Home Blog Page 1807

ಅರ್ಜೆಂಟೀನಾ ಆಧ್ಯಕ್ಷರಾದ ಮಿಲೀ

ಬ್ಯೂನಸ್ ಐರಿಸ್, ನ.20- ಹಣದುಬ್ಬರ ಮತ್ತು ಹೆಚ್ಚುತ್ತಿರುವ ಬಡತನದ ಬಗ್ಗೆ ತೀವ್ರ ಅಸಮಾಧಾನದ ನಡುವೆ ನಡೆದ ತೀವ್ರ ಧ್ರುವೀಕೃತ ಚುನಾವಣಾ ಪ್ರಚಾರದಲ್ಲಿ ರಾಜ್ಯಕ್ಕೆ ನಾಟಕೀಯ ಬೆಳವಣಿಗೆಗಳ ನಂತರ ಬಲಪಂಥೀಯ ಜನಪ್ರಿಯ ನಾಯಕ ಜೇವಿಯರ್ ಮಿಲೀ ಅರ್ಜೆಂಟೀನಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪೆರೋನಿಸ್ಟ್ ಪಕ್ಷದ ಆರ್ಥಿಕ ಸಚಿವ ಸೆರ್ಗಿಯೋ ಮಾಸ್ಸಾ ಅವರು ಸೋಲನ್ನು ಒಪ್ಪಿಕೊಂಡರು ಮತ್ತು ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್‍ಗೆ ಆಗಾಗ್ಗೆ ಹೋಲಿಕೆಗಳನ್ನು ಮಾಡಿಕೊಳ್ಳುತ್ತಿದ್ದ ಮಿಲೀ ಅವರನ್ನು ಅಭಿನಂದಿಸಿದರು.

ಮಾಸ್ಸಾ ಅವರ ರಿಯಾಯಿತಿ ಭಾಷಣದ ನಂತರ, ಅರ್ಜೆಂಟೀನಾದ ಚುನಾವಣಾ ಪ್ರಾಕಾರವು ಭಾಗಶಃ ಫಲಿತಾಂಶಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿತು. ಶೇ.95 ರಷ್ಟು ಮತಗಳು ಎಣಿಕೆಯಾದಾಗ, ಮಿಲಿ ಶೇ. 55.8 ಮತ್ತು ಮಾಸಾ ಶೇ. 44.2 ರಷ್ಟು ಮತಗಳನ್ನು ಹೊಂದಿದ್ದರು. ಆ ಮಾರ್ಜಿನ್ ಹೊಂದಿದ್ದಲ್ಲಿ, ಇದು ಎಲ್ಲಾ ಸಮೀಕ್ಷೆಗಳು ಊಹಿಸಿದ್ದಕ್ಕಿಂತ ವಿಸ್ತಾರವಾಗಿರುತ್ತದೆ ಮತ್ತು 1983 ರಲ್ಲಿ ಅರ್ಜೆಂಟೀನಾ ಪ್ರಜಾಪ್ರಭುತ್ವವನ್ನು ಹಿಂದಿರುಗಿಸಿದ ನಂತರ ಇದು ವಿಶಾಲವಾಗಿರುತ್ತದೆ.

ವಿಶಾಖಪಟ್ಟಣಂ ಜೆಟ್ಟಿ ಪ್ರದೇಶದಲ್ಲಿ 25 ದೋಣಿಗಳು ಬೆಂಕಿಗೆ ಆಹುತಿ

ಬ್ಯೂನಸ್ ಐರಿಸ್‍ನ ಬೀದಿಗಳಲ್ಲಿ, ಚಾಲಕರು ತಮ್ಮ ಹಾರ್ನ್‍ಗಳನ್ನು ಬಾರಿಸಿದರು ಮತ್ತು ಹಲವಾರು ನೆರೆಹೊರೆಗಳಲ್ಲಿ ಆಚರಿಸಲು ಅನೇಕರು ಬೀದಿಗಿಳಿದರು. ಮಿಲೀಯವರ ಪಕ್ಷದ ಪ್ರಧಾನ ಕಛೇರಿಯ ಹೊರಗೆ, ಬ್ಯೂನಸ್ ಐರಿಸ್ ಡೌನ್‍ಟೌನ್‍ನಲ್ಲಿರುವ ಹೋಟೆಲï, ಬೆಂಬಲಿಗರು ಸಂಭ್ರಮಿಸಿದರು.

ಮಿಲೀ ವಿಜಯದೊಂದಿಗೆ, ದೇಶವು ಬಲ ಪಂಥಕ್ಕೆ ತಿರುಗುತ್ತದೆ ಮತ್ತು ಅವರು ರಾಜಕೀಯ ಜಾತಿ ಎಂದು ಕರೆದದ್ದನ್ನು ಸ್ಪೋಟಿಸುವ ದೂರದರ್ಶನ ಮಾತನಾಡುವ ಮುಖ್ಯಸ್ಥರಾಗಿ ಪ್ರಾರಂಭವನ್ನು ಪಡೆದ ಹೊಸಬ ಶಾಸಕರಿಗೆ ಅಧಿಕಾರ ನೀಡುತ್ತದೆ.

ಇದು ಮಿಲೀ ಮತ್ತು ಅವರ ವಿಶಿಷ್ಟತೆಗಳು ಮತ್ತು ವಿಶೇಷತೆಗಳಿಂದಾಗಿ ಕಡಿಮೆ ವಿಜಯವಾಗಿದೆ ಮತ್ತು ಬದಲಾವಣೆಯ ಬೇಡಿಕೆಯಿಂದಾಗಿ ಹೆಚ್ಚು ಎಂದು ಸ್ಥಳೀಯ ರಾಜಕೀಯ ಸಲಹಾ ಸಂಸ್ಥೆಯಾದ ಸಿನೊಪ್ಸಿಸ್‍ನ ಮುಖ್ಯಸ್ಥ ಲ್ಯೂಕಾಸ್ ರೊಮೆರೊ ಹೇಳಿದರು. ಮತದಾನದಲ್ಲಿ ವ್ಯಕ್ತವಾಗುತ್ತಿರುವುದು ಬಹುಪಾಲು ಅರ್ಜೆಂಟೀನಾದ ಆಯಾಸ, ಆಯಾಸ, ಪ್ರತಿಭಟನೆಯ ಮತ.

ಹಣದುಬ್ಬರವು ಶೇಕಡಾ 140 ಕ್ಕಿಂತ ಹೆಚ್ಚಾಗಿದೆ ಮತ್ತು ಮಾಸ್ಸಾ ಅವರ ಹುದ್ದೆಯನ್ನು ಹೊಂದಿದ್ದಾಗ ಬಡತನವು ಹದಗೆಟ್ಟಿದೆ. ರಾಜ್ಯದ ಗಾತ್ರವನ್ನು ಕಡಿತಗೊಳಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಮೈಲಿ ಪ್ರಸ್ತಾಪಿಸಿದ್ದಾರೆ, ಆದರೆ ಸರ್ಕಾರದ ಸಚಿವರು ಅಂತಹ ನೀತಿಗಳ ಋಣಾತ್ಮಕ ಪರಿಣಾಮಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದರು. ಎರಡರಲ್ಲಿ ಯಾವುದನ್ನು ಕಡಿಮೆ ಕೆಟ್ಟ ಆಯ್ಕೆ ಎಂದು ನಿರ್ಧರಿಸಲು ಚುನಾವಣೆಯು ಅನೇಕರನ್ನು ಒತ್ತಾಯಿಸಿತು.

ಪತ್ನಿ ಶೀಲ ಶಂಕಿಸಿ ಇಡೀ ಕುಟುಂಬವನ್ನೆ ಬಲಿ ತೆಗೆದುಕೊಂಡು ತಾನು ಪ್ರಾಣ ತೆತ್ತ

ಬರಾಸತ್, ನ.20 (ಪಿಟಿಐ) ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಫ್ಲಾಟ್‍ವೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಕೊಳೆತ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಬಟ್ಟೆ ವ್ಯಾಪಾರಿ 52 ವರ್ಷದ ಬೃಂದಾಬನ್ ಕರ್ಮಾಕರ್, ನಲವತ್ತರ ಹರೆಯದ ಅವರ ಪತ್ನಿ ದೇಬಶ್ರೀ ಕರ್ಮಾಕರ್, ಅವರ 17 ವರ್ಷದ ಮಗಳು ದೇಬಲೀನಾ ಮತ್ತು ಎಂಟು ವರ್ಷದ ಮಗ ಉತ್ಸಾಹ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಖಾರ್ದಾ ಪ್ರದೇಶದ ಎಂಎಸ್ ಮುಖರ್ಜಿ ರಸ್ತೆಯಲ್ಲಿರುವ ಮುಚ್ಚಿದ ಅಪಾರ್ಟ್‍ಮೆಂಟ್‍ನಲ್ಲಿ ಶವಗಳು ಪತ್ತೆಯಾಗಿವೆ. ಮನೆ ಯಜಮಾನ ಕುಟುಂಬಸ್ಥರಿಗೆ ವಿಷ ಕುಡಿಸಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅವರ ದೇಹವು ಚಾವಣಿಯ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇತರ ಮೂರು ಶವಗಳು ಫ್ಲಾಟ್‍ನಲ್ಲಿ ವಿವಿಧ ಸ್ಥಳಗಳಲ್ಲಿವೆ ಎಂದು ಅವರು ಹೇಳಿದರು. ಆತ್ಮಹತ್ಯೆ ಪತ್ರವೂ ಪತ್ತೆಯಾಗಿದ್ದು, ಅದರಲ್ಲಿ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದ್ದು, ಅದನ್ನು ಸಹಿಸಲಾಗುತ್ತಿಲ್ಲ ಎಂದು ವ್ಯಕ್ತಿ ಹೇಳಿಕೊಂಡಿದ್ದು, ಹೀಗಾಗಿ ಆತ ತೀವ್ರ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ವಿಶಾಖಪಟ್ಟಣಂ ಜೆಟ್ಟಿ ಪ್ರದೇಶದಲ್ಲಿ 25 ದೋಣಿಗಳು ಬೆಂಕಿಗೆ ಆಹುತಿ

ಅಪಾರ್ಟ್‍ಮೆಂಟ್‍ನಿಂದ ದುರ್ವಾಸನೆ ಬರುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಳಗಿನಿಂದ ಚಿಲಕ ಹಾಕಿದ್ದರಿಂದ ಬಾಗಿಲು ಒಡೆದು ತೆರೆಯಬೇಕಾಯಿತು ಎಂದರು. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿಶಾಖಪಟ್ಟಣಂ ಜೆಟ್ಟಿ ಪ್ರದೇಶದಲ್ಲಿ 25 ದೋಣಿಗಳು ಬೆಂಕಿಗೆ ಆಹುತಿ

ವಿಶಾಖಪಟ್ಟಣಂ, ನ.20 (ಪಿಟಿಐ) ಇಂದು ಮುಂಜಾನೆ ಇಲ್ಲಿನ ಜೆಟ್ಟಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 25 ಮೀನುಗಾರಿಕಾ ದೋಣಿಗಳು ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಳಗಿನ ಜಾವ 4 ಗಂಟೆಯ ವೇಳೆಗೆ ಬೆಂಕಿ ನಂದಿಸಲಾಗಿದ್ದು, ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀನುಗಾರಿಕಾ ದೋಣಿಗಳು ಲಂಗರು ಹಾಕಲಾಗಿದ್ದ ಪಟ್ಟಣದ ಜೆಟ್ಟಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಬಗ್ಗೆ ಮಾಹಿತಿ ಪಡೆದ ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ವಿಶಾಖಪಟ್ಟಣಂ ಜಿಲ್ಲೆ ಅಗ್ನಿಶಾಮಕ ಅಧಿಕಾರಿ ಎಸ್. ರೇಣುಕಯ್ಯ ಪಿಟಿಐಗೆ ತಿಳಿಸಿದರು.

ಮೋದಿ ಶ್ರೀಮಂತರ ಸಾಲ ಮನ್ನಾ ಮಾಡಿ, ಬಡವರನ್ನು ದೂರ ಮಾಡುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ

ನಾವು 12 ಅಗ್ನಿಶಾಮಕ ಟೆಂಡರ್‍ಗಳನ್ನು ಸೇವೆಗೆ ಒತ್ತಿದ್ದೇವೆ ಮತ್ತು ರಾಷ್ಟ್ರೀಯ ವಿಪತ್ತು ರೆಸ್ಪಾನ್ಸ್ ಫೋರ್ಸ್ ಮತ್ತು ವಿಶಾಖಪಟ್ಟಣಂ ಫೋರ್ಟ್ ಟ್ರಸ್ಟ್‍ನಿಂದ ಸಹಾಯವನ್ನು ಪಡೆದುಕೊಂಡಿದ್ದೇವೆ ಎಂದು ಅವರು ಹೇಳಿದರು. ಇದುವರೆಗೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-11-2023)

ನಿತ್ಯ ನೀತಿ : ದುರ್ಬಲ ಮನಸ್ಸು ಹೊಂದಿದ ವ್ಯಕ್ತಿ ಅನೇಕ ಸಮಸ್ಯೆಗಳಿಗೆ ಕಾರಣನಾಗುತ್ತಾನೆ. ಎಲ್ಲಾ ದುಸ್ಥಿತಿಗೂ, ಸುಸ್ಥಿತಿಗೂ ತಾನೇ ಕರ್ತನು.

ಪಂಚಾಂಗ ಸೋಮವಾರ 20-11-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಧನಿಷ್ಠಾ / ಯೋಗ: ಧ್ರುವ / ಕರಣ: ವಿಷ್ಟಿ
ಸೂರ್ಯೋದಯ: ಬೆ.06.20
ಸೂರ್ಯಾಸ್ತ : 05.50
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.
ವೃಷಭ: ಬಂಧುಗಳ ಆಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯ ಸುಧಾರಣೆಗಾಗಿ ಯೋಗ ಮಾಡಿ.
ಮಿಥುನ: ಅನಿರೀಕ್ಷಿತ ತಲೆ ನೋವು ಅಥವಾ ಬೆನ್ನುನೋವು ಕಾಡಲಿದೆ.

ಕಟಕ: ಸಮಾಧಾನಚಿತ್ತ ದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಕೊಳ್ಳಬಹುದು.
ಸಿಂಹ: ದುಡುಕುತನ ಒಳ್ಳೆಯ ದಲ್ಲ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಆಲೋಚಿಸಿ.
ಕನ್ಯಾ: ವಿರೋಧಿಗಳೂ ಸಹ ಮೆಚ್ಚುವಂತಹ ಕಾರ್ಯಸಾಧನೆ ಮಾಡುವಿರಿ.

ತುಲಾ: ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಚಿನ್ನಾಭರಣ ಖರೀದಿಸುವಿರಿ.
ವೃಶ್ಚಿಕ: ನೆರೆಹೊರೆಯವರೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳದಿರಿ.
ಧನುಸ್ಸು: ವೈದ್ಯವೃತ್ತಿಯಲ್ಲಿರುವವರು ಅಧಿಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.

ಮಕರ: ಉಲ್ಲಾಸದಿಂದ ಮೈಮರೆಯದಿರಿ. ನಿಮ್ಮನ್ನು ಅತಿಯಾಗಿ ಪ್ರೀತಿಸುವವರೇ ದ್ವೇಷಿಸುವರು.
ಕುಂಭ: ವ್ಯವಹಾರದಲ್ಲಿ ಉನ್ನತಿಯಾಗಿ ಸಮಾಜದಲ್ಲಿ ಗೌರವ-ಮನ್ನಣೆ ದೊರೆಯಲಿದೆ.
ಮೀನ: ವಸ್ತ್ರ ವಿನ್ಯಾಸಕರಿಗೆ ಅಕ ಲಾಭ ದೊರೆಯಲಿದೆ. ಚಿಂತೆಗೆ ಅವಕಾಶವಿಲ್ಲ.

ಮಹಾ ಗುರುವಿಗೆ ದೊರಕುವುದೇ ಟ್ರೋಫಿ!

ಪ್ರತಿಯೊಬ್ಬ ಕ್ರಿಕೆಟಿಗನಿಗೂ ತಮ್ಮ ದೇಶವನ್ನು ಪ್ರತಿನಿಧಿಸಬೇಕೆಂಬ ಹೆಬ್ಬಯಕೆ ಹೊಂದಿರುತ್ತಾರೆ. ಕ್ರಿಕೆಟ್‍ನ ಮಹಾಜಾತ್ರೆಯಾದ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಕ್ಕ ನಂತರ ದೇಶಕ್ಕಾಗಿ ಟ್ರೋಫಿ ಗೆದ್ದುಕೊಡಬೇಕೆಂಬ ಅಚಲವಾದ ವಿಶ್ವಾಸ ಮೂಡುತ್ತದೆ. ಆದರೆ ಇಂತಹ ಹೆಬ್ಬಕೆಯೂ ಕೆಲವರಿಗೆ ಕನಸಾಗಿಯೇ ಉಳಿಯುತ್ತದೆ.

ತಮ್ಮ ವೃತ್ತಿ ಬದುಕಿನಲ್ಲಿ ತಾವೆಷ್ಟೇ ಸಾಧನೆ ಮಾಡಿದರೂ, ತಮ್ಮ ಬತ್ತಳಿಕೆಯಲ್ಲಿ ವಿಶ್ವಕಪ್ ಗೆಲುವು ಇಲ್ಲದಿದ್ದರೆ ಆ ಆಟಗಾರನಿಗೆ ತಾನೇನು ಸಾಧಿಸಿಲ್ಲ ಎಂಬ ಕೊರಗು ಶಾಶ್ವತವಾಗಿ ಉಳಿಯುತ್ತದೆ. ಕ್ರಿಕೆಟ್ ದೇವರು ಎಂದೇ ಖ್ಯಾತಿ ಹೊಂದಿರುವ ಸಚಿನ್ ತೆಂಡೂಲ್ಕರ್ ಕೂಡ ಹಲವು ಮುರಿಯಲಾಗದ ದಾಖಲೆಯನ್ನು ನಿರ್ಮಿಸಿದ್ದರು, ತಮ್ಮ ಬತ್ತಳಿಕೆಯಲ್ಲಿ ವಿಶ್ವಕಪ್ ಅನ್ನು ಸೇರಿಸಿಕೊಳ್ಳಬೇಕೆಂಬ ಹಂಬಲದಿಂದ ಭಗೀರಥ ಪ್ರಯತ್ನ ಮಾಡಿದ್ದರು. ಆದರೆ 6 ವಿಶ್ವಕಪ್ ಟೂರ್ನಿಗಳಲ್ಲಿ ಪಾಲ್ಗೊಂಡ ನಂತರ ಸಚಿನ್ ವಿಶ್ವ ಚಾಂಪಿಯನ್ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

ಇನ್ನು ಎಷ್ಟೋ ಆಟಗಾರರು ತಮ್ಮ ದೇಶಕ್ಕೆ ವಿಶ್ವಕಪ್ ಗೆದ್ದುಕೊಡುವ ಪ್ರಯತ್ನ ಕೈಗೂಡದಿದ್ದರೂ, ಹೆಡ್ ಕೋಚ್ ಆಗಿ ಟ್ರೋಫಿ ಗೆದ್ದು ತಮ್ಮ ಕನಸನ್ನು ಈಡೇರಿಸಿಕೊಂಡಿದ್ದಾರೆ. ವಿಶ್ವಕ್ರಿಕೆಟ್‍ನಲ್ಲಿ ದಕ್ಷಿಣ ಆಫ್ರಿಕಾ ಒಮ್ಮೆಯೂ ಫೈನಲ್ ಸುತ್ತು ಪ್ರವೇಶಿಸದಿದ್ದರೂ, 2011ರಲ್ಲಿ ಗ್ಯಾರಿ ಕಸ್ಟರ್ನ್ ಅವರು ತಮ್ಮ ತರಬೇತಿಯಲ್ಲಿ ಮಹೇಂದ್ರಸಿಂಗ್ ಧೋನಿ ತಂಡವು ಟ್ರೋಫಿ ಗೆಲ್ಲುವ ಮೂಲಕ ತಮ್ಮ ಮಹಾದಾಸೆಯನ್ನು ಈಡೇರಿಸಿಕೊಂಡಿದ್ದರು. ಈಗ ಅದೇ ಸಾಲಿಗೆ ಸೇರಲು ಭಾರತದ ಮಹಾಗೋಡೆ ರಾಹುಲ್ ದ್ರಾವಿಡ್ ಕೂಡ ಸೇರಲು ಹೊರಟಿದ್ದಾರೆ.

ಅಂಡರ್ 19 ವಿಶ್ವಕಪ್ ಗೆಲ್ಲಲು ನೆರವಾಗಿದ್ದ ರಾಹುಲ್ ದ್ರಾವಿಡ್:
ರಾಹುಲ್ ದ್ರಾವಿಡ್ ತರಬೇತುದಾರರಾಗಿ ಅಂರ್ಡರ್-19 ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ದ್ದರು. ಈಗ ತಮ್ಮ ಖಾತೆಗೆ ಹಿರಿಯರ ವಿಶ್ವಕಪ್ ಕೂಡ ಸೇರ್ಪಡೆ ಮಾಡಿಕೊಳ್ಳಲು ಹೊರಟಿದ್ದಾರೆ.

2003ರ ಕಹಿ ನೆನಪು:
ಒಬ್ಬ ಉತ್ತಮ ಆಟಗಾರ ಮತ್ತು ಈಗ ಉತ್ಕøಷ್ಟ ಕೋಚ್ ಆಗಿರುವ ದ್ರಾವಿಡ್ ಅವರಿಗೆ 2003ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‍ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ವೈಭವದಿಂದ ಸೌರವ್ ಗಂಗೂಲಿ ನೇತೃತ್ವದ ಭಾರತದ ತಂಡವನ್ನು ಫೈನಲ್ ಹಂತ ತಲುಪಿಸಿದ್ದರಾದರೂ ರಿಕ್ಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ವಿರುದ್ಧ 125 ರನ್‍ಗಳಿಂದ ಸೋಲು ಕಂಡು ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡು ನಿರಾಸೆಗೊಂಡಿದ್ದರು. ಆದರೆ ಈಗ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾವನ್ನು ಚಾಂಪಿಯನ್ ಆಗಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ದ್ರಾವಿಡ್ ಹೊರಟಿದ್ದಾರೆ.

ಐಪಿಎಲ್‍ನಲ್ಲೂ ನಿರಾಸೆ:
ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದದ ಮಹಾಗೋಡೆ, ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಡೇರ್‍ಡೆವಿಲ್ಸ್ ತಂಡಕ್ಕೆ ತರಬೇತುದಾರರಾಗಿದ್ದರೂ ಕೂಡ ರಾಹುಲ್ ದ್ರಾವಿಡ್, ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ 2016 ರಲ್ಲಿ ಭಾರತದ ಅಂಡರ್-19 ತಂಡ ಮತ್ತು ಇಂಡಿಯಾ ಎ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಭಾರತವು ಅಂಡರ್ 19ನಲ್ಲಿ ಫೈನಲ್ ತಲುಪುವುದರೊಂದಿಗೆ ಅವರ ಅಕಾರಾವಯು ಪ್ರಾರಂಭವಾಯಿತು. 2016 ರಲ್ಲಿ ನಡೆದಿದ್ದ ಅಂಡರ್-19 ವಿಶ್ವಕಪ್ ಶಿಮ್ರಾನ್ ಹೆಟ್ಮೇಯರ್ ನೇತೃತ್ವದ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡು ನಿರಾಸೆ ಕಂಡಿದ್ದರು.

ಭಗೀರಥ ಪ್ರಯತ್ನ:
ಆದಾಗ್ಯೂ, ದ್ರಾವಿಡ್ ಎರಡು ವರ್ಷಗಳ ನಂತರ ಟ್ರೋಫಿಯನ್ನು ಗೆದ್ದುಕೊಳ್ಳಲು 19 ವರ್ಷದೊಳಗಿನವರ ಹೊಸ ಗುಂಪಿನೊಂದಿಗೆ ಮರಳಿದರು. ಶುಭಮನ್ ಗಿಲï, ಪೃಥ್ವಿ ಶಾ, ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ಶಿವಂ ಮಾವಿ ಅವರನ್ನೊಳಗೊಂಡ ತಂಡವು 2018 ರಲ್ಲಿ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಅಂಡರ್-19 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.

ಈ ಸಾಧನೆಯು ಅವರಿಗೆ ಅರ್ಹವಾದ ಮನ್ನಣೆಯನ್ನು ನೀಡಿತು ಮತ್ತು ನಂತರ ಜುಲೈ 2018 ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಕೆಸಿಎ) ಕ್ರಿಕೆಟ್ ಕಾರ್ಯಾಚರಣೆಗಳ ಮುಖ್ಯಸ್ಥರಾಗಿ ದ್ರಾವಿಡ್ ಅವರನ್ನು ನೇಮಿಸಿತು.

ರವಿಶಾಸ್ತ್ರಿಯಿಂದ ಅಧಿಕಾರ ಹಸ್ತಾಂತರ:
2021ರ ಟಿ 20 ವಿಶ್ವಕಪ್‍ನ ಸೋಲಿನ ನಂತರ ರವಿಶಾಸ್ತ್ರಿಯಿಂದ ಹೆಡ್ ಕೋಚ್ ಹುದ್ದೆಯನ್ನು ಅಲಂಕರಿಸಿದ ರಾಹುಲ್ ದ್ರಾವಿಡ್ ಯುವ ಆಟಗಾರರಾದ ಶುಭಮನ್‍ಗಿಲï, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಪ್ರತಿಭಾವಂತ ಆಟಗಾರರನ್ನು ಉತ್ತೇಜಿಸಿದರು.

2022 ರ ಆರಂಭದಲ್ಲಿ ವಿರಾಟ್ ಕೊಹ್ಲಿ ಆಟದ ಎಲ್ಲಾ ಸ್ವರೂಪಗಳಿಂದ ನಾಯಕತ್ವದಿಂದ ಕೆಳಗಿಳಿದಾಗ ದ್ರಾವಿಡ್ ಕಠಿಣ ಸಂದರ್ಭವನ್ನು ಎದುರಿಸಿದರು. ಆದರೆ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ನಂತರ ತಂಡವನ್ನು ಮತ್ತೆ ಉತ್ತುಂಗದತ್ತ ಕೊಂಡೊಯ್ದರು.

ಆಲ್ ದಿ ಬೆಸ್ಟ್ ಟೀಂ ಇಂಡಿಯಾ: ಶುಭಕೋರಿದ ಪ್ರಧಾನಿ ಮೋದಿ

ಐಸಿಸಿ ಟೂರ್ನಿಗಳಲ್ಲಿ ಸೋಲು:
ರಾಹುಲ್ ದ್ರಾವಿಡ್ ಹೆಡ್ ಕೋಚ್ ಹುದ್ದೆ ಅಲಂಕರಿಸಿದ ನಂತರ ಭಾರತ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 10 ವಿಕೆಟ್‍ಗಳ ಸೋಲು ಕಂಡು ನಿರಾಸೆ ಅನುಭವಿಸಿತು. ನಂತರ ನಡೆದ 2ನೇ ಆವೃತ್ತಿಯ ಟೆಸ್ಟ್ ಚಾಂಪಿಯನ್‍ಷಿಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡು ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಆದರೆ ಏಷ್ಯಾಕಪ್ ಗೆದ್ದು ಸಂಭ್ರಮದಲ್ಲಿರುವ ಟೀಮ್ ಇಂಡಿಯಾ, ಈಗ ರಾಹುಲ್ ದ್ರಾವಿಡ್‍ಗೋಸ್ಕರ ಟ್ರೋಫಿ ಗೆಲ್ಲಲು ಟೊಂಕಕಟ್ಟಿ ನಿಂತಿದೆ.

ದಾಖಲೆ ಬರೆದ ಟೀಮ್ ಇಂಡಿಯಾ:
ತಮ್ಮಲ್ಲಿ ಅಡಗಿರುವ ಅಪಾರ ಕ್ರಿಕೆಟ್‍ನ ಜ್ಞಾನ ಭಂಡಾರವನ್ನು ಆಟಗಾರರಿಗೆ ಸಮರ್ಪಿಸಿರುವ ರಾಹುಲ್ ದ್ರಾವಿಡ್ 2023ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಕೌಟ್ ಹಂತದಲ್ಲಿ 397 ಬೃಹತ್ ಮೊತ್ತ ಕಲೆ ಹಾಕಿ ದಾಖಲೆ ನಿರ್ಮಿಸಿದರು. ಆ ಪಂದ್ಯದಲ್ಲಿ 70 ರನ್‍ಗಳ ಗೆಲುವು ಸಾಸಿರುವ ಟೀಮ್ ಇಂಡಿಯಾ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಸುವ ಮೂಲಕ ರಾಹುಲ್ ದ್ರಾವಿಡ್ 2003ರ ಸೋಲಿನ ಕಹಿಯನ್ನು ಮರೆಯುವಂತಾಗಲಿ.

ಬೆಸ್ಕಾಂ ನಿರ್ಲಕ್ಷ್ಯ : ವಿದ್ಯುತ್ ತಂತಿ ತುಳಿದು ಸುಟ್ಟು ಕರಕಲಾದ ತಾಯಿ-ಮಗು

ಬೆಂಗಳೂರು, ನ.19- ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ -ಮಗು ಮೃತಪಟ್ಟಿರುವ ಭೀಕರ ಘಟನೆ ಇಂದು ಮುಂಜಾನೆ ವೈಟ್‍ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ನಡೆದಿದೆ. ಕಾಡುಗೋಡಿಯ ಎ.ಕೆ.ಗೋಪಾಲ್ ಕಾಲೋನಿ ನಿವಾಸಿ ಸೌಂದರ್ಯ(23), 9 ತಿಂಗಳ ಮಗು ಸುವಿಕ್ಸಲಿಯ ಮೃತಪಟ್ಟ ದುರ್ದೈವಿಗಳು.

ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಮನಕಲಕುವ ಘಟನೆಯೊಂದು ನಡೆದಿದ್ದು ಎರಡು ಅಮಾಯಕ ಜೀವಗಳು ಕುಟುಂಬ ಸದಸ್ಯರ ಸಮುಖದಲ್ಲೇ ಬಲಿಯಾಗಿವೆ .ಮೃತ ಸೌಂದರ್ಯ ತಮ್ಮ ಕುಟುಂಬದ ಜೊತೆ ತಮಿಳುನಾಡಿಗೆ ಹೋಗಿ ಇಂದು ಮುಂಜಾನೆ 5 ಗಂಟೆಗೆ ಬೆಂಗಳೂರಿಗೆ ಬಂದು ಬಸ್ ಇಳಿದು ತಾಯಿ ಮನೆಗೆ ನಡೆದು ಹೋಗುತ್ತಿದ್ದಾಗ ರಸ್ತೆ ಬದಿ ತುಂಡಾಗಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ತುಳಿದಿದ್ದಾರೆ.

ಆಲ್ ದಿ ಬೆಸ್ಟ್ ಟೀಂ ಇಂಡಿಯಾ: ಶುಭಕೋರಿದ ಪ್ರಧಾನಿ ಮೋದಿ

ಈ ವೇಳೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ತಾಯಿ- ಮಗಳು ಪ್ರಾಣ ಬಿಟ್ಟಿದ್ದಾರೆ. ಸುದ್ದಿ ತಿಳಿದು ಕಾಡುಗೋಡಿ ಪೊಲೀಸರು ಹಾಗು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಸ್ಕಾಂಗೆ ಕರೆ ಮಾಡಿ ಒಂದು ಗಂಟೆಯಾದ್ರೂ ಸ್ಥಳಕ್ಕೆ ಯಾರೂ ಬಂದಿಲ್ಲ. ಸೂಕ್ತ ಸಮಯಕ್ಕೆ ಸ್ಥಳೀಯ ನಿವಾಸಿಗಳೂ ಸಹಾಯಕ್ಕೆ ಬಂದಿಲ್ಲ.
ವಿದ್ಯುತ್ ತಂತಿ ತುಳಿದ ತಕ್ಷಣ ಬೆಂಕಿ ಹತ್ತಿಕೊಂಡಿದ್ದು ತಾಯಿ -ಮಗು ದಹನಗೊಂಡಿದ್ದಾರೆ. ಸೌಂದರ್ಯ ಪತಿ ಸಂತೋಷ್ ಕೂಡ ಸ್ಥಳಕ್ಕೆ ಬಂದು ಈ ದೃಶ್ಯ ಕಂಡು ರೋದಿಸಿದ್ದಾರೆ. ಕಣ್ಣ ಮುಂದೆ ಹೆಂಡತಿ, ಮಗು ಪ್ರಾಣಬಿಟ್ಟರೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದರು.

ಈ ದೃಶ್ಯವನ್ನು ಕಂಡು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಾಡುಗೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆಸ್ಕಾಂ ಎಇ ಚೇತನ್, ಜೆಇ ರಾಜಣ್ಣ, ಬೆಸ್ಕಾಂ ಸ್ಟೇಷನ್ ಆಪರೇಟರ್ ಮಂಜು ಸೇರಿ ಮೂವರು ಬೆಸ್ಕಾಂ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮೋದಿ ಶ್ರೀಮಂತರ ಸಾಲ ಮನ್ನಾ ಮಾಡಿ, ಬಡವರನ್ನು ದೂರ ಮಾಡುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ನ.19- ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಶ್ರೀಮಂತರ ಸಾಲ ಮನ್ನಾ ಮಾಡುತ್ತಾರೆ. ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡಿ, ಅವುಗಳನ್ನು ಬಡವರಿಂದ ದೂರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಹಾಗೂ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವತಂತ್ರ್ಯ ಭಾರತದಲ್ಲಿ ಮತ್ತು ಪೂರ್ವದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದರೆ ಅದು ಕಾಂಗ್ರೆಸ್ ಮಾತ್ರ. ಇಂದು ಅಧಿಕಾರದಲ್ಲಿರುವ ಬಿಜೆಪಿಯಲ್ಲಿ ದೇಶಕ್ಕಾಗಿ ಯಾರು ತ್ಯಾಗ ಬಲಿದಾನ ಮಾಡಿಲ್ಲ. ಜಾತ್ಯತೀತ ತತ್ವ, ಸಾಮಾಜಿಕ ನ್ಯಾಯ, ಬಡವರ ಪರ ಕಾಳಜಿ, ಸಮಸಮಾಜ ನಿರ್ಮಾಣ ಸೇರಿದಂತೆ ಎಲ್ಲದಕ್ಕೂ ಸ್ಪಂದಿಸಿ, ಜನರ ಸಮಸ್ಯೆ ಬಗೆ ಹರಿಸುವ ಕೆಲಸ ಮಾಡಿದ್ದು ಕಾಂಗ್ರೆಸ್ ಮಾತ್ರ.

ನೆಹರು ಈ ದೇಶದ ಪ್ರಧಾನಿಯಾಗಿದ್ದ ದಿನಗಳಲ್ಲಿ ದೇಶ ಹೇಗಿತ್ತು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಕೆಳಮಟ್ಟದಲ್ಲಿತ್ತು. ಅಂತಹ ಸಂಕಷ್ಟ ಸಮಯದಲ್ಲಿ ಪ್ರಧಾನಿಯಾದ ನೆಹರು ದೇಶ ಕಟ್ಟಿದರು, ನಂತರ ಲಾಲ್ ಬಹುದೂರ್ ಶಾಸ್ತ್ರಿ, ಇಂದಿರಾಗಾಂಧಿ ದೇಶದ ದಿಕ್ಕು ಬದಲಿಸಿದರು.

ವಿರೋಧ ಪಕ್ಷಗಳು ಇಂದಿರಾಗಾಂಧಿ ಹಠಾವೋ ಎನ್ನುತ್ತಿದ್ದವು. ಅದಕ್ಕೆ ತಿರುಗೇಟು ನೀಡಿದ ಇಂದಿರಾಗಾಂಧಿ, ಗರೀಬಿ ಹಠಾವೋ ಎಂದರು. ಹಸಿರು ಕ್ರಾಂತಿಯ ಮೂಲಕ ಆಹಾರದ ಸ್ವಾವಲಂಬನೆ ತಂದರು. ಜನಸಂಖ್ಯೆಯಲ್ಲಿ ನಾವು ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದೇವೆ. ಎಲ್ಲರಿಗೂ ಆಹಾರ ಒದಗಿಸಬೇಕಾದರೆ ನಿರಂತರವಾದ ಹಸಿರು ಕ್ರಾಂತಿಯಾಗಬೇಕು, ಆಗ ಮಾತ್ರ ಭಾರತ ಬಲಿಷ್ಠ ರಾಷ್ಟ್ರವಾಗಲು ಸಾಧ್ಯ ಎಂದರು.

ಖಾಸಗಿ ಬ್ಯಾಂಕ್‍ಗಳು ಬಡವರಿಗೆ, ಸಾಮಾನ್ಯರಿಗೆ ಬಾಗಿಲು ತೆರೆದಿರಲಿಲ್ಲ. ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಇಂದಿರಾಗಾಂ ಬಡವರಿಗೆ ಬ್ಯಾಂಕ್ ಬಾಗಿಲು ತೆರೆದಿಟ್ಟರು. ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿ ಹಿಂದಿನ ಅಭಿವೃದ್ಧಿ ಎಲ್ಲಾ ಕೆಲಸವನ್ನು ತಿರುವು ಮುರುವು ಮಾಡುತ್ತಿದ್ದಾರೆ. ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡುವ ಮೂಲಕ ಬಡವರಿಗೆ ಅವುಗಳ ಬಾಗಿಲುಗಳನ್ನು ಮುಚ್ಚುತ್ತಿದ್ದಾರೆ. ಶ್ರೀಮಂತರ ಸಾಲ ಮನ್ನಾ ಮಾಡುವ ಮೋದಿ, ರೈತರ ಸಾಲ ಮನ್ನಾ ಮಾಡುವುದಿಲ್ಲ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಸಿರು ಕ್ರಾಂತಿಯಾಗಿದ್ದಾಗ ಬಾಬುಜಗಜೀವನರಾಮ್ ಕೃಷಿ ಸಚಿವರಾಗಿದ್ದರು. ಇಂದಿರಾಗಾಂಧಿ 1971ರಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು, ಬಾಂಗ್ಲಾದೇಶ ವಿಭಜನೆ ಮಾಡಿದಾಗ ಬಾಬು ಜಗಜೀವನರಾಮ್ ರಕ್ಷಣಾ ಸಚಿವರಾಗಿದ್ದರು, 20 ಅಂಶಗಳ ಮೂಲಕ ಬಡವರಿಗೆ ಶಕ್ತಿ ತುಂಬಿದ ಇಂದಿರಾಗಾಂ, ಉಳುವವನೆ ಭೂಮಿ ಒಡೆಯ ಕಾನೂನಿನ ಮೂಲಕ ರೈತರಿಗೆ ಭೂಮಿ ಕೊಡಿಸಿದರು. ಉಗ್ರವಾದವನ್ನು ಬಲವಾಗಿ ಖಂಡಿಸುತ್ತಿದ್ದರು. ಕೊನೆಗೆ ಅದೇ ಉಗ್ರವಾದಕ್ಕೆ ಬಲಿಯಾದರು ಎಂದರು.

ಪಕ್ಷದ ಅಧ್ಯಕ್ಷರಾಗಿ ಅಕಾರ ಸ್ವೀಕರಿಸಿದವರಿಗೆ ಲೋಕಸಭೆ ಚುನಾವಣೆಯ ಸವಾಲು ಮುಂದಿದೆ. ಬಿಬಿಎಂಪಿ ಚುನಾವಣೆಯಲ್ಲೂ ಅಧಿಕಾರ ಹಿಡಿಯಬೇಕಿದೆ. ಬಿಜೆಪಿ, ಜನತಾದಳದವರು ನಮಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ನಾವು ಆಡಳಿತ ನಡೆಸುವುದನ್ನು ಅವರಿಂದ ಸಹಿಸಲಾಗುತ್ತಿಲ್ಲ. ಹೊಟ್ಟೆ ಉರಿ, ದ್ವೇಷ, ಅಸೂಯೆ, ಮತ್ಸರ ಸೇರಿ ಎಲ್ಲಾ ಪದಗಳು ಅವರಿಗೆ ಅನ್ವರ್ಥವಾಗಿವೆ. ಕುಮಾರಸ್ವಾಮಿ ಮಾಡುವ ಯಾವ ಆರೋಪಕ್ಕೂ ದಾಖಲೆ ನೀಡುವುದಿಲ್ಲ. ನನ್ನ ಮೇಲೆ, ಡಿ.ಕೆ.ಶಿವಕುಮಾರ್ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುತ್ತಾರೆ ಎಂದರು.

ಬಿಜೆಪಿಯವರು ಹೇಳಿಕೊಟ್ಟು ಆರೋಪ ಮಾಡಿಸುತ್ತಿದ್ದಾರೆ. ಎರಡು ಪಕ್ಷಗಳ ಮೈತ್ರಿ ಹೇಗಿದೆ ಎಂದರೆ ಅನ್ನ ಹಳಸಿತ್ತು, ನಾಯಿ ಕಾದಿತ್ತು ಎಂಬಂತಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವರ್ಗಾವಣೆಯಲ್ಲಿ ಲಂಚ ಪಡೆದಿದ್ದರು. ಶೇ.40ರಷ್ಟು ಕಮಿಷನ್ ಪಡೆದವರು ಅವರು, ಈಗ ನಮ್ಮ ಮೇಲೆ ಸುಳ್ಳು ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾಗಲು ಕುಮಾರಸ್ವಾಮಿಗೆ ಕಾಂಗ್ರೆಸ ಸಂಪೂರ್ಣ ಬೆಂಬಲ ನೀಡಿದ್ದರೂ ಅವರಿಂದ ಸರ್ಕಾರ ಉಳಿಸಿಕೊಳ್ಳಲಾಗಲಿಲ್ಲ. ಸುಳ್ಳೆ ಅವರ ಮನೆ ದೇವರು. ಇನ್ನೂ ಮುಂದೆ ಅವರ ಸುಳ್ಳುಗಳಿಗೆ ಉತ್ತರ ಕೊಡಲ್ಲ ಎಂದು ತೀರ್ಮಾನಿಸಿದ್ದೇನೆ ಎಂದರು.

ಸಿದ್ದರಾಮಯ್ಯರನ್ನು ದೃತರಾಷ್ಟ್ರನಿಗೆ ಹೋಲಿಸಿದ ಬಿಜೆಪಿ

ವರ್ಗಾವಣೆ ಮಾಡುವ ಅಧಿಕಾರ ಇರುವುದು ಸರ್ಕಾರಕ್ಕಲ್ಲದೆ, ಕುಮಾರಸ್ವಾಮಿ, ಬಿಜೆಪಿಯವರಿಗೆ ಇದೆಯೇ, ಅವರು ಲಂಚ ಪಡೆದಿದ್ದರು, ಅದನ್ನು ನಮ್ಮ ಕಾಲದಲ್ಲೂ ನಡೆಯುತ್ತದೆ ಎಂದು ಅಂದುಕೊಂಡಿದ್ದಾರೆ. ಎರಡು ಭಾರೀ ಮುಖ್ಯಮಂತ್ರಿಯಾಗಿದ್ದವರು ವಿದ್ಯುತ್ ಕಳ್ಳತನ ಮಾಡಿ, ತಪ್ಪನ್ನು ಒಪ್ಪಿಕೊಂಡು ದಂಡ ಕಟ್ಟಿದ್ದಾರೆ. ಅದನ್ನು ಕ್ಷುಲ್ಲಕ ಪ್ರಕರಣ ಎನ್ನುತ್ತಿದ್ದಾರೆ, ಕುಮಾರಸ್ವಾಮಿಯವರೇ ಕ್ಷುಲ್ಲಕ ವ್ಯಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷಗಳ ಆರೋಪಗಳಿಗೆ ಆದ್ಯತೆ ಬೇಡ, ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ ಎಂದು ಮುಖ್ಯಮಂತ್ರಿ ಕರೆ ನೀಡಿದರು. ಇಂದಿರಾಗಾಂಧಿಯವರ ಜನ್ಮದಿನವನ್ನು ಇಂದು ರಾಷ್ಟ್ರಾದ್ಯಂತ ಆಚರಣೆ ಮಾಡಲಾಗುತ್ತಿದೆ. 16 ವರ್ಷ ದೇಶದ ಪ್ರಧಾನಿಯಾಗಿದ್ದ ಅವರು ವಿರೋಧ ಪಕ್ಷದ ನಾಯಕರಿಂದಲೂ ಹೊಗಳಿಸಿಕೊಂಡಿದ್ದರು.

ಇಂದಿರಾಗಾಂಧಿ ಹುಟ್ಟಿದ ಸ್ಥಳ ರಾಜಕೀಯ ಕೇಂದ್ರವಾಗಿತ್ತು, ತಂದೆ ಜವಹಾರ್‍ಲಾಲ್ ನೆಹರು ಸೇರಿದಂತೆ ಎಲ್ಲರೂ ಸಕ್ರಿಯ ರಾಜಕಾರಣದಲ್ಲಿದ್ದರು. ಮಹಾತ್ಮ ಗಾಂ ಸೇರಿದಂತೆ ಅನೇಕ ಮಹನೀಯರನ್ನು ನೋಡಿಕೊಂಡು ಬೆಳೆದ ಇಂದಿರಾಗಾಂಯವರ ಮೇಲೆ ಸ್ವತಂತ್ರ್ಯ ಹೋರಾಟದ ಗಾಢ ಪರಿಣಾಮ ಬೀರಿತ್ತು, ಬಾಲ್ಯದಿಂದಲೇ ಜನಪರವಾದ ದೋರಣೆ ಬೆಳೆದಿತ್ತು. ಲಾಲ್ ಬಹುದೂರ್ ಶಾಸ್ತ್ರಿ ನಂತರ 1977 ರಿಂದ 1980ರವರೆಗೆ ಮೂರು ವರ್ಷ ಹೊರತು ಪಡಿಸಿದರೆ 196ರಿಂದ 1984ರವರೆಗೆ ದೇಶದ ಪ್ರಧಾನಿಯಾಗಿದ್ದರು. ಅವರನ್ನು ಉಕ್ಕಿನ ಮಹಿಳೆ ಎಂದು ಕರೆಯುತ್ತಾರೆ. ದೇಶಕ್ಕಾಗಿ ದೃಢವಾದ, ಜನಪರವಾದ ನಿರ್ಧಾರ ತೆಗೆದುಕೊಳ್ಳುತ್ತಿದ್ದರು, ರಾಜಕೀಯವನ್ನ ಸಮಜ ಸೇವೆ ಎಂದು ಭಾವಿಸಿದ್ದರು ಎಂದರು.

ಆಲ್ ದಿ ಬೆಸ್ಟ್ ಟೀಂ ಇಂಡಿಯಾ: ಶುಭಕೋರಿದ ಪ್ರಧಾನಿ ಮೋದಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್, ಸಚಿವರಾದ ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ವೇಳೆ ಬೆಂಗಳೂರು ನಗರ ಜಿಲ್ಲೆಗಳ ನಾಲ್ವರು ಕಾಂಗ್ರೆಸ್ ಅಧ್ಯಕ್ಷರು ಅಕಾರ ಸ್ವೀಕರಿಸಿದರು. ಇಂದಿರಾಗಾಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಆಲ್ ದಿ ಬೆಸ್ಟ್ ಟೀಂ ಇಂಡಿಯಾ: ಶುಭಕೋರಿದ ಪ್ರಧಾನಿ ಮೋದಿ

ನವದೆಹಲಿ,ನ.19-ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯದ ಮಹಾಸಮರಕ್ಕೆ ಕೆಲವೇ ಸೆಕೆಂಡ್‍ಗಳು ಬಾಕಿ ಇರುವಂತೆ ಪ್ರಧಾನಿ ನರೇಂದ್ರಮೋದಿ ಅವರು ಟೀಂ ಇಂಡಿಯಾಕ್ಕೆ ಶುಭ ಕೋರಿದ್ದು, ಗೆದ್ದು ಬರಲಿ ಎಂದು ಹಾರೈಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಫೋಸ್ಟ್ ಮಾಡಿರುವ ಮೋದಿಯವರು ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭಾಷಯ ಕೋರಿರುವ ಅವರು, 140 ಕೋಟಿ ಭಾರತೀಯರು ನಿಮ್ಮನ್ನು ಹುರಿದುಂಬಿಸುತ್ತಿದ್ದಾರೆ. ಅವರೆಲ್ಲರ ಪ್ರಾರ್ಥನೆಯ ಫಲವಾಗಿ ಟೀಂ ಇಂಡಿಯಾ ಗೆಲ್ಲಲ್ಲಿ ಎಂದು ಆಶಿಸಿದ್ದಾರೆ.

ಆಲ್ ದಿ ಬೆಸ್ಟ್ ಟೀಂ ಇಂಡಿಯಾ ಎಂದು ಫೋಸ್ಟ್ ಮಾಡಿರುವ ಮೋದಿ ಅವರು, ನಿಮ್ಮ ಆಟವನ್ನು ಕಣ್ತುಂಬಿಕೊಳ್ಳಲು 140 ಕೋಟಿ ಭಾರತೀಯರು ಕಾತುರದಿಂದ ಎದುರುನೋಡುತ್ತಿದ್ದಾರೆ. ನೀವು ಪ್ರಕಾಶಮಾನವಾಗಿ ಮಿಂಚಿ ಉತ್ತಮವಾಗಿ ಆಡಿ. ಜೊತೆಗೆ ಕ್ರೀಡಾ ಮನೋಭಾವನೆಯನ್ನು ಸಹ ಎತ್ತಿಹಿಡಿಯಿರಿ ಎಂದು ಕಿವಿಮಾತು ಹೇಳಿದ್ದಾರೆ.

ಕುಮಾರಸ್ವಾಮಿ ಹಣ ಪಡೆದು ವರ್ಗಾವಣೆ ಮಾಡುತ್ತಿದ್ದರು : ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡ ಟೀಂ ಇಂಡಿಯಾಕ್ಕೆ ಶುಭ ಹಾರೈಸಿದ್ದು, ಕ್ರೀಡೆಯು ಯಾವಾಗಲೂ ದೇಶ, ಭಾಷೆ ಮತ್ತು ವರ್ಗವನ್ನು ಒಂದುಗೂಡಿಸುತ್ತದೆ. ಗೆಲುವು ನಿಮ್ಮದಾಗಲಿ ಎಂದು ರೋಹಿತ್ ಶರ್ಮ ನೇತೃತ್ವದ ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭಾಷಯಗಳನ್ನು ಹೇಳಿದ್ದಾರೆ.

ಸಿದ್ದರಾಮಯ್ಯರನ್ನು ದೃತರಾಷ್ಟ್ರನಿಗೆ ಹೋಲಿಸಿದ ಬಿಜೆಪಿ

ಬೆಂಗಳೂರು,ನ.19- ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಪರಿ ದೃತರಾಷ್ಟ್ರನಿಗೂ ಅವರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.

ತನ್ನ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವರ್ಗಾವಣೆಗೆ ಫೋನ್ ಕರೆ ಮಾಡಿ ಹಲೋ ಅಪ್ಪ ಎಂದ ಪುತ್ರ ಡಾ.ಯತೀಂದ್ರ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಸಮರ್ಥನೆ ಮಾಡುತ್ತಿರುವ ಪರಿ ದೃತರಾಷ್ಟ್ರನಿಗೂ, ಸಿದ್ದರಾಮಯ್ಯನಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಟೀಕಿಸಿದೆ.

ಡಾ.ಯತೀಂದ್ರ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಪರಿ ಹೇಗಿದೆ ಎಂದರೆ ಸ್ವಾತಂತ್ರ ಇಲ್ವಾ? ಅಧಿಕಾರ ಇಲ್ವಾ? ಶ್ಯಾಡೊ ಸಿಎಂ ಅಲ್ವಾ? ಮುಖ್ಯಮಂತ್ರಿ ಮಗ ಅಲ್ವಾ? ಕ್ಷೇತ್ರ ನೋಡಿಕೊಳ್ಳಬಾರದ?ನನಗೆ ಕ್ಷೇತ್ರ ಬಿಟ್ಟು ಕೊಟ್ಟಿಲ್ವಾ? ಎಂದು ಸಿದ್ದರಾಮಯ್ಯನವರಿಗೆ ಎಕ್ಸ್ ಮೂಲಕ ಟಾಂಗ್ ಕೊಟ್ಟಿದೆ.

ವಿಶ್ವಕಪ್: ಭಾರತದ ಗೆಲುವಿಗೆ ದೇಶಾದ್ಯಂತ ವಿಶೇಷ ಪೂಜೆ, ಹೋಮ-ಹವನ

ಪೆನ್‍ಡ್ರೈವ್ ಇದೆ, ಕಳೆದಿಲ್ಲ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ನ.19-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪೆನ್‍ಡ್ರೈವ್ ಇದೆ, ಕಳೆದಿಲ್ಲ. ಅದನ್ನು ತೋರಿಸಿದೊಡನೆ ನನ್ನಲ್ಲಿಗೆ ಓಡಿ ಬಂದವರ ಪಟ್ಟಿ ಕೊಡಲೇ ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ನನ್ನ ಮಾನಸಿಕ ಸ್ವಾಸ್ಥ್ಯಇರಲಿ. ನಿಮ್ಮ ಅಕಾರದ ಅಂಟುರೋಗಕ್ಕೆ ಮದ್ದೇನು? ನಿಮಗಿರುವ ಧನದಾಹ ಜಾಡ್ಯಕ್ಕೆ ಚಿಕಿತ್ಸೆ ಪಡೆಯಬಾರದೇ? ಮಾನಸಿಕ ಅಸ್ವಾಸ್ಥ್ಯಕ್ಕಿಂತ ಇದು ಮಾರಕ ಮನೋರೋಗವಲ್ಲವೇ? ಮುಖ್ಯಮಂತ್ರಿಯೇ ಇಂಥ ವಿನಾಶಕಾರಿ ಕಾಯಿಲೆಗೆ ತುತ್ತಾದರೆ ನಾಡಿನ ಪಾಡೇನು? ತುರ್ತು ಚಿಕಿತ್ಸೆ ನಿಮಗೆ ಅಗತ್ಯವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಡಿಯೋ ವಿಷಯ ವಿಷಯಾಂತರ ಮಾಡಬೇಡಿ. ನಾನು ಕೇಳಿದ್ದೇನು? ನೀವು ಹೇಳುತ್ತಿರುವುದೇನು? ತಿರುಚುವ, ವಕ್ರೀಕರಿಸುವ ಚಾಳಿ ಬಿಡಿ. ನೀವು ಈ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ ಮತ್ತು ಉತ್ತರದಾಯಿ. ಉತ್ತರ ಕೊಡಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.

ಒಂದು ವಿಡಿಯೋ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಮಗೆ, ನಿಮ್ಮ ಸಂಪುಟಕ್ಕೆ ನಿದ್ದೆಯೇ ಹಾರಿ ಹೋಗಿದೆ. ಸಚಿವರನ್ನು ಗುಂಪು ಗುಂಪಾಗಿ ವಾಗ್ದಾಳಿ ಮಾಡಿದರೆ ಕುಮಾರಸ್ವಾಮಿ ಹೆದರಿ ಓಡಿ ಹೋಗುವುದಿಲ್ಲ. ವರುಣಾದ ಜನ ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನೀವೇ ಅವರ ಕೆಲಸ ಮಾಡಬೇಕು. ನಿಮ್ಮ ಪುತ್ರನಿಗೆ ಕ್ಷೇತ್ರದ ಹೊರಗುತ್ತಿಗೆ ಯಾಕೆ? ಸಿಎಂ ಆಗಿದ್ದಾಗ ನಾನು ನನ್ನ ಮಗನಿಗೆ ಕ್ಷೇತ್ರದ ಹೊರಗುತ್ತಿಗೆ ನೀಡಿದ್ದಿಲ್ಲ. ನೀವು ಮಗನಿಗೆ ವರುಣಾದ ಹೊರಗುತ್ತಿಗೆ ನೀಡಿದ್ದೀರಿ.

ಅಷ್ಟೇ ಅಲ್ಲ ನಿಮ್ಮ ಪುತ್ರ ಮಹಾಶಯರನ್ನು ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ, ಅವರ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಸಲು ಹಾಗೂ ಸರ್ಕಾರಿ ಅಧಿಕಾರಿಗಳ ಸಭೆ ನಡೆಸಿ ದರ್ಬಾರ್ ಮಾಡಲು ಅನುವು ಮಾಡಿಕೊಟ್ಟಿದ್ದೀರಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ? ಇದ್ದರೆ ತಿಳಿಸಿ ಎಂದು ಆಗ್ರಹಿಸಿದ್ದಾರೆ.

ವಿಶ್ವಕಪ್: ಭಾರತದ ಗೆಲುವಿಗೆ ದೇಶಾದ್ಯಂತ ವಿಶೇಷ ಪೂಜೆ, ಹೋಮ-ಹವನ

ನನಗೆ ತಿಳಿದಮಟ್ಟಿಗೆ ಈವರೆಗೆ ಯಾವ ಸಿಎಂ ಕೂಡ ಸ್ವಕ್ಷೇತ್ರದ ಹೊರಗುತ್ತಿಗೆ ಮಕ್ಕಳಿಗೆ ಕೊಟ್ಟಿದ್ದಿಲ್ಲ. ನೀವು ಕೊಟ್ಟು ಮೇಲ್ಪಂಕ್ತಿ ಹಾಕಿದ್ದೀರಿ. ಹಿಂಬಾಗಿಲಿನಿಂದ ಮಗನಿಗೆ ಅಧಿಕಾರ ಕೊಡಲು ಕೆಡಿಪಿ ಪಟ್ಟ ಕಟ್ಟಿದ್ದೀರಿ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿರುವ ಯಾವುದಾದರೂ ವಿಧಿ-ವಿಧಾನ ಇದೆಯಾ? ಇದ್ದರೆ ತಿಳಿಸಿ ಎಂದು ಅವರು ಒತ್ತಾಯಿಸಿದ್ದಾರೆ.

ನಿಮ್ಮ ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಹಂಚಿಕೆ ಪಟ್ಟಿ ಪ್ರಕಾರ, ವಿಶೇಷ ಕರ್ತವ್ಯಾಧಿಕಾರಿ ಆರ್.ಮಹದೇವುಗೆ ಶಿಕ್ಷಣ ಇಲಾಖೆ ಹೊಣೆ ಇಲ್ಲ. ಜಂಟಿ ಕಾರ್ಯದರ್ಶಿ ಎಂ.ರಾಮಯ್ಯಗೆ ಆ ಹೊಣೆ ಇದೆ. ವರುಣಾ ಹೊಣೆ ಇನ್ನೊಬ್ಬ ವಿಶೇಷ ಕರ್ತವ್ಯಾಕಾರಿ ಕೆ.ಎನ್.ವಿಜಯ್ ರದ್ದು. ಇದು ಸತ್ಯಸ್ಥಿತಿ. ಅಪರ ಸತ್ಯಹರಿಶ್ಚಂದ್ರರಾದ ನೀವೇ ಸುಳ್ಳು ಹೇಳೋದೇ? ಎಂದು ಪ್ರಶ್ನಿಸಿದ್ದಾರೆ.

ಯತೀಂದ್ರರು ಶಿಕ್ಷಣದ ಕುರಿತು ಎಂ.ರಾಮಯ್ಯ ಜತೆ, ವರುಣಾ ಬಗ್ಗೆ ಕೆ.ಎನ್.ವಿಜಯ್ ಜತೆ ಚರ್ಚಿಸದೆ, ಇವೆರಡಕ್ಕೂ ಸಂಬಂಧವಿಲ್ಲದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಚಿವರ ಆಪ್ತಶಾಖೆ, ವರ್ಗಾವಣೆ -ಸೇವಾ ಹೊಣೆಯ ಮಹದೇವು ಜತೆ ಫೋನ್ ಚರ್ಚೆ ನಡೆಸಿದ್ದೇಕೆ? ಸಿಎಸ್‍ಆರ್‍ಗೂ ಅವರಿಗೂ ಸಂಬಂಧವೇನು? ಸಿಎಸ್‍ಆರ್ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದು ಮಧು ಬಂಗಾರಪ್ಪ ಕೂಡ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಡದ ತಪ್ಪಿಗೆ ವಿದ್ಯುತ್ ಪ್ರಕರಣದಲ್ಲಿ ದಂಡ ತೆತ್ತಿದ್ದೇನೆ, ವಿಷಾದಿಸಿದ್ದೇನೆ. ಈಗ ನಿಮ್ಮ ಪ್ರತಿಷ್ಠೆ ಮೂರಾಬಟ್ಟೆಯಾಗಿದ್ದು ಇರಲಿ, ನಿಮ್ಮ ಪುತ್ರನಿಂದ ಇಡೀ ಕರ್ನಾಟಕ ತಲೆ ತಗ್ಗಿಸುವಂತೆ ಆಗಿದೆ. ಕಾಸಿಗಾಗಿ ಹುದ್ದೆ ದಂಧೆಯಿಂದ ಹೋದ ಮಾನ ವಾಪಸ್ ಪಡೆಯಲಿಕ್ಕೇನು ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.