆ. ರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದ್ದು, ಸಿದ್ಥತೆಗಳು ಅಂತಿಮಗೊಳ್ಳುತ್ತಿದೆ. ಈಗಾಗಲೇ ಅಯೋಧ್ಯೆಯಲ್ಲಿ ಶ್ರೀರಾಮನ ಶಿಲಾ ವಿಗ್ರಹ ಸಿದ್ಧಗೊಳ್ಳುತ್ತಿದ್ದು, ಜ.17ರಂದು ಅಯೋಧ್ಯೆಗೆ ವಿಗ್ರಹದ ಮೆರವಣಿಗೆ ನಡೆಯಲಿದೆ ಎಂದರು.

ಪಾಕ್ ಉಗ್ರ ನಂಟು: ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ

ಇನ್ನು ಜ.17ರಂದು ಸರಯೂ ನದಿಯಲ್ಲಿ ಶ್ರೀರಾಮನ ಶಿಲಾಮೂರ್ತಿಗೆ ಅಭಿಷೇಕ ನೆರವೇರಿಸಿ, ಅಲ್ಲಿಂದ ಮತ್ತೆ ಮೆರವಣಿಗೆಯಲ್ಲಿ ಅಯೋಧ್ಯೆಗೆ ಕರೆತರಲಾಗುತ್ತದೆ. ಜ.18ರಂದು ಶಿಲಾಮೂರ್ತಿಯನ್ನು ಶ್ರೀರಾಮ ಜನ್ಮಸ್ಥಳದ ಮೂಲ ಸ್ಥಾನದಲ್ಲಿ ನಿಲ್ಲಿಸಿ ಜ.18ರಿಂದ ಜನವರಿ 20ರವರೆಗೆ ಜಲಾವಾಸ, ಧಾನ್ಯಾವಾಸ, ಶಿಲಾವಾಸ ವಿಧಿ ವಿಧಾನ ನೆರವೇರಿಸಲಾಗುತ್ತದೆ. ಬಳಿಕ ಜ.21ರಂದು ಪ್ರತಿಷ್ಠಾಪನೆಯ ಪೂರ್ವಸಿದ್ಧತೆ ನಡೆಸಿ ಜನವರಿ 22ರಂದು ಅಭಿಜಿನ್ ಮುಹೂರ್ತದಲ್ಲಿ ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಮಾಡಲಾಗುತ್ತದೆ ಎಂದು ರಾಮಮಂದಿರ ಲೋಕಾರ್ಪಣೆಯ ಧಾರ್ಮಿಕ ಕಾರ್ಯಗಳ ಬಗ್ಗೆ ವಿವರಿಸಿದರು.

ಮುಖ್ಯವಾಗಿ ದೇಶದಾದ್ಯಂತ ಇರುವ ಕೋಟ್ಯಂತ ಭಕ್ತರಿಗಿದ್ದ ಗೊಂದಲಕ್ಕೆ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉತ್ತರಿಸಿದ್ದಾರೆ. ಅಯ್ಯೋಧ್ಯೆಯ ಶ್ರೀರಾಮನಿಗೆ ಯಾವ ಹರಕೆ ಸಿಲ್ಲಿಸಬಹುದು ಎನ್ನುವ ಭಕ್ತರ ಪ್ರಶ್ನೆಗೆ ಶ್ರೀಗಳು ವಿವರಣೆ ನೀಡಿದ್ದಾರೆ. ಸಾಮಾನ್ಯವಾಗಿ ಶ್ರೀರಾಮನ ಮಂದಿರಗಳಲ್ಲಿ ಅಷ್ಟೋತ್ತರ, ಶತನಾಮಾವಳಿ, ಅರ್ಚನೆ, ಅಭಿಷೇಕ ಹರಕೆ ಸೇವೆಯನ್ನು ಭಕ್ತರು ಸಲ್ಲಿಸುತ್ತಾರೆ. ಆದರೆ ಅಯ್ಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಈ ರೀತಿಯ ಯಾವುದೇ ಪ್ರತ್ಯೇಕ ಹರಕೆಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

ಶ್ರೀರಾಮನಿಗೆ ಪ್ರತ್ಯೇಕ ಹರಕೆ ಸೇವೆ ಎಂಬುದು ಇರುವುದಿಲ್ಲ. ಬದಲಾಗಿ ಪ್ರತಿಯೊಬ್ಬ ಭಕ್ತರು ಮಾಡಿದ ಸಮಾಜ ಸೇವೆಯನ್ನು ರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ ಇರಲಿದೆ. ಜೊತೆಗೆ ಭಕ್ತರಿಗಾಗಿ ಆರತಿ, ತೀರ್ಥ ಹಾಗೂ ಉತ್ತರ ಭಾರತದ ಸಿಹಿಯ ನೈವೇದ್ಯ ಇರುತ್ತದೆ. ಇದು ಬಿಟ್ಟರೆ ಹರಕೆ, ಸೇವೆ ಯಾವುದೂ ಇಲ್ಲ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿವರಿಸಿದ್ದಾರೆ. ಇನ್ನು ಅಯ್ಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆಯ ಎಲ್ಲಾ ಕಾರ್ಯದಲ್ಲೂ ದೇಶದಾದ್ಯಂತ ಎಲ್ಲಾ ಭಕ್ತರು ಭಾಗಿಯಾಗುವಂತೆ ಶ್ರೀಗಳು ಮನವಿ ಮಾಡಿದ್ದಾರೆ.

ಎನ್‌ಸಿಇಆರ್‌ಟಿ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರ್ಪಡೆಗೆ ಶಿಫಾರಸು

ನವದೆಹಲಿ, ನ.22- ಸಾಮಾಜಿಕ ವಿಜ್ಞಾನಗಳ ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ರಚಿಸಿರುವ ಉನ್ನತ ಮಟ್ಟದ ಸಮಿತಿಯು ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಲು ಶಿಫಾರಸು ಮಾಡಿದೆ.

ಪ್ರೊಫೆಸರ್ ಸಿಐ ಐಸಾಕ್ ನೇತೃತ್ವದ ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಸಮಿತಿಯು ಪ್ರಸ್ತುತ ಪಠ್ಯಕ್ರಮಕ್ಕೆ ಹಲವಾರು ಮಾರ್ಪಾಡುಗಳನ್ನು ಪ್ರಸ್ತಾಪಿಸಿದೆ, ಇತಿಹಾಸ ಪಠ್ಯಕ್ರಮವನ್ನು ನಾಲ್ಕು ವಿಭಾಗಗಳಾಗಿ ಪುನರ್ರಚಿಸುವುದು ಸೇರಿದಂತೆ: ಶಾಸ್ತ್ರೀಯ, ಮಧ್ಯಕಾಲೀನ, ಬ್ರಿಟಿಷ್ ಮತ್ತು ಆಧುನಿಕ ಭಾರತ. ಸುಭಾಷ್ ಚಂದ್ರ ಬೋಸ್ ಅವರಂತಹ ರಾಷ್ಟ್ರೀಯ ವ್ಯಕ್ತಿಗಳನ್ನು ಸೇರಿಸಿಕೊಳ್ಳುವಂತೆಯೂ ಸಮಿತಿ ಸಲಹೆ ನೀಡಿದೆ.

ಪ್ರಸ್ತಾವನೆಯು ವೇದಗಳು ಮತ್ತು ಆಯುರ್ವೇದಕ್ಕೆ ಸಂಬಂಧಿಸಿದ ಪಠ್ಯಪುಸ್ತಕಗಳಂತಹ ಪೂಜ್ಯ ಗ್ರಂಥಗಳ ಸೇರ್ಪಡೆಯನ್ನೂ ಒಳಗೊಂಡಿದೆ. ಈ ಶಿಫಾರಸುಗಳು ಮುಂಬರುವ ಎನ್‍ಸಿಇಆರ್‍ಟಿ ಪಠ್ಯಪುಸ್ತಕಗಳ ರಚನೆಗೆ ಮಾರ್ಗದರ್ಶನ ನೀಡುವ ಸಮಾಜ ವಿಜ್ಞಾನದ ನಿರ್ಣಾಯಕ ಸ್ಥಾನದ ಪತ್ರಿಕೆಗೆ ಅವಿಭಾಜ್ಯವಾಗಿದೆ.

ಸಮಿತಿಯ ಸಲಹೆಗಳನ್ನು ಜುಲೈನಲ್ಲಿ ಸ್ಥಾಪಿಸಲಾದ 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ ಪರಿಶೀಲಿಸಬಹುದು. ಈ ಸಮಿತಿಯು ಆಯಾ ತರಗತಿಗಳಿಗೆ ಪಠ್ಯಕ್ರಮ, ಪಠ್ಯಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಅಂತಿಮಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.

ಪಾಕ್ ಉಗ್ರ ನಂಟು: ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ

ಇತಿಹಾಸವನ್ನು ನಾಲ್ಕು ಅವಧಿಗಳಾಗಿ ವರ್ಗೀಕರಿಸಲು ಸಮಿತಿಯು ಶಿಫಾರಸು ಮಾಡಿದೆ: ಶಾಸ್ತ್ರೀಯ, ಮಧ್ಯಕಾಲೀನ, ಬ್ರಿಟಿಷ್ ಯುಗ ಮತ್ತು ಆಧುನಿಕ ಭಾರತ. ಇಲ್ಲಿಯವರೆಗೆ, ಭಾರತೀಯ ಇತಿಹಾಸವನ್ನು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಭಾರತ ಎಂದು ಮೂರು ಅವಧಿಗಳಾಗಿ ವರ್ಗೀಕರಿಸಲಾಗಿದೆ ಎಂದು ಐಸಾಕ್ ತಿಳಿಸಿದ್ದಾರೆ.

ಶಾಸ್ತ್ರೀಯ ಅವಧಿಯಲ್ಲಿ, ಭಾರತೀಯ ಮಹಾಕಾವ್ಯಗಳು, ರಾಮಾಯಣ ಮತ್ತು ಮಹಾಭಾರತಗಳನ್ನು ಕಲಿಸಲು ನಾವು ಸಲಹೆ ನೀಡಿದ್ದೇವೆ. ರಾಮನಂತಹ ವ್ಯಕ್ತಿಗಳು ಮತ್ತು ಮಹಾಕಾವ್ಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳುವಳಿಕೆಯನ್ನು ಒದಗಿಸುವಂತೆ ನಾವು ಪ್ರಸ್ತಾಪಿಸುತ್ತೇವೆ ಎಂದು ಅವರು ಹೇಳಿದರು. ಪ್ರತಿ ತರಗತಿಯ ಗೋಡೆಗಳ ಮೇಲೆ ಸ್ಥಳೀಯ ಭಾಷೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಕೆತ್ತುವಂತೆ ಸಮಿತಿಯು ಶಿಫಾರಸು ಮಾಡಿದೆ.

ಖ್ಯಾತ ನೇತ್ರ ತಜ್ಞ ಬದ್ರಿನಾಥ್ ಇನ್ನಿಲ್ಲ

ಇದರ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ಐಸಾಕ್, ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯಂತಹ ಸಾಮಾಜಿಕ ಮೌಲ್ಯಗಳಿಗೆ ಒತ್ತು ನೀಡುವ ಉದಾತ್ತ ಆದರ್ಶಗಳನ್ನು ಪೀಠಿಕೆಯು ಒಳಗೊಂಡಿದೆ. ಆದ್ದರಿಂದ, ಪ್ರತಿಯೊಬ್ಬರೂ ಅದರ ಸಾರವನ್ನು ಗ್ರಹಿಸಲು ಮತ್ತು ಆಂತರಿಕಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ತರಗತಿಯ ಗೋಡೆಗಳ ಮೇಲೆ ಅದನ್ನು ಪ್ರದರ್ಶಿಸಲು ನಾವು ಪ್ರಸ್ತಾಪಿಸುತ್ತೇವೆ ಎಂದಿದ್ದಾರೆ.

41 ಕಾರ್ಮಿಕರನ್ನು ರಕ್ಷಿಸುವ ಅರ್ಧ ದಾರಿ ಸವೇಸಿರುವ ರಕ್ಷಣಾ ಸಿಬ್ಬಂದಿ

ಸಿಲ್ಕ್ಯಾರಾ,ನ.22- ಉತ್ತರಾಖಂಡದಲ್ಲಿ ಕುಸಿದ ಸುರಂಗದೊಳಗೆ ಹತ್ತು ದಿನಗಳಿಂದ ಸಿಕ್ಕಿಬಿದ್ದ 41 ಕಾರ್ಮಿಕರನ್ನು ತಲುಪಲು ರಕ್ಷಣಾಕಾರರು ಈಗಾಗಲೇ ಅರ್ಧ ಗುಡ್ಡವನ್ನು ಕೊರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉತ್ತರಾಖಂಡ್‍ನ 4.5 ಕಿಮೀ ಸುರಂಗದಲ್ಲಿ ನ.12ರ ಆರಂಭದಲ್ಲಿ ಪುರುಷರು ಸಿಲುಕಿಕೊಂಡಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಬೆಳಕು, ಆಮ್ಲಜನಕ, ಆಹಾರ, ನೀರು ಮತ್ತು ಔಷಧಿಗಳನ್ನು ರವಾನಿಸಲಾಗುತ್ತಿದೆ.

ರಕ್ಷಣಾ ಕಾರ್ಯಕರ್ತರು ಅಂದಾಜು 60 ಮೀಟರ್‍ನ 32 ಮೀಟರ್‍ಗಳನ್ನು ಕೊರೆದಿದ್ದಾರೆ, ಪುರುಷರು ತೆವಳಲು ಸಾಕಷ್ಟು ಅಗಲವಾದ ಪೈಪ್ ಮೂಲಕ ತಳ್ಳಲು ಅದನ್ನು ತೆರವುಗೊಳಿಸಬೇಕು ಎಂದು ರಕ್ಷಣಾ ಪ್ರಯತ್ನದ ನೇತೃತ್ವದ ನಿವೃತ್ತ ಸೇನಾ ಅಧಿಕಾರಿ ದೀಪಕ್ ಪಾಟೀಲ್ ಹೇಳಿದ್ದಾರೆ.

ಲಕ್ನೋದಲ್ಲಿ ವಿಶ್ವಕಪ್ ಫೈನಲ್ ನಡೆದಿದ್ದರೆ ಭಾರತ ಗೆಲ್ತಿತ್ತು: ಅಖಿಲೇಶ್

ವೈದ್ಯಕೀಯ ಎಂಡೋಸ್ಕೋಪಿ ಕ್ಯಾಮೆರಾವನ್ನು ಸಣ್ಣ ಪೈಪ್‍ಲೈನ್ ಮೂಲಕ ತಳ್ಳಿದ ನಂತರ, ಸುರಂಗದ ಒಳಗಿನಿಂದ ಮಂಗಳವಾರ ಮೊದಲ ಚಿತ್ರಗಳು ಹೊರಹೊಮ್ಮಿದವು, ಬಿಳಿ ಮತ್ತು ಹಳದಿ ಬಣ್ಣದ ಹಾರ್ಡ್‍ಹ್ಯಾಟ್‍ಗಳ ಕಾರ್ಮಿಕರು ಸೀಮಿತ ಜಾಗದಲ್ಲಿ ನಿಂತು ರಕ್ಷಕರೊಂದಿಗೆ ಸಂವಹನ ನಡೆಸುತ್ತಿದ್ದಾರೆ.

ಸುರಂಗ ಕುಸಿತಕ್ಕೆ ಕಾರಣವೇನು ಎಂದು ಅಧಿಕಾರಿಗಳು ಹೇಳಿಲ್ಲ, ಆದರೆ ಈ ಪ್ರದೇಶವು ಭೂಕುಸಿತ, ಭೂಕಂಪ ಮತ್ತು ಪ್ರವಾಹಕ್ಕೆ ಗುರಿಯಾಗುತ್ತದೆ. ಪರ್ವತ ಪ್ರದೇಶಗಳಲ್ಲಿ ಕೊರೆತದ ಸ್ನ್ಯಾಗ್‍ಗಳಿಂದ ಪುರುಷರನ್ನು ಹೊರತರುವ ಪ್ರಯತ್ನಗಳು ನಿಧಾನಗೊಂಡಿವೆ.

ಪಾಕ್ ಉಗ್ರ ನಂಟು: ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ

ಜಮ್ಮು, ನ 22 (ಪಿಟಿಐ) ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕ ನಂಟು ಹೊಂದಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ವೈದ್ಯರು ಮತ್ತು ಪೊಲೀಸ್ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರದ ಎಸ್‍ಎಂಎಚ್‍ಎಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ನಿಸಾರ್-ಉಲï-ಹಸನ್, ಕಾನ್ಸ್‍ಟೇಬಲ್ ಅಬ್ದುಲ್ ಮಜೀದ್ ಭಟ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಲ್ಯಾಬೋರೇಟರಿ ಬೇರರ್ ಅಬ್ದುಲ್ ಸಲಾಂ ರಾಥರ್ ಮತ್ತು ಶಿಕ್ಷಣ ಇಲಾಖೆಯ ಶಿಕ್ಷಕ ಫಾರೂಕ್ ಅಹ್ಮದ್ ಮಿರ್ ಅವರನ್ನು ಸಂವಿಧಾನದ 11ನೇ ವಿಯ ಪ್ರಕಾರ ವಜಾಗೊಳಿಸಲಾಗಿದೆ.

ಲಕ್ನೋದಲ್ಲಿ ವಿಶ್ವಕಪ್ ಫೈನಲ್ ನಡೆದಿದ್ದರೆ ಭಾರತ ಗೆಲ್ತಿತ್ತು: ಅಖಿಲೇಶ್

ಕಳೆದ ಮೂರು ವರ್ಷಗಳಲ್ಲಿ, ಕೇಂದ್ರಾಡಳಿತ ಪ್ರದೇಶದ ಆಡಳಿತವು ಸಂವಿಧಾನದ 311 (2) (ಸಿ) ಅಡಿಯಲ್ಲಿ 50 ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದೆ, ಅವರು ಸರ್ಕಾರದೊಳಗೆ ನೆರಳಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಸಾರ್ವಜನಿಕ ಖಜಾನೆಯಿಂದ ಸಂಬಳ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡುತ್ತ ಭಯೋತ್ಪಾದಕರ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ.

ಹಲವು ವರ್ಷಗಳ ನಂತರ ವೇದಿಕೆ ಹಂಚಿಕೊಂಡ ಮೋದಿ- ವಸುಂಧರಾ

ಜೈಪುರ,ನ.22- ರಾಜಸ್ಥಾನದಲ್ಲಿ ಮತದಾನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಚುನಾವಣಾ ರ್ಯಾಲಿಯಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್ ಮತ್ತು ಅವರ ನಡುವೆ ಎಲ್ಲವೂ ಸರಿಯಾಗಿದೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆ ಘೋಷಣೆಯಾದ ನಂತರ ಪ್ರಧಾನಿ ಮೋದಿ ಮತ್ತು ರಾಜೆ ಒಟ್ಟಿಗೆ ಹಾಜರಿದ್ದ ಮೊದಲ ರ್ಯಾಲಿ ಇದಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಸ್ಥಾನದ ರೇಸ್‍ನಲ್ಲಿರುವ ನಾಯಕರಲ್ಲಿ ಎಂಎಸ್ ರಾಜೆ ಅವರನ್ನು ಪರಿಗಣಿಸಲಾಗಿದೆ.

ಅವಳಿ ಸಹೋದರನನ್ನು ಕೊಂದ 5 ವರ್ಷದ ಬಾಲಕ

ಬರಾನ್ ಜಿ¯್ಲÉಯಲ್ಲಿ ನಡೆದ ರ್ಯಾಲಿಯಲ್ಲಿ ರಾಜೆ ಅವರು ಪ್ರಧಾನಿ ಮೋದಿಯವರನ್ನು ಹೊಗಳಿದರು ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗಳಿಸಲು ದೇಶದ ಜನರು ಕಾತುರದಿಂದ ಕಾಯುತ್ತಿz್ದÁರೆ ಎಂದು ಹೇಳಿದರು.

ಇಡೀ ದೇಶವು ಪ್ರಧಾನಿ ಮೋದಿಯವರ ಶಕ್ತಿಯನ್ನು ಗುರುತಿಸುತ್ತದೆ ಮತ್ತು ಈಗ ಇಡೀ ಜಗತ್ತು ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಮೋದಿಯವರನ್ನು ವೇದಿಕೆಗೆ ದೊಡ್ಡ ಹಾರ ಹಾಕಿ ಸ್ವಾಗತಿಸಲಾಯಿತು. ಮಾಜಿ ಸಿಎಂ ರಾಜೆ ಮತ್ತು ಮೋದಿ ಇಬ್ಬರೂ ಚೌಕಟ್ಟಿನಲ್ಲಿದ್ದರು. ಆಕೆಯ ಪುತ್ರ ಹಾಗೂ ಜಲಾವರ್-ಬರನ್ ಸಂಸದ ದುಶ್ಯಂತ್ ಸಿಂಗ್ ಮತ್ತು ಪಕ್ಷದ ಸ್ಥಳೀಯ ಅಭ್ಯರ್ಥಿಗಳು ಚುನಾವಣಾ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನಿ ಮೋದಿಯವರ ಒಂದು ಬದಿಯಲ್ಲಿ ರಾಜೇ ಮತ್ತು ಇನ್ನೊಂದು ಬದಿಯಲ್ಲಿ ದುಶ್ಯಂತ್ ಕುಳಿತಿದ್ದರು. ಕಾರ್ಯಕ್ರಮದ ವೇಳೆ, ಪ್ರಧಾನಿ ಮೋದಿ ಅವರಿಬ್ಬರೊಂದಿಗೆ ಮಾತನಾಡುತ್ತಿದ್ದರು. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ನವೆಂಬರ್ 25 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಲಕ್ನೋದಲ್ಲಿ ವಿಶ್ವಕಪ್ ಫೈನಲ್ ನಡೆದಿದ್ದರೆ ಭಾರತ ಗೆಲ್ತಿತ್ತು: ಅಖಿಲೇಶ್

ಇಟಾವಾ,ನ.22- ಏಕದಿನ ವಿಶ್ವಕಪ್‍ನ ಅಂತಿಮ ಪಂದ್ಯವನ್ನು ಗುಜರಾತ್‍ನ ಬದಲಿಗೆ ಲಕ್ನೋದಲ್ಲಿ ಆಯೋಜಿಸಿದ್ದರೆ ಆಸ್ಟ್ರೇಲಿಯ ವಿರುದ್ಧ ಟೀಂ ಇಂಡಿಯಾ ಗೆಲ್ಲುತ್ತಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ಗುಜರಾತ್‍ನಲ್ಲಿ ನಡೆದ ಪಂದ್ಯ (ವಿಶ್ವಕಪ್ 2023 ಫೈನಲï), ಅದು ಲಕ್ನೋದಲ್ಲಿ ನಡೆದಿದ್ದರೆ, ಅವರಿಗೆ (ಟೀಮ್ ಇಂಡಿಯಾ) ಅನೇಕರ ಆಶೀರ್ವಾದ ಸಿಗುತ್ತಿತ್ತು ಪಂದ್ಯ ಅಲ್ಲಿ (ಲಕ್ನೋ) ನಡೆದಿದ್ದರೆ, ಟೀಂ ಇಂಡಿಯಾ ಭಗವಾನ್ ವಿಷ್ಣು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಆಶೀರ್ವಾದವನ್ನು ಪಡೆದಿದ್ದರೆ ಗೆಲ್ಲುತ್ತಿತ್ತು. ಈಗ ಪಿಚ್‍ನಲ್ಲಿ ಸ್ವಲ್ಪ ಸಮಸ್ಯೆ ಇದೆ ಎಂದು ಕೇಳಬಹುದು ಎಂದು ಅವರು ಪರೋಕ್ಷವಾಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ಪರಿಹಾರದಿಂದ ಮಣಿಪುರ ಸಮಸ್ಯೆ ನಿವಾರಣೆ: ಸೇನೆ

2024 ರ ಚುನಾವಣೆಯ ನಂತರ ದೇಶದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಖ್ಯಾತ ನೇತ್ರ ತಜ್ಞ ಬದ್ರಿನಾಥ್ ಇನ್ನಿಲ್ಲ

ಚೆನ್ನೈ,ನ.22- ಭಾರತದ ಅತಿದೊಡ್ಡ ದತ್ತಿ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾದ ಶಂಕರ ನೇತ್ರಾಲಯವನ್ನು ಸ್ಥಾಪಿಸಿದ ಖ್ಯಾತ ವಿಟ್ರೊರೆಟಿನಲ್ ಸರ್ಜನ್ ಡಾ.ಎಸ್.ಎಸ್. ಬದ್ರಿನಾಥ್ ಅವರು ನಿಧನರಾಗಿದ್ದಾರೆ.

ಡಾ ಬದ್ರಿನಾಥ್ ಅವರು ಫೆಬ್ರವರಿ 24, 1940 ರಂದು ಚೆನ್ನೈನ ಟ್ರಿಪ್ಲಿಕೇನ್‍ನಲ್ಲಿ ಜನಿಸಿದರು. ಅವರು ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದರು. ಅವರು 1963 ಮತ್ತು 1968 ರ ನಡುವೆ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವೈದ್ಯಕೀಯ ಶಾಲೆ ಮತ್ತು ಬ್ರೂಕ್ಲಿನ್ ಐ ಮತ್ತು ಇಯರ್ ಇನ್‍ಫರ್ಮರಿಯಲ್ಲಿ ಗ್ರಾಸ್‍ಲ್ಯಾಂಡ್ ಆಸ್ಪತ್ರೆಯ ನೇತ್ರವಿಜ್ಞಾನದಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನವನ್ನು ನಡೆಸಿದರು.

ಅಮೇರಿಕಾದಲ್ಲಿ ಡಾ.ಬದ್ರಿನಾಥ್ ಡಾ.ವಾಸಂತಿಯವರನ್ನು ಭೇಟಿಯಾದರು. ಒಂದು ವರ್ಷದ ನಂತರ, ಅವರು 1970 ರವರೆಗೆ ಡಾ ಚಾಲ್ಸರ್ ಎಲ್ ಷೆಪೆನ್ಸ್ ಅವರ ಅಡಿಯಲ್ಲಿ ಬೋಸ್ಟನ್‍ನ ಮ್ಯಾಸಚೂಸೆಟ್ಸ್ ಐ ಮತ್ತು ಇಯರ್ ಇನ್‍ಫರ್ಮರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ಸ್ (ಕೆನಡಾ) ಮತ್ತು ನೇತ್ರಶಾಸ್ತ್ರದಲ್ಲಿನ ಅಮೇರಿಕನ್ ಬೋರ್ಡ್ ಪರೀಕ್ಷೆಯ ಫೆಲೋ ಪರೀಕ್ಷೆಯಲ್ಲಿ ಬಹುತೇಕ ಏಕಕಾಲದಲ್ಲಿ ಉತ್ತೀರ್ಣರಾದರು.

1970 ರಲ್ಲಿ ವೈದ್ಯರು ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಮರಳಿದರು. ಅವರು ಆರು ವರ್ಷಗಳ ಕಾಲ ಅಡ್ಯಾರ್‍ನ ಸ್ವಯಂಸೇವಾ ಆರೋಗ್ಯ ಸೇವೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದರು. ನಂತರ ಅವರು ನೇತ್ರವಿಜ್ಞಾನ ಮತ್ತು ವಿಟ್ರೊರೆಟಿನಲ್ ಶಸ್ತ್ರಚಿಕಿತ್ಸೆಯಲ್ಲಿ ತಮ್ಮ ಖಾಸಗಿ ಅಭ್ಯಾಸವನ್ನು ಆಸ್ಪತ್ರೆ ಸ್ಥಾಪಿಸಿದರು.
1978 ರಲ್ಲಿ, ಡಾ ಬದ್ರಿನಾಥ್ ಅವರು ವೈದ್ಯಕೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿದರು, ಅದರಲ್ಲಿ ಶಂಕರ ನೇತ್ರಾಲಯವು ಆಸ್ಪತ್ರೆಯ ಘಟಕವಾಗಿದೆ, ನೋಂದಾಯಿತ ಸಮಾಜ ಮತ್ತು ದತ್ತಿ ಲಾಭರಹಿತ ನೇತ್ರ ಸಂಸ್ಥೆಯಾಗಿದೆ.

ರಾಜಕೀಯ ಪರಿಹಾರದಿಂದ ಮಣಿಪುರ ಸಮಸ್ಯೆ ನಿವಾರಣೆ: ಸೇನೆ

ಮುಂದಿನ 24 ವರ್ಷಗಳಲ್ಲಿ, ಅವರು ಮತ್ತು ಅವರ ಸಹೋದ್ಯೋಗಿಗಳು ಭಾರತದಲ್ಲಿ ಅಂಧತ್ವವನ್ನು ಎದುರಿಸಲು ಸೈನ್ಯವನ್ನು ರಚಿಸಲು ನೇತ್ರಶಾಸ್ತ್ರಜ್ಞರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಬೋಧನೆ ಮತ್ತು ತರಬೇತಿ ನೀಡುವುದರ ಜೊತೆಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಕಣ್ಣಿನ ಆರೈಕೆಯನ್ನು ನೀಡಿದರು ಮತ್ತು ಸಂಶೋಧನೆಯ ಮೂಲಕ ಕಣ್ಣಿನ ಆರೈಕೆ ಸಮಸ್ಯೆಗಳಿಗೆ ಸುಸ್ಥಿರವಾದ ಸ್ಥಳೀಯ ಪರಿಹಾರಗಳನ್ನು ಹುಡುಕುವುದನ್ನು ಮುಂದುವರೆಸಿದರು.

ವರ್ಷಗಳಾದ್ಯಂತ ಅವರ ದತ್ತಿ ಕಾರ್ಯಗಳಿಗಾಗಿ, ಡಾ ಬದರಿನಾಥ್ ಅವರು ಭಾರತ ಸರ್ಕಾರದಿಂದ ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು, ಇದು ಕ್ರಮವಾಗಿ ದೇಶದ ಮೂರನೇ ಮತ್ತು ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾಗಿದೆ.

ನಿರ್ಬಂಧದ ನಡುವೆಯೂ ಸ್ಪೈ ಉಪಗ್ರಹ ಉಡಾಯಿಸಿದ ಕಿಮ್

ಕೊರಿಯಾ,ನ.22- ವಿಶ್ವಸಂಸ್ಥೆ ನಿರ್ಬಂಧಗಳ ನಡುವೆಯೂ ಉತ್ತರ ಕೊರಿಯಾ ಸ್ಪೈ ಉಪಗ್ರಹವನ್ನು ಉಡಾವಣೆ ಮಾಡಿದೆ, ಎರಡು ಹಿಂದಿನ ವೈಫಲ್ಯಗಳ ನಂತರ ಮಿಲಿಟರಿ ಪತ್ತೇದಾರಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ.

ಉತ್ತರ ಫಿಯೋಂಗನ್ ಪ್ರಾಂತ್ಯದಿಂದ ನಿನ್ನೆ ರಾತ್ರಿ ಉಪಗ್ರಹವನ್ನು ಹೊತ್ತ ರಾಕೆಟ್ ಮತ್ತು ವಿಚಕ್ಷಣ ಉಪಗ್ರಹ ಮಲ್ಲಿಗ್ಯಾಂಗ್-1 ಅನ್ನು ನಿಖರವಾಗಿ ಅದರ ಕಕ್ಷೆಯಲ್ಲಿ ಇರಿಸಿತು ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೊರಿಯಾ ಮಾಧ್ಯಮಗಳಲ್ಲಿನ ಚಿತ್ರಗಳು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ನಗುತ್ತಿರುವ ಮತ್ತು ಕೈ ಬೀಸುತ್ತಿರುವುದನ್ನು ತೋರಿಸಿದವು, ಬಿಳಿ-ಸಮವಸ್ತ್ರದ ವಿಜ್ಞಾನಿಗಳು ಮತ್ತು ಎಂಜಿನಿಯರ್‍ಗಳು ಯಶಸ್ವಿ ಸ್ಪೋಟವನ್ನು ವೀಕ್ಷಿಸಿದ ನಂತರ ಚಪ್ಪಾಳೆ ತಟ್ಟಿ ತಟ್ಟಿದರು.

ಮಹಿಳೆ ಮೇಲೆ ಕ್ರೌರ್ಯ: ಕುಟುಂಬದವರ ವಿರುದ್ಧ ಎಫ್‍ಐಆರ್

ಇದು ವಿಶ್ವಸಂಸ್ಥೆ ನಿರ್ಬಂಧಗಳ ಅಲಜ್ಜೆಯ ಉಲ್ಲಂಘನೆ ಮತ್ತು ಪ್ರದೇಶವನ್ನು ಅಸ್ಥಿರಗೊಳಿಸಬಹುದು ಎಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕೂಡ ಉಡಾವಣೆಯನ್ನು ಖಂಡಿಸಿದ್ದಾರೆ.

ಮಿಲಿಟರಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 2018 ರ ಮಿಲಿಟರಿ ಒಪ್ಪಂದವನ್ನು ಭಾಗಶಃ ಅಮಾನತುಗೊಳಿಸುವ ಮೂಲಕ ದಕ್ಷಿಣ ಕೊರಿಯಾ ಪ್ರತಿಕ್ರಿಯಿಸಿತು, ಉತ್ತರ ಕೊರಿಯಾದ ಗಡಿಯಲ್ಲಿ ಕಣ್ಗಾವಲು ಕಾರ್ಯಾಚರಣೆಯನ್ನು ಪುನರಾರಂಭಿಸುವುದಾಗಿ ಹೇಳಿದೆ.

ಮೇ ಮತ್ತು ಆಗಸ್ಟ್‍ನಲ್ಲಿ ಪತ್ತೇದಾರಿ ಉಪಗ್ರಹವನ್ನು ಕಕ್ಷೆಗೆ ಸೇರಿಸಲು ಉತ್ತರ ಕೊರಿಯಾದ ಹಿಂದಿನ ಪ್ರಯತ್ನಗಳು ವಿಫಲವಾದವು. ಸಿಯೋಲ, ಟೋಕಿಯೋ ಮತ್ತು ವಾಷಿಂಗ್ಟನ್ ಪಯೋಂಗ್ಯಾಂಗ್‍ಗೆ ಮತ್ತೊಂದು ಉಡಾವಣೆಯೊಂದಿಗೆ ಮುಂದುವರಿಯದಂತೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಉತ್ತರ ಕೊರಿಯಾ ಉದ್ಧಟತನದಿಂದ ಈ ರಾಕೆಟ್ ಉಡಾವಣೆ ಮಾಡಿದೆ.