Home Blog Page 1799

ಹೈದರಾಬಾದ್ : ಸಚಿವ ಜಮೀರ್ ತಂಗಿದ್ದ ಹೊಟೇಲ್ ಮೇಲೆ ಪೊಲೀಸರ ದಾಳಿ

ಹೈದರಾಬಾದ್, ನ.23- ಮತದಾರರಿಗೆ ಹಂಚಲು ಹಣ ಸಂಗ್ರಹಿಸಿಟ್ಟಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಕರ್ನಾಟಕದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಂಗಿದ್ದ ಹೊಟೇಲ್ ಮೇಲೆ ಹೈದರಾಬಾದ್ ಪೊಲೀಸರು ದಾಳಿ ನಡೆಸಿರುವ ಘಟನೆ ತಡರಾತ್ರಿ ನಡೆಸಿದ್ದಾರೆ.

ಜಮೀರ್ ಅಹಮ್ಮದ್ ಖಾನ್ ಉಳಿದುಕೊಂಡಿದ್ದ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ತಡರಾತ್ರಿ ದಾಳಿ ನಡೆಸಲಾಗಿದೆ. ಅಕ್ರಮವಾಗಿ ಹಣ ಸಾಗಾಟ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ದಾಳಿ ನಡೆಸಿ ಜಮೀರ್ ಮತ್ತು ಬೆಂಬಲಿಗರ ಕೊಠಡಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಎರಡು ದಿನ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ

ಇನ್ನು ಈ ಬಗ್ಗೆ ಜಮೀರ್ ಅಹಮ್ಮದ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಉಳಿದುಕೊಂಡಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ, ಅವರಿಗೆ ಏನು ಸಿಕ್ಕಿಲ್ಲ.

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದ ಬಿಆರ್‍ಎಸ್ ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿ ನಡೆಸಿವೆ. ಇದು ನಮ್ಮನ್ನು ಹೆದರಿಸಿ ಹಿಂದಕ್ಕೆ ಕಳುಹಿಸುವ ತಂತ್ರವಾಗಿದೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ದಾಳಿಯು ನಮ್ಮನ್ನು ಹೆದರಿಸಿ ಹಿಮ್ಮೆಟ್ಟಿಸುವ ಕುತಂತ್ರವಾಗಿದೆ. ಇದಕ್ಕೆಲ್ಲ ನಾವು ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ.

ನಿಹಾಂಗ್ ಸಿಖ್‍ರ ದಾಳಿಗೆ ಪೊಲೀಸ್ ಅಧಿಕಾರಿ ಬಲಿ

ಕಪುರ್ತಲಾ,ನ.23- ಪಂಜಾಬ್‍ನ ಕಪುರ್ತಲದ ಗುರುದ್ವಾರವೊಂದರಲ್ಲಿ ನಿಹಾಂಗ್ ಸಿಖ್‍ರ ಗುಂಪೊಂದು ಗುಂಡು ಹಾರಿಸಿದ ಪರಿಣಾಮ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗುರುದ್ವಾರದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರುದ್ವಾರವನ್ನು ಅತಿಕ್ರಮಿಸಿದ ಆರೋಪದ ಮೇಲೆ ಪೊಲೀಸರು ನಿಹಾಂಗ್ ಪಂಗಡದ 10 ಜನರನ್ನು ಬಂಧಿಸಿದ್ದಾರೆ, ಆದರೆ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಆವರಣವನ್ನು ತೆರವುಗೊಳಿಸಲು ಹೋದಾಗ ನಿಹಾಂಗ್‍ಗಳಲ್ಲಿ ಒಬ್ಬರು ಪೊಲೀಸರ ಮೇಲೆ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ನಿಹಾಂಗ್‍ಗಳು ಅವರ ಮೇಲೆ ಗುಂಡು ಹಾರಿಸಿದಾಗ ಪೊಲೀಸರು ರಸ್ತೆಯಲ್ಲಿ ನಿಂತಿದ್ದರು ಎಂದು ಕಪುರ್ತಲಾ ಪೊಲೀಸ್ ವರಿಷ್ಠಾಧಿಕಾರಿ (ಪ್ರಧಾನ ಕಛೇರಿ) ತೇಜ್‍ಬೀರ್ ಸಿಂಗ್ ಹುಂದಾಲ್ ಪಿಟಿಐಗೆ ತಿಳಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಕನಿಷ್ಠ 30 ನಿಹಾಂಗ್‍ಗಳು ಇನ್ನೂ ಗುರುದ್ವಾರದೊಳಗೆ ಇದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಅವಧಿ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ

1699 ರಲ್ಲಿ ಗುರು ಗೋಬಿಂದ್ ಸಿಂಗ್ ಅವರಿಂದ ಖಾಲ್ಸಾವನ್ನು ರಚಿಸಿದಾಗ ನಿಹಾಂಗ್ ಸಿಖ್ ಯೋಧರ ಆದೇಶವಾಗಿದೆ. ಅವರು ತಮ್ಮ ನೀಲಿ ನಿಲುವಂಗಿಗಳು, ಅಲಂಕರಿಸಿದ ಪೇಟಗಳಿಂದ ಗುರುತಿಸಲ್ಪಡುತ್ತಾರೆ ಮತ್ತು ಆಗಾಗ್ಗೆ ಕತ್ತಿಗಳು ಮತ್ತು ಈಟಿಗಳಂತಹ ಆಯುಧಗಳನ್ನು ಹೊತ್ತಿರುವುದನ್ನು ಕಾಣಬಹುದು. 2020 ರಲ್ಲಿ, ನಿಹಾಂಗ್ ಪ್ರತಿಭಟನಾಕಾರರು ಕೋವಿಡ್ ಲಾಕ್‍ಡೌನ್ ಹೇರಲು ಪ್ರಯತ್ನಿಸುತ್ತಿದ್ದಾಗ ಪಟಿಯಾಲಾದಲ್ಲಿ ಪೊಲೀಸ್ ಅಧಿಕಾರಿಯ ಕೈಯನ್ನು ಕತ್ತರಿಸಿದ್ದರು.

ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ ಅಪರಾಧ ವಿಭಾಗಕ್ಕೆ ವರ್ಗಾವಣೆ

ಮುಂಬೈ, ನ 23 (ಪಿಟಿಐ) ಮಹಾದೇವ್ ಬೆಟ್ಟಿಂಗ್ ಆ್ಯಪ್‍ಗೆ ಸಂಬಂಸಿದ 15,000 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಜೂಜು ಮತ್ತು ಸೈಬರ್ ವಂಚನೆಗೆ ಸಂಬಂಧಿಸಿದಂತೆ ಇಲ್ಲಿ ದಾಖಲಾಗಿರುವ ಎಫ್‍ಐಆರ್ ಅನ್ನು ತನಿಖೆಗಾಗಿ ಮುಂಬೈ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ಪ್ರಕರಣದ ತನಿಖೆಯ ವ್ಯಾಪ್ತಿಯನ್ನು ಪರಿಗಣಿಸಿ, ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ಅದನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದಾರೆ ಎಂದು ಅವರು ಹೇಳಿದರು. 2019 ರಿಂದ ವಂಚನೆ ಮಾಡಿದ ಆರೋಪದ ಮೇಲೆ ಆ್ಯಪ್‍ನ ಪ್ರವರ್ತಕ ಸೌರಭ್ ಚಂದ್ರಕರ್, ರವಿ ಉಪ್ಪಲ, ಶುಭಂ ಸೋನಿ ಮತ್ತು ಇತರರು ಸೇರಿದಂತೆ 32 ಜನರ ವಿರುದ್ಧ ಮುಂಬೈನ ಮಾಟುಂಗಾ ಪೊಲೀಸ್ ಠಾಣೆಯಲ್ಲಿ ಈ ತಿಂಗಳ ಆರಂಭದಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಎಫ್‍ಐಆರ್‍ನ ಪ್ರಕಾರ ಆರೋಪಿಗಳು ಜನರಿಗೆ ಸುಮಾರು 15,000 ಕೋಟಿ ರೂಪಾಯಿ ವಂಚಿಸಿದ್ದಾರೆ ಎನ್ನಲಾಗಿದೆ.

ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಫೋರೆನ್ಸಿಕ್ ವಿಶ್ಲೇಷಣೆಯನ್ನು ಹೇಳಿಕೊಂಡಿದೆ ಮತ್ತು ನಗದು ಕೊರಿಯರ್ ನೀಡಿದ ಹೇಳಿಕೆಯು ಆಘಾತಕಾರಿ ಆರೋಪಗಳಿಗೆ ಕಾರಣವಾಯಿತು, ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರವರ್ತಕರು ಇದುವರೆಗೆ ಛತ್ತೀಸ್‍ಗಢ ಮುಖ್ಯಮಂತ್ರಿಗೆ ಸುಮಾರು 508 ಕೋಟಿ ರೂ. ನೀಡಿದ್ದಾರೆ ಎಂಬುದು ತನಿಖೆಯ ವಿಷಯವಾಗಿದೆ.

ಬೆಳಗಾವಿ ಅಧಿವೇಶನದಲ್ಲಿ ಎರಡು ದಿನ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ

ಬಿಜೆಪಿಯು ಶುಭಂ ಸೋನಿ ಆ್ಯಪ್‍ನ ಮಾಲೀಕ ಎಂದು ಹೇಳುವ ವೀಡಿಯೊವನ್ನು ಬಿಡುಗಡೆ ಮಾಡಿತು ಮತ್ತು ಛತ್ತೀಸ್‍ಗಢ ಸಿಎಂ ಭೂಪೇಶ್ ಬಘೇಲ್‍ಗೆ ಇದುವರೆಗೆ 508 ಕೋಟಿ ರೂಪಾಯಿ ಪಾವತಿಸಿದ ಪುರಾವೆ ಇದೆ ಎಂದು ಹೇಳಿಕೊಂಡಿದೆ ಆದರೆ, ಮುಖ್ಯಮಂತ್ರಿಗಳು ಈ ಆರೋಫವನ್ನು ತಿರಸ್ಕರಿಸಿದ್ದಾರೆ.

ನವೆಂಬರ್ 5 ರಂದು, ಇಡಿ ಮನವಿಯ ಮೇರೆಗೆ ಮಹದೇವ್ ಆ್ಯಪ್ ಸೇರಿದಂತೆ 22 ಅಕ್ರಮ ಬೆಟ್ಟಿಂಗ್ ಪ್ಲಾಟ್‍ಫಾರ್ಮ್‍ಗಳ ವಿರುದ್ಧ ಕೇಂದ್ರವು ತಡೆಯಾಜ್ಞೆ ನೀಡಿತು. 22 ಅಕ್ರಮ ಬೆಟ್ಟಿಂಗ್ ಪ್ಲಾಟ್‍ಫಾರ್ಮ್‍ಗಳನ್ನು ನಿಷೇಸುವ ಕ್ರಮವು ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್ ಸಿಂಡಿಕೇಟ್ ವಿರುದ್ಧ ಇಡಿ ನಡೆಸಿದ ತನಿಖೆಗಳು ಮತ್ತು ಛತ್ತೀಸ್‍ಗಢದಲ್ಲಿ ಮಹಾದೇವ್ ಅಪ್ಲಿಕೇಶನ್‍ಗೆ ಸಂಬಂಸಿದಂತೆ ನಂತರದ ದಾಳಿಗಳನ್ನು ಅನುಸರಿಸುತ್ತದೆ.

ಆ್ಯಪ್‍ಗೆ ಸಂಬಂಧಿಸಿದಂತೆ ಛತ್ತೀಸ್‍ಗಢ ಪೊಲೀಸರು ಕನಿಷ್ಠ 75 ಎಫ್‍ಐಆರ್‍ಗಳನ್ನು ದಾಖಲಿಸಿದ್ದಾರೆ ಮತ್ತು ಇಡಿ ಕೂಡ ಪ್ರಕರಣದ ತನಿಖೆಯನ್ನು ನಡೆಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಹಸಿರು ಕ್ರಾಂತಿ ಜಾರಿಯಾದಗ ಕೆಸಿಆರ್ ಎಲ್ಲಿದ್ದರು..? : ಖರ್ಗೆ

ಹೈದ್ರಾಬಾದ್,ನ.23- ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತದ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಟೀಕೆಗೆ ತೀವ್ರ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯಾಹ್ನದ ಊಟ ಮತ್ತು ಹಸಿರು ಕ್ರಾಂತಿಯಂತಹ ಯೋಜನೆಗಳನ್ನು ಜಾರಿಗೆ ತಂದಾಗ ರಾವ್ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.

ನಲ್ಗೊಂಡ ಮತ್ತು ಆಲಂಪುರದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ತೆಲಂಗಾಣದಲ್ಲಿ ಇಂದಿರಾ ಗಾಂಧಿಯವರ ಕಲ್ಯಾಣ ಆಡಳಿತದ ಇಂದಿರಮ್ಮ ರಾಜ್ಯವನ್ನು ಮರಳಿ ತರುವುದಾಗಿ ಕಾಂಗ್ರೆಸ್ ಪಕ್ಷದ ಭರವಸೆಯ ವಿರುದ್ಧ ರಾವ್ ಅವರ ಹೇಳಿಕೆಗಳ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಜಯಪ್ರಕಾಶ್ ಹೆಗ್ಡೆ ಅವಧಿ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ

ಹಸಿರು ಕ್ರಾಂತಿ, 20 ಅಂಶಗಳ ಕಾರ್ಯಕ್ರಮ ಮತ್ತು ಇತರ ಪ್ರಮುಖ ಬಡವರ ಪರ ಕಾರ್ಯಕ್ರಮಗಳನ್ನು ಇಂದಿರಾ ಗಾಂಧಿಯವರ ಆಡಳಿತದಲ್ಲಿ ನಡೆಸಲಾಯಿತು ಎಂದು ಅವರು ಹೇಳಿದರು. ಈ ಕೆಸಿಆರ್ ಇಂದಿರಾ ಗಾಂಧಿಯವರನ್ನೂ ನಿಂದಿಸುತ್ತಾರೆ. ಇಂದಿರಾಗಾಂಧಿ ಆಡಳಿತದಲ್ಲಿ ಬಡತನದ ಬಗ್ಗೆ ಕೆಸಿಆರ್ ಕೇಳುತ್ತಾರೆ. ಹಸಿರು ಕ್ರಾಂತಿ ಮತ್ತು ಮಧ್ಯಾಹ್ನದ ಊಟ ನಡೆದಾಗ ನೀವು ಎಲ್ಲಿದ್ದೀರಿ ಮತ್ತು ನೀವು ಏನು ಮಾಡುತ್ತಿದ್ದೀರಿ ಎಂದು ಅವರು ಹೇಳಿದರು.

ಮಂಗಳವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ಕಾಂಗ್ರೆಸ್ ನಾಯಕರು ಇಂದಿರಮ್ಮ ರಾಜ್ಯವನ್ನು ಮರಳಿ ತರುವುದಾಗಿ ಭರವಸೆ ನೀಡುತ್ತಾರೆ ಆದರೆ ಆ ಅವಧಿಯನ್ನು ತುರ್ತು ಪರಿಸ್ಥಿತಿಯಿಂದ ಗುರುತಿಸಲಾಗಿದೆ ಮತ್ತು ದಲಿತರ ಪರಿಸ್ಥಿತಿ ಹಾಗೆಯೇ ಉಳಿದಿದೆ ಎಂದು ಹೇಳಿದ್ದರು.

ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಮಹತ್ವದ್ದಾಗಿದ್ದು, ಕೆಸಿಆರ್ ಕುಟುಂಬದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಈ ಚುನಾವಣೆಯಲ್ಲಿ ಹೋರಾಡುತ್ತಿದೆ ಎಂದು ಹೇಳಿದ ಖರ್ಗೆ, ಬಡವರ ಭೂಮಿಯನ್ನು ಕಿತ್ತುಕೊಂಡವರ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ ಎಂದರು.ತೆಲಂಗಾಣ ಜನತೆ ಆಶಿಸಿದ ಅಭಿವೃದ್ಧಿ ನಡೆದಿಲ್ಲ, ರಸ್ತೆಗಳಾಗಲಿ, ಶಾಲೆಗಳಾಗಲಿ, ನೀರಾವರಿ ಯೋಜನೆಗಳಾಗಲಿ ಮಾಡಿಲ್ಲ ಎಂದು ಆರೋಪಿಸಿದರು.

ಕೆಸಿಆರ್ ಅವರು ತಮ್ಮ ಫಾರ್ಮ್‍ಹೌಸ್‍ನಲ್ಲಿ ಕುಳಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಎಂದಿಗೂ ಜನರನ್ನು ಭೇಟಿಯಾಗುವುದಿಲ್ಲ. ಜನರನ್ನು ಎಂದಿಗೂ ಭೇಟಿಯಾಗದವರು ಮತ್ತು ಜನರ ನಡುವೆ ಇರದವರು ಅವರಿಗೆ ಎಂದಿಗೂ ಮತ ಚಲಾಯಿಸುವುದಿಲ್ಲ ಎಂದ ಖರ್ಗೆ ಅವರು ತೆಲಂಗಾಣ ಜನತೆಗೆ ಕಾಂಗ್ರೆಸ್ ಅನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಆರೋಗ್ಯ ಇಲಾಖೆಯಲ್ಲೂ ಕೌನ್ಸಿಲಿಂಗ್ ಮೂಲಕ ವರ್ಗಾವಣೆ

ಕೆಸಿಆರ್, ಬಿಜೆಪಿ ಮತ್ತು ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸ್ನೇಹಿತರು ಎಂದು ಹೇಳಿದ ಖರ್ಗೆ, ಮೂರು ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಮತ್ತು ಕಾಂಗ್ರೆಸ್ ವಿರುದ್ಧ ಪಿತೂರಿ ನಡೆಸುತ್ತಿವೆ ಎಂದು ಆರೋಪಿಸಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-11-2023)

ನಿತ್ಯ ನೀತಿ : ನೂರು ಪುಸ್ತಕ ಓದಿದರೇನು? ನೂರು ಪ್ರವಚನ ಕೇಳಿದರೇನು? ತನ್ನಾಂತರ್ಯದಲ್ಲಿನ ಕಶ್ಮಲತೆಯನ್ನು ತೆಗೆಯದಿದ್ದರೇನು ಪ್ರಯೋಜನ.

ಪಂಚಾಂಗ ಗುರುವಾರ 23-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ವಜ್ರ / ಕರಣ: ವಣಿಜ್

ಸೂರ್ಯೋದಯ : ಬೆ.06.22
ಸೂರ್ಯಾಸ್ತ : 05.50
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ಉಲ್ಲಾಸದಿಂದ ಮೈಮರೆಯದಿರಿ. ನಿಮ್ಮನ್ನು ಅತಿಯಾಗಿ ಪ್ರೀತಿಸುವವರೇ ದ್ವೇಷಿಸುವರು.
ವೃಷಭ: ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮಿಥುನ: ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸಿ.

ಕಟಕ: ಅಧ್ಯಯನದ ಅಭ್ಯಾಸ ಮಾಡುವಾಗ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು.
ಸಿಂಹ: ಅತಿಯಾದ ಒಳ್ಳೆಯತನ, ಬೇಜವಾಬ್ದಾರಿತನದಿಂದಾಗಿ ಸಂಕಷ್ಟಕ್ಕೆ ಸಿಲುಕುವಿರಿ.
ಕನ್ಯಾ: ವಿವಿಧ ಮೂಲಗಳಿಂದ ಧನಲಾಭ. ವೈರಿಗಳಿಂದ ದೂರವಿರುವುದು ಒಳಿತು.

ತುಲಾ: ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಸ್ಥಾಪಿಸುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿತರಾಗುವಿರಿ.
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದು. ಕಾರ್ಯಸಾಧನೆಗಾಗಿ ತಿರುಗಾಟ.
ಧನುಸ್ಸು: ಹಣ ಬಂದರೂ ಉಳಿಯುವುದಿಲ್ಲ. ಚಂಚಲ ಸ್ವಭಾವವನ್ನು ನಿಯಂತ್ರಿಸಿಕೊಳ್ಳಿ.

ಮಕರ: ಬರುವ ಅವಕಾಶಗಳನ್ನು ಸದುಪ ಯೋಗಪಡಿಸಿಕೊಳ್ಳಿ. ಸುಖ ಭೋಜನ ಮಾಡುವಿರಿ.
ಕುಂಭ: ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕ್ರಮೇಣ ಪ್ರಗತಿ ಕಂಡುಕೊಳ್ಳುವಿರಿ.
ಮೀನ: ಸ್ತ್ರೀಯರು ಹೆಚ್ಚು ತಾಳ್ಮೆಯಿಂದ ಇರುವುದು ಕ್ಷೇಮಕರ. ಮಗನಿಂದ ಶುಭವಾರ್ತೆ ಕೇಳುವಿರಿ.

ಬೆಳಗಾವಿ ಅಧಿವೇಶನದಲ್ಲಿ ಎರಡು ದಿನ ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ

ಬೆಂಗಳೂರು, ನ.22- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಎರಡು ದಿನಗಳನ್ನು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕಾಯ್ದಿರಿಸುವುದಾಗಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಎಸ್. ಹೊರಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಡಿ.6ಮತ್ತು7ರಂದು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತ ಚರ್ಚೆಗೆ ಎರಡು ದಿನ ನಿಗದಿ ಮಾಡಿದ್ದೇವೆ. ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭವಾಗುವುದಕ್ಕೂ ಪೂರ್ವದಲ್ಲೇ ಧರಣಿ, ಪ್ರತಿಭಟನೆ, ಸತ್ಯಾಗ್ರಹ ಮಾಡುವಂತಹ ಸಂಘಟನೆಗಳ ಮುಖಂಡರೊಂದಿಗೆ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದರು.

ಬೆಳಗಾವಿಯಲ್ಲಿ ನಡೆಯುವ ಅಧಿವೇಶನ ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸುವ ಹಿನ್ನಲೆಯಲ್ಲಿ ಸರ್ಕಾರಕ್ಕೆ ಸಲಹೆ ನೀಡುವುದು ಸೂಕ್ತ ಎಂದು ನಾನು ಭಾವಿಸಿ ಮುಖ್ಯಮಂತ್ರಿಗಳಿಗೆ ಹಾಗೂ ಕೃಷಿ, ಕಂದಾಯ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಿಗೆ ಪತ್ರ ಬರೆದು ನನ್ನ ಭಾವನೆಗಳನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದರು.

ಕರ್ನಾಟಕ ವಿಧಾನ ಮಂಡಲದ ನೂರಐವತ್ತೊಂದನೇ ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಡಿ.4ರಿಂದ 15ರ ವರೆಗೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಅಧಿವೇಶನಕ್ಕಾಗಿ ಒಟ್ಟಾರೆ 400ಕ್ಕೂ ಅಧಿಕ ಕೋಟಿ ರೂಪಾಯಿಯನ್ನು ಸರ್ಕಾರ ಖರ್ಚು ಮಾಡುತ್ತಿದೆ ಎಂದರು. ಒಂದು ಅರ್ಥದಲ್ಲಿ ಬೆಳಗಾವಿಯ ಅಧಿವೇಶನ ಎಂದರೆ ಕೇವಲ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಿಗೆ ವೇದಿಕೆ ಕಲ್ಪಿಸಿದಂತಾಗಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು ಎನ್ನುವುದು ಹಲವರ ಅಭಿಪ್ರಾಯವಾಗಿದ್ದು, ಬಹಳಷ್ಟು ಜನ ಈ ರೀತಿಯ ಭಾವನೆಯನ್ನು ನನ್ನ ಮುಂದೆ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.

ಜಯಪ್ರಕಾಶ್ ಹೆಗ್ಡೆ ಅವಧಿ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲಾಗುವ ಅಧಿವೇಶನದ ಸಂದರ್ಭದಲ್ಲಿ ವಿಧಾನ ಸೌಧದ ಹೊರಗಡೆ ಧರಣಿ, ಸಮಾವೇಶ, ಸತ್ಯಾಗ್ರಹ ಮುಂತಾದ ಚಟುವಟಿಕೆಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲ ಉದ್ದೇಶ ಸಮರ್ಪಕವಾಗಿ ಈಡೇರುತ್ತಿಲ್ಲ ಎನ್ನುವುದು ಹಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ ಎಂದರು.

ಕಳೆದ ವರ್ಷ ಡಿಸೆಂಬರ್ 19 ರಿಂದ 29 ರ ವರೆಗೆ ನಡೆದ ಅಧಿವೇಶನದ ಸಂದರ್ಭದಲ್ಲಿ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ಮಾಹಿತಿ ಪ್ರಕಾರ 10 ದಿನಗಳಲ್ಲಿ 102 ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿವೆ. ಅವುಗಳಲ್ಲಿ ಸುಮಾರು 64 ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ, ಸತ್ಯಾಗ್ರಹ, ಧರಣಿ ಮುಂತಾದ ಹೋರಾಟಾತ್ಮಕ ಚಟುವಟಿಕೆಗಳನ್ನು ನಡೆಸಿವೆ. ಈ ಎಲ್ಲಾ ಪ್ರತಿಭಟನೆ ಸತ್ಯಾಗ್ರಹಗಳಲ್ಲಿ ಸುಮಾರು 65,000 ದಿಂದ 80,000 ಜನರು ಪಾಲ್ಗೊಂಡಿದ್ದರು ಎಂಬ ಮಾಹಿತಿಯನ್ನು ಅವರು ನೀಡಿದರು.

ಈ ಎಲ್ಲಾ ಪ್ರತಿಭಟನೆ, ಸತ್ಯಾಗ್ರಹ, ಸಮಾವೇಶ, ಧರಣಿಗಳಿಗಾಗಿ ಸರ್ಕಾರದ ವತಿಯಿಂದ ಸುಮಾರು 14 ಟೆಂಟ್‍ಗಳನ್ನು ನಿರ್ಮಾಣ ಮಾಡಲಾಗಿತ್ತು. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದ ಹೊರಗಡೆ ಪ್ರತಿಭಟನೆಗಳ ಸಂಖ್ಯೆ ಇಳಿಮುಖವಾದರೆ ಹಾಗೂ ಸದನದ ಒಳಗಡೆ ಜನಸಾಮಾನ್ಯರ ಹಾಗೂ ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಹಾಗೂ ಗಂಭೀರ ಚರ್ಚೆ ನಡೆದು ಪರಿಹಾರ ಕಂಡುಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ವಿಧಾನ ಮಂಡಲದ ಅವೇಶನ ನಡೆಸಿದ್ದು, ಸಾರ್ಥಕ. ಇದರಿಂದ ಸರ್ಕಾರಕ್ಕೆ ಗೌರವ ಹಾಗೂ ಒಳ್ಳೆಯ ಹೆಸರು ಬರುತ್ತದೆ ಎನ್ನುವುದು ನನ್ನ ಮನದಾಳದ ಇಂಗಿತವಾಗಿದೆ ಎಂದು ಅವರು ತಿಳಿಸಿದರು.

ಜಯಪ್ರಕಾಶ್ ಹೆಗ್ಡೆ ಅವಧಿ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.22- ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿ ಸಲ್ಲಿಸುವವರೆಗೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಮುಂದುವರೆಯುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್‍ನಲ್ಲಿ ಆಯೋಗದ ವರದಿ ನೀಡಲಿದ್ದು, ಅಲ್ಲಿಯವರೆಗೂ ಮುಂದುವರೆಸಲಾಗುವುದು ಎಂದರು. ಜಯಪ್ರಕಾಶ್ ಹೆಗ್ಡೆಯವರು ತಮ್ಮನ್ನು ಭೇಟಿಯಾಗಿ ನಮ್ಮ ಅವಧಿ ಮುಗಿಯುವುದರೊಳಗೆ ವರದಿ ನೀಡಲಾಗುವುದು. ಒಂದು ವೇಳೆ ವರದಿ ನೀಡುವುದು ಒಂದು ತಿಂಗಳು ಹೆಚ್ಚು ಕಡಿಮೆಯಾದರೂ ಅಲ್ಲಿಯವರೆಗೂ ಮುಂದುವರೆಸಲು ಕೋರಿದ್ದರು. ಹೀಗಾಗಿ ಅವರ ವರದಿ ನೀಡುವವರೆಗೂ ಆಯೋಗದ ಅಧ್ಯಕ್ಷರಾಗಿ ಹೆಗ್ಡೆ ಮುಂದುವರೆಯುತ್ತಾರೆ ಎಂದು ಹೇಳಿದರು.

ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವರದಿ ಸ್ವೀಕರಿಸಬಾರದು ಎಂದು ನೀಡಿರುವ ಮನವಿಯನ್ನು ಸ್ವೀಕರಿಸಲಾಗಿದೆ. ಸಮೀಕ್ಷೆಯ ಮೂಲ ಪ್ರತಿ ಹಾಳಾಗಿದೆ ಎಂದು ಹೇಳಲು ನಾನೇನು ಆಯೋಗದ ಕಾರ್ಯದರ್ಶಿಯೇ ಎಂದು ಪ್ರಶ್ನಿಸಿದರು.

ಜಾತಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಬೇಕು ಎಂಬುದು ಸಮುದಾಯದ ಅಭಿಪ್ರಾಯ:

ಸಮೀಕ್ಷೆಯ ಮೂಲ ಪ್ರತಿ ಹಾಳಾಗಿದೆ ಎಂದು ಯಾರು ಹೇಳಿದ್ದಾರೆಯೋ ಅವರನ್ನೇ ಕೇಳಿ. ನನಗೆ ಗೊತ್ತಿಲ್ಲ. ವರದಿ ಸಲ್ಲಿಕೆಗೂ ಮುನ್ನ ಅದರಲ್ಲಿ ಏನಿದೆ ಎಂಬುದನ್ನು ಹೇಗೆ ಹೇಳಲು ಸಾಧ್ಯ ? ವರದಿ ಸಲ್ಲಿಕೆಯಾಗುವವೆರೆಗೂ ಕಾಯಬೇಕು. ರಾಜ್ಯ ಸರ್ಕಾರ 160 ಕೋಟಿ ರೂ. ಗೂ ಹೆಚ್ಚು
ಖರ್ಚು ಮಾಡಿ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಆನ್‍ಲೈನ್ ರಮ್ಮಿ ಸಾಲ ತೀರಿಸಲು ಎಳನೀರು ಕಳ್ಳತನ

ಬೆಂಗಳೂರು, ನ.22- ಆನ್‍ಲೈನ್ ರಮ್ಮಿ ಆಟಕ್ಕೆ ಮಾಡಿಕೊಂಡಿದ್ದ ಸಾಲ ತೀರಿಸಲು ರಾತ್ರಿ ವೇಳೆ ಎಳನೀರು ಕಳ್ಳತನ ಮಾಡಿ ಬೆಳಗ್ಗೆ ಮಾರಾಟ ಮಾಡುತ್ತಿದ್ದ ಟ್ಯಾಕ್ಸಿ ಚಾಲಕನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಮೋಹನ್ ಬಂಧಿತ ಆರೋಪಿ. ಈತ ನಗರದಲ್ಲಿ ವಾಸವಾಗಿದ್ದು, ಟ್ಯಾಕ್ಸಿ ಚಾಲಕ ವೃತ್ತಿ ಮಾಡುತ್ತಿದ್ದಾನೆ. ಆರೋಪಿ ಮೋಹನ್ ಈ ಹಿಂದೆ ಎಳನೀರು ವ್ಯಾಪಾರ ಮಾಡುತ್ತಿದ್ದನು. ಬಿಡುವಿನ ಸಮಯದಲ್ಲಿ ಆನ್‍ಲೈನ್‍ನಲ್ಲಿ ರಮ್ಮಿ ಆಟವಾಡಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಚಾಲಕ ವೃತ್ತಿ ಮಾಡುತ್ತಿದ್ದನು. ಕಾರಿನಲ್ಲಿ ಹೋಗುವಾಗ ಫುಟ್‍ಪಾತ್‍ನಲ್ಲಿ ಎಳನೀರನ್ನು ಸಂಗ್ರಹಿಸಿಟ್ಟಿರುವುದನ್ನು ಗಮನಿಸಿದ್ದಾನೆ. ಹೇಗಾದರೂ ಮಾಡಿ ಎಳನೀರನ್ನು ಕಳ್ಳತನ ಮಾಡಿ ಮಾರಾಟ ಮಾಡಿ ಬಂದ ಹಣದಿಂದ ಸಾಲ ತೀರಿಸಲು ನಿರ್ಧರಿಸಿದ್ದಾನೆ.

ನ. 6ರಂದು ಮಂಜುಳಾ ಅವರ ಪತಿ ರಾಜಣ್ಣ ಅವರು ಮಂಕುತಿಮ್ಮ ಪಾರ್ಕ್ ಹತ್ತಿರ ಫುಟ್‍ಪಾತ್ ಮೇಲೆ ಎಳನೀರು ವ್ಯಾಪಾರ ಮಾಡಿ ಉಳಿದ 1150 ಎಳನೀರನ್ನು ಟಾರ್ಪಲ್‍ನಿಂದ ಮುಚ್ಚಿ ಮನೆಗೆ ಹೋಗಿದ್ದರು. ಮಾರನೇ ದಿನ ಬೆಳಗ್ಗೆ ಬಂದು ನೋಡಿದಾಗ ಫುಟ್‍ಪಾತ್‍ನಲ್ಲಿದ್ದ ಎಳನೀರು ಮಾಯವಾಗಿತ್ತು.
ಯಾರೋ ಎಳನೀರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಜಾತಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಬೇಕು ಎಂಬುದು ಸಮುದಾಯದ ಅಭಿಪ್ರಾಯ: ಡಿ.ಕೆ.ಶಿವಕುಮಾರ್

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ಆರೋಪಿಯನ್ನು ಬಂಧಿಸಿ 8.75 ಲಕ್ಷ ರೂ. ಬೆಲೆಬಾಳುವ 90 ಎಳನೀರುಗಳು, ಒಂದು ರಾಯಲ್ ಎನ್‍ಫೀಲ್ಡ್ ದ್ವಿಚಕ್ರ ವಾಹನ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ರಾಹುಲ್ ಕುಮಾರ್ ಶಹಪುರ ವಾಡ್, ವಿವಿಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾಗರಾಜು ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತರಾದ ದಯಾನಂದ, ಅಪರ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್ ಅವರು ಶ್ಲಾಘಿಸಿದ್ದಾರೆ.

ಆರೋಗ್ಯ ಇಲಾಖೆಯಲ್ಲೂ ಕೌನ್ಸಿಲಿಂಗ್ ಮೂಲಕ ವರ್ಗಾವಣೆ

ಬೆಂಗಳೂರು, ನ.22- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಶಿಕ್ಷಣ ಇಲಾಖೆಯ ಮಾದರಿಯಲ್ಲೇ ಕೌನ್ಸಿಲ್ ಮೂಲಕವೇ ವರ್ಗಾವಣೆ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‍ಕುಮಾರ್ ಆದೇಶ ಹೊರಡಿಸಿದ್ದು, ಎ, ಬಿ, ಸಿ ಮತ್ತು ಡಿ ವೃಂದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಾವಣೆಯನ್ನು ಕೌನ್ಸಿಲ್ ಕಾಯ್ದೆಯ ಅನ್ವಯ ನಿರ್ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಮೂಲಕ ಮುಂದಿನ ಎಲ್ಲಾ ವರ್ಗಾವಣೆಗಳು ಕೌನ್ಸಿಲ್ ಮಾದರಿಯಲ್ಲೇ ನಡೆಯಲಿದೆ ಎಂದು ಸರ್ಕಾರ ಸ್ಪಷ್ಟಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಮತ್ತು ತುರ್ತು ಸೇವೆಗೆ ಹೆಸರಾಗಿದೆ. ಆದರೆ, ಇಲ್ಲಿ ಗ್ರಾಮೀಣ ಭಾಗದಲ್ಲಿ ಸಿಬ್ಬಂದಿಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಅದರಲ್ಲೂ ವೈದ್ಯರ ವರ್ಗಾವಣೆಗೆ ಭಾರೀ ಲಾಬಿಗಳು ನಡೆಯುತ್ತಿವೆ.

BIG NEWS: ಡಿಸೆಂಬರ್ 23ರಂದು 545 ಪಿಎಸ್‍ಐ ಹುದ್ದೆಗಳಿಗೆ ಮರು ಪರೀಕ್ಷೆ

ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ತಾಂತ್ರಿಕ ಸಿಬ್ಬಂದಿಗಳ ಕೊರತೆ ತೀವ್ರವಾಗಿದೆ. ವರ್ಗಾವಣೆಗೆ ಪ್ರಭಾವಗಳಿ, ಚಿತಾವಣೆಗಳು ಭಾರೀ ಪ್ರಮಾಣದಲ್ಲಿ ಕೆಲಸ ಮಾಡುತ್ತವೆ. ಇದಕ್ಕೆಲ್ಲಾ ಕಡಿವಾಣ ಹಾಕುವಲ್ಲಿ ಕೌನ್ಸಿಲ್ ಮಾದರಿಯನ್ನು ಸರ್ಕಾರ ಜಾರಿಗೊಳಿಸಿದೆ.

ಜಾತಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಬೇಕು ಎಂಬುದು ಸಮುದಾಯದ ಅಭಿಪ್ರಾಯ: ಡಿ.ಕೆ.ಶಿವಕುಮಾರ್

ಬೆಂಗಳೂರು, ನ.22- ರಾಜ್ಯದಲ್ಲಿ ಜಾತಿವಾರು ಜನಸಂಖ್ಯೆಯ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸ ಬೇಕು ಎಂಬುದು ಎಲ್ಲಾ ಸಮುದಾಯದ ಅಭಿಪ್ರಾಯ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ದಿಢೀರ್ ಭೇಟಿ ನೀಡಿದ
ಅವರು, ಹಲವು ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಏನೇ ಇದ್ದರೂ ಸಮಾಜದ ಸ್ವಾಭಿಮಾನ, ಗೌರವದ ವಿಷಯ ಬಂದಾಗ ನಾವು ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ ಎಂದರು. ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಅದಕ್ಕೆ ನಾವು ಬದ್ಧರಾಗಿದ್ದೇವೆ. ಆದರೆ, ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ ಎಂದು ಹೇಳಿದರು.

ಜಾತಿ ಗಣತಿ ವರದಿಯನ್ನು ತಿರಸ್ಕರಿಸಬೇಕು ಎಂಬ ಪತ್ರಕ್ಕೆ ನೀವು ಸಹಿ ಹಾಕಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು ಎಂಬುದು ಅನೇಕ ಸಮುದಾಯಗಳ ಆಗ್ರಹವಾಗಿದೆ. ಪರಿಶಿಷ್ಟರಲ್ಲಿ ಎಡಗೈ ಸಮುದಾಯ, ಪಂಚಮಸಾಲಿಗಳು, ವೀರಶೈವರು, ಲಿಂಗಾಯಿತರು, ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳು ಹೋರಾಟ ಮಾಡುತ್ತಿವೆ. ಇದರಲ್ಲಿ ಪಕ್ಷಭೇದವಿಲ್ಲದೆ ಭಾಗವಹಿಸಲಾಗುತ್ತಿದೆ ಎಂದರು.

ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿವೆ ಎಂದು ಅವರು ಪುನರುಚ್ಚರಿಸಿದರು.
ಜಾತಿ ಜನಗಣತಿ ವರದಿ ಕುರಿತಂತೆ ಮುಖ್ಯಮಂತ್ರಿಗಳಿಗೆ ನೀಡಿರುವ ಪತ್ರಕ್ಕೆ ನಾನು ಸಹಿ ಮಾಡಬಾರದೇ ಎಂದು ನಾನು ಮರುಪ್ರಶ್ನಿಸಿದ ಅವರು, ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲಾ ನಾಯಕರಲ್ಲೂ ಇರುತ್ತದೆ ಎಂದರು.

BIG NEWS: ಡಿಸೆಂಬರ್ 23ರಂದು 545 ಪಿಎಸ್‍ಐ ಹುದ್ದೆಗಳಿಗೆ ಮರು ಪರೀಕ್ಷೆ

ನಿಗಮ ಮಂಡಳಿ ನೇಮಕ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಹಿರಿಯ ನಾಯಕರು, ಶಾಸಕರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಾನು ಹಾಗೂ ಮುಖ್ಯಮಂತ್ರಿಗಳು ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋಗಬೇಕಿದೆ. ನ.28ರಂದು ನಮ್ಮ ದೆಹಲಿ ನಾಯಕರು ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಆ ಸಭೆ ಬಳಿಕ ನಮ್ಮ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ಕಳುಹಿಸುತ್ತೇವೆ ಎಂದು ಹೇಳಿದರು.

ಗೃಹಸಚಿವರು ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಅಸಮಾಧಾನ ಹೊಂದಿದ್ದಾರೆಯೇ ಎಂದು ಕೇಳಿದಾಗ, ಗೃಹಮಂತ್ರಿಗಳು ಮೂರು ದಿನಗಳ ಕಾಲ ಪ್ರವಾಸದಲ್ಲಿದ್ದರು, ಅವರಿಗೆ ಅವರದೇ ಆದ ಕೆಲಸಗಳಿರುತ್ತವೆ. ಸುಮ್ಮನೆ ಯಾರೋ ಹೇಳಿದ್ದನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತಿವೆ. ಅವರು ಯಾವ ಕಾರಣಕ್ಕೆ ಅಸಮಾಧಾನಗೊಳ್ಳುತ್ತಾರೆ? ಅಸಮಾಧಾನ ಆಗುವಂತಹದ್ದು ಏನಾಗಿದೆ? ಈ ರೀತಿ ಅಸಮಾಧಾನ ಸೃಷ್ಟಿಸಿ ಎಂದು ವದಂತಿ ಹಬ್ಬಿಸಿ ನಿಮ್ಮ ಘನತೆ ಏಕೆ ಹಾಳುಮಾಡಿಕೊಳ್ಳುತ್ತೀರಿ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್‍ನಲ್ಲಿ ಎಲ್ಲರೂ ಒಂದೇ. ಇಲ್ಲಿ ನನ್ನ ಅಥವಾ ಮುಖ್ಯಮಂತ್ರಿಯವರ ಬೆಂಬಲಿಗರು ಎಂಬುದಿಲ್ಲ. ಗೃಹ ಸಚಿವರ ಬೆಂಬಲಿಗರೂ ಎಂಬುದೂ ಸರಿಯಲ್ಲ. ಎಲ್ಲರೂ ಕಾಂಗ್ರೆಸಿಗರು. ಮಂತ್ರಿಗಿರಿ ಸಿಗದ ಹಿರಿಯ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವಿಚಾರಣೆಗೆ ಕರೆ ತಂದಿದ್ದ ವ್ಯಕ್ತಿ ಆತ್ಮಹತ್ಯೆ: ಪೊಲೀಸ್ ಸಿಬ್ಬಂದಿಗಳ ಅಮಾನತ್ತು

ನಿಗಮ ಮಂಡಳಿ ನೇಮಕ ವಿಳಂಬ ಮಾಡುತ್ತಿರುವುದು ಕಲೆಕ್ಷನ್ ಗಾಗಿ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ನಾವು ಅಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ನಿಗಮ ಮಂಡಳಿ ನೇಮಕ ಮಾಡುತ್ತಿದ್ದೇವೆ. ಅವರು ಅಕಾರಕ್ಕೆ ಬಂದ ಎಷ್ಟು ವರ್ಷಗಳ ನಂತರ ಮಾಡಿದರು? ಅವರಿಗೆ ನಾಲ್ಕೆ ೈದು ಸಚಿವರನ್ನು ನೇಮಕ ಮಾಡಲಾಗದೆ ಮುಖ್ಯಮಂತ್ರಿಗಳೇ ಖಾತೆಯನ್ನು ಇಟ್ಟುಕೊಂಡಿದ್ದರು. ಬಿಜೆಪಿ ತಟ್ಟಿಯಲ್ಲಿ ಹೆಗ್ಗಣ ಬಿದ್ದಿದ್ದು, ಮೊದಲು ಅದನ್ನು ನೋಡಿಕೊಳ್ಳಲಿ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.